Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಸಾಮಾನ್ಯವಾಗಿ ಮದುವೆ ಎಂದರೆ ಎಲ್ಲರಿಗೂ ಸಹ ಆಸೆ ಕನಸು ಎಲ್ಲವನ್ನು ಇಟ್ಟುಕೊಂಡಿರುತ್ತಾರೆ. ತಮ್ಮನ ಜೊತೆಯಲ್ಲಿ ಮದುವೆಯಾಗಿ ಬರುವಂತಹ ಸಂಗಾತಿ ಇಷ್ಟ ಕಷ್ಟಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಸಂತೋಷವಾಗಿ ಸಾಗಬೇಕು ಎನ್ನುವಂತಹ ಹಂಬಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ ಅದೇ ಸಾಲಿನಲ್ಲಿ ನಮ್ಮ ಚಂದನವನದ ಸ್ಟಾರ್ ನಟರುಗಳು ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟು ಅದ್ದೂರಿಯಾಗಿ ತಮ್ಮ ವಿವಾಹ ಮಹೋತ್ಸವವನ್ನು ನೆರವೇರಿಸಿಕೊಂಡಿದ್ದಾರೆ ನಮ್ಮ ಕನ್ನಡದ ಎಲ್ಲಾ ಸ್ಟಾರ್ ನಟರುಗಳು ಸಹ ತಾವು ಅಂದುಕೊಂಡ ಹಾಗೆ ಮದುವೆಯಾಗಿದ್ದಾರೆ. ಪುನೀತ್ ರಾಜ್‌ಕುಮಾರ್-ಅಶ್ವಿನಿ, ಸುದೀಪ್-ಪ್ರಿಯ, ಶಿವರಾಜ್ ಕುಮಾರ್-ಗೀತಾ, ದರ್ಶನ್-ವಿಜಯಲಕ್ಷ್ಮಿ, ಗಣೇಶ್-ಶಿಲ್ಪ, ಪ್ರಜ್ವಲ್ ದೇವರಾಜ್-ರಾಗಿಣಿ, ದಿಗಂತ್-ಐಂದ್ರಿತಾ, ಕೃಷ್ಣ-ಮಿಲನಾ ನಾಗರಾಜ್, ರಿಷಬ್ ಶೆಟ್ಟಿ- ಪ್ರಗತಿ, ಚಿರಂಜೀವಿ ಸರ್ಜಾ-ಮೇಘನಾ, ಮುರುಳಿ-ವಿಧ್ಯಾ, ದ್ರುವ ಸರ್ಜಾ-ಪ್ರೇರಣಾ ಈ ಎಲ್ಲಾ ನಟರುಗಳ ಅದ್ದೂರಿ ಮದುವೆಯ ಫೋಟೋಗಳನ್ನು ನೀವು ಈ ಕೆಳಗೆ ನೋಡಬಹುದು.
ಪುನೀತ್ ಅವರು ಅಶ್ವಿನಿ ರೇವಂತ್ ಅವರಿಗೆ ಆದರ್ಶ ಪತಿಯಾಗಿದ್ದರು. ಇಬ್ಬರು ಪುತ್ರಿಯರಾದ ದೃತಿ ಮತ್ತು ವಂದಿತ ಅವರ ಪ್ರೀತಿಯ ತಂದೆಯಾಗಿದ್ದರು. ಪುನೀತ್ ಅವರ ಹಠಾತ್ ಸಾ’ವು ಅವರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಮುಖ್ಯವಾಗಿ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿತ್ತು. 1986 ಮೇ 19 ರಂದು ಶಿವರಾಜ್ ಕುಮಾರ್ ಹಾಗೂ ಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲಿಂದ ಇಲ್ಲಿಯವರೆಗೂ ಎಷ್ಟೊಂದು ಏಳು ಬೀಳುಗಳು, ಸಂತೋಷ, ದುಃಖ ಎಲ್ಲವನ್ನು ಸಮನಾಗಿ ಸ್ವೀಕರಿಸುತ್ತಾ ಸುಂದರವಾಗಿ ಜೀವನ ಸಾಗಿಸುತ್ತಿದ್ದಾರೆ. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ 19 ಮೇ 2003 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಂದರವಾದಂತಹ ಸಂಸಾರವನ್ನು ನಡೆಸುತ್ತಿದ್ದಾರೆ ಇವರು ಸಹ ಪ್ರೀತಿಸಿ ಮದುವೆಯಾದಂತಹ ಜೋಡಿಯಾಗಿದ್ದಾರೆ. ಸುದೀಪ್ ಹಾಗೂ ಪ್ರಿಯಾ 18, 2001ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು.
