Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಆಸ್ತಿ ಜಮೀನಿಗೆ ಸಂಬಂಧಪಟ್ಟ ಹಾಗೆ ಇತ್ತೀಚಿನ ದಿನಗಳಲ್ಲಿ ತಂಟೆ ತಕರಾರು ಇದ್ದೇ ಇದೆ. ಅದರಲ್ಲೂ ಒಂದೇ ಕುಟುಂಬದ ಸದಸ್ಯರ ನಡುವೆ ಹೆಚ್ಚಿನ ಸಮಯದಲ್ಲಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧ ಪಟ್ಟ ಹಾಗೆ ಅಣ್ಣ-ತಮ್ಮಂದಿರ ನಡುವೆ ದಾಯಾದಿ ಕಲಹ ಇರುವ ಬಗ್ಗೆ ನೋಡಿದ್ದೇವೆ.
ಪಿತ್ರಾರ್ಜಿತ ಆಸ್ತಿಯನ್ನು ತಂದೆ ಸ.ತ್ತ ಬಳಿಕ ಸಹೋದರ ಮಾಡಿಸಿಕೊಂಡಿದ್ದಾನೆ ನಮಗೂ ಅದರಲ್ಲಿ ಪಾಲು ಬರಬೇಕು ಎಂದು ಕೋರ್ಟ್ ನಲ್ಲಿ ಕೇಸ್ ಹಾಕುತ್ತಾರೆ. ಇಂತಹ ಸಮಯದಲ್ಲಿ ಕೋರ್ಟ್ ಕೂಡ ಪ್ರಶ್ನೆ ಮಾಡುತ್ತದೆ ಇದನ್ನು ರಿಜಿಸ್ಟರ್ ಮಾಡಿಸಿಕೊಂಡ ಸಮಯದಲ್ಲಿ ನೀವು ಏಕೆ ತಕರಾರು ಅರ್ಜಿ ಸಲ್ಲಿಸಲಿಲ್ಲ ಎಂದು? ಹಾಗೆ ಅನೇಕ ಸಂದರ್ಭಗಳಲ್ಲಿ ತಕರಾರು ಅರ್ಜಿ ವಿಷಯ ಬರುತ್ತದೆ.
ಟಾಟಾ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಹಾಕಿ.!
ಆಸ್ತಿ ಹಾಗೂ ಜಮೀನಿಗೆ ಸಂಬಂಧಪಟ್ಟ ಹಾಗೆ ತಕರಾರು ಅರ್ಜಿ ಸಲ್ಲಿಸುವ ವಿಚಾರ ಪ್ರತಿಯೊಬ್ಬರಿಗೂ ಕೂಡ ತಿಳಿದಿರಬೇಕು ಹಾಗಾಗಿ ಈ ಅಂಕಣದಲ್ಲಿ ತಕರಾರು ಅರ್ಜಿ ಸಲ್ಲಿಸುವುದು ಹೇಗೆ? ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎನ್ನುವ ಬಗ್ಗೆ ತಿಳಿಸುತ್ತಿದ್ದೇವೆ, ತಪ್ಪದೆ ಈ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆ ಶೇರ್ ಮಾಡಿ.
ನೋಂದಣಿಯಾದ (Register) ಮಾಡಲಾದ ಎಲ್ಲ ಕಡತಗಳು ಕೂಡ ಭೂಮಿ ಕೇಂದ್ರದ ಮೂಲಕ ಮ್ಯೂಟೇಷನ್ ಗೆ ಒಳಪಡಲೇಬೇಕು. ಆಗ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿ (V.O) ಅವರು ಗ್ರಾಮದ ತಲಾಟಿಯವರಿಂದ ತಕರಾರು ಮತ್ತು ಆಕ್ಷೇಪಣೆ ಗಾಗಿ ಜೆಫ್ ಮೂಲಕ ಸಾರ್ವಜನಿಕ ಪ್ರಚಾರ ನಡೆಸುತ್ತಾರೆ.
ಮೊಬೈಲ್ ನಲ್ಲೇ ಉಚಿತವಾಗಿ ಪಡೆದುಕೊಳ್ಳಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್.! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ.!
ತಕರಾರು ಅರ್ಜಿ ಸಲ್ಲಿಸುವುದಕ್ಕೆ ಕನಿಷ್ಠ 21 ದಿನಗಳಿಂದ 30 ದಿನಗಳ ವರೆಗೆ ಕಾಲಾವಕಾಶ ಕೂಡ ಇರುತ್ತದೆ. ಗ್ರಾಮ ಲೆಕ್ಕಾಧಿಕಾರಿಗಳು ಗೊತ್ತು ಪಡಿಸಿದ ದಿನಗಳಲ್ಲಿ ನೊಂ’ದ ರೈತರು ತಕರಾರು ಅರ್ಜಿ ಸಲ್ಲಿಸಬಹುದು. ಸದರಿ ಆಸ್ತಿ ಗೆ ಸಂಬಂಧಿಸಿದಂತೆ ತಮ್ಮಲ್ಲಿ ಇರುವ ಸೂಕ್ತ ದಾಖಲೆಗಳೊಂದಿಗೆ ಒಂದು ಬಿಳಿ ಹಾಳೆಯ ಮೇಲೆ ಅರ್ಜಿ ಬರೆದು ತಕರಾರು ಅರ್ಜಿ ಬರೆದು ಗ್ರಾಮಲೆಕ್ಕಾಧಿಕಾರಿ ಗೆ ಸಲ್ಲಿಸಬಹುದು.
ಅರ್ಜಿ ಸ್ವೀಕರಿಸಿದ ಗ್ರಾಮ ಲೆಕ್ಕಾಧಿಕಾರಿಯವರು ತಕರಾರು ಅರ್ಜಿ ಸ್ವೀಕರಿಸಿ ವಿವಾದಾತ್ಮಕ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕ್ಕಾಗಿ ತಹಶೀಲ್ದಾರ್ ಕಚೇರಿ ಗೆ ಅದನ್ನು ಕಳುಹಿಸಿಕೊಡುತ್ತಾರೆ. ತಹಸೀಲ್ದಾರ್ ಕಚೇರಿಯಿಂದ ತಕರಾರು ಅರ್ಜಿ ಸಲ್ಲಿಸಿದವರಿಗೂ ಮತ್ತು ಜಮೀನು ನೋಂದಣಿ ಮಾಡಿಕೊಂಡವರಿಗೂ ನೋಟಿಸ್ ಬರುತ್ತದೆ.
7,000 ರೈತರಿಗೆ ಅರಣ್ಯ ಭೂಮಿ ಮಂಜೂರು.! ಮಂಜೂರಾತಿಗೆ ನಿಯಮಗಳೇನು? ಯಾವೆಲ್ಲ ರೈತರಿಗೆ ಹಕ್ಕುಪತ್ರ ಸಿಗಲಿದೆ ನೋಡಿ.!
ಅರ್ಜಿದಾರರಿಗೆ ಮತ್ತು ದೂರುದಾರರಿಗೆ ಆ ನೋಟಿಸ್ ನಲ್ಲಿ ಒಂದು ದಿನಾಂಕ ಸೂಚಿಸಲಾಗಿರುತ್ತದೆ ಆ ದಿನ ಮಾನ್ಯ ತಹಶೀಲ್ದಾರ್ ಪೀಠದಲ್ಲಿ ದೂರುದಾರರು ಮತ್ತು ಅರ್ಜಿದಾರರು ಸೂಕ್ತ ದಾಖಲಾತಿಗಳೊಂದಿಗೆ ತಮ್ಮ ಅಹವಾಲು ಹೇಳಬೇಕು ಅಲ್ಲಿ ಅಹವಾಲು ತಾವೇ ಹೇಳಬಹುದು ಅಥವಾ ತಮ್ಮ ವಕೀಲರ ಮೂಲಕ ಮಾಡಿಸಬಹುದು. ಮಾನ್ಯ ತಹಶೀಲ್ದಾರ್ ರವರು ಕಾಲಕಾಲಕ್ಕೆ ಇಬ್ಬರನ್ನು ವಿಚಾರಣೆ ಮಾಡಿ ಅಂತಿಮವಾಗಿ ನ್ಯಾಯ ಬದ್ಧ ಆದೇಶ ನೀಡುತ್ತಾರೆ.
ಕೊನೆಯದಾಗಿ ತಹಸೀಲ್ದಾರ್ ಅವರ ಪೀಠಿಕೆ ಯಲ್ಲಿ ಚರ್ಚಿಸಿದ ಅಂಶಗಳ ಆಧಾರದ ಮೇಲೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 328 ಹಾಗೂ 129 ಅಡಿಯಲ್ಲಿ ಹೀಗೆ ಮಾನ್ಯ ತಹಶೀಲ್ದಾರ್ ರವರು ಆದೇಶವನ್ನು ಭೂಮಿ ಕೇಂದ್ರದ ಗಣಕ ಶಾಖೆಗೆ ಹೋಗಿ ಕಾರ್ಯಗತವಾಗುತ್ತದೆ. ಈ ವಿಚಾರದಲ್ಲಿ ಮತ್ತೊಂದು ಮುಖ್ಯ ಸಂಗತಿಯೇನೆಂದರೆ ಅರ್ಜಿದಾರರು ಮತ್ತು ದೂರುದಾರರು ತಹಶೀಲ್ದಾರರ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ಇದ್ದೇ ಇರುತ್ತದೆ.
ಸರ್ಕಾರದಿಂದ 4000 ಉಚಿತ ಬೈಕ್ ವಿತರಣೆ, ಆಸಕ್ತರು ಅರ್ಜಿ ಸಲ್ಲಿಸಿ.!