ಹೂ ಕಟ್ಟೋಕು ಕೂಡ ಬಂತು ಮಿಷನ್ 5 ನಿಮಿಷದಲ್ಲಿ 1 kg ಹೂ ಇದ್ರು ಕಟ್ಟಿ ಮುಗಿಸಬಹುದು ಮಹಿಳೆಯರಿಗೆ ಬಹಳ ಉಪಯುಕ್ತಕಾರಿ ಇದು.!

ಹೂವು ಬೆಳೆಯುವುದು ಹೂವು ಎತ್ತಿದ ರೀತಿಯಲ್ಲಿ ಸುಲಭವಾದ ಕೆಲಸವೇ ಸರಿ. ಆದರೆ ಬೆಳೆದ ಹೂವನ್ನು ಮಾರಾಟ ಮಾಡಬೇಕು ಎಂದರೆ ಅದನ್ನು ಕಟ್ಟಿ ಮಾಲೆ ಮಾಡಬೇಕು. ಹೂವಿನ ಕೃಷಿ ಅಧಿಕ ಆದಾಯ ತಂದು ಕೊಟ್ಟರೂ ಕೂಡ ಅದನ್ನು ಮಾಲೆ ಕಟ್ಟಿಕೊಡಲು ಆಳುಗಳು ಸಿಗದ ಕಾರಣ ಹೂವು ಬೆಳೆಗಾರರು ಕಂಗಲಾಗಿ ಹೋಗಿದ್ದಾರೆ. ಆದರೆ ಇನ್ನು ಮುಂದೆ ಹೂವಿನ ಬೆಳೆಗಾರರು ಹೂವು ಕಟ್ಟುವ ಕೆಲಸಕ್ಕಾಗಿ ಆಳುಗಳನ್ನು ಹುಡುಕುವ ಅವಶ್ಯಕತೆ ಇಲ್ಲ ಇದಕ್ಕೂ ಕೂಡ ಮಿಷನ್ ಬರುತ್ತಿದೆ.

ಭಾರತದಲ್ಲಿ ಕೃಷಿ ಆಧುನೀಕರಣಗೊಳ್ಳಬೇಕು. ಈ ಮೂಲಕ ರೈತರು ಹೆಚ್ಚು ಆದಾಯ ಪಡೆಯಬೇಕು ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಆಗುವಂತೆ ತಂತ್ರಜ್ಞಾನ, ಯಂತ್ರೋಪಕರಣ ಬಳಸಿಕೊಂಡು ಹೊಸ ಹೊಸ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡು ರೈತ ಲಾಭ ಪಡೆಯಬೇಕು ಎನ್ನುವ ಆಶಯಗಳು ನಿಜವಾಗುತ್ತಿವೆ. ನಿಧಾನವಾಗಿ ಕೃಷಿ ಹಾಗೂ ಕೃಷಿ ನಂತರದ ಎಲ್ಲಾ ಕೃಷಿಯೋತ್ತರ ಚಟುವಟಿಕೆಗಳಿಗೂ ಯಂತ್ರೋಪಕರಣಗಳ ಬಳಕೆ ಬಹಳ ಅನುಕೂಲ ತರುತ್ತಿದೆ.

ಹೂ ಕಟ್ಟುವಂತಹ ಸೂಕ್ಷ್ಮ ಕೆಲಸಕ್ಕೂ ಕೂಡ ಈಗ ಮಿಷನ್ ಬರುತ್ತಿದೆ ಎನ್ನುವುದು ಮೆಚ್ಚಲೇ ಬೇಕಾದ ವಿಷಯ. ಇದು ಹೂವು ಬೆಳೆಗಾರರಿಗೆ ಎನ್ನೆಲ್ಲಿಲ್ಲದ ಸಂತೋಷವನ್ನು ಉಂಟು ಮಾಡಿದೆ. ಕೃಷಿ ಮೇಳದಲ್ಲಿ ಮೊದಲ ಬಾರಿಗೆ ಹೂವು ಕಟ್ಟುವ ಮಿಷನ್ ಅನ್ನು ಕೃಷಿ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿಯ ಪ್ರದರ್ಶನಕ್ಕೆ ಇಟ್ಟಿ ಶಭಾಸ್ ಗಿರಿ ಗಿಟ್ಟಿಸಿಕೊಂಡಿದ್ದಾರೆ ಕರ್ನಾಟಕದಲ್ಲಿ ಬಾಗಲಕೋಟೆ ವಿಭಾಗದಲ್ಲಿ ಹೆಚ್ಚು ಹೂವಿನ ಬೆಳೆ ಬೆಳೆಯಲಾಗುತ್ತದೆ.

ಹೂವಿನ ಕೃಷಿ ಹೆಚ್ಚಾಗಿರುವ ಈ ಭಾಗದಲ್ಲಿಯೇ ಅದನ್ನು ಮಾಲೆ ಕಟ್ಟಲು ಆಳುಗಳ ಕೊರತೆ ಉಂಟಾಗಿತ್ತು. ಮಾಲೆ ಕಟ್ಟಲು ಜನರು ಸಿಗದೆ ಹೂವಿನ ಕೃಷಿಯಿಂದ ದೂರ ಉಳಿಯುವಂತಹ ನಿರ್ಧಾರಕ್ಕೂ ಹೂ ಬೆಳಕಾಗಾರರು ಬಂದಿದ್ದರು. ಅದನ್ನು ತಪ್ಪಿಸಲು ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗ ಹೊಸ ಪ್ಲಾನ್ ಒಂದನ್ನು ಮಾಡಿ ನೆರವಾಗಿದೆ.

ಹಳೆಯ ಹೊಲಿಗೆ ಯಂತ್ರ ಹಾಗೂ 2 ಬ್ಯಾಟರಿ ಬಳಸಿ ಹೂ ಕಟ್ಟುವ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಯಂತ್ರ ಗಂಟೆಗೆ 900 ಗ್ರಾಂ ನಿಂದ 1 ಕೆ.ಜಿಯವರೆಗೆ ಹೂವುಗಳನ್ನು ಮಾಲೆಯಾಗಿ ಕಟ್ಟುತ್ತದೆ. ಮಾನವ ಶಕ್ತಿಯನ್ನು ಮೀರಿಸಿ ದಿನಕ್ಕೆ 10-12 ಕೆ.ಜಿ ಹೂವಿನ ಮಾಲೆ ಈ ಯಂತ್ರದಿಂದ ಸಿದ್ಧವಾಗುತ್ತದೆ ಈ ಯಂತ್ರ ತಯಾರಿಸುವುದಕ್ಕೆ ಒಟ್ಟು  28,000 ರೂ ಖರ್ಚಾಗಿದೆ.

ಸದ್ಯಕ್ಕೆ ಈ ಯಂತ್ರದಲ್ಲಿ ಮಲ್ಲಿಗೆ, ಸೇವಂತಿಗೆ, ಚೆಂಡು ಹೂವುಗಳ ಮಾಲೆಯನ್ನು ಮಾತ್ರ ಕಟ್ಟಬಹುದು ಮುಂದಿನ ದಿನಗಳಲ್ಲಿ ಇದರ ಕುರಿತು ಇನ್ನಷ್ಟು ಸಂಶೋಧನೆ ಮುಂದುವರೆಯಬಹುದು.  ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಕೊಯ್ಲೋತ್ತರ ತಂತ್ರಜ್ಞಾನ ವಿಷಯದ ಸ್ನಾತ್ತಕೋತ್ತರ ವಿಧ್ಯಾರ್ಥಿ ಪ್ರವೀಣ ರೆಡ್ಡಿ ಎನ್ನುವವರು ಈ ವಿದ್ಯುತ್ ಚಾಲಿತ ಹೂವು ಕಟ್ಟುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಯಂತ್ರವನ್ನು ಪರಿಚಯಿಸಲು ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ತೋಟಗಾರಿಕಾ ಮೇಳವನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗಿದೆ. ಈ ಯಂತ್ರ ಕಂಡ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ನಾತಕೋತ್ತರ ಅಧ್ಯಯನದ ವಿಷಯದ ಪ್ರಾಜೆಕ್ಟ್ ವರ್ಕ್ ವಿಷಯದ ಹುಡುಕಾಟದಲ್ಲಿದ್ದಾಗ ಉಪನ್ಯಾಸಕರೊಬ್ಬರು ನೀಡಿದ ಸಲಹೆ  ಮೇರೆಗೆ ಈ ಸಂಶೋಧನೆ ಸಾಧ್ಯವಾಯಿತು ಹಾಗೂ ಅವರ ಮಾರ್ಗದರ್ಶನದಲ್ಲಿಯೇ ಈ ಯಂತ್ರ ಅಭಿವೃದ್ಧಿಯಾಗಿದೆ. ಒಟ್ಟಾರೆಯಾಗಿ ಈ ಯಂತ್ರದಿಂದ ಹೂ ಬೆಳೆವ ರೈತರಿಗೆ ಉಪಯೋಗವಾಗಲಿ ಎನ್ನುವುದೇ ತನ್ನ ಇಚ್ಛೆಯಾಗಿತ್ತು ಎಂದಿದ್ದಾರೆ.

Leave a Comment

%d bloggers like this: