ರೈತರಿಗೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ ಜಾರಿ.! ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡುವುದು ಕಡ್ಡಾಯ, ಇಲ್ಲದಿದ್ರೆ PM ಕಿಸಾನ್ 15ನೇ ಕಂತಿನ‌ ಹಣ ಬಿಡುಗಡೆ ಆಗಲ್ಲ.!

 

WhatsApp Group Join Now
Telegram Group Join Now

ಕೇಂದ್ರ ಸರ್ಕಾರದಿಂದ (Central government) ದೇಶದ ರೈತ (for Farmers) ವರ್ಗಕ್ಕೆ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಈ ಎಲ್ಲ ಯೋಜನೆಗಳ ಪೈಕಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman nidhi Scheme) ಯೋಜನೆ ಬಹಳ ವಿಶೇಷ ಯಾಕೆಂದರೆ ಈ ಯೋಜನೆ ಮೂಲಕ ಕೇಂದ್ರ ಸರ್ಕಾರವು ರೈತನಿಗೆ ಪ್ರೋತ್ಸಾಹ ಧನ ನೀಡುತ್ತಿದೆ.

ರೈತರನ್ನು ಆರ್ಥಿಕವಾಗಿ ಸದೃಢನನ್ನಾಗಿಸುವ ಉದ್ದೇಶದಿಂದ ಒಂದು ಆರ್ಥಿಕ ವರ್ಷದಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ವರ್ಷಕ್ಕೆ ಮೂರು ಕಂತಿನಂತೆ 2,000 ಹಣವನ್ನು ರೈತನ ಬ್ಯಾಂಕ್ ಖಾತೆಗೆ ನೇರವಾಗಿ DBT ಮೂಲಕ ವರ್ಗಾವಣೆ ಮಾಡುತ್ತಿದೆ. 2019 ಫೆಬ್ರವರಿ 24ರಂದು ಜಾರಿಗೆ ಬಂದ ಈ ಯೋಜನೆಯ 14ನೇ ಕಂತಿನ ಹಣವನ್ನು ಈವರೆಗೆ ದೇಶದ ರೈತರುಗಳು ಪಡೆದಿದ್ದಾರೆ.

LIC ಈ ಸ್ಕೀಮ್ ನಲ್ಲಿ 2,000 ಹೂಡಿಕೆ ಮಾಡಿದ್ರೆ ಸಾಕು 43 ಲಕ್ಷ ಸಿಗುತ್ತೆ.! ಹೆಚ್ಚು ಹಣ ಗಳಿಸುವ ಸೂಪರ್ ಸ್ಕೀಮ್ ಇದು.!

ಸರ್ಕಾರವು ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ನಿಯಮಗಳನ್ನು ಹೇರಿದೆ. ಆ ಎಲ್ಲ ಕಂಡಿಷನ್ ಳನ್ನು ಪೂರೈಸಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳುವ ರೈತರು ಮಾತ್ರ ಯಾವುದೇ ಮಧ್ಯವರ್ತಿಗಳ ಕಾಟ ಇಲ್ಲದಂತೆ ನೇರವಾಗಿ ತಮ್ಮ ಖಾತೆಗೆ ಹಣ ಪಡೆದು ಅದನ್ನು ಕೃಷಿ ಚಟುವಟಿಕೆಗಳಿಗೆ ವಿನಿಯೋಗ ಮಾಡಿಕೊಳ್ಳುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ಯೋಜನೆಯ ನಿಯಮಾವಳಿಗಳನ್ನು ಇನ್ನಷ್ಟು ಬಿಗಿಗೊಳಿಸಿ, ನಕಲಿ ಫಲಾನುಭವಿಗಳನ್ನು ತೆಗೆದು ಹಾಕಲು ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿದೆ. ಹಾಗಾಗಿ ಇತ್ತೀಚೆಗೆ ರೈತರಿಗೆ ಇ-ಕೆವೈಸಿಕೂಡ ಕಡ್ಡಾಯ (e-kyc compulsory) ಮಾಡಿದೆ. ಇ-ಕೆವೈಸಿ ಮಾಡಿಸದ ರೈತರುಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದರು ಕೂಡ ಸಹಾಯಧನವನ್ನು ಪಡೆಯಲಾಗದೆ ವಂಚಿತರಾಗಬಹುದು.

1 ರೂಪಾಯಿ ಹೂಡಿಕೆ ಮಾಡದಿದ್ರೂ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 3,000 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!

ಹಾಗಾಗಿ ತಪ್ಪದೆ ಸೆಪ್ಟೆಂಬರ್ 30ರವರೆಗೆ ಇ-ಕೆವೈಸಿ ಪೂರ್ತಿಗೊಳಿಸಿ, ಯಾಕೆಂದರೆ 15ನೇ ಕಂತಿನ ಹಣವು ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗಲಿದೆ. ಕಳೆದ ಬಾರಿ ಕೋಟ್ಯಾಂತರ ರೈತರು ಇದೇ ರೀತಿಯ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ 14ನೇ ಕಂತಿನ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ ಹಾಗಾಗಿ ಈ ಬಾರಿ ಸರ್ಕಾರ ಮುಂಚಿತವಾಗಿ ರೈತರಿಗೆ ಸೂಚನೆ ಕೊಟ್ಟಿದೆ.

ರೈತರ ಕಲ್ಯಾಣ ಸಚಿವಾಲಯವು (Ministry of farmers welfare) ಈವರೆಗೆ ಯಾರು ಇ-ಕೆವೈಸಿ ಮಾಡಿಸಿಲ್ಲ ಆ ರೈತರು ಕೂಡಲೇ ಇ-ಕೆವೈಸಿ ಅಪ್ಡೇಟ್ ಮಾಡಿಸಬೇಕು. ಹಾಗೆಯೇ ಹೊಸದಾಗಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ರೈತರಿಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿದೆ, ಸೂಕ್ತ ದಾಖಲೆಗಳ ಜೊತೆ ಹತ್ತಿರದಲ್ಲಿರುವ ಗ್ರಾಮ ಒಮ್ ಅಥವಾ CSC ಕೇಂದ್ರಗಳಿಗೆ ತೆರಳಿ ಈ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಬಹುದು ಅಥವಾ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡುವ ಮೂಲಕ ಕೂಡ ನಿಮ್ಮ ಹೆಸರನ್ನು ನೀವು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದೆ.

HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಬೀಳಲಿದೆ ದಂಡ.! ವಾಹನ ಸಾವರರಿಗೆ ಹೊಸ ರೂಲ್ಸ್ ಜಾರಿ.!

ಸೇವಾ ಕೇಂದ್ರಗಳಿಂದ ಬಹಳ ದೂರದಲ್ಲಿರುವ ರೈತರು ಒಂದು ವೇಳೆ ಅಲ್ಲಿಗೆ ಹೋಗಲು ಸಾಧ್ಯವಾಗದೆ ಇದ್ದರೆ ರೈತ ಕಲ್ಯಾಣ ಸಚಿವಾಲಯವು ಪ್ರಾರಂಭಿಸಿರುವ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ (PM Kisan mobile app) ಫೇಸ್ ಅಥೆಂಟಿಕೇಶನ್ ಫೀಚರ್ (face authentication) ಬಳಸಿ OTP ಅಥವಾ ಫಿಂಗರ್‌ಪ್ರಿಂಟ್ ಇಲ್ಲದೆ ತಮ್ಮ ಮುಖವನ್ನು ಮನೆಯಿಂದಲೇ  ಕುಳಿತುಕೊಂಡು ಇ-ಕೆವೈಸಿ ಮಾಡಬಹುದು.

ಯೋಜನೆ ಕುರಿತು ಯಾವುದೇ ಗೊಂದವಗಳಿದ್ದರೂ ಕೂಡ ರೈತರು ತಮ್ಮ ಸಮಸ್ಯೆಗಳನ್ನು ಸಹಾಯವಾಣಿ ಸಂಖ್ಯೆ 155261, 1800115526, 011-23381092 ಸಂಪರ್ಕಿಸಿ ಮಾಹಿತಿಯನ್ನು ಪರಿಹರಿಸಿಕೊಳ್ಳಬಹುದು ಅಥವಾ pmkisan-ict@gov.in ಗೆ ಇಮೇಲ್ ಕಳುಹಿಸುವ ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು.

ಆಧಾರ್ ಸೀಡಿಂಗ್ ಆಗಿದ್ರೂ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿಲ್ಲವೇ? ಹಣ ಬಂದೇ ಬರುತ್ತಿದೆ ಹೀಗೆ ಮಾಡಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now