ಮನೆ, ಸೈಟ್, ಜಮೀನು ಈ ರೀತಿ ಆಸ್ತಿಗಳು ಯಾವ ರೀತಿಯಲ್ಲಿ ಒಬ್ಬ ಹೆಸರಿನಿಂದ ಮತ್ತೊಬ್ಬರಿಗೆ ವರ್ಗಾವಣೆ ಆಗುತ್ತದೆ, ಕಾನೂನುಬದ್ಧವಾಗಿ ಯಾವ ವಿಧಾನದಲ್ಲಿ ಮಾಡಬೇಕು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರಲೇಬೇಕಾದ ಸಾಮಾನ್ಯ ಜ್ಞಾನವಾಗಿದೆ. ಕ್ರಯ ಪತ್ರ, ವಿಭಾಗ ಪತ್ರ, ದಾನ ಪತ್ರ ಹೀಗೆ ಹಲವು ಬಗೆಗಳಿವೆ ಯಾವುದು ಹೆಚ್ಚು ಸೇಫ್ ಯಾವ ರೀತಿ ಆಸ್ತಿಗಳನ್ನು ಯಾವ ರೀತಿಯಲ್ಲಿ ಮಾಡಬಹುದು ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
* ಕ್ರಯ ಪತ್ರ (Sale deed):- ಆಸ್ತಿ ಮಾರುವವರು ಮತ್ತು ಕೊಳ್ಳುವವರ ನಡುವೆ ಆದ ಒಪ್ಪಂದವನ್ನು ಖರೀದಿ ಪತ್ರದಲ್ಲಿ ಇರುವಂತೆ ಮಾಡಿ ರಿಜಿಸ್ಟರ್ ಮಾಡುವಾಗ ಕ್ರಯ ಪತ್ರದ ಮೂಲಕ ನೋಂದಣಿ ಮಾಡುವ ಪದ್ಧತಿಯನ್ನು ಕ್ರಯ ಎನ್ನುತ್ತೇವೆ. ಇದರಲ್ಲಿ ಆಸ್ತಿ ಮಾರಾಟ ಮಾಡುವ ವ್ಯಕ್ತಿಯಿಂದ ಖರೀದಿ ಮಾಡುವ ವ್ಯಕ್ತಿಗೆ ಸೇಲ್ ಡೀಡ್ ಪತ್ರದ ಮೂಲಕ ಆಸ್ತಿ ಹಕ್ಕು ವರ್ಗಾವಣೆಯಾಗುತ್ತದೆ.
ಈ ಕ್ರಯಪತ್ರಕ್ಕೆ ಕಾನೂನು ಬದ್ಧ ಮಾನ್ಯತೆ ಸಿಗಬೇಕು ಎಂದರೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಮಾಡಿಸುವುದು ಒಳ್ಳೆಯದು. ಎಲ್ಲರೂ ಕೂಡ ಇದೇ ರೀತಿ ರಿಜಿಸ್ಟರ್ ನಲ್ಲಿ ದಾಖಲಿಸಿ, ಕ್ರಯ ಪತ್ರದ ಮೂಲಕ ಆಸ್ತಿ ಹಕ್ಕು ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಇಲ್ಲಿ ಆಸ್ತಿ ಮಾರಾಟವಾಗಿದೆ ಎನ್ನುವುದು ಸ್ಪಷ್ಟ.
ಈ ಸುದ್ದಿ ಓದಿ:- ಎಕರೆಗೆ 50 ಲಕ್ಷ ಆದಾಯ ಕೊಡುವ ಅಗರ್ ವುಡ್ ಕೃಷಿಯ ಸಂಪೂರ್ಣ ಮಾಹಿತಿ.!
2. ವಿಭಾಗ ಪತ್ರ(Partition Deed):- ಕುಟುಂಬದ ಸದಸ್ಯರೆಲ್ಲರೂ ಸೇರಿ ಆಸ್ತಿ ಭಾಗ ಮಾಡಿಕೊಳ್ಳಲು ಇಚ್ಚಿಸಿದಾಗ ಕುಟುಂಬದೊಳಗೆ ಮಾತುಕತೆ ಮಾಡಿ ಒಪ್ಪಿಕೊಂಡು ತಮ್ಮ ತಮ್ಮ ಹೆಸರಿಗೆ ಬಂದ ಆಸ್ತಿಯನ್ನು ವಿಭಾಗ ಪತ್ರದ ಮೂಲಕ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ನೋಂದಣಿ ಮಾಡಿಕೊಂಡು ಆಸ್ತಿ ಹಕ್ಕನ್ನು ವರ್ಗಾವಣೆ ಮಾಡುವುದನ್ನು ವಿಭಾಗ ವಿಧಾನ ಎನ್ನುತ್ತಾರೆ.
ತಂದೆ ತಾಯಿ ಸಹೋದರ ಸಹೋದರಿ ಹೀಗೆ ಎಲ್ಲಾ ನೇರ ಸಂಬಂಧಗಳು ಸೇರಿ ತಮ್ಮ ಭಾಗ ಹಂಚಿಕೊಂಡು ಪ್ರತ್ಯೇಕವಾಗಿ ವಿಭಾಗ ಪತ್ರ ಅನುಸರಿಸಿ ತಮ್ಮ ಹೆಸರುಗಳಿಗೆ ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಾರೆ. ಕ್ರಯ ವಿಧಾನಕ್ಕೆ ಹೋಲಿಸಿದರೆ ವಿಭಾಗ ಪತ್ರದ ಮೂಲಕ ಆಸ್ತಿ ಹಕ್ಕು ವರ್ಗಾವಣೆ ಮಾಡಿಕೊಳ್ಳುವ ಖರ್ಚು ಕಡಿಮೆ ಇರುತ್ತದೆ ಹೀಗಾಗಿ ಕುಟುಂಬದೊಳಗೆ ಆಸ್ತಿ ಭಾಗ ಮಾಡಿಕೊಂಡರೆ ಈ ವಿಧಾನವನ್ನೇ ಅನುಸರಿಸಿ ಎನ್ನುವುದು ಎಲ್ಲರ ಸಲಹೆ.
* ದಾನ ಪತ್ರ(Gift deed):- ಯಾವುದೇ ಫಲಾಪೇಕ್ಷೆ ಇಲ್ಲದೆ ಒಬ್ಬ ವ್ಯಕ್ತಿಯು ತನ್ನ ಪಾಲಿನ ಆಸ್ತಿಯನ್ನು ಮತ್ತೊಬ್ಬರಿಗೆ ಉಡುಗೊರೆಯಾಗಿ ರೂಪದಲ್ಲಿ ದಾನ ನೀಡುವುದನ್ನು ಗಿಫ್ಟ್ ಡಿಡ್ ಎನ್ನುತ್ತಾರೆ. ಇದರಲ್ಲೂ ಕೂಡ ದಾನಪತ್ರದ ಮೂಲಕ ವಿಷಯ ವಿವರಿಸಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಮಾಡಿಸಿದರೆ ಇದಕ್ಕೆ ಕಾನೂನಿನ ಮಾನ್ಯತೆ ಸಿಗುತ್ತದೆ.
ಈ ಸುದ್ದಿ ಓದಿ:- ರೈತರಿಗೆ ಕೇವಲ 5 ದಿನಗಳಲ್ಲಿ ಬಾವಿ ಕೊರೆಸಿ ಕೊಡುತ್ತಾರೆ, ಬೋರ್ವೆಲ್ ಗಿಂತಲೂ ರೈತರಿಗೆ ಜಮೀನಿನಲ್ಲಿ ಬಾವಿ ಉತ್ತಮ.!
ದಾನ ಪತ್ರ ಹಾಗೂ ವಿಭಾಗ ಪತ್ರಕ್ಕಿರುವ ಒಂದೇ ವ್ಯತ್ಯಾಸ ಏನೆಂದರೆ ಸ್ವಯಾರ್ಜಿತ ಆಸ್ತಿಯನ್ನು ದಾನ ಪತ್ರದ ಮೂಲಕ ಅಥವಾ ವಿಭಾಗ ಪತ್ರದ ಮೂಲಕ ಹಕ್ಕು ವರ್ಗಾವಣೆ ಮಾಡಿಕೊಡಬಹುದು, ಆದರೆ ಪಿತ್ರಾರ್ಜಿತ ಆಸ್ತಿಯನ್ನು ದಾನ ಪತ್ರದ ಮೂಲಕ ಮಾಡಲು ಬರುವುದಿಲ್ಲ
* ಹಕ್ಕು ಬಿಡುಗಡೆ ಪತ್ರ(Release deed):- ಈ ವಿಧಾನದ ಮೂಲಕವೂ ಕೂಡ ಒಬ್ಬರು ತಮ್ಮ ಆಸ್ತಿ ಹಕ್ಕನ್ನು ಮತ್ತೊಬ್ಬರಿಗೆ ಬಿಟ್ಟು ಕೊಡಬಹುದು. ಸಾಮಾನ್ಯವಾಗಿ ಕುಟುಂಬದೊಳಗೆ ಒಳ ಒಪ್ಪಂದಗಳನ್ನು ಮಾಡಿಕೊಂಡು ತಮ್ಮ ಪಾಲಿನ ಆಸ್ತಿ ಬದಲಾಗಿ ಬೇರೆ ಏನನ್ನಾದರೂ ಪಡೆದು ಅಥವಾ ಏನನ್ನು ಪಡೆಯದೆ ತಮ್ಮ ಆಸ್ತಿ ಹಕ್ಕನ್ನು ಬಿಡುಗಡೆ ಮಾಡಿಕೊಡುತ್ತಾರೆ.
(ಸಹೋದರಿಯರು ಸಹೋದರರಿಗೆ ಈ ವಿಧಾನದ ಮೂಲಕ ತಮ್ಮ ತವರಿನ ಆಸ್ತಿಯನ್ನು ಬಿಟ್ಟು ಕೊಡುತ್ತಾರೆ) ಇದನ್ನು ಕೂಡ ಹಕ್ಕು ಬಿಡುಗಡೆ ಪತ್ರದಲ್ಲಿ ವಿವರ ಬರೆದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸಹಿ ಮಾಡಿ ರಿಜಿಸ್ಟರ್ ಮಾಡಿಸಿದರೆ ಕಾನೂನಿನ ಮಾನ್ಯತೆ ಇರುತ್ತದೆ. ಜಂಟಿ ಆಸ್ತಿ ವಿಲೇವಾರಿ ಮಾಡುವಾಗ ಕೂಡ ಇದೇ ವಿಧಾನವನ್ನು ಅನುಸರಿಸಿ ಮಾಡುತ್ತಾರೆ.