ಹದ್ದು ಬಸ್ತಿಗೆ ತಕರಾರು ಸಲ್ಲಿಸುವುದು ಹೇಗೆ.? ಯಾರಿಗೆ ಅರ್ಜಿ ಕೊಡಬೇಕು ಮತ್ತು ಇದು ಹೇಗೆ ಇತ್ಯರ್ಥ ಆಗುತ್ತದೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಹದ್ದುಬಸ್ತಿಗೆ ತಕರಾರು ಅರ್ಜಿ ಸಲ್ಲಿಸಬಹುದು ಎನ್ನುವ ವಿಚಾರವು ಸ್ವತಃ ಎಷ್ಟೋ ರೈತರಿಗೆ ಮಾಹಿತಿ ತಿಳಿದಿಲ್ಲ. ರೈತರು ಮಾತ್ರವಲ್ಲದೆ ಪ್ರತಿಯೊಬ್ಬರೂ ಕೂಡ ಈ ಸಾಮಾನ್ಯ ಜ್ಞಾನದ ವಿಚಾರದ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಂಡಿರಬೇಕು. ರೈತನು ತನ್ನ ಜಮೀನಿನ ಬೌಂಡರಿ ಗುರುತಿಸಿಕೊಳ್ಳುವುದಕ್ಕಾಗಿ ಮತ್ತು ಒತ್ತುವರಿ ತೆರವು ಗೊಳಿಸುವುದಕ್ಕಾಗಿ ಹದ್ದುಬಸ್ತಿಗೆ ಭೂ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ಸರ್ವೇ ಮಾಡಿಸುತ್ತಾನೆ.

ಇದಕ್ಕೆ ಕೆಲವು ನಿಯಮಗಳು ಇದ್ದು ಆ ಸಮಯದಲ್ಲಿ ಅಕ್ಕಪಕ್ಕದ ನಾಲ್ಕು ದಿಕ್ಕಿನ ಜಮೀನಿನ ಮಾಲೀಕರ ಹೆಸರು ಹಾಗೂ ವಿಳಾಸವನ್ನು ಅರ್ಜಿಯಲ್ಲಿ ತಿಳಿಸಬೇಕು ಮತ್ತು ಸಾಧ್ಯವಾದರೆ ಅಂಚೆ ಮೂಲಕ ನೋಟಿಸ್ ಕಳುಹಿಸಿ ಹದ್ದುಬಸ್ತಿಗೆ ಗೊತ್ತು ಪಡಿಸಿರುವ ದಿನಾಂಕದ ಮಾಹಿತಿ ತಿಳಿಸಿ ಆ ದಿನ ಅವರನ್ನು ಸ್ಥಳಕ್ಕೆ ಕರೆದುಕೊಂಡು ಬರಬೇಕು.

ಹಸುವಿನ ಹಾಲಿನ ಇಳುವರಿ ಕಡಿಮೆ ಆಗಿದೆಯೇ.? ಈ ಜಾದುವನ್ನು ಉಪಯೋಗಿಸಿ ಇಳುವರಿ ಡಬಲ್ ಮಾಡಿ…

ಈ ರೀತಿ ಹದ್ದು ಬಸ್ತಿಗಾಗಿ ಅರ್ಜಿ ಸಲ್ಲಿಸುವ ರೈತನಿಗೆ ತಕರಾರು ಅರ್ಜಿ ಸಲ್ಲಿಸುವುದು ಅಷ್ಟು ಸುಲಭದ ಮಾತಲ್ಲ. ಒಂದು ವೇಳೆ ಅರ್ಜಿ ಸಲ್ಲಿಸಿದರು ಅದಕ್ಕೆ ಸೂಕ್ತ ಕಾರಣಗಳನ್ನು ಕೊಡಬೇಕು. ಹದ್ದುಬಸ್ತಿಗಾಗಿ ತಕರಾರು ಅರ್ಜಿ ಸಲ್ಲಿಸುವುದು ಮಾತ್ರವಲ್ಲದೇ ಜಮೀನು ಪಾಲು, 11E ಸ್ಕೆಚ್, ಭೂ ಪರಿವರ್ತನೆ ಮತ್ತು ಭೂ ಮಂಜೂರಾತಿ ಈ ಕಾರಣದಿಂದ ಸರ್ವೆ ಮಾಡಿಸುವಾಗಲು ಕೂಡ ಸಾರ್ವಜನಿಕರು ತಕರಾರು ಅರ್ಜಿ ಸಲ್ಲಿಸಬಹುದು.

