ಟಾಟಾ ಕಂಪನಿ ದೇಶದ ಪ್ರತಿಷ್ಟಿತ ಕಂಪನಿಗಳಲ್ಲಿ ಒಂದಾಗಿದೆ. ಟಾಟಾ ಬ್ರಾಂಡ್ ಹಲವಾರು ಪ್ರಾಡಕ್ಟ್ ಗಳನ್ನು ಉತ್ಪಾದಿಸುತ್ತದೆ ಮತ್ತು ಈ ಮೂಲಕ ದೇಶದ ಅವಶ್ಯಕತೆಯನ್ನು ಪೂರೈಸುವುದರ ಜೊತೆಗೆ ಉದ್ಯೋಗವಕಾಶವನ್ನು ಕೂಡ ಹೆಚ್ಚಿಸುತ್ತಿದೆ ಲಕ್ಷಾಂತರ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.
ನಿಮಗೂ ಕೂಡ ಈ ರೀತಿ ಟಾಟಾ ಕಂಪನಿಯಲ್ಲಿ ಉದ್ಯೋಗ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದರೆ ಕಂಪನಿ ವತಿಯಿಂದ ಈ ಕುರಿತು ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ, ಕಂಪನಿ ತನ್ನಲ್ಲಿ ಖಾಲಿ ಇರುವ ಹಲವಾರು ವಿಭಾಗಗಳ ವಿವಿಧ ಬಗ್ಗೆ ಹುದ್ದೆಗಳಿಗಾಗಿ ನೇಮಕಾತಿ ಮಾಡಿಕೊಳ್ಳುತ್ತಿದೆ ಮತ್ತು ಆಸಕ್ತರು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಕೂಡ ನೋಟಿಫಿಕೇಶನ್ ನಲ್ಲಿ ತಿಳಿಸಿದೆ. ಇದರ ಕುರಿತ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಮೊಬೈಲ್ ನಲ್ಲೇ ಉಚಿತವಾಗಿ ಪಡೆದುಕೊಳ್ಳಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್.! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ.!
ಟಾಟಾ ಕಂಪನಿಯಲ್ಲಿಅಪ್ರೆಂಟಿಸ್ ಪೋಸ್ಟ್ , ಮ್ಯಾನೇಜರ್ ಪೋಸ್ಟ್ ಮತ್ತು ಟೀಮ್ ಲೀಡರ್ ಪೋಸ್ಟ್ ಗಳು ಸಾಕಷ್ಟು ಸಂಖ್ಯೆಯಲ್ಲಿ ಖಾಲಿ ಇದ್ದು, ಈ ಹುದ್ದೆಗಳಿಗೆ ಹುದ್ದೆಯ ಅನುಸಾರ ITI, 12ನೇ ತರಗತಿ, ಪದವಿ, ಇಂಜಿನಿಯರಿಂಗ್ ಆದವರು ಅರ್ಜಿ ಸಲ್ಲಿಸಬಹುದಾಗಿದೆ.
ಇವರಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಆದವರನ್ನು ಕಂಪನಿಯ ಮಾರಾಟ ಮತ್ತು ಮಾರ್ಕೆಟಿಂಗ್ ವಿಭಾಗ, ಎಂಜಿನಿಯರಿಂಗ್ ಮತ್ತು ರಿಸರ್ಚ್ ಅಂಡ್ ಡೆವಲಪ್ಮೆಂಟ್ ವಿಭಾಗ, ಉತ್ಪಾದನೆ ಮಾಡುವ ಮತ್ತು ಕಾರ್ಯಾಚರಣೆ ಮಾಡುವ ಡಿಪಾರ್ಟ್ಮೆಂಟ್, ಖರೀದಿ ಮತ್ತು ಪೂರೈಕೆ ಸರಪಳಿ ವಿಭಾಗ ಹಾಗೂ ಹುದ್ದೆ ಖಾಲಿ ಇರುವ ಇನ್ನಿತರ ವಿಭಾಗಗಳಿಗೆ ನೇಮಿಸಿಕೊಳ್ಳಲಾಗುತ್ತದೆ.
7,000 ರೈತರಿಗೆ ಅರಣ್ಯ ಭೂಮಿ ಮಂಜೂರು.! ಮಂಜೂರಾತಿಗೆ ನಿಯಮಗಳೇನು? ಯಾವೆಲ್ಲ ರೈತರಿಗೆ ಹಕ್ಕುಪತ್ರ ಸಿಗಲಿದೆ ನೋಡಿ.!
