ಸಾಲ, ಹಣಕಾಸು ಸಮಸ್ಯೆ, ಉದ್ಯೋಗದಲ್ಲಿ ನಷ್ಟ ಇರುವವರು ಈ ದೇವಸ್ಥಾನಕ್ಕೆ ಹೋಗಿ ಒಮ್ಮೆ ದರ್ಶನ ಮಾಡಿ ಸಾಕು ನಿಮ್ಮ ಸಮಸ್ಯೆಗಳೆಲ್ಲದಕ್ಕೂ ಪರಿಹಾರದ ಸಿಗುತ್ತೆ.!

 

ತಿರುಪತಿ ವೆಂಕಟೇಶ್ವರ ಕಲಿಯುಗದ ಶ್ರೀಮಂತ ದೇವರು. ಅಷ್ಟೇ ಅಲ್ಲದೆ ಹಣದ ಒಡತಿ ಶ್ರೀ ಲಕ್ಷ್ಮಿಪತಿ ವೆಂಕಟಾಚಲಪತಿ. ಸಂಕಟ ಬಂದಾಗ ವೆಂಕಟ ರಮಣನನ್ನು ನೆನಿ ಎನ್ನುವ ಗಾದೇ ಮಾತೇ ಇದೆ. ಹಾಗಾಗಿ ನಮ್ಮ ದಕ್ಷಿಣ ಭಾರತದಲ್ಲಿ ಹಣಕಾಸಿಗೆ ಸಂಬಂಧಪಟ್ಟ ಹಾಗೆ ಯಾವುದೇ ಸಮಸ್ಯೆ ಬಂದರೂ ಕೂಡ ಮೊದಲಿಗೆ ಜನರ ನೆನೆಯುವುದು ಈ ತಿರುಪತಿ ವೆಂಕಟಪ್ಪನನ್ನು.

ತಿರುಪತಿ ತಿಮ್ಮಪ್ಪನ ದೇವಾಲಯ ಆಂಧ್ರಪ್ರದೇಶದಲ್ಲಿ ಇದೆ, ಆದರೆ ಎಲ್ಲಾ ಭಕ್ತರಿಗೂ ಬೇಕೆಂದಾಗಲೆಲ್ಲಾ ಅಷ್ಟು ದೂರ ಹೋಗಿ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಅಂತವರು ಅದರಲ್ಲೂ ಬೆಂಗಳೂರಿಗರು ಬೆಂಗಳೂರಿನಲ್ಲೇ ಇರುವ ಈ ತಿರುಪತಿ ವೆಂಕಟೇಶ್ವರನ ದೇವಸ್ಥಾನಕ್ಕೆ ಹೋದರೆ ಸಾಕು ನಿಮಗೆ ತಿರುಪತಿಯಲ್ಲಿರುವ ತಿಮ್ಮಪ್ಪನ ದರ್ಶನವನ್ನೇ ಪಡೆದಂತಹ ಅನುಭವ ಆಗುತ್ತದೆ.

ಬೆಂಗಳೂರಿನ ಬೆಳ್ಳಂದೂರಿನಲ್ಲಿ ಈ ವೆಂಕಟೇಶ್ವರನ ದೇವಸ್ಥಾನ ಇದೆ. ಈ ದೇವಸ್ಥಾನವು ಸಂಪೂರ್ಣವಾಗಿ ತಿರುಪತಿಯಲ್ಲಿ ಇರುವ ದೇವಸ್ಥಾನದ ವಾಸ್ತುಶೈಲಿಯನ್ನೇ ಒಳಗೊಂಡಿದೆ ಮತ್ತು ದೇವರ ವಿಗ್ರಹ ಕೂಡ ತಿರುಪತಿಯಲ್ಲಿರುವ ತಿಮ್ಮಪ್ಪನನ್ನೇ ಹೋಲುತ್ತದೆ. ತಿರುಪತಿ ದೇವಸ್ಥಾನದ ಪ್ರಧಾನ ಅರ್ಚಕರು ಅಲ್ಲಿಂದ ವಿಗ್ರಹವನ್ನು ತಂದು ಆ ಭಗವಂತನ ಇಚ್ಛೆ ಮೇರೆಗೆ ಇಲ್ಲಿ ಈ ದೇವಸ್ಥಾನ ನಿರ್ಮಿಸಿದರು ಎನ್ನುವ ಹಿನ್ನೆಲೆ ದೇವಸ್ಥಾನಕ್ಕಿದೆ.

ಸಂಪೂರ್ಣವಾಗಿ ಕಲ್ಲಿಂದಲೇ ನಿರ್ಮಿತವಾದ ಬೆಂಗಳೂರಿನ ಏಕೈಕ ದೇವಸ್ಥಾನ ಈ ವೆಂಕಟೇಶ್ವರನ ದೇವಸ್ಥಾನ ಎನ್ನುವ ಪ್ರತೀತಿಯೂ ಇದೆ. ಸದಾ ಸದ್ದು ಗದ್ದಲ, ವಾಹನದಟ್ಟಣೆ, ಜನದಟ್ಟಣೆ, ಶಬ್ದ ಮಾಲಿನ್ಯ ವಾಯು ಮಾಲಿನ್ಯದಿಂದ ಬೆಂದು ಹೋಗಿರುವ ಬೆಂಗಳೂರಿನ ಜನತೆಗೆ ಒಂದು ಪ್ರಶಾಂತವಾದ ಅನುಭವ ಬೇಕು ಎಂದರೆ ಈ ದೇವಸ್ಥಾನದ ಆವರಣದಲ್ಲಿ ಸಮಯ ಕಳೆಯಬಹುದು.

