Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಸ್ಟಾರ್ ನಟ ಎಂದ ಮೇಲೆ ಅವರ ಹಿತ ದೃಷ್ಟಿಯಿಂದ ಅವರಿಗೆ ಒಬ್ಬರು ಬಾಡಿಗಾರ್ಡ್ ಇರಲೇಬೇಕು ಅದರಲ್ಲಿಯೂ ನಮ್ಮ ನಿಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಬಾಡಿಗಾರ್ಡ್ ಗೆ ತಿಂಗಳ ಸಂಬಳ ಎಷ್ಟಿತ್ತು ಎಂದು ಈಗ ಎಲ್ಲೆಡೆ ಚರ್ಚೆಯಾಗುತ್ತದೆ. ಪುನೀತ್ ರಾಜ್ಕುಮಾರ್ ಅವರು ಈಗಾಗಲೇ ಎಲ್ಲರಿಂದ ದೂರವಾಗಿದ್ದಾರೆ ಆದರೆ ಅವರಿಲ್ಲದ ನೋವು ಈಗಲೂ ಕೂಡ ಸಾಕಷ್ಟು ಅಭಿಮಾನಿಗಳಿಗೆ ನುಂಗಲಾರದಂತಹ ಕ್ಷಣವಾಗಿದೆ ಎಂದು ಹೇಳಬಹುದು. ಹೌದು ಈಗಲೂ ಕೂಡ ಪುನೀತ್ ರಾಜ್ಕುಮಾರ್ ಅವರು ನಮ್ಮ ಜೊತೆಯಲ್ಲಿ ಇದ್ದಾರೆ ಅವರು ಎಲ್ಲು ಹೋಗಿಲ್ಲ ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿ ಇರುತ್ತಾರೆ.
ವಿಧಿಯ ಆಟ ಅಪ್ಪು ಅವರ ಜೀವನದಲ್ಲಿ ತುಂಬಾ ಕೆಟ್ಟದಾಗಿ ಆಟವಾಡಿ ಎಲ್ಲವರಿಗೂ ನೋವನ್ನು ಕೊಟ್ಟುಬಿಟ್ಟಿದೆ ಅವರನ್ನು ಕಳೆದುಕೊಂಡು ಕೇವಲ ಕನ್ನಡಿಗರು ಹಾಗೂ ಅವರ ಪ್ರೀತಿಯ ಅಭಿಮಾನಿಗಳು ಮಾತ್ರವಲ್ಲದೆ ಅವರ ಜೊತೆಯಲ್ಲಿ ಒಡನಾಟ ಇಟ್ಟುಕೊಂಡಿದ್ದಂತಹ ಪ್ರತಿಯೊಬ್ಬರೂ ಕೂಡ ನೋವಿನಲ್ಲಿ ಇದ್ದಾರೆ. ಜೀವನದಲ್ಲಿ ಹೇಗೆ ಬದುಕಬೇಕು ಯಾವುದನ್ನು ನಂಬಬೇಕು ಹಾಗೆ ಯಾವುದಕ್ಕಾಗಿ ಬದುಕಬೇಕು. ನಾವು ಬದುಕುತ್ತಿರುವಂತಹ ಈ ಸಮಯ ಮಾತ್ರ ನಮ್ಮದು ನಾವು ಈಗ ಬದುಕುತ್ತಿರುವ ಸಮಯಮನ್ನು ಮಾತ್ರ ನಂಬಿ ಬದುಕಬೇಕು. ಪುನೀತ್ ರಾಜ್ಕುಮಾರ್ ಅವರ ಬಾಡಿಗಾರ್ಡ್ ಆಗಿ ಎಲ್ಲ ಕೆಲಸದಲ್ಲಿ ಹೆಚ್ಚು ಅವರ ಜೊತೆಯಲ್ಲಿ ಇರುತ್ತಿದ್ದ ಚಲಪತಿಯವರು ಪುನೀತ್ ಅವರು ಅಗಲಿದ ದಿನ ನೋಡಲಾಗದೆ ಅಷ್ಟು ನೋವಿನಲ್ಲಿ ಚಲಪತಿ ಅವರು ಕಣ್ಣೀರು ಹಾಕುತ್ತಿದ್ದರು. ಪುನೀತ್ ಬಾಡಿಗಾರ್ಡ್ ಆಗಿ ಚಲಪತಿ ಅವರಿಗೆ ತಿಂಗಳಿಗೆ ಅಂದಾಜು 1 ಲಕ್ಷದ ವರೆಗೂ ಸಂಬಳ ಸಿಗುತ್ತಿತ್ತು ಎಂದು ಕೇಳಿಬಂದಿದೆ.
ಸಂಬಳ ಏನೇ ಇರಲಿ ಅಪ್ಪು ಅವರ ಜೊತೆಯಲ್ಲಿ ಕೆಲಸ ಮಾಡಿದ ಕ್ಷಣಗಳು ಪುಣ್ಯ ಎಂದು ಭಾವಿಸಿದ್ದಾರೆ. ಅಪ್ಪು ಅವರು ಯಾವುದೇ ಕಾರ್ಯಕ್ರಮಗಳಿಗೆ ಹೋದರು ಸಹ ಚಲಪತಿ ಅವರು ಜೊತೆಯಲ್ಲಿ ಇದ್ದೇ ಇರುತ್ತಿದ್ದರು. ಅಪ್ಪು ಅವರು ಇಷ್ಟು ವರ್ಷಗಳ ಕಾಲ ಸೇಫ್ ಆಗಿ ಇದ್ದರು ಎಂದರೆ ಅದಕ್ಕೆ ಅವರ ಅಂಗರಕ್ಷಕನೇ ಕಾರಣ ಅವರ ಕುಟುಂಬದ ಸದಸ್ಯನ ರೀತಿಯಲ್ಲೇ ಚಲಪತಿ ಅವರು ಇದ್ದರು. ಪುನೀತ್ ರಾಜ್ಕುಮಾರ್ ಅವರು ಚಲಪತಿ ಅವರನ್ನು ತಮ್ಮ ಕುಟುಂಬದ ಸದಸ್ಯ ಎಂದೇ ಭಾವಿಸಿದ್ದರು ಅನೇಕ ವರ್ಷಗಳಿಂದ ಅಪ್ಪು ಅವರ ಮನೆಯಲ್ಲಿ ಕೆಲಸ ಮಾಡುತ್ತಿರುವಂತಹ ಚಲಪತಿಯವರು ಏನೇ ಸಂಬಳ ಪಡೆದುಕೊಂಡಿದ್ದರು ಸಹಪುನೀತ್ ರಾಜ್ಕುಮಾರ್ ಅವರ ಜೊತೆಯಲ್ಲಿ ಇದ್ದ ಹಾಗೆ ಆಗುವುದಿಲ್ಲ.
ಈ ರೀತಿಯಾದಂತಹ ಒಂದು ಪುಣ್ಯದ ಕೆಲಸ ಎಲ್ಲರಿಗೂ ಸಿಗುವುದಿಲ್ಲ ಅಂತಹ ಕೆಲಸ ನನಗೆ ಸಿಕ್ಕಿತ್ತು ಆದರೆ ನಮ್ಮನ್ನು ಅಗಲಿ ಅಪ್ಪು ಹೋಗಿದ್ದಾರೆ ದೇವರ ರೂಪದಲ್ಲಿ ಇದ್ದಂತಹ ಅಪ್ಪು ಅವರನ್ನು ಕಳೆದುಕೊಂಡಿರುವುದು ಚಲಪತಿ ಅವರಿಗೆ ಬಹಳಷ್ಟು ನೋವನ್ನು ಉಂಟು ಮಾಡಿದೆ. ಪುನೀತ್ ರಾಜ್ಕುಮಾರ್ ಅವರು ಯಾವುದೇ ಸಮಾರಂಭಗಳಿಗೆ ಹೋದರೂ ಸಹ ಚಲಪತಿಯವರು ಜೊತೆಯಲ್ಲಿಯೇ ಇರುತ್ತಿದ್ದರು ಹಾಗೆಯೇ ಪುನೀತ್ ರಾಜ್ಕುಮಾರ್ ಅವರ ಎಲ್ಲಾ ಹಾಗೂ ಹೋಗು ವಿಷಯಗಳು ಸಹ ಚಲಪತಿಯವರಿಗೆ ತಿಳಿಯುತ್ತಾ ಇರುತ್ತಿತ್ತು. ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ನಂತರ ಚಲಪತಿ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.