ಭೂ ಸುಧಾರಣಾ ಕಾಯ್ದೆ ಮತ್ತು ಭೂ ಕಂದಾಯ ಮಸೂದೆ ಕಾಯ್ದೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ತಕರಾರು ಅರ್ಜಿಯಿಂದಲೇ ಇಲಾಖೆಗಳಲ್ಲಿ ಲಕ್ಷಾಂತರ ಕಡತಗಳು ಬಾಕಿ ಉಳಿದಿರುವುದರಿಂದ ಕಾನೂನಿಗೆ ತಿದ್ದುಪಡಿ ತಂದು ಸಮಸ್ಯೆ ಇತ್ಯಾರ್ಥ ಪಡಿಸಲು ಪ್ರಯತ್ನಿಸಲಾಗಿದೆ.

ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು ಸಿಗುವುದಿಲ್ಲ.! ಹಾಗಾದ್ರೆ ಯಾವ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇರುತ್ತೆ.? ತಂದೆ ಇಲ್ಲದ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇರಲ್ವಾ?…

ತಕರಾರು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಜಮೀನಿನ ಹಿನ್ನೆಲೆಯನ್ನು ನೀವು ತಿಳಿದಿರಬೇಕು ಮತ್ತು ಪಕ್ಕದ ಜಮೀನಿನವರು ಯಾವ ಕಾರಣಕ್ಕಾಗಿ ಸರ್ವೇ ಮಾಡಿಸಲು ಅರ್ಜಿ ಹಾಕಿದ್ದಾರೆ ಎನ್ನುವುದು ನಿಮಗೆ ಸ್ಪಷ್ಟವಾಗಿರಬೇಕು. ನೀವು ಅವರನ್ನು ನೇರವಾಗಿ ಕೇಳುವುದೇ ಒಳ್ಳೆಯದು ಒಂದು ವೇಳೆ ಅವರು ಈ ಬಗ್ಗೆ ಮಾಹಿತಿ ನೀಡದೆ ಇದ್ದರೆ ಅಥವಾ ನಿರ್ಲಕ್ಷಿಸಿದರೆ ಮುಂದಿರುವ ಮಾರ್ಗಗಳನ್ನು ಅನುಸರಿಸಬಹುದು.

ಅದಕ್ಕೂ ಮೊದಲೇ ನೀವು ನಿಮ್ಮ ಅರ್ಜಿ ನ್ಯಾಯೋಚಿತವಾಗಿದೆಯೇ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಿ. ನಿಮ್ಮ ಕಾರಣಗಳು ಸರಿಯಾಗಿದೆ ಎನಿಸಿದರೆ ಈ ಸಂದರ್ಭದಲ್ಲಿ ಮೋಜಣಿ ಇಲಾಖೆಯಿಂದ ನೀಡುವ ನೋಟಿಸ್ ಸ್ವೀಕರಿಸದೆ ಭೂಮಾಪಕರು ಅಳತೆಗೆ ಬಂದಾಗ ನಿಮ್ಮ ಸೂಕ್ತ ಕಾರಣಗಳನ್ನು ಕೊಟ್ಟು ತಕರಾರು ಅರ್ಜಿ ಸಲ್ಲಿಸಿ.

ನಮಗೆ ಬರಬೇಕಾದ ಆಸ್ತಿಯನ್ನು ವಿಲ್ ಮೂಲಕ ನಮ್ಮ ರಕ್ತ ಸಂಬಂಧಿಕರಿಗೆ ಅಥವಾ ಬೇರೆಯವರಿಗೆ ವಿಲೇ ಮಾಡಿದ್ರೆ ಆ ಆಸ್ತಿ ಪಡೆಯೋದು ಹೇಗೆ ನೋಡಿ.!

ಅಳತೆ ಮಾಡದಂತೆ ಮನವೊಲಿಸಿ ಸಂಬಂಧಪಟ್ಟ ತಹಶೀಲ್ದಾರರಿಗೂ ಸೂಕ್ತ ಕಾರಣಗಳನ್ನು ನೀಡಿ ಅಳತೆ ಮಾಡುವುದನ್ನು ನಿಲ್ಲಿಸುವಂತೆ ಕೋರಿಕೊಳ್ಳಬಹುದು. ನೀವು ಕೊಡುವ ಕಾರಣಗಳ ಆಧಾರದ ಮೇಲೆ ಅರ್ಜಿ ಸ್ವೀಕರಿಸುವುದು ಅಥವಾ ವಜಾ ಮಾಡುವುದು ನಿರ್ಧಾರವಾಗುತ್ತದೆ.

ಪಕ್ಕದ ಜಮೀನಿನವರು ಸರ್ವೆಗೆ ಅರ್ಜಿ ಸಲ್ಲಿಸಿದರೆ ಒಂದು ವಾರ ಮುಂಚೆ ನಿಮಗೆ ತಿಳುವಳಿಕೆ ಚೀಟಿ ಕೂಡ ಬರುತ್ತದೆ ಈ ಮಾಹಿತಿ ತಿಳಿದು ತಕ್ಷಣ ಭೂ ನ್ಯಾಯ ಮಂಡಳಿ ಅಥವಾ ನ್ಯಾಯಾಲಯದಿಂದ ತಡೆಯಾಜ್ಞೆ ತರಬಹುದು.

2024ರ ಮತದಾರರ ಪಟ್ಟಿ ಬಿಡುಗಡೆ.! ನಿಮ್ಮ ಹೆಸರಿದಿಯೇ ಎನ್ನುವುದನ್ನು ಈ ರೀತಿಯಾಗಿ ಚೆಕ್ ಮಾಡಿ ವೋಟರ್ ಐಡಿ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.!

ಈ ಜಮೀನು ವಿವಾದಗಳನ್ನು ಬಗೆಹರಿಸಿಕೊಳ್ಳುವ ಸೂಕ್ತ ಮಾರ್ಗವೆಂದರೆ ಪರಸ್ಪರ ರೈತರಲ್ಲಿ ಹೊಂದಾಣಿಕೆ ಮನೋಭಾವ ಬರುವುದು. ಅಕ್ಕಪಕ್ಕದ ರೈತರು ಎಂದ ಮೇಲೆ ಸ್ವಲ್ಪ ಹೊಂದಾಣಿಕೆ ಇರಬೇಕು, ಕೆಲವೊಮ್ಮೆ ಅಣ್ಣತಮ್ಮಂದಿರೇ ಭಾಗವಾಗಿ ಅಕ್ಕಪಕ್ಕದ ಜಮೀನಿನಲ್ಲಿ ಇರುತ್ತಾರೆ, ಆಗ ಅನುಸರಿಸಿಕೊಂಡು ಹೋಗಬೇಕು.

ಎಲ್ಲರೂ ಒಟ್ಟಿಗೆ ಹದ್ದು ಬಸ್ತಿಗೆ ಅರ್ಜಿ ಹಾಕಿ ಅಳತೆ ಮಾಡಲು ಬಂದಾಗ ಎಲ್ಲ ರೈತರು ಸಾಕ್ಷಿಗಳ ಸಮಕ್ಷಮದಲ್ಲಿ ನಿರ್ಣಯವಾದುದ್ದನ್ನು ಒಪ್ಪಿಕೊಂಡು ತಾಳ್ಮೆಯಿಂದ ಒಗ್ಗಟ್ಟಾಗಿ ಬದುಕಲು ಒಪ್ಪಿಕೊಂಡರೆ ಎಲ್ಲಾ ರೈತರಿಗೂ ಲಾಭವಾಗುತ್ತದೆ. ಇಲ್ಲವಾದಲ್ಲಿ ಕ್ಷುಲ್ಲಕ ಕಾರಣಕ್ಕೂ ಕೋರ್ಟು ಕಚೇರಿ ಅಳೆಯುತ್ತಾ ಸಮಯ, ನೆಮ್ಮದಿ ಹಾಗೂ ಹಣ ವ್ಯರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ರೈತರು ಒಬ್ಬರಿಗೊಬ್ಬರು ಅನುಸರಿಸಿಕೊಳ್ಳಲಿ ಎನ್ನುವುದೇ ನಮ್ಮ ಅಂಕಣದ ಆಶಯ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now