2008 ರಲ್ಲಿ ಶಿಲ್ಪಾ ರವರನ್ನ ಮಳೆ ಹುಡುಗ ಗಣೇಶ್ ಅವರು ತಾವು ಪ್ರೀತಿಸಿದ ಹುಡುಗಿಯ ಜೊತೆ ಮದುವೆ ಆದರು. ಪ್ರಜ್ವಲ್ ದೇವರಾಜ್ ತಮ್ಮ ಬಾಲ್ಯದ ಸ್ನೇಹಿತೆಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹೌದು ತಮ್ಮ ಬಾಲ್ಯ ಸ್ನೇಹಿತೆ ಆದ ರಾಗಿಣಿ ಚಂದ್ರನ್ ಅವರನ್ನು ಪ್ರೀತಿಸಿ ನಂತರ ವಿವಾಹವಾದರು. ಬಹುಕಾಲದ ಪ್ರೇಮಿಗಳಾದ ದೂದ್‌ಪೇಡಾ ದಿಗಂತ್ ಹಾಗೂ ಗ್ಲಾಮರಸ್ ನಟಿ ಐಂದ್ರಿತಾ ರೇ ಈ ಜೋಡಿ ಮದುವೆಯಾಗಿ ಸುಖವಾದಂತ ಸಂಸಾರವನ್ನು ನಡೆಸುತ್ತಿದ್ದಾರೆ. ಪ್ರೇಮಿಗಳ ದಿನ ದಂದೇ ಬಹುಕಾಲದ ಪ್ರೇಮಿಗಳು ಸಪ್ತಪದಿ ತುಳಿದಿರೋದು ವಿಶೇಷ.
ಕಳೆದ ಆರು ವರ್ಷಗಳಿಗಿಂತ ಹೆಚ್ಚು ಕಾಲ ಡಾರ್ಲಿಂಗ್ ಕೃಷ್ಣ ಹಾಗೆ ಮಿಲನ ರಾಘರಾಜ್ ಅವರ ವೈವಾಹಿಕ ಜೀವನ ಸುಂದರವಾಗಿದೆ. ಉಳಿದಂತೆ ರಿಷಬ್ ಶೆಟ್ಟಿ- ಪ್ರಗತಿ, ಚಿರಂಜೀವಿ ಸರ್ಜಾ-ಮೇಘನಾ, ಮುರುಳಿ-ವಿಧ್ಯಾ, ದ್ರುವ ಸರ್ಜಾ-ಪ್ರೇರಣಾ ಈ ಜೋಡಿಗಳು ಸಹ ತಾವು ಪ್ರೀತಿಸಿದಂತಹ ಹುಡುಗಿಯನ್ನು ವಿವಾಹವಾಗಿ ಈಗ ಸುಂದರವಾದಂತಹ ಸಂಸಾರವನ್ನು ನಡೆಸುತ್ತಿದ್ದಾರೆ. ಆದರೆ ವಿಧಿಯ ಆಟದ ಮುಂದೆ ನಮ್ಮ ಆಟ ಏನು ಇಲ್ಲ ಎಂಬಂತೆ ಪುನೀತ್ ರಾಜ್‌ಕುಮಾರ್ ಹಾಗೂ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲ ಹಗಲಿರುವುದು ತುಂಬಾ ವಿಷಾದನೀಯ ಹಾಗೆ ಅವರ ಕುಟುಂಬಕ್ಕೆ ಇದು ತುಂಬಾ ದುಃಖವನ್ನು ತಂದುಕೊಡುತ್ತದೆ. ಈ ಜೋಡಿಗಳ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.