ಜನನ ನೋಂದಣಿ, ವಿವಾಹ ನೋಂದಣಿ ಮಾಡಿಸುವ ರೀತಿ ಮ’ರ’ಣ (Death) ಆದಾಗಲು ಕೂಡ ನೋಂದಣಿ ಮಾಡಿಸಿ ಮರಣ ಪ್ರಮಾಣ ಪತ್ರವನ್ನು (Death Certificate) ಪಡೆದುಕೊಳ್ಳಬೇಕು. ಇದು ಅನೇಕ ಕಡೆಗಳಲ್ಲಿ ದಾಖಲೆಯಾಗಿ ಇದು ಬಳಕೆಗೆ ಬರುತ್ತದೆ. ಸ.ತ್ತ ವ್ಯಕ್ತಿಯ ಸಂಬಂಧಿತ ವ್ಯವಹಾರಿಕ ವಿಚಾರಗಳಲ್ಲಿ ಮತ್ತು ಅವರ ಕುಟುಂಬದವರಿಗೂ ಕೂಡ ಈ ದಾಖಲೆ ಅತ್ಯಗತ್ಯ.
ಈಗ ಬಹುತೇಕ ಎಲ್ಲರೂ ಇದನ್ನು ಅರಿತಿದ್ದಾರೆ ಆದರೆ ಈ ಹಿಂದೆ ಯಾರಾದರೂ ಹಿರಿಯರು ತೀರು ಹೋಗಿದ್ದು ನಾವು ಅವರ ಮರಣ ಪ್ರಮಾಣ ಪತ್ರ ಪಡೆಯದೆ ಇದ್ದಲ್ಲಿ ಅವರ ಆಧಾರ್ ಕಾರ್ಡ್, ವೋಟರ್ ಐಡಿ ಈ ರೀತಿ ದಾಖಲೆಗಳು ಒಂದು ವೇಳೆ ಇಲ್ಲದೆ ಇದ್ದಲ್ಲಿ ಅಥವಾ ಅವು ಕಳೆದು ಹೋಗಿದ್ದಲ್ಲಿ ಅಂತಹ ವ್ಯಕ್ತಿಯ ಮ.ರಣ ಪ್ರಮಾಣ ಪತ್ರ ಪಡೆಯುವುದು ಅಷ್ಟು ಸುಲಭದ ಮಾತಲ್ಲ.
ಒಂದು ವೇಳೆ ಇದು ಅನಿವಾರ್ಯ ಆಗಿದ್ದರೆ ಯಾವ ರೀತಿ ಪಡೆದುಕೊಳ್ಳಬೇಕು ಎನ್ನುವ ಒಂದು ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಈ ಮೇಲೆ ತಿಳಿಸಿದ ವಿಚಾರದ ಪ್ರಕಾರವಾಗಿ ಮೂರು ರೀತಿಯಲ್ಲಿ ಮರ.ಣ ಪ್ರಮಾಣ ಪತ್ರ ಪಡೆದುಕೊಳ್ಳಬಹುದು ಒಂದು ವ್ಯಕ್ತಿ ಮರ.ಣ ಹೊಂದಿದ 21 ದಿನಗಳಲ್ಲಿ ನೋಂದಣಿ ಮಾಡಿಸಿ ಪಡೆಯುವುದು.
ಈ ಸುದ್ದಿ ಓದಿ:- LIC ಹೊಸ ಸ್ಕೀಮ್ ಕೇವಲ 121 ರೂಪಾಯಿ ಹೂಡಿಕೆ ಮಾಡಿ ಸಾಕು 27 ಲಕ್ಷ ಸಿಗಲಿದೆ.!
ವ್ಯಕ್ತಿ ಮೃ’ತನಾಗಿ ತಿಂಗಳು ವರ್ಷಗಳೇ ಕಳೆದಿರುತ್ತವೆ ಆದರೆ ಅವರ ಆಧಾರ್ ಕಾರ್ಡ್, ವೋಟರ್ ಐಡಿ ಇಂತಹ ದಾಖಲೆಗಳು ಇರುತ್ತವೆ, ಆಗ ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವುದು, ಒಂದು ವೇಳೆ ವ್ಯಕ್ತಿ ಮರಣ ಹೊಂದಿ ವರ್ಷಗಳೇ ಕಳೆದು ಅವರ ಹೆಸರಿನ ಯಾವುದೇ ದಾಖಲೆ ನಮ್ಮ ಬಳಿ ಇಲ್ಲದಿದ್ದಾಗ ಪಡೆಯುವುದು ಹೀಗೆ ಮೂರು ವಿಧಾನದಲ್ಲಿ ಮ.ರಣ ಪ್ರಮಾಣ ಪತ್ರ ಪಡೆಯಬಹುದು.
ವಿಧಾನ:-
* ಮೊದಲಿಗೆ ನೀವು ನಿಮ್ಮ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿರುವ ಜನನ ಮರ.ಣ ನೋಂದಣಿ ವಿಭಾಗಕ್ಕೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು.
* ಒಂದು ವೇಳೆ ಮರ.ಣ ಪ್ರಮಾಣ ಪತ್ರ ಇಲ್ಲದಿದ್ದ ಪಕ್ಷದಲ್ಲಿ ಹಿಂಬರಹ ಪಡೆದುಕೊಳ್ಳಬೇಕು. ಜನನ ಮರಣ ಶಾಖೆಯಲ್ಲಿ ಮರ.ಣ ಪ್ರಮಾಣ ಪತ್ರ ಇಲ್ಲ ಎಂದು ಕೊಡುವ ದಾಖಲೆಯನ್ನು ಹಿಂಬರಹ ಪತ್ರ ಎನ್ನುತ್ತಾರೆ.
* ಈಗ ನೀವು ನಿಮ್ಮ ಬಳಿ ಇರುವ ಎಲ್ಲ ದಾಖಲೆಗಳು ಹಾಗೂ ಹಿಂಬರಹ ಪತ್ರದ ಜೊತೆ ಸ್ಥಳೀಯ ಕೋರ್ಟ್ ನಲ್ಲಿ (JMFC) ಮರಣ ಗುರುತು ತಡ ನೋಂದಣಿ ಆದೇಶಕ್ಕಾಗಿ ವಕೀಲರ ಮೂಲಕ ಅಥವಾ ಸ್ವತಃ ಹೋಗಿ ಅರ್ಜಿಹಾಕಬೇಕಾಗುತ್ತದೆ.
ಜೆರಾಕ್ಸ್ ಅಂಗಡಿಗಳಲ್ಲಿ ಇದಕ್ಕಾಗಿ ಕೆಲವು ಅರ್ಜಿ ನಮೂನೆಗಳು ಸಿಗುತ್ತವೆ ಅದನ್ನು ಫಿಲ್ ಮಾಡಿ ಕೋರ್ಟ್ ಗೆ ಸಬ್ಮಿಟ್ ಮಾಡಬೇಕು ಬಳಿಕ ಗೊತ್ತು ಪಡಿಸಿದ ದಿನಾಂಕದಂದು ಅರ್ಜಿದಾರರು ಸಾಕ್ಷಿಗಳೊಂದಿಗೆ ಹೋಗಿ ಹೇಳಿಕೆ ನೀಡಬೇಕಾಗುತ್ತದೆ. ನಂತರ ಪ್ರಥಮ ದಂಡಾಧಿಕಾರಿ ಅಂದರೆ ಜೆಎಂಎಫ್ಸಿ ನ್ಯಾಯಾಧೀಶರು ತಡ ನೋಂದಣಿ ಆದೇಶ ಪತ್ರ ಕೊಡುತ್ತಾರೆ.
ಈ ಸುದ್ದಿ ಓದಿ:- ಕೇವಲ 2 ಘಂಟೆ ಕೆಲಸ ಮಾಡಿದರೆ ಸಾಕು, 80 ಸಾವಿರ ಸುಲಭವಾಗಿ ಸಂಪಾದನೆ ಮಾಡಬಹುದು.!
* ಈಗ ಕೋರ್ಟ್ ನೀಡಿದ ಈ ಆದೇಶ ಪತ್ರದ ಜೊತೆಗೆ ಹೋಗಿ ಜನನ ಮರಣ ಶಾಖೆಯಲ್ಲಿ ಹೊಸದಾಗಿ ಅರ್ಜಿ ಹಾಕಬೇಕು, ಒಂದು ತಿಂಗಳ ಒಳಗೆ ನಿಮಗೆ ಮರಣ ಪ್ರಮಾಣ ಪತ್ರ ಸಿಗುತ್ತದೆ. ಈ ವಿಚಾರವಾಗಿ ಒಂದು ಪ್ರಮುಖ ಮಾಹಿತಿ ಏನೆಂದರೆ ಮರ.ಣ ಹೊಂದಿದ 21 ದಿನಗಳೊಂದಿಗೆ ನೋಂದಣಿ ಮಾಡಿಸಿ ಮರ.ಣ ಪ್ರಮಾಣ ಪತ್ರ ಪಡೆಯುವುದು ಕಾನೂನು ನಿಯಮ.
ಒಂದು ವೇಳೆ ಕಾರಣಾಂತರಗಳಿಂದ ತಡವಾದರೆ ಒಂದು ವರ್ಷದ ಒಳಗೆ ದಂಡ ಕಟ್ಟಿ ಪಡೆದುಕೊಳ್ಳಬಹುದು, ಒಂದು ವರ್ಷಕ್ಕಿಂತ ಮೇಲ್ಪಟ್ಟು ಮರ.ಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವುದಾದರೆ ಕೋರ್ಟ್ ಮುಖಾಂತರವೇ ಹೋಗಬೇಕಾಗುತ್ತದೆ.