ಕೃಷಿ (Agriculture) ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು. ಯಾಕೆಂದರೆ ದೇಶದಲ್ಲಿ ಶೇಕಡವಾರು ಜನಸಂಖ್ಯೆಯಲ್ಲಿ ಹೆಚ್ಚಿನ ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ, ಜೊತೆಗೆ ಕೃಷಿ ಎನ್ನುವುದು ನಮಗೆ ಆಹಾರ ಉತ್ಪಾದನೆ ಮಾಡಿಕೊಡುವ ಕ್ಷೇತ್ರವಾಗಿದೆ ಹೀಗಾಗಿ ಉಳಿದ ಎಲ್ಲಾ ಕ್ಷೇತ್ರಗಳಿಗಿಂತಲೂ ಇದು ಶ್ರೇಷ್ಠ ಎಂದರೆ ತಪ್ಪಾಗಲಾರದು.
ಈಗ ಕಾಲ ಬಹಳಷ್ಟು ಬದಲಾಗಿದ್ದು ಸಾಂಪ್ರದಾಯಿಕ ಕೃಷಿ ವಿಧಾನ ಬದಲು ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಟೆಕ್ನಾಲಜಿ ಬಳಕೆ ನಡೆಯುತ್ತಿದೆ ಕೃಷಿ ಮಾಡುವುದು ಈಗ ಸಾಕಷ್ಟು ಸರಳವಾಗಿತ್ತು ಈ ಹಿಂದಿನ ತಲೆಮಾರುಗಳಿಗೆ ಹೋಲಿಸಿಕೊಂಡರೆ ಸರ್ಕಾರಗಳಿಂದಲೂ ಹೆಚ್ಚಿನ ಸೌಲಭ್ಯ ಸಿಗುತ್ತಿದೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ರೈತನು ಕೂಡ ಯಾವುದೇ ಉದ್ಯಮಿಗಿಂತ ಕಡಿಮೆ ಇಲ್ಲದೆ ತನ್ನ ಜಮೀನಿನಲ್ಲಿ ಚಿನ್ನದ ಬೆಳೆ ತೆಗೆಯಬಹುದು.
ಈ ಸುದ್ದಿ ಓದಿ:- LIC ಹೊಸ ಸ್ಕೀಮ್ ಕೇವಲ 121 ರೂಪಾಯಿ ಹೂಡಿಕೆ ಮಾಡಿ ಸಾಕು 27 ಲಕ್ಷ ಸಿಗಲಿದೆ.!
ಈ ಮೇಲೆ ತಿಳಿಸಿದಂತೆ ಕೃಷಿ ಮಾಡುವ ವಿಧಾನ ಬದಲಾಗಿದ್ದರು ಕೂಡ ಕೃಷಿಯತ್ತ ಒಲವು ಇಟ್ಟುಕೊಂಡಿರುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ, ಅದರಲ್ಲೂ ಯುವಜನತೆ ಹಳ್ಳಿ ಬಿಟ್ಟು ಪಟ್ಟಣಗಳನ್ನು ಸೇರುತ್ತಿದ್ದಾರೆ ಹೊರತು ಹೊಲಗದ್ದೆಯಲ್ಲಿ ದುಡಿಯಲು ಸಿದ್ದರಿಲ್ಲ. ಇದಕ್ಕೆಲ್ಲ ಹತ್ತಾರು ಕಾರಣಗಳು ಇವೆ.
ಇವುಗಳನ್ನು ಪರಿಹರಿಸಿ ಯುವಜನತೆಯನ್ನು ಕೃಷಿಯುತ್ತ ಆಕರ್ಷಿಸುವ ಸಲವಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಮತ್ತು ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿ ರೈತನನ್ನು ಆರ್ಥಿಕವಾಗಿ ಸಬಲನನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸಹಾಯಧನ.
ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ರೂಪದ ಸಾಲ, ಬಿತ್ತನೆ ಬೀಜ ರಸ ಗೊಬ್ಬರಗಳ ಖರೀದಿಯಲ್ಲಿ ಸಬ್ಸಿಡಿ, ಬಡ್ಡಿ ರಹಿತ ಕೃಷಿ ಸಾಲ, ಬೆಳೆ ವಿಮೆ. ಬರ ಪರಿಹಾರ, ಕೃಷಿ ಅವಲಂಬಿತ ಕಸಬುಗಳಿಗಾಗಿ ಸಾಲ ಸೌಲಭ್ಯ, ಕೃಷಿ ತರಬೇತಿ ಇನ್ನು ಮುಂತಾದ ಯೋಜನೆಗಳನ್ನು ಹಾಕಿಕೊಂಡು ಅನುಕೂಲತೆಯನ್ನು ಮಾಡಿಕೊಡುತ್ತಿದೆ.
ಈ ಸುದ್ದಿ ಓದಿ:- ಕೇವಲ 2 ಘಂಟೆ ಕೆಲಸ ಮಾಡಿದರೆ ಸಾಕು, 80 ಸಾವಿರ ಸುಲಭವಾಗಿ ಸಂಪಾದನೆ ಮಾಡಬಹುದು.!
ಇದೇ ಹಾದಿಯಲ್ಲಿ ರಾಜ್ಯದ ರೈತರಿಗೆ ಸರ್ಕಾರವು ಸಿಹಿ ಸುದ್ದಿ ಕೊಟ್ಟಿದೆ. ಏನೆಂದರೆ, ಈ ವರ್ಷ ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾಗಿ ರೈತನಿಗೆ ಅಪಾರ ಮಟ್ಟದ ನ’ಷ್ಟ ಉಂಟು ಮಾಡಿದೆ, ಸರ್ಕಾರಗಳು ಕೂಡ ಸಾಕಷ್ಟು ಯೋಜನೆಗಳ ಮೂಲಕ ರೈತನಿಗೆ ನೆರವಾಗಿ ಆರ್ಥಿಕವಾಗಿ ಬೆಂಬಲ ನೀಡುತ್ತಿವೆ.
