ಕಾರ್ ಎನ್ನುವುದು ಯುವ ಜನತೆಗೆ ಒಂದು ಕ್ರೇಜ್. ಪ್ರತಿಯೊಬ್ಬ ಹುಡುಗನಿಗೆ ಕೂಡ ತಾನು ಆದಷ್ಟು ಬೇಗ ದುಡಿದು ಕಾರ್ ತೆಗೆದುಕೊಂಡು ಸ್ನೇಹಿತರ ಜೊತೆ ಔಟಿಂಗ್ ಹೋಗಬೇಕು, ತನ್ನ ಕುಟುಂಬದವರನ್ನು ಕಾರ್ ನಲ್ಲಿಯೇ ಹೊರಗೆ ಕರೆದುಕೊಂಡು ಹೋಗಬೇಕು ಎನ್ನುವ ಆಸೆ ಇರುತ್ತದೆ.
ಇದರ ಜೊತೆಗೆ ಸಾರ್ವಜನಿಕ ಬಸ್ ಗಳಲ್ಲಿ ಪ್ರಯಾಣಿಸಲು ಸಮಯ ಇಲ್ಲ ಎನ್ನುವವರು ಪ್ರತಿಷ್ಠೆಗಾಗಿ ಮಾತ್ರವಲ್ಲದೇ ಅನಿವಾರ್ಯತೆ ಕಾರಣದಿಂದ ಕೂಡ ಕಾರ್ ಖರೀದಿಸುತ್ತಾರೆ. ಕಾರ್ ಎನ್ನುವುದು ಈಗ ಪ್ರತಿ ಕುಟುಂಬಕ್ಕೂ ಬೇಕಾಗಿರುವ ಒಂದು ಅಗತ್ಯ ವಸ್ತುವಾಗಿ ಹೋಗಿದೆ.
ಇಂದಿಗೂ ಸಹ ನಮ್ಮ ದೇಶದಲ್ಲಿ ಅನೇಕ ಹಳ್ಳಿಗಳ ಕಡೆ ಸಾರಿಗೆ ವ್ಯವಸ್ಥೆಯೇ ಸರಿ ಇಲ್ಲ ವಯಸ್ಸಾದವರು ಮತ್ತು ಗರ್ಭಿಣಿ ಸ್ತ್ರೀಯರಿದ್ದರೆ ಎಮರ್ಜೆನ್ಸಿ ಆದಾಗ ಟೂ ವೀಲರ್ ನಲ್ಲಿ ಸಾಗಿಸಲು ಆಗುವುದಿಲ್ಲ ಹೀಗಾಗಿ ಮನೆಯಲ್ಲಿ ಚಿಕ್ಕ ಮಕ್ಕಳಿರುವವರಿಂದ ಹಿಡಿದು ಪ್ರತಿಯೊಬ್ಬರು ತಮ್ಮ ಕುಟುಂಬದ ಸೇಫ್ಟಿ ಗಾಗಿ ಕಾರ್ ಖರೀದಿಸಲು ನೋಡುತ್ತಾರೆ.
ಈ ಸುದ್ದಿ ಓದಿ:- 3 ಲಕ್ಷ ಹಣ ಡೆಪೋಸಿಟ್ ಮಾಡಿದ್ರೆ ಪ್ರತಿ ತಿಂಗಳು 30 ಸಾವಿರ ಬಡ್ಡಿ ಸಿಗುವ ಬಂಪರ್ ಯೋಜನೆ ಇದು.!
ಈಗಿನ ಕಾಲದಲ್ಲಿ ಗ್ರಾಹಕನೇ ದೇವರು ಎನ್ನುವ ಮಾತನ್ನು ಕೂಡ ಹೇಳುತ್ತಾರೆ. ಹೀಗಾಗಿ ನಿಮ್ಮ ನಿಮ್ಮ ಅಗತ್ಯತೆ ಆಸಕ್ತಿಗಳಿಗೆ ಅನುಗುಣವಾಗಿ ಮಾರುಕಟ್ಟೆಗಳಲ್ಲಿ ಹತ್ತಾರು ಕಂಪನಿಗಳ ಹಲವಾರು ಫೀಚರ್ಸ್ ಗಳು ಇವೆ. ನೀವು ನಿಮ್ಮ ಹಣಕಾಸಿನ ಪರಿಸ್ಥಿತಿ ಅನಿವಾರ್ಯತೆ ಇತ್ಯಾದಿಗಳನ್ನು ನೋಡಿ ಆರಿಸಿಕೊಳ್ಳಬಹುದು. ಕೊಳ್ಳುವಾಗಲು ಕೂಡ ವೆಹಿಕಲ್ ಲೋನ್ ಲಭ್ಯವಿದೆ.