ಈ ದೇವಸ್ಥಾನವು ವಿಶಾಲವಾದ ಆವರಣವನ್ನು ಹೊಂದಿದೆ. ದೇವಸ್ಥಾನದಲ್ಲಿ ಪಾರ್ಕಿಂಗ್ ವ್ಯವಸ್ಥೆಯು ಕೂಡ ಇದ್ದು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕವಾಗಿ ಅಚ್ಚುಕಟ್ಟಾದ ಪಾರ್ಕಿಂಗ್ ಸೌಲಭ್ಯ ಮಾಡಿಕೊಡಲಾಗಿದೆ. ಈ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲಿ ಹೆಚ್ಚು ಜನರು ವೆಂಕಟೇಶ್ವರನನ್ನು ತಮ್ಮ ಹಣಕಾಸಿನ ಸಮಸ್ಯೆಯನ್ನು ಪರಿಹಾರ ಮಾಡು ಎಂದು ಕೇಳುವವರೇ ಆಗಿರುತ್ತಾರೆ.

ಸಾಲದ ಬಾಧೆಯಿಂದ ನರಳುತ್ತಿರುವವರು ವಿನಾಕಾರಣ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರುವವರು ಅಥವಾ ಎಲ್ಲಾದರೂ ಹಣಕಾಸಿನ ಹೂಡಿಕೆ ಮಾಡಿ ತೊಂದರೆ ಪಡುತ್ತಿರುವವರು ಆ ಸಮಸ್ಯೆಯಿಂದ ಪರಿಹಾರ ಮಾಡು ಎಂದು ವೆಂಕಟೇಶ್ವರನ ಬಳಿ ಬಂದು ವಿನಂತಿ ಇಡುತ್ತಾರೆ. ಈ ರೀತಿ ಇಲ್ಲಿ ಬಂದು ಬೇಡಿಕೊಂಡವರಿಗೆ ಕೆಲವೇ ದಿನಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಭಕ್ತಾದಿಗಳ ಸಮಸ್ಯೆ ಪರಿಹಾರ ಆಗಿರುವುದಕ್ಕೆ ಉದಾಹರಣೆಗಳು ಇವೆ.

ಹಾಗಾಗಿ ದಿನದಿಂದ ದಿನಕ್ಕೆ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾರದ ಏಳು ದಿನಗಳು ಕೂಡ ಇಲ್ಲಿ ಬೆಳಿಗ್ಗೆ ಹಾಗೂ ಸಂಜೆ ಪೂಜೆ ನಡೆಯುತ್ತದೆ. ಶನಿವಾರದ ಪೂಜೆ ವಿಶೇಷವಾಗಿರುತ್ತದೆ ಆ ದಿನ ಸಾವಿರಾರು ಭಕ್ತಾದಿಗಳು ಇಲ್ಲಿ ಸೇರುತ್ತಾರೆ. ಸಂಜೆ 7:30ಕ್ಕೆ ಅಲಂಕಾರ ಪ್ರಿಯ ಸ್ವಾಮಿ ವೆಂಕಟೇಶ್ವರರ ದರ್ಶನ ಸಿಗುತ್ತದೆ. ಪ್ರತಿದಿನವೂ ಕೂಡ ದೋಸೆ ಹಾಗೂ ರಸಾಯನವನ್ನು ಇಲ್ಲಿ ಪ್ರಸಾದವಾಗಿ ನೀಡುತ್ತಾರೆ.

ಶನಿವಾರದಂದು ಬರುವ ಭಕ್ತರಿಗೆ ತಿರುಪತಿಯಿಂದ ಬರುವ ಲಡ್ಡು ಪ್ರಸಾದ ವಿಶೇಷ ಪ್ರಸಾದವಾಗಿ ಸಿಗುತ್ತದೆ. ದೇವಸ್ಥಾನದ ಒಳಗೆ ಬಂದ ತಕ್ಷಣವೇ ಪ್ರಥಮವಾಗಿ ಗಣಪತಿ ದರ್ಶನ ಆಗುತ್ತದೆ, ಬಳಿಕ ಲಕ್ಷ್ಮಿ ಶಿವ ನವಗ್ರಹಗಳಿಗೂ ಗುಡಿ ಇರುವುದನ್ನು ಕಾಣಬಹುದು. ನಂತರ ತಿಮ್ಮಪ್ಪನ ಸನ್ನಿಧಾನ ಸಿಗುತ್ತದೆ. ನೀವು ಬೆಂಗಳೂರಿನಲ್ಲಿದ್ದರೆ ತಪ್ಪದೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ.

Leave a Comment

%d bloggers like this: