ಮನೆ ಕಟ್ಟುವ ವಿಚಾರದಲ್ಲಿ ಪ್ರತಿಯೊಂದು ವಿಷಯವು ಕೂಡ ಬಹಳ ಮುಖ್ಯವಾದದ್ದು. ನಾವು ಖರೀದಿಸುವ ಸಿಮೆಂಟ್ ನಿಂದ ಇಂಟೀರಿಯರ್ ಡಿಸೈನ್ ವರೆಗೆ, ನಾವು ಮಾಡಿಸುವ ಪೇಂಟ್ ನಿಂದ ಫರ್ನಿಚರ್ ವರೆಗೆ ನಿಗಾವಹಿಸಿ ಸರಿಯಾದದ್ದನ್ನು ಆರಿಸಿದಾಗ ಮಾತ್ರ ನಾವು ಬಹಳ ಸಾರ್ಥಕತೆಯಿಂದ ನೆಮ್ಮದಿಯಾಗಿ ಇರಬಹುದು.
ಇಲ್ಲವಾದಲ್ಲಿ ಮುಂದೆ ಆ ರೀತಿ ಮಾಡಬೇಕಿತ್ತು, ಈ ರೀತಿ ಮಾಡಬೇಕಿತ್ತು ಎನ್ನುವ ಬೇಸರದಲ್ಲಿಯೇ ದಿನ ಕಳೆಯಬೇಕಾಗುತ್ತದೆ. ಹಾಗಾಗಿ ಮನೆ ಕಟ್ಟುವ ಮುನ್ನವೇ ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ. ನಿಮಗೆ ಅನುಕೂಲತೆ ಮಾಡಿ ಕೊಡುವ ಉದ್ದೇಶದಿಂದ ನಾವು ಸಹ ಈ ಅಂಕಣದಲ್ಲಿ ಒಂದು ಬಹಳ ಮುಖ್ಯವಾದ ವಿಷಯವಾದ ಸ್ಟೇರ್ ಕೇಸ್ ರೇಲಿಂಗ್ (Staircase railing) ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಹಲವಾರು ವಿಧದ ಸ್ಟೇರಾ ಕೇಸ್ ವೆರೈಟಿ ಇದೆ. MS Railing, Stainless Steel Railing, Wood Railing, Tough Glass Railing ಇದರಲ್ಲೇ ಮಿಕ್ಸಿಂಗ್ ಇನ್ನು ಅನೇಕ ವಿಧ ಇದೆ. ಯಾವುದನ್ನು ಬಳಸುವುದರಿಂದ ಯಾವ ರೀತಿಯ ಅನುಕೂಲ ಅನಾನುಕೂಲ ಎನ್ನುವುದರ ಬಗ್ಗೆ ಹೇಳುವುದಾದರೆ ಒಂದು ವೇಳೆ ವುಡ್ ಸೆಲೆಕ್ಟ್ ಮಾಡಿದರೆ ಅದನ್ನು ಯಾವ ವುಡ್ ನಿಂದ ಮಾಡಿರುತ್ತಾರೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ ಮತ್ತು ವುಡ್ ಯಾವಾಗಲೂ ಸೀಸನ್ ಗೆ ತಕ್ಕ ಹಾಗೆ ವೇರಿಯೇಷನ್ ಆಗುತ್ತಿರುತ್ತದೆ ಆಗ ಸಮಸ್ಯೆ ಆಗುತ್ತದೆ.
ಈ ಸುದ್ದಿ ಓದಿ:- ಭೂಮಾಪಕರ ಹುದ್ದೆ ನೇಮಕಾತಿ, ವೇತನ 47,650/- ಆಸಕ್ತರು ಅರ್ಜಿ ಸಲ್ಲಿಸಿ.!
ಯಾವುದೋ ಒಂದು ಬಿಲ್ಡಿಂಗ್ ನೋಡಿ ನಾವು ಚೆನ್ನಾಗಿ ಸಿಕ್ಕಿದೆ ಎಂದು ಸೆಲೆಕ್ಟ್ ಮಾಡಿದರೆ ನಮ್ಮ ಬಿಲ್ಡಿಂಗ್ ಗೆ ಒಳ್ಳೆಯ ಕ್ವಾಲಿಟಿ ವುಡ್ ಸಿಕ್ಕದೆ ಹೋಗಿಬಿಡಬಹುದು ಹಾಗಾಗಿ ಹೆಚ್ಚಿನ ಜನರು ಇದನ್ನು ಉತ್ತಮವಲ್ಲ ಎಂದು ಹೇಳುತ್ತಾರೆ. ಈಗ ಟ್ರೆಂಡಿಂಗ್ ನಲ್ಲಿ ಇರುವುದು ಎಂದರೆ SS with Glass and SS with Wood railing, MS Railing.
ಕಡಿಮೆ ಬಜೆಟ್ ಮನೆಗಳಿಗೆ ಅಥವಾ ಬಾಡಿಗೆ ಕೊಡುವಂತಹ ಮನೆಗಳಿಗೆ ಈ ರೀತಿ ಸಾಧಾರಣವಾದ ಮನೆಗಳಿಗೆ MS Railing ಬೆಸ್ಟ್. ಹೊರಗಡೆ ಮೆಟ್ಟಿಲಿದ್ದು ರೇಲಿಂಗ್ ಮಾಡಿಸಿದ್ದರೂ ಕೂಡ MS Railing ಉತ್ತಮ. ಇದಕ್ಕೆ ಮೇಂಟೆನೆನ್ಸ್ ಕೂಡ ಏನು ಕಷ್ಟ ಇಲ್ಲ. ಮಳೆ ಬಿದ್ದಾಗ ಒರೆಸಿಕೊಂಡು ನೀಟಾಗಿ ನೋಡಿಕೊಂಡರೆ ಬಹಳ ವರ್ಷ ಬಾಳಿಕೆ ಬರುತ್ತದೆ ಇಲ್ಲವಾದಲ್ಲಿ ಎರಡು ಮೂರು ವರ್ಷಗಳಿಗೊಮ್ಮೆ ಪೇಂಟ್ ಮಾಡಿದರು ಸಾಕು.
ಇದಕ್ಕಿಂತ ಒಂದು ಸ್ಟೆಪ್ ಮೇಲೆ ನೋಡುವುದಾದರೆ SS Railing ನಲ್ಲಿ ತುಕ್ಕು ಹಿಡಿಯುವ ಚಾನ್ಸಸ್ ಇರುವುದಿಲ್ಲ, ಯಾವುದೇ ಮೆಂಟೇನೆನ್ಸ್ ಬೇಕಾಗಿಲ್ಲ, ನೋಡುವುದಕ್ಕೂ ರಿಚ್ ಲುಕ್ ಇರುತ್ತದೆ, ಬೆಲೆ ಮಾತ್ರ MS Railing ಗಿಂತ ಜಾಸ್ತಿ ಇರುತ್ತದೆ. 202, 302 ಹೀಗೆ ಎರಡು ಕ್ವಾಲಿಟಿ ಇರುತ್ತದೆ ಎರಡು ಕೂಡ ಚೆನ್ನಾಗಿದೆ, ಬಳಸಬಹುದು.
ಈ ಸುದ್ದಿ ಓದಿ:- ಪ್ರಾಪರ್ಟಿ ಟ್ರಾನ್ಸ್ಫರ್ ಹೇಗೆಲ್ಲಾ ಮಾಡುತ್ತಾರೆ ಗೊತ್ತಾ.? ಮನೆ, ಜಮೀನು, ಸೈಟ್ ಇನ್ನಿತರ ಆಸ್ತಿ ಇದ್ದವರು ನೋಡಿ.!
ಇನ್ನೂ ಒಂದು ಸ್ಟೆಪ್ ಮುಂದೆ ಹೋದರೆ Glass With SS Railing ಇದಕ್ಕಿಂತ ಚೆನ್ನಾಗಿರುತ್ತದೆ, Wood with SS ನಲ್ಲಿ ಕಡಿಮೆ ಪ್ರಮಾಣದಲ್ಲಿ ವುಡ್ ಬಳಸಲಾಗಿರುತ್ತದೆ, ಒಳ್ಳೆಯ ಲುಕ್ ಇರುತ್ತದೆ ಬಳಸಬಹುದು ಇದರ ಬೆಲೆ ಹೇಗೆ ಮತ್ತಿತರ ವಿಚಾರದ ಬಗ್ಗೆ ಇನ್ನು ವಿವರವಾಗಿ ತಿಳಿದುಕೊಳ್ಳಲು.
ಕೆಳಗಿನ ವಿಡಿಯೋವನ್ನು ಪೂರ್ತಿಯಾಗಿ ನೋಡಿ. ಮತ್ತು ನೀವು ಕೂಡ ಮನೆ ಕಟ್ಟುವ ಆಸೆ ಹೊಂದಿದ್ದು ನಿಮ್ಮ ಕನಸಿನ ಮನೆ ಒಳ್ಳೆಯ ಗುಣಮಟ್ಟದೊಂದಿಗೆ ನೀವಂದು ಕೊಂಡಂತೆ ಆಗಬೇಕು ಎಂದರೆ ಕರ್ನಾಟಕದಲ್ಲಿ ಹೆಸರಂತ ಕನ್ಸ್ಟ್ರಕ್ಷನ್ ಕಂಪನಿಯಾದ RCC ಒಮ್ಮೆ ಸಂಪರ್ಕಿಸಿ.
RCC: 7022876667 / 7022956667