ಭಾರತದಾದ್ಯಂತ ಇರುವ ಎಲ್ಲಾ ಟಾಟಾ ಕಂಪನಿ ಬ್ರಾಂಚ್ ಗಳಿಗಾಗಿ ಈ ನೇಮಕಾತಿ ನಡೆಯುತ್ತಿದ್ದು ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳಿಗೆ ಅವರು ಆರಿಸಿದ ಹುದ್ದೆ ವಿಭಾಗ ಮತ್ತು ವಿದ್ಯಾರ್ಹತೆಗೆ ಅನುಸಾರವಾಗಿ ಎಲ್ಲಿ ಪೋಸ್ಟ್ ಖಾಲಿ ಇದೆಯೋ ಆ ಬ್ರಾಂಚ್ ಗೆ ನೇಮಕಾತಿ ಮಾಡಲಾಗುತ್ತದೆ.
ಅನುಭವ ಇಲ್ಲದಿದ್ದವರಿಗೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇದ್ದು ನೇಮಕಾತಿಗೆ ಅರ್ಹರಾದ ಎಲ್ಲರಿಗೂ ಅಂತಿಮ ಹಂತದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಾವ ರೀತಿ ಕೆಲಸ ಮಾಡುವುದು ಎಂದು ತರಬೇತಿ ನೀಡಲಾಗುವುದು, ಜೊತೆಗೆ ಎಲ್ಲಾ ಸೌಲಭ್ಯಗಳ ವಿವರವನ್ನು ಹೇಳಲಾಗುವುದು. ಹಾಗಾಗಿ ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ನೆರವಾಗಿ.
ಅರ್ಜಿ ಸಲ್ಲಿಸುವ ವಿಧಾನ ಹೇಗಿದೆ ನೋಡಿ:-
* ಮೊದಲಿಗೆ ಟಾಟಾ ಮೋಟಾರ್ಸ್‌ನ ಅಧಿಕೃತ ವೆಬ್‌ಸೈಟ್ https://careers.tatamotors.com ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನೀವು ಯಾವ ಹುದ್ದೆ ಸೇರಲು ನಿರ್ಧಾರ ಮಾಡಿದ್ದೀರಾ ಅದನ್ನು ಸೆಲೆಕ್ಟ್ ಮಾಡಿ.
* ಸ್ಕ್ರೀನ್ ಮೇಲೆ ಯಾವ ಹುದ್ದೆಗಳು ಲಭ್ಯವಿರುವವು ಎಂಬ ವಿವರ ಕೂಡ ತೋರಿಸಲಾಗುತ್ತದೆ ಮತ್ತು ಎಲ್ಲಾ ಪೋಸ್ಟಗಳ ವಿವರವನ್ನು ಕೂಡ ತೋರಿಸಲಾಗುತ್ತದೆ. ಅದನ್ನು ಓದಿಕೊಂಡು ನೀವು ಅರ್ಜಿ ಹಾಕಲು ಇಚ್ಛಿಸುವ ಪೋಸ್ಟ್ ಅನ್ನು ಸೆಲೆಕ್ಟ್ ಮಾಡಿ.
* ಅರ್ಜಿ ಫಾರಂ ಓಪನ್ ಆಗುತ್ತದೆ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ, ಅದಕ್ಕೆ ನಿಗಧಿ ಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವಯೋಮಿತಿ ಧೃಡಿಕರಿಸಲು ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ಅಲ್ಲಿ ನೀಡುವ ಸೂಚನೆಗಳ ಪ್ರಕಾರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿಗೊಳಿಸಿ ಇ-ರಸೀದಿ ಪಡೆಯಿರಿ.
* ಕಂಪನಿಯು ನಿಮ್ಮನ್ನು ಸಂಪರ್ಕಿಸುವುದಕ್ಕಾಗಿ ಸರಿಯಾದ ಇ-ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ ನೀಡಿ, ಕೆಲವೇ ದಿನಗಳಲ್ಲಿ ಕಂಪನಿ ಕಡೆಯಿಂದ ಇದಕ್ಕೆ ರೆಸ್ಪಾನ್ಸ್ ಬರುತ್ತದೆ.