ಚೆಲುವಿನ ಚಿತ್ತಾರದ ನಟಿ ಅಮೂಲ್ಯ ಅವರು ತಮ್ಮ ಮುದ್ದು ಮುಖದ ಮೂಲಕ ನಮ್ಮ ಚಂದನವನದಲ್ಲಿ ನಟಿಸಿ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಅಮೂಲ್ಯ ಅವರು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು ಮದುವೆಯಾದ ನಂತರ ಚಿತ್ರರಂಗದಿಂದ ದೂರ ಉಳಿದ ನಟಿ ಅಮೂಲ್ಯ ಈಗ ತಾಯಿತನದ ಖುಷಿಯನ್ನು ಅನುಭವಿಸುತ್ತಾ ಇದ್ದಾರೆ. ಇನ್ನು ನಟಿ ಅಮೂಲ್ಯ ಅವರಿಗೆ ಅವಳಿ ಗಂಡು ಮಕ್ಕಳು ಆದನಂತರ ಅಭಿಮಾನಿಗಳು ಹಾಗೂ ಸ್ನೇಹಿತರು ಮಕ್ಕಳಿಗೆ ಯಾವ ಹೆಸರನ್ನು ಇಡುತ್ತೀರಾ ಎಂದು ಸಾಕಷ್ಟು ಜನರು ಕಾಮೆಂಟ್ಸ್ ಮೂಲಕ ಕೇಳುತ್ತಾ ಇದ್ದರು ಇಂದು ಶಾಸ್ತ್ರೊತ್ತವಾಗಿ ನಾಟಿ ಅಮೂಲ್ಯ ಅವರ ಮಕ್ಕಳ ನಾಮಕರಣ ಶಾಸ್ತ್ರ ಮುಗಿದಿದ್ದು ಅಮೂಲ್ಯ ಅವರ ಮಕ್ಕಳ ಹೆಸರು ತುಂಬಾ ಕ್ಯೂಟ್ ಆಗಿ ಇದೆ.
ಉದ್ಯಮಿ ಹಾಗೂ ರಾಜಕಾರಣಿ ಆಗಿರುವಂತಹ ಜಗದೀಶ್ ಅವರನ್ನು ವಿವಾಹವಾದ ನಂತರ ಚಿತ್ರರಂಗದಿಂದ ದೂರ ಸರಿದರು ರಾಜಕೀಯದಲ್ಲಿ ಕೆಲಕಾಲ ಸಕ್ರಿಯರಾಗಿದ್ದ ಅಮೂಲ್ಯ ಅವರು ತದ ನಂತರ ತಾಯಿಯಾಗುವ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಖುಷಿಪಟ್ಟಿದ್ದರು. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಗಂಡು ಮಕ್ಕಳಿಗೆ ಜನ್ಮವನ್ನು ನೀಡಿದರು ಹೌದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು ಅದಾದ ನಂತರ ತಮ್ಮ ಮುದ್ದು ಅವಳಿ ಗಂಡು ಮಕ್ಕಳ ಫೋಟೋ ಗಳನ್ನು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿಕೊಂಡು ತಮ್ಮ ಮಕ್ಕಳ ಮುಖವನ್ನು ರಿವೀಲ್ ಮಾಡಿದರು. ಈಗ ಇಂದು ಅಚ್ಚುಕಟ್ಟಾಗಿ ನಾಮಕರಣ ಶಾಸ್ತ್ರವನ್ನು ನೆರವೇರಿಸಿದ್ದು ಶಾಸ್ತ್ರೋತ್ತವಾಗಿ ಈ ಒಂದು ನಾಮಕರಣ ಶಾಸ್ತ್ರ ಮಾಡಿದ್ದು ಇಬ್ಬರು ಗಂಡು ಮಕ್ಕಳಿಗೂ ಅಥರ್ವ್ ಹಾಗೂ ಆದವ್ ಎಂದು ಹೆಸರನ್ನು ಇಟ್ಟಿರುವ ಅಮೂಲ್ಯ ಅವರು ಶಾಸ್ತ್ರೋತ್ರವಾಗಿ ಮನೆಯಲ್ಲಿಯೇ ನಾಮಕರಣ ಶಾಸ್ತ್ರವನ್ನು ಬಹಳ ಅಚ್ಚುಕಟ್ಟಾಗಿ ಅದ್ದೂರಿಯಾಗಿ ನೆರವೇರಿಸಿದ್ದಾರೆ.
ಈ ಒಂದು ನಾಮಕರಣ ಮಹೋತ್ಸವಕ್ಕೆ ಅಮೂಲ್ಯ ಹಾಗು ಜಗದೀಶ್ ಅವರ ಸ್ನೇಹಿತರು ಹಾಗೂ ಕುಟುಂಬದ ಆಪ್ತರು ಹಾಗೂ ಸಂಬಂಧಿಕರು ಮಾತ್ರ ಭಾಗಿಯಾಗಿದ್ದರು ಈ ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಅಮೂಲ್ಯ ಅವರಿಗೆ ಎರಡು ಗಂಡು ಮಕ್ಕಳು ಆಗಿರುವುದರಿಂದ ಅಭಿಮಾನಿಗಳು ತುಂಬಾ ಸಂತಸದಿಂದ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡವ ಮೂಲಕ ಶುಭಾಶಯಗಳು ಕೋರಿ ಕಾಮೆಂಟ್ ಬಾಕ್ಸ್ನಲ್ಲಿ ಅಮೂಲ್ಯ ಅವರ ಹೆಸರಿನಿಂದ ಅ ತೆಗೆದು, ಜಗದೀಶ್ ಅವರ ಹೆಸರಿನಿಂದ ಜ ತೆಗೆದು ಅವಳಿ ಗಂಡು ಮಕ್ಕಳಿಗೆ ಅಜಯ್ ಮತ್ತು ವಿಜಯ್ ಎಂಬ ಹೆಸರನ್ನು ಇಡಬೇಕು ಎಂದು ಸಾಕಷ್ಟು ರೀತಿಯಗಿ ತಿಳಿಸಿದರು.
ಇನ್ನು ಅಮೂಲ್ಯ ಅವರು ಎರಡು ಮಕ್ಕಳಿಗೂ ಅಪ್ಪು ಪಪ್ಪು ಎಂದು ಮುದ್ದಾಗಿ ಕರೆಯುತ್ತಿದ್ದರು ಆದರೆ ಇಂದು ಈ ಅವಳಿ ಮಕ್ಕಳ ನಾಮಕರಣ ಶಾಸ್ತ್ರವು ನೆರವೇರಿದ್ದು ಇಬ್ಬರು ಮಕ್ಕಳಿಗೂ ಸಹ ಮುದ್ದಾದ ಹೆಸರುಗಳನ್ನು ಆಮೂಲ್ಯ ಅವರ ಕುಟುಂಬ ಇಟ್ಟಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಮಕ್ಕಳಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಆ ದೇವರಲ್ಲಿ ಬೇಡಿಕೆಯನ್ನು ಸಲ್ಲಿಸಿದ್ದಾರೆ. ನಾಮಕರಣ ಶಾಸ್ತ್ರದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಮೂಲ್ಯ ಅವರ ಮಕ್ಕಳಿಗೆ ಇಟ್ಟಿರುವಂತಹ ಹೆಸರು ನಿಮಗೂ ಸಹ ಇಷ್ಟವಾದರೆ ತಪ್ಪದೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.