ಪವಿತ್ರ ಲೋಕೇಶ್ ಮತ್ತು ನರೇಶ್ ಅವರ ರೋಮ್ಯಾಂಟಿಕ್ ವಿಡಿಯೋ, ಈ ವೈರಲ್ ವಿಡಿಯೋ ತಪ್ಪದೇ ನೋಡಿ.

ನಟಿ ಪವಿತ್ರ ಲೋಕೇಶ್ ಅವರು ನಮ್ಮ ಕನ್ನಡ ಚಲನಚಿತ್ರ ರಂಗ ಮತ್ತು ಕಿರುತೆರೆಯ ನಟಿ ಅವರು ಮುಖ್ಯವಾಗಿ ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ರಂಗಭೂಮಿ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ ಅವರ ಮಗಳು. ‘ಮಿಸ್ಟರ್ ಅಭಿಷೇಕ್ ‘ ಎಂಬ ಚಿತ್ರದ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ಅಭಿನಯಿಸಿದರು ನಂತರದಲ್ಲಿ ಇವರು ಬಂಗಾರದ ಕಳಶ, ಜನುಮದ ಜೋಡಿ, ಮಾವನ ಮಗಳು, ಕುರುಬನ ರಾಣಿ, ಹಬ್ಬ, ಯಜಮಾನ, ಅಮ್ಮ, ರಾಜ ನರಸಿಂಹ, ಆಕಾಶ್, ನಾಯಿ ನೆರಳು, ಬೇಟೆ, ಘರ್ಷಣೆ, ಬಹದ್ದೂರ್ ಹೀಗೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸಾಕಷ್ಟು ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ. ನಟಿ ಪವಿತ್ರ ಲೋಕೇಶ್ ಅವರು ಸುಚೇಂದ್ರ ಪ್ರಸಾದ್ ಅವರೊಂದಿಗೆ ಲಿವಿಂಗ್ ರಿಲೇಶನ್ ಸಹ ಇದ್ದರು ಆದರೆ ಕಾರಣಾಂತರಗಳಿಂದ ಈ ಇಬ್ಬರ ಮಧ್ಯೆ ಬಿರುಕು ಉಂಟಾಗಿ ಬೇರುಪಟ್ಟಿದ್ದಾರೆ.

WhatsApp Group Join Now
Telegram Group Join Now

ಇದೀಗ ನಟಿ ಪವಿತ್ರ ಲೋಕೇಶ್ ಅವರ ಹೆಸರು ತೆಲುಗು ನಟ ನರೇಶ್ ಬಾಬು ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ ಈ ಜೋಡಿ ಎಲ್ಲೇ ಹೋದರು ಸಹ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಷಯದ ಕುರಿತಾಗಿ ಪವಿತ್ರಾ ಅವರ ಮೇಲೆ ಅನೇಕ ಆರೋಪಗಳು ಕೇಳಿ ಬರುತ್ತಿದೆ. ಸ್ವಲ್ಪ ದಿನಗಳ ಹಿಂದೆ ಅಷ್ಟೇ ಪವಿತ್ರ ಲೋಕೇಶ್ ಹಾಗೆಯೆ ತೆಲುಗು ನಟ ನರೇಶ್ ಅವರು ರೂಮ್ ಒಂದರಲ್ಲಿ ಕಾಣಿಸಿಕೊಂಡಿದ್ದು ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಈ ವಿಚಾರದ ಬಗ್ಗೆ ದೊಡ್ಡ ಗಲಾಟೆಯನ್ನೇ ಮಾಡಿದ್ದರು.

ಮೈಸೂರಿನ ಹೋಟೆಲ್ ಒಂದರಲ್ಲಿ ಸಿಕ್ಕಿಹಾಕಿಕೊಂಡು ಈ ಘಟನೆ ಬೇರೆಯ ದಿಕ್ಕನ್ನು ಪಡೆದುಕೊಂಡಿತ್ತು. ಇನ್ನು ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರು ಇಬ್ಬರೂ ಜೊತೆಯಾಗಿ ನಟಿಸಿದ್ದಾರೆ ‘ಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ’ ಈ ಒಂದು ಸಿನಿಮಾ ಓ ಟಿ ಟಿ ವೇದಿಕೆಯಲ್ಲಿ ಬಿಡುಗಡೆ ಆಗಲಿದೆ ಈ ಚಿತ್ರಕ್ಕೆ ಪ್ರೇಕ್ಷಕರು ಅತ್ಯುತ್ತಮವಾದಂತಹ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪವಿತ್ರ ಲೋಕೇಶ್ ಅವರು ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ್ದು ಇವರ ಪಾತ್ರಕ್ಕಾಗಿ ಸಾಕಷ್ಟು ಅಭಿಮಾನಿಗಳು ಸಂದೇಶಗಳನ್ನು ಕಳುಹಿಸಿದ್ದಾರೆ ಅದಕ್ಕಾಗಿ ನರೇಶ್ ಮತ್ತು ಪವಿತ್ರ ಲೋಕೇಶ್ ಅವರು ವಿಡಿಯೋ ಮೂಲಕ ಎಲ್ಲರಿಗೂ ಧನ್ಯವಾದಗಳು ತಿಳಿಸಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಹೌದು ನರೇಶ್ ಅವರು ಪವಿತ್ರ ಲೋಕೇಶ್ ಅವರ ಜೊತೆಯಲ್ಲಿ ಕ್ಲೋಸ್ ಆಗಿ ಇರುವ ಹಾಗೆಯೇ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ಪವಿತ್ರ ಲೋಕೇಶ್ ಅವರ ಭುಜದ ಮೇಲೆ ಕೈ ಇಟ್ಟು ರೋಮ್ಯಾಂಟಿಕ್ ಆಗಿ ನರೇಶ್ ಅವರು ಮಾತನಾಡಿದ್ದಾರೆ. ತಾವಿಬ್ಬರು ಗಂಡ ಹೆಂಡತಿಯಾಗಿ ನಟಿಸಿರುವ ಚಿತ್ರದ ಕುರಿತು ಮತ್ತು ಆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿರುವ ಕುರಿತು ಈ ಇಬ್ಬರು ಸಹ ವಿಡಿಯೋ ದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಈ ವಿಡಿಯೋವನ್ನು ನೋಡಿದಂತಹ ಸಾಕಷ್ಟು ಜನರು ಹಲವಾರು ರೀತಿಯಾಗೆ ಕಾಮೆಂಟ್ಸ್ ಗಳನ್ನು ಮಾಡುತ್ತಿದ್ದಾರೆ. ಇನ್ನು ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now