ಕಳೆದ ವರ್ಷ ಕಂದಾಯ ಇಲಾಖೆಯಲ್ಲಿ ಸಾಕಷ್ಟು ನಿಯಮಗಳು ಬದಲಾಗಿದ್ದವು. ಕಂದಾಯ ಇಲಾಖೆಯಲ್ಲಿ ತೆಗೆದುಕೊಂಡ ಹಲವು ನಿರ್ಣಯಗಳಿಂದ ರೈತರಿಗೆ ಸಾಕಷ್ಟು ಅನುಕೂಲವೂ ಆಗಿದೆ. ಇದು ಮುಂದುವರೆದು ಈಗ 2024ರ ಹೊಸ ವರ್ಷದ ಆರಂಭದಲ್ಲಿ ಜನವರಿ ತಿಂಗಳ ಮೊದಲ ವಾರದಲ್ಲಿಯೇ ಕಂದಾಯ ಇಲಾಖೆ ಮತ್ತೊಂದು ಮಹತ್ವದ ಬದಲಾವಣೆ ಮಾಡಿದೆ.
ಆದರೆ ಈ ಬದಲಾವಣೆಯು ರೈತರಿಗೆ ಶಾ’ಕ್ ತಂದಿದೆ. ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಭೂ ಮಾಪನ ಇಲಾಖೆ ಮತ್ತು ಭೂ ದಾಖಲೆಯ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದ್ದು ಪ್ರತಿಯೊಬ್ಬ ಜಮೀನು ಹೊಂದಿರುವ ರೈತನು ಕೂಡ ಈ ವಿಚಾರಗಳ ಬಗ್ಗೆ ಮಾಹಿತಿ ತಿಳಿದುಕೊಂಡಿರಬೇಕು.
ಅದಕ್ಕಾಗಿ ಈ ಅಂಕಣದಲ್ಲಿ ಈ ವಿಷಯದ ಬಗ್ಗೆ ಪ್ರಶಸ್ತಿದ್ದೇವೆ ತಪ್ಪದೆ ಈ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆ ಹಂಚಿಕೊಳ್ಳಿ. ಸಾರ್ವಜನಿಕರಿಂದ 11E, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ, ಹದ್ದುಬಸ್ತು ಹಾಗೂ ಸ್ವಾಬಲಂಬಿ ಯೋಜನೆಗಳನ್ವಯ ಸ್ವೀಕರಿಸುವ ಅರ್ಜಿಗಳ ಸೇವಾ ಶುಲ್ಕವನ್ನು ಹೆಚ್ಚಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮೋಜಣಿ ವ್ಯವಸ್ಥೆಯಡಿ ಸಾರ್ವಜನಿಕರು ಅಳತೆ ಕೋರಿ ಸಲ್ಲಿಸುವ ಅರ್ಜಿಗಳ ಅಳತೆ ಶುಲ್ಕದಲ್ಲಿ 11E, ಅಲಿನೇಷನ್ ಪೂರ್ವ ನಕ್ಷೆ ತತ್ಕಾಲ್ ಪೋಡಿ ವಹಿವಾಟಿನ ಶುಲ್ಕವನ್ನು ನಗರ ಪ್ರದೇಶಗಳಲ್ಲಿ 2 ಎಕರೆವರೆಗೆ ರೂ.2500 ಮತ್ತು 2 ಎಕರೆಗಿಂತ ಹೆಚ್ಚಿಗೆ ಇರುವ ಭೂಮಿಯಲ್ಲಿ ಹೆಚ್ಚುವರಿ ಪ್ರತಿ ಎಕರೆಗೆ ರೂ.1000 ದಂತೆ 10 ಗ್ರಾಮೀಣ ಪ್ರದೇಶದಲ್ಲಿ 2 ಎಕರೆವರೆಗೆ ರೂ.1,500 ಮತ್ತು ರೂ.400 ಶುಲ್ಕ ನಿಗದಿಪಡಿಸಲಾಗಿದೆ.
ಮತ್ತು ಹದ್ದುಬಸ್ತು ಅರ್ಜಿ ಸಲ್ಲಿಸುವವರಿಗೆ ನಗರ ಪ್ರದೇಶಗಳಲ್ಲಿ 2 ಎಕರೆಯವರಿಗೆ ರೂ.2,000, 2 ಎಕರೆಗಿಂತ ಹೆಚ್ಚಿನ ಭೂಮಿಗೆ ಪ್ರತಿ ಎಕರೆಗೆ ರೂ.400 ಶುಲ್ಕ ನಿಗದಿಪಡಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 10 ಹದ್ದುಬಸ್ತಿಗಾಗಿ ಅರ್ಜಿ ಸಲ್ಲಿಸುವವರಿಗೆ 2 ಎಕರೆವರೆಗೆ ರೂ.500 ಮತ್ತು ಅದಕ್ಕಿಂತ ಹೆಚ್ಚಿನ ಭೂಮಿಗೆ ಪ್ರತಿ ಎಕರೆಗೆ ರೂ.300 ನಿಗದಿಪಡಿಸಲಾಗಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿ ಬಾಜುದಾರನಿಗೆ ನೋಟಿಸ್ ಶುಲ್ಕ ರೂ.25 ನಿಗದಿಪಡಿಸಲಾಗಿದೆ. ಮುಂದುವರೆದು ಸ್ವಾವಲಂಬಿ ಯೋಜನೆಯಡಿ ಸ್ವಇಚ್ಛೆಯಿಂದ ಸ್ಕೆಚ್ ತಯಾರಿಸಲು ಸಲ್ಲಿಸುವ ಪ್ರತಿ ಅರ್ಜಿಗೆ ರೂ.1000 ನಿಗದಿಪಡಿಸಲಾಗಿದೆ. ಈ ಆದೇಶವನ್ನು ಕರ್ನಾಟಕ ರಾಜ್ಯಪಾಲರ ಆದೇಶಾನುಸರ ಮತ್ತು ಅವರ ಹೆಸರಿನಲ್ಲಿ ಕಂದಾಯ ಇಲಾಖೆಯ ಭೂಮಾಪನ ವಿಭಾಗದ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ನೀಡಿದ್ದಾರೆ.
ಈ ಆದೇಶವು ಜನವರಿ 1, 2024 ರಿಂದಲೇ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿ ತಿಳಿಸಲಾಗಿದೆ. ಆದರೆ ಈಗಾಗಲೇ ಅಳತೆಗಾಗಿ ಅರ್ಜಿ ಸಲ್ಲಿಸಿ ಬಾಕಿ ಇರುವ ಪ್ರಕರಣಗಳಿಗೆ ಅರ್ಜಿ ಶುಲ್ಕ ಅನ್ವಯವಾಗುವುದಿಲ್ಲ ಇದನ್ನು ಕೂಡ ಪ್ರಕಟಣೆಯಲ್ಲಿ ತಿಳಿಸಿ ಸ್ಪಷ್ಟಪಡಿಸಿದ್ದಾರೆ.
ಕಂದಾಯ ಇಲಾಖೆಗೆ ರೈತರಿಂದ ಸರ್ವೆ ಹದ್ದುಬಸ್ತು ಮುಂತಾದ ಕಾರಣಕ್ಕಾಗಿ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗುತ್ತಿರುವುದ್ದರಿಂದ ಸಮಯಕ್ಕೆ ಸರಿಯಾಗಿ ರೈತರಿಗೆ ಸೇವೆ ನೀಡಬೇಕು ಎನ್ನುವ ಕಾರಣಕ್ಕಾಗಿ ಕಂದಾಯ ಇಲಾಖೆಯಲ್ಲಿ ಸರ್ಕಾರ ಭೂಮಾಪಕರ ಜೊತೆ ಪರವಾಗಿ ಭೂಮಾಪನ ಕೂಡ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಈ ಪರವಾನಕ್ಕೆ ಭೂಮಾಪಕರು ನೀಡುವ ಸೇವೆಗೆ ಸಾರ್ವಜನಿಕರು ನೀಡುವ ಹಣದಿಂದಲೇ ನಿಗದಿತ ಸೇವಾ ಶುಲ್ಕವನ್ನು ಪಾವತಿಸಲಾಗುತ್ತಿದೆ. ಅರ್ಜಿದಾರನ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿಕೊಳ್ಳಲು ನಿರ್ಧಾರ ಮಾಡಿ ಈ ಆದೇಶ ಹೊರಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಂದಾಯ ಇಲಾಖೆ ಇತ್ತೀಚಿನ ಅಧಿಸೂಚನೆಯನ್ನು ಓದಿ ಮಾಹಿತಿ ತಿಳಿದುಕೊಳ್ಳಿ.