ಒಂದೇ ಬಾರಿಗೆ ಹಣ ಕೊಟ್ಟುಕೊಳ್ಳಲು ಆಗದಿದ್ದವರು EMI ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು. ಇದು ಕೂಡ ದುಬಾರಿ ಎನಿಸಿದರೆ ಸೆಕೆಂಡ್ಸ್ ಕೂಡ ಮಾರಾಟ ಮಾಡುತ್ತವೆ. ಸುಸ್ಥಿತಿಯಲ್ಲಿರುವ ಕೆಲವೇ ದಿನಗಳ ಬಳಕೆ ಆಗಿರುವ ಕಾರುಗಳನ್ನು ಕಡಿಮೆ ಬೆಲೆಗೆ ಸೇಲ್ ಮಾಡುತ್ತವೆ ಕಂಪನಿಯ ವೆಬ್ಸೈಟ್ ಗಳ ಮೂಲಕ ಇದರ ಮಾಹಿತಿ ಪಡೆಯಬಹುದು.
ಆಯಾ ಕಂಪನಿಗಳು ಮಾತ್ರವಲ್ಲದೆ OLX ಸೇರಿದಂತೆ ಅನೇಕ ವೆಬ್ಸೈಟ್ ಗಳಲ್ಲಿ ಕೂಡ ಈ ರೀತಿ ಎರಡನೇ ಬಳಕೆಗೆ ಕಾರುಗಳು ಸಿಗುವುದನ್ನು ನಾವು ನೋಡಿರುತ್ತೇವೆ. ಈಗ ಇಂಥದ್ದೇ ಒಂದು ವೆಬ್ಸೈಟ್ನಲ್ಲಿ ಮಾರುತಿ ಎಟಿರ್ಗ ಕಾರ್ ಬಹಳ ಕಡಿಮೆ ಬೆಲೆಗೆ ಸಿಗುತ್ತಿದೆ. ಇದರ ಕುರಿತ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ,ಇಡೀ ಫ್ಯಾಮಿಲಿ ಜೊತೆಯಾಗಿ ಹೋಗುವುದಕ್ಕೆ 7 ಸೀಟರ್ ಇರುವ ಕಾರ್ ಬೇಕು ಎಂದುಕೊಂಡಿದ್ದರೆ ಈ ಮಾರುತಿ ಎಟಿರ್ಗಾ ಕಾರ್ ಖರೀದಿಸಬಹುದು.
ಈ ಸುದ್ದಿ ಓದಿ:- ಚೆಕ್ ಬರೆಯುವಾಗ ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಖಾಲಿ ಎಚ್ಚರ.! ಚೆಕ್ ವ್ಯವಹಾರ ಮಾಡುವವರು ತಪ್ಪದೆ ನೋಡಿ.!
ಈ ಕಾರ್ ತನ್ನ ಕಾರ್ಯಕ್ಷಮತೆಯಿಂದ ಎಲ್ಲರ ಗಮನ ಸೆಳೆದಿದೆ. ಈ ಕಾರ್ ನಲ್ಲಿ 1462 CC ಕೆಪಾಸಿಟಿ ಹೊಂದಿದೆ. 6000 rpm ನಲ್ಲಿ 101.6 bhp ಹಾಗು 4000 rpm ನಲ್ಲಿ 136.8 nm ಗರಿಷ್ಠ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಕಾರ್ ದೂರದ ಪ್ರಯಾಣಕ್ಕೆ ಉತ್ತಮವಾದ ಆಯ್ಕೆ ಆಗಿದೆ. ಮಾರುತಿ ಎರ್ಟಿಗಾ 209 ಲೀಟರ್ ಬೂಟ್ ಸ್ಪೇಸ್ ಹೊಂದಿದ್ದು ಮಾರ್ಕೆಟ್ ನಲ್ಲಿ ಬೇಡಿಕೆಯಲ್ಲಿದೆ. ಶೋ ರೂಂ ಬೆಲೆ 8.69 ಲಕ್ಷದಿಂದ ಶುರುವಾಗಿ, 13.03 ಲಕ್ಷದ ವರೆಗೂ ಇರುತ್ತದೆ.
ಈಗ ಒಮ್ಮೆ ಬಳಕೆಯಾಗಿರುವ ಎರಡು ಮಾರುತಿ ಎರ್ಟಿಗಾ ಕಾರ್ ಒಂದು ಬಹಳ ಕಡಿಮೆ ಬೆಲೆಗೆ ಸಿಗುತ್ತಿವೆ. 59,000km ಪ್ರಯಾಣ ಮಾಡಿರುವ 2013ರ ಮಾಡೆಲ್ 4.85 ಲಕ್ಷಕ್ಕೆ ಸಿಗುತ್ತಿದೆ. 52,770km ಓಡಿರುವ 2012 ಮಾಡೆಲ್ ಕಾರ್ 4.88 ಲಕ್ಷಕ್ಕೆ ಸಿಗುತ್ತಿದೆ. ಈ ರೀತಿಯಲ್ಲಿ 5 ಲಕ್ಷದ ಒಳಗೆ ಮಾರುತಿ ಕಾರ್ ಖರೀದಿಸಲು ಬಯಸುವವರು ಒಮ್ಮೆ ಮಾರುತಿ ಕಂಪನಿ ವೆಬ್ಸೈಟ್ ನಲ್ಲಿ ಈ ಬಗ್ಗೆ ಸರ್ಚ್ ಮಾಡಿ.