ಈಗಿನ ಕಾಲದಲ್ಲಿ ಹಣ ಆಸ್ತಿ ವಿಚಾರಕ್ಕೆ ಕೋರ್ಟು ಕಚೇರಿ ಅಲೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನವೂ ಕೂಡ ಆಸ್ತಿಯ ಮೌಲ್ಯ ಹೆಚ್ಚಾಗುತ್ತಿರುವುದರಿಂದ ಆತ್ಮೀಯ ಸಂಬಂಧಗಳನ್ನು ಅದರಲ್ಲೂ ಗಂಡ-ಹೆಂಡತಿ, ತಂದೆ-ಮಕ್ಕಳು ಅಣ್ಣ-ತಮ್ಮ ಎನ್ನುವ ಬಲವಾದ ಬಾಂಧವ್ಯದ ಮಹತ್ವವನ್ನು ಅರಿಯದೆ ಎಲ್ಲರೂ ಕೂಡ ತಮಗೆ ಆ ಆಸ್ತಿ ಬರಬೇಕು, ಈ ಆಸ್ತಿ ಬೇಕು, ತನ್ನ ಪಾಲು ಇಷ್ಟು ಅಷ್ಟು ಎಂದು ಕಿತ್ತಾಡಿಕೊಂಡು ಇತ್ಯರ್ಥಕಾಗಿ ಕೋರ್ಟ್ ಗಳಿಗೆ ಹೋಗುತ್ತಿದ್ದಾರೆ.
ಈ ರೀತಿ ನಾವು ಕೋರ್ಟ್ ನಲ್ಲಿ ಕೇಸ್ ಹಾಕುವ ಮುನ್ನವೇ ನಮಗೆ ನಿಜವಾಗಿಯೂ ಯಾವ ರೀತಿ ಆಸ್ತಿಗಳಲ್ಲಿ ಭಾಗ ಇರುತ್ತದೆಯೇ ಯಾವ ಆಸ್ತಿಗಳಲ್ಲಿ ನಾವು ಪಾಲು ಕೇಳಲು ಸಾಧ್ಯವಿಲ್ಲ ಎನ್ನುವುದರ ಕನಿಷ್ಠ ಜ್ಞಾನವನ್ನು ಪಡೆದುಕೊಂಡಿರಬೇಕು. ಇಲ್ಲವಾದಲ್ಲಿ ಕೋರ್ಟ್ ಕಚೇರಿಗೆ ಅಲೆದ ಸಮಯ ಖರ್ಚು ಮಾಡಿದ ಹಣದ ಜೊತೆ ಬೆಲೆ ಕಟ್ಟಲಾಗದಂತಹ ಸಂಬಂಧಗಳನ್ನು ಕೂಡ ಕಳೆದುಕೊಂಡು ಬಿಡುತ್ತೇವೆ.
ಹಾಗಾಗಿ ಇಂದು ಈ ಅಂಕಣದಲ್ಲಿ ಹೆಂಡತಿಗೆ ಗಂಡನ ಯಾವ ಆಸ್ತಿಗಳ ಮೇಲೆ ಹಕ್ಕು ಇದೆ ಒಂದು ವೇಳೆ ಗಂಡ ಮೃ’ತ ಪಟ್ಟಿದ್ದರೆ ಆಕೆಗೆ ಪಿತಾಜಿತ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ? ಇಂತಹ ಸಂದರ್ಭಗಳಿದ್ದಾಗ ಆಕೆ ಜೀವನಕ್ಕೆ ಏನು ಮಾಡಬೇಕು? ಸ್ವಯಾರ್ಜಿತ ಆಸ್ತಿಯಲ್ಲಿ ಕೂಡ ಪಾಲಿಸಿವುದಿಲ್ಲವೇ ಮತ್ತು ಅವರ ಮಕ್ಕಳಿಗೆ ಯಾವ ಆಸ್ತಿಗಳಲ್ಲಿ ಪಾಲು ಸಿಗುತ್ತದೆ ಎನ್ನುವ ವಿಷಯದ ಬಗ್ಗೆ ತಿಳಿಸುತ್ತಿದ್ದೇವೆ.
ಗಂಡ ಜೀವಂತ ಇರುವಾಗ ಆತ ತನ್ನ ಸ್ವಂತ ದುಡಿಮೆಯಿಂದ ಸಂಪಾದಿಸಿದ ಯಾವುದೇ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಯಾಗಲಿ ಮತ್ತು ಮಕ್ಕಳಾಗಲಿ, ಪಾಲು ಕೇಳುವ ಹಕ್ಕು ಇರುವುದಿಲ್ಲ ಮೃ’ತಪಟ್ಟಿದ್ದ ಪಕ್ಷದಲ್ಲಿ ಆ ಆಸ್ತಿ ಯಾರಿಗೆ ಹೋಗಬೇಕು ಎಂದು ವೀಲ್ ಮಾಡಿ ಇಡದೆ ಇದ್ದಲ್ಲಿ ಹೆಂಡತಿ ಮಕ್ಕಳು ಕೂಡ ಆ ಆಸ್ತಿಗೆ ಪಾಲುದಾರರಾಗಿರುತ್ತಾರೆ. ಆದರೆ ಪಿತ್ರಾರ್ಜಿತ ಆಸ್ತಿಗೆ ಈ ಕಾನೂನು ಅನ್ವಯಿಸುವುದಿಲ್ಲ.
ಪತಿಯ ಪಿತ್ರಾರ್ಜಿತ ಆಸ್ತಿಯಲ್ಲಿ ಆತನ ಪತ್ನಿಗೆ ಯಾವುದೇ ಹಕ್ಕು ಇರುವುದಿಲ್ಲ. ಪತಿ ಮ’ರ’ಣ ಹೊಂದಿದ್ದರೆ ಆಗಲು ಕೂಡ ಪತ್ನಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಲು ಬರುವುದಿಲ್ಲ. ಆದರೆ ಆ ದಂಪತಿಗಳಿಗೆ ಮಕ್ಕಳಿದ್ದರೆ ಆ ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಹಕ್ಕು ಇರುತ್ತದೆ.
ಈ ರೀತಿ ಕೇಸ್ ಗಳಲ್ಲಿ ಅತ್ತೆ ಮಾವ ಪತಿ ತೀ’ರಿಕೊಂಡ ನಂತರ ಆ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಲು ಅಧಿಕಾರ ಇರುವುದಿಲ್ಲ. ಆಕೆ ಅಲ್ಲೇ ಜೀವನ ಮಾಡಬಹುದು, ಆ ಮನೆಯಲ್ಲಿ ಉಳಿದುಕೊಂಡು ಆ ಮಕ್ಕಳ ಪೋಷಣೆ ಮಾಡಬಹುದು ಒಂದು ಬೆಲೆ ವಿ’ಚ್ಛೇ’ದ’ನ ಆದಾಗ ಆ ಸಮಯದಲ್ಲಿ ಕೂಡ ಪತ್ನಿಗೆ ಸ್ವಯಾರ್ಜಿತ ಆಸ್ತಿಯಲ್ಲಾಗಲಿ ಪಿತ್ರಾರ್ಜಿತ ಆಸ್ತಿಯಲ್ಲಾಗಲಿ ಯಾವುದೇ ರೀತಿ ಹಕ್ಕು ಇರುವುದಿಲ್ಲ.
ಆಕೆ ಜೀವನಾಂಶ ಕೇಳಬಹುದು ಅಷ್ಟೇ ಆಕೆಯ ಜೀವನ ಮಟ್ಟ ಯಾವ ರೀತಿ ಇದೆ ಮತ್ತು ಪತಿಯ ಆದಾಯದ ಮೂಲ ಎರಡನ್ನು ನೋಡಿ ಕೋರ್ಟ್ ಎಷ್ಟು ಜೀವನಾಂಶ ನೀಡಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತದೆ. ವಿ’ಚ್ಛೇ’ದ’ನ ಆದ ನಂತರವೂ ಕೂಡ ಆ ದಂಪತಿಗಳ ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದ್ದೆ ಇರುತ್ತದೆ. ಈ ವಿಚಾರದ ಬಗ್ಗೆ ಏನೇ ಗೊಂದಲಗಳಿದ್ದರೂ ಅಥವಾ ಹೆಚ್ಚಿನ ಸಲಹೆಗಳು ಬೇಕಾಗಿದ್ದರೆ ಹತ್ತಿರದ ಕಾನೂನು ಸಲಹ ಕೇಂದ್ರಕ್ಕೆ ಭೇಟಿ ಕೊಡಿ.