ಕನ್ನಡ ಚಿತ್ರರಂಗದಲ್ಲಿ ರೆಬಲ್ ಸ್ಟಾರ್ ಎಂದೇ ಕರೆದಿಕೊಂಡಂತಹ ಅಂಬರೀಶ್ ಅವರು ತಮ್ಮ ಖಡಕ್ ಮಾತು ಮತ್ತು ಲುಕ್ ನಿಂದ ಜನಪ್ರಿಯರಾಗಿ ಅತ್ತೆ ಯಥೇಚ್ಛವಾದಂತಹ ಅಭಿಮಾನಿ ಬಳಗವನ್ನು ಹೊಂದಿದ್ದರು. ಅಂಬರೀಶ್ ಅವರು ನಮ್ಮೆಲ್ಲರನ್ನು ಹಗಲಿದರು ಸಹ ಇಂದಿಗೂ ಅವರಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಸಹ ನೋಡಲು ತಂದೆಯ ಹೋಲಿಕೆಯಲ್ಲಿ ಕಾಣುತ್ತಾರೆ ಇದೀಗ ಎಲ್ಲೆಡೆ ಅಭಿಷೇಕ್ ಅವರ ಮದುವೆ ಯಾವಾಗ ಎನ್ನುವಂತಹ ಸುದ್ದಿ ಹರಿದಾಡುತ್ತಿದೆ ಯಾವುದೇ ಒಂದು ಸಂದರ್ಶನಕ್ಕೆ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅವರ ಅಂಬರೀಶ ಅವರು ಬಂದರೂ ಸಹಿತ ಮದುವೆ ಯಾವಾಗ ಎನ್ನುವಂತಹ ಒಂದು ಪ್ರಶ್ನೆ ಇದ್ದೇ ಇರುತ್ತದೆ.
ಈ ಒಂದು ವಿಚಾರದ ಬಗ್ಗೆ ಸುಮಲತಾ ಹಾಗೂ ಅಭಿಷೇಕ್ ಅವರು ಯಾವುದೇ ರೀತಿಯಾದಂತಹ ಸ್ಪಷ್ಟನೆಯನ್ನು ಹೊರಹಾಕಿಲ್ಲ ಮೂಲಗಳು ತಿಳಿಸುವ ಹಾಗೆ ಅಭಿಷೇಕ್ ಅವರ ಎಂಗೇಜ್ಮೆಂಟ್ ಡಿಸೆಂಬರ್ 11 ರಂದು ನೆರವೇರಲಿದೆ ಎಂದು ಹೇಳಲಾಗುತ್ತದೆ ಆದರೆ ಅಧಿಕೃತವಾದಂತಹ ಯಾವುದೇ ಮಾಹಿತಿ ಸಿಕ್ಕಿಲ್ಲ. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಸುದ್ದಿ ಹಲವು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿಯಾಗಿಯೇ ಹರಿದಾಡುತ್ತಿದೆ. ಈ ರೀತಿಯ ಸುದ್ದಿ ಬಂದಾಗೆಲ್ಲ ಸುಮಲತಾ ಅಂಬರೀಶ್ ಅದನ್ನು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಮೊನ್ನೆಯಷ್ಟೇ ಅಭಿಷೇಕ್ ಅಂಬರೀಶ್ ಕೂಡ ಇದೆಲ್ಲ ಸುಳ್ಳು ಸುದ್ದಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ಅಂಬರೀಶ್ ಕುಟುಂಬದ ಆಪ್ತರು ಹೇಳುವ ಪ್ರಕಾರ ಡಿಸೆಂಬರ್ 11 ರಂದು ಅಭಿಷೇಕ್ ಎಂಗೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಹಲವು ವರ್ಷಗಳಿಂದ ಪರಿಚಯವಿರುವ ತಮ್ಮ ಗೆಳತಿಯನ್ನೇ ಅಭಿಷೇಕ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರು ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಎನ್ನುತ್ತವೆ ಆಪ್ತ ಮೂಲಗಳು. ಅಭಿಷೇಕ್ ಎಂಗೇಜ್ ಮೆಂಟ್ ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ನಲ್ಲಿ ನಡೆಯಲಿದ್ದು ಈಗಾಗಲೇ ರಜನಿಕಾಂತ್ ಸೇರಿದಂತೆ ದಕ್ಷಿಣದ ಹಲವು ದಿಗ್ಗಜರಿಗೆ ಆಹ್ವಾನ ಕೂಡ ಹೋಗಿದೆಯಂತೆ. ಅಭಿಷೇಕ್ ಅಂಬರೀಶ್ ಅವರ ಸ್ನೇಹಿತೆಯಾಗಿರುವ ಅವಿದಾ ಬಿದ್ದಪ್ಪ ಅವರೇ ಅಭಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿಯಾಗಿದ್ದಾರೆ. ಹಲವು ವರ್ಷಗಳಿಂದ ಅಭಿಷೇಕ್ ಮತ್ತು ಅವಿದಾ ಫ್ರೆಂಡ್ಸ್ ಎನ್ನುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಈ ಗೆಳೆತನವೇ ಪ್ರೇಮಕ್ಕೆ ತಿರುಗಿ ಇದೀಗ ಹಸಮಣೆ ಹತ್ತಿಸುತ್ತಿದೆ.
ನಿನ್ನೆಯಷ್ಟೇ ಅಭಿಷೇಕ್ ಅವರ ಹೊಸ ಸಿನಿಮಾದ ಮುಹೂರ್ತವಾಗಿದ್ದು, ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಭಿ ಅವರ ಎಂಗೇಜ್ ಮೆಂಟ್ ಮುಗಿದ ನಂತರ ಚಿತ್ರೀಕರಣ ಶುರು ಆಗಲಿದೆ. ಅಲ್ಲದೇ, ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲೂ ಅಭಿ ನಟಿಸಿದ್ದು ಈ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿದೆ. ಈ ರೀತಿಯಾಗಿ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥದ ವಿಷಯವು ಎಲ್ಲೆಡೆ ವೈರಲ್ ಆಗುತ್ತಿದೆ, ಅಭಿಷೇಕ್ ಅವರು ತಮ್ಮ ಗೆಳತಿಯನ್ನೇ ಪ್ರೀತಿಸಿ ಮದುವೆಯಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸುತ್ತಿದೆ ಆದರೆ ಅಧಿಕೃತವಾಗಿ ಇದನ್ನು ಸುಮಲತಾ ಅಥವಾ ಅಭಿಷೇಕ್ ಅವರು ಆಗಲಿ ಹೊರಹಾಕಿಲ್ಲ ಸದ್ಯದಲ್ಲೇ ಈ ಒಂದು ಮಾಹಿತಿ ಹೊರಬೀಳಲಿದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯ ತಿಳಿಸಿ.