ಇಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲಾಗುತ್ತಿರುವ ವಿಷಯ ಎಂದರೆ ಅದು ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ್ಯದ ಬಗ್ಗೆ ಹೌದು ಅಭಿಷೇಕ್ ಅಂಬರೀಷ್ ಅವರು ಯಾವಾಗ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಹಾಗೆ ಯಾವ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾರೆ ಮದುವೆ ಯಾವಾಗ ಎಂಬ ವಿಚಾರದ ಬಗ್ಗೆ ಹೆಚ್ಚು ವೈರಲ್ ಆಗುತ್ತಿದೆ. ಅಭಿಷೇಕ್ ಅವರು ಮದುವೆಯಾಗಿದ್ದಿರುವಂತಹ ಹುಡುಗಿಯ ಹೆಸರು ಅವಿವ, ಈ ಅವಿವ ಸಖತ್ ಡಿಮ್ಯಾಂಡ್ ಇರೋ ಫ್ಯಾಷನ್ ಡಿಸೈನರ್ ಆಗಿದ್ದಾರೆ ಜೊತೆಗೆ ಇನ್ಸ್ಟಾಗ್ರಾಮ್ನಲ್ಲಿ 44 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. ಡಿಸೆಂಬರ್ ನಲ್ಲಿ ಅಭಿಷೇಕ್ ಅಂಬರೀಶ್ ಹಾಗು ಅವಿವ ಅವರಿಗು ನಿಶ್ಚಿತಾರ್ಥ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ.
ಅಂಬರೀಶ್ ಅವರ ನಾಲ್ಕನೇ ಪುಣ್ಯಸ್ಮರಣೆ ಪ್ರಯುಕ್ತ ಅಂಬಿ ಸಮಾಧಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಷೇಕ್, ಸುಮಲತಾ ಅವರು ನಿಶ್ಚಿತಾರ್ಥದ ಸುದ್ದಿ ಸುಳ್ಳು ಎಂದು ಹೇಳಿದ್ದರು. ಆ ಸುದ್ದಿ ಕೇಳಿ ಬಂದಾಗ ಹುಡುಗಿ ಯಾರು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಈಗ ಆ ಯುವತಿ ಯಾರು ಎಂಬುದಕ್ಕೆ ಉತ್ತರ ಸಿಕ್ಕಿದೆ ಅಭಿಷೇಕ್ ಅಂಬರೀಶ್ ಅವರು ಈಗ ನಿಶ್ಚಿತಾರ್ಥ ಮಾಡಿಕೊಳ್ಳುವ ಹುಡುಗಿಯ ಹೆಸರು ಅವಿವ. ಹೌದು, ಅವಿವ ಜೊತೆ ಅಭಿಷೇಕ್ ಅಂಬರೀಶ್ ಮದುವೆಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿಲ್ಲ ಡಿಸೆಂಬರ್ 11 ರಂದು ಸ್ಟೈಲ್ ಗುರು ಪ್ರಸಾದ್ ಬಿಡಪ್ಪ ಅವರ ಪುತ್ರಿ ಅವಿವ ಕಲ್ಯಾಣವು ಅಭಿಷೇಕ್ ಅಂಬರೀಶ್ ಜೊತೆ ಆಗಲಿದೆ ಎನ್ನಲಾಗುತ್ತಿದೆ.
ಪ್ರಸಾದ್ ಹಾಗೂ ಜುಡಿತ್ ಅವರ ಪುತ್ರಿ ಅವಿವಗೆ ಆದಮ್ ಎಂಬ ಸಹೋದರನಿದ್ದಾನೆ. ಈ ಬಗ್ಗೆ ಎರಡೂ ಕುಟುಂಬಗಳು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ. ಈ ಅವಿವ ಸಖತ್ ಡಿಮ್ಯಾಂಡ್ ಇರೋ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಜೊತೆಗೆ ಇನ್ಸ್ಟಾಗ್ರಾಮ್ನಲ್ಲಿ 44 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ ಮತ್ತೊಂದು ವಿಶೇಷ ಅಂದರೆ ಅವಿವ ಅಭಿಷೇಕ್ ಅಂಬರೀಶ್ ಅವರಿಗಿಂತ ದೊಡ್ಡವರು ಅಂತ ಹೇಳುತ್ತಿದ್ದಾರೆ. ಅವಿವ ಅಭಿಷೇಕ್ ಗಿಂತ 3 ವರ್ಷ ದೊಡ್ಡವರು ಎನ್ನುತ್ತಿದ್ದಾರೆ. ಸದ್ಯಕ್ಕೆ ಈ ಮಾಹಿತಿ ಸುದ್ದಿಯಾಗುತ್ತಿದೆ, ಅಧಿಕೃತ ಮಾಹಿತಿ ಲಭ್ಯವಾಗುತ್ತಿದೆ ಈ ನಾಲ್ಕು ವರ್ಷದಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.
ಅಭಿಷೇಕ್ ಅಂಬರೀಶ್ ಹಾಗೂ ಅವಿವ ಅವರು ಮುಂಚಿನಿಂದಲೂ ಪರಿಚಯ ಇದ್ದು ಇಬ್ಬರ ಮಧ್ಯೆ ಒಳ್ಳೆಯ ಸ್ನೇಹಯುತ ಸಂಬಂಧ ಏರ್ಪಟ್ಟಿದೆ ಆದ್ದರಿಂದ ಇವರಿಬ್ಬರೂ ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟರೆ ಇಬ್ಬರು ಸಹ ಹೊಂದಾಣಿಕೆಯಿಂದ ಜೀವನ ಮಾಡಿಕೊಂಡು ಹೋಗುತ್ತಾರೆ ಎನ್ನುವಂತಹ ವಿಷಯದಿಂದ ಅಭಿಷೇಕ್ ಅವರನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಹಳ ದಿನಗಳಿಂದಲೂ ಸ್ನೇಹಿತರಾಗಿರುವ ಅವಿವ ಮತ್ತು ಅಭಿಷೇಕ್ ಅವರು ಈ ವಿಷಯದ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ತಿಳಿಸಿದಾಗ ಎಲ್ಲರಿಗೂ ನಿಜಾಂಶ ತಿಳಿಯುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.