ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ ಸರ್ಕಾರದಿಂದ ಡೆಡ್ ಲೈನ್.! ಆಧಾರ್ ಸೆಂಟರ್ ಗೆ ಹೋಗದೆ ಮೊಬೈಲ್ ನಲ್ಲೇ ತಿದ್ದುಪಡಿ ಮಾಡುವ ಸುಲಭ ವಿಧಾನ.!

 

WhatsApp Group Join Now
Telegram Group Join Now

ಕಳೆದ ಹತ್ತು ವರ್ಷಗಳಲ್ಲಿ ಯಾರು ಒಮ್ಮೆ ಕೂಡ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲ ಅವರು ಶೀಘ್ರವೇ ಆಧಾರ್ ಕಾರ್ಡ್ ನಲ್ಲಿರುವ ವ್ಯತ್ಯಾಸಗಳನ್ನು ತಿದ್ದುಪಡಿ ಮಾಡಿಕೊಳ್ಳಬೇಕು. ಅಥವಾ ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿಗಳು ಬದಲಾಗಿದ್ದರೆ ಅಪ್ಡೇಟ್ ಮಾಡಿಕೊಳ್ಳಬೇಕು.

ಯಾವ ವ್ಯತ್ಯಾಸವು ಇಲ್ಲದೆ ಇದ್ದರೂ ಕೂಡ ಕಳೆದ ಹತ್ತು ವರ್ಷಗಳಿಂದ ಮುಖ ಚಹರೆಯಾದರೂ ಬದಲಾಗಿರುತ್ತದೆ ಅದಕ್ಕಾಗಿ ಭಾವಚಿತ್ರವನ್ನು ಅಪ್ಡೇಟ್ ಮಾಡಬೇಕು ಎಂದು ದೇಶದ ಎಲ್ಲಾ ನಾಗರಿಕರಿಗೂ UIDAI ಆದೇಶ ನೀಡಿತ್ತು ಮತ್ತು ಡಿಸೆಂಬರ್ 15ರ ವರೆಗೆ ಅದಕ್ಕೆ ಉಚಿತವಾಗಿ ಕಾಲಾವಕಾಶ ನೀಡಿತ್ತು.

ನೀವೇನಾದರೂ ಸರ್ಕಾರದ ಸೂಚನೆಯಂತೆ ಈ ಕಾರ್ಯ ಪೂರ್ತಿಗೊಳಿಸದೆ ಇದ್ದರೆ ನಂತರದ ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ನಿಷ್ಕ್ರಿಯಗೊಂಡು ನಿಮ್ಮ ಯಾವುದೇ ಖಾಸಗಿ ಅಥವಾ ಸರ್ಕಾರಿ ವಲಯದ ಕೆಲಸಗಳಿಗೆ ಅಡಚಣೆ ಆಗಬಹುದು ಹಾಗಾಗಿ ತಪ್ಪದೆ ನಿಯಮದಂತೆ ಈ ಪ್ರಕ್ರಿಯೆ ಪೂರ್ತಿಗೊಳಿಸಿ ಈಗ ಇದರ ಕುರಿತು ಮತ್ತೊಂದು ಅಪ್ಡೇಟ್ ಇದೆ.

ಅದೇನೆಂದರೆ, ನೀವು ಈಗ ಕೆಲವು ಮಾಹಿತಿಗಳನ್ನು ಆಧಾರ್ ಸೆಂಟರ್ ಹೋಗಿ ಮಾತ್ರವಲ್ಲದೆ ಮನೆಯಲ್ಲೇ ಕುಳಿತು ಅಪ್ಡೇಟ್ ಮಾಡಿಕೊಳ್ಳಬಹುದು. ಈ ವಿಷಯವು ಜನ್ಮ ದಿನಾಂಕ ತಿದ್ದುಪಡಿಗೆ ಸಂಬಂಧಪಟ್ಟದ್ದಾಗಿದೆ. ನೀವೇನಾದರೂ ಮೊದಲ ಬಾರಿಗೆ ನಿಮ್ಮ ಜನ್ಮ ದಿನಾಂಕದ ತಿದ್ದುಪಡಿ ಮಾಡಿಸುತ್ತಿದ್ದರೆ ನೀವು ಅಂಚೆ ಕಚೇರಿಗೆ ಅಥವಾ ಯಾವುದಾದರು ಆನ್ಲೈನ್ ಸೆಂಟರ್ ಗೆ ಅಥವಾ ಅಂಚೆ ಕಚೇರಿಗೆ ಹೋಗಿ ಜನ್ಮ ದಿನಾಂಕದ ತಿದ್ದುಪಡಿಯನ್ನು ಮಾಡಿಸಬೇಕು.

ಇದರಲ್ಲಿ ಅತಿ ಮುಖ್ಯವಾದ ವಿಷಯವೇನೆಂದರೆ, ಜನ್ಮ ದಿನಾಂಕವನ್ನು ಯಾರೇ ಆದರೂ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಿಸಬಹುದು. ಒಂದು ವೇಳೆ ಎರಡನೇ ತಿದ್ದುಪಡಿ ಅಗತ್ಯವಿದ್ದರೆ, ಅದಕ್ಕೆ ವಿಶೇಷ ಅನುಮತಿ ಮತ್ತು ಮಾನ್ಯ ಕಾರಣಗಳು ಬೇಕಾಗುತ್ತವೆ.

ಹೀಗಿದ್ದು ಯಾವುದಾದರೂ ಅನಿವಾರ್ಯ ಕಾರಣದಿಂದಾಗಿ ಎರಡನೇ ತಿದ್ದುಪಡಿ ಅಗತ್ಯವಿದ್ದರೆ ತಿದ್ದುಪಡಿ ಸಮಯದಲ್ಲಿ ಮತ್ತೊಂದು ಪ್ರಕ್ರಿಯೆಯನ್ನು ತಪ್ಪದೆ ಅನುಸರಿಸಬೇಕು. ಪಾಸ್‌ಪೋರ್ಟ್, ಸರ್ಕಾರಿ ಸೇವಾ ಫೋಟೋ, ಸರ್ಕಾರಿ ಪಿಂಚಣಿ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಐಡಿ, ಜನನ ಪ್ರಮಾಣಪತ್ರ ಅಥವಾ ವಿಶ್ವವಿದ್ಯಾಲಯದ ಅಂಕಗಳ ಕಾರ್ಡ್‌ ಈ ದಾಖಲೆಗಳನ್ನು ಪುರಾವೆಯಾಗಿ ಸಲ್ಲಿಸಬೇಕು.

ಈ ದಾಖಲೆಗಳನ್ನು ಆಧಾರ್ ಸೇವಾ ಕೇಂದ್ರದಲ್ಲಿ ಮಾತ್ರವಲ್ಲದೆ ಆನ್‌ಲೈನ್‌ನಲ್ಲಿ ಕೂಡ ಸಲ್ಲಿಸಿ ಅಪ್ಡೇಟ್ ಮಾಡಿಸಬಹುದು. ಈ ಒಂದು ಅವಕಾಶವನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ನೀಡಿದೆ. ನೇರವಾಗಿ UIDAI ನ ಅಧಿಕೃತ ವೆಬ್ಸೈಟ್ಗೆ ಭೇಟಿಕೊಟ್ಟು ಜನ್ಮ ದಿನಾಂಕ ತಿದ್ದುಪಡಿ ವಿಧಾನಗಳನ್ನು ಅನುಸರಿಸಿ.

ಅರ್ಜಿ ಫಾರಂ ನಲ್ಲಿ ಎಲ್ಲ ವೈಯಕ್ತಿಕ ವಿವರಗಳನ್ನು ಸರಿಯಾಗಿ ನಮೂದಿಸಿ ಜನ್ಮ ದಿನಾಂಕ ತಿದ್ದುಪಡಿ ಕೋರಿ ಮನವಿ ಸಲ್ಲಿಸಿ ಅದಕ್ಕೆ ನೀವು ನೀಡುತ್ತಿರುವ ಸರಿಯಾದ ಕಾರಣವನ್ನು ಕೂಡ ನೀಡಬೇಕು. ಇದಾದ ಮೇಲೆ ಇದಕ್ಕೆ ಸಂಬಂಧಪಟ್ಟ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ನಂತರ ಪ್ರಾಧಿಕಾರವು ತಿದ್ದುಪಡಿಗಾಗಿ ನಿಗದಿಪಡಿಸಿರುವ ಶುಲ್ಕವನ್ನು ಕೂಡ ಆನ್ಲೈನ್ ಮೂಲಕ ಪಾವತಿ ಮಾಡಬೇಕು.

https://youtu.be/i9dEN0LLXnI?si=ixLxq83XdzYTORDj

ಕೊನೆಯಲ್ಲಿ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಂಡರೆ ಕೆಲವೇ ದಿನಗಳಲ್ಲಿ ತಿದ್ದುಪಡಿ ಆದ ಆಧಾರ್ ಕಾರ್ಡ್ ನಿಮ್ಮ ಮನೆಯ ವಿಳಾಸಕ್ಕೆ ಅಂಚೆ ಮೂಲಕ ಬರುತ್ತದೆ ಅಥವಾ ಆ ರೆಫರೆನ್ಸ್ ನಂಬರ್ ನೋಡುತ್ತಾ ನೀವು ಸ್ಟೇಟಸ್ ಚೆಕ್ ಮಾಡಿಕೊಂಡು ಅಪ್ಡೇಟ್ ಆಗಿದ್ದಾಗ ಡೌನ್ಲೋಡ್ ಮಾಡಿಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now