ಜೊತೆಗೆ ಮಳೆ ಕಡಿಮೆ ಇರುವಂತಹ ಇಂತಹ ಸಂದರ್ಭದಲ್ಲಿ ಕೂಡ ರೈತನು ತನಗೆ ಇರುವ ಸಂಪನ್ಮೂಲದಿಂದಲೇ ಹೇಗೆ ಸಮೃದ್ಧ ಬೆಳೆಯನ್ನು ಬೆಳೆಯಬೇಕು ಎನ್ನುವುದನ್ನು ತಿಳಿಸಿ ಪ್ರೋತ್ಸಾಹಿಸುವ ಸಲುವಾಗಿ ರೈತ ಸಿರಿ (Raita Siri Scheme) ಯೋಜನೆಯನ್ನು ಘೋಷಿಸಲಾಗಿದೆ. ರೈತ ಸಿರಿ ಯೋಜನೆ ಎಂದರೇನು? ಇದರ ಪ್ರಯೋಜನಗಳು ಏನು? ಅರ್ಜಿ ಸಲ್ಲಿಸಲು ಯಾರು ಅರ್ಹರು? ಬೇಕಾಗುವ ದಾಖಲೆಗಳು ಏನು? ಎಲ್ಲದರ ವಿವರ ಹೀಗಿದೆ ನೋಡಿ.
ಯೋಜನೆಯ ಹೆಸರು:- ರೈತ ಸಿರಿ ಯೋಜನೆ
ಯೋಜನೆಯ ಉದ್ದೇಶ:-
ರಾಜ್ಯದಲ್ಲಿ ಸಿರಿಧಾನ್ಯ ಉತ್ಪಾದನೆ ಹೆಚ್ಚು ಮಾಡಿ ರೈತರ ಪರಿಸ್ಥಿತಿ ಸುಧಾರಿಸುವುದೇ ಸರ್ಕಾರದ ಗುರಿಯಾಗಿದೆ.
ಪ್ರಯೋಜನಗಳು:-
* ಕೃಷಿ ಇಲಾಖೆಯು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಮೂಲಕ ಸಿರಿಧಾನ್ಯ ಬೆಳೆಯಲು ಮತ್ತು ಪೋಷಿಸಲು ತರಬೇತಿ ನೀಡಲಾಗುತ್ತಿದೆ.ಅತೀ ಕಡಿಮೆ ಮಳೆ ಇರುವ ಪ್ರದೇಶದಲ್ಲಿ, ಶುಷ್ಕ, ಒಣ ಸ್ಥಿತಿಯಲ್ಲಿ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲೂ ಸಹ ಬೆಳೆಯುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
* ಪ್ರತಿ ಹಂತದಲ್ಲೂ ಇಲಾಖೆ ಅಧಿಕಾರಗಳು ನಿಮ್ಮ ಜೊತೆಗೆ ಇರುವುದರ ಜೊತೆಗೆ ಸರ್ಕಾರವೇ ಇದಕ್ಕೆ ಬೇಕಾದ ಕೃಷಿ ಸಾಮಗ್ರಿ ಬಿತ್ತನೆಬೀಜ ರಸಗೊಬ್ಬರ ಇವುಗಳನ್ನು ಖರೀದಿ ಮಾಡಲು ಪ್ರೋತ್ಸಾಹ ಧನ ನೀಡುತ್ತಿದೆ.
ಈ ಸುದ್ದಿ ಓದಿ:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ 3 ಸಿಹಿ ಸುದ್ದಿ.!
* ರೈತರಿಗೆ ಪ್ರತಿ ಹೆಕ್ಟೇರ್ಗೆ ರೂ 10,000 ದಂತೆ 2 ಕಂತುಗಳಲ್ಲಿ ಪ್ರೋತ್ಸಾಹ ಧನವನ್ನು DBT ಮೂಲಕ ನೀಡಲಾಗುತ್ತದೆ. ಮೊದಲ ಕಂತಿನಲ್ಲಿ ರೂ 6,000 ಮತ್ತು 2ನೇ ಕಂತಿನಲ್ಲಿ ರೂ 4,000 ಹಣವು ರೈತನ ಖಾತೆಗೆ ಜಮೆ ಆಗಲಿದೆ.
ಯಾರು ಅರ್ಹರು:-
* ಎರಡು ಹೆಕ್ಟರ್ ಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಯಾವುದೇ ರೈತ ಇದಕ್ಕೆ ನೋಂದಾಯಿಸಿಕೊಂಡು ಈ ತರಬೇತಿಗಳಲ್ಲಿ ಪಾಲ್ಗೊಳ್ಳಬಹುದು ಮತ್ತು ಸರ್ಕಾರದಿಂದ ಪ್ರೋತ್ಸಾಹ ಧನ ಪಡೆಯಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್
* ಕುಟುಂಬದ ರೇಷನ್ ಕಾರ್ಡ್
* ಭೂಮಿಗೆ ಸಂಬಂಧಪಟ್ಟ ದಾಖಲೆಗಳು
* ವಿಳಾಸ ಪುರಾವೆ
* ಆದಾಯ ಪ್ರಮಾಣ ಪತ್ರ
* ಜಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಬ್ಯಾಂಕ್ ಪಾಸ್ ಬುಕ್ ವಿವರ
* ಇತ್ತೀಚಿನ ಭಾವಚಿತ್ರ
* ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು.