ಬಾಕ್ಸ್ ಆಫೀಸ್ ನಲ್ಲಿ ಗಂಧದಗುಡಿ ಒಂದು ದಾಖಲೆಯನ್ನು ಸೃಷ್ಟಿ ಮಾಡುತ್ತಿದೆ. ಅಭಿಮಾನಿಗಳ ಆರಾಧ್ಯ ದೈವ ನಟ ಪುನೀತ್ ರಾಜ್‌ಕುಮಾರ್ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಗಂಧದಗುಡಿ ಚಿತ್ರ ರಾಜ್ಯದಾದ್ಯಂತ ನವೆಂಬರ್ 28 ರಂದು ಬಿಡುಗಡೆಯಾಗಿದ್ದು ಅಪ್ಪು ಅವರ ಅಕಾಲಿಕ ಅಗಲಿಕೆಯ ನಂತರ ಅವರ ನಟನೆಯ ಗಂಧದಗುಡಿ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಕೊನೆಯದಾಗಿ ಅಪ್ಪು ಅವರನ್ನು ಕಣ್ತುಂಬಿ ಕೊಳ್ಳುತ್ತಿರುವ ಕ್ಷಣ ಅಭಿಮಾನಿಗಳ ಭಾವುಕಥೆಗೆ ಸಾಕ್ಷಿಯಾಗಿದೆ. ಅಪ್ಪು ಅವರು ಒಂದು ವರ್ಷಗಳ ಕಾಲ ಕಾಡುಮೇಡು ಅಲೆದು ಕರ್ನಾಟಕದ ಶ್ರೀಮಂತಿಕೆಯನ್ನು ಗಂಧದಗುಡಿ ಸಿನಿಮಾದ ಮೂಲಕ ಕಣ್ಣಿಗೆ ಕಟ್ಟುವ ಹಾಗೆ ಸೆರೆ ಹಿಡಿದಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಗಂಧದಗುಡಿ ಈ ಸಿನಿಮಾಗಾಗಿ ಅಪ್ಪು ಅವರು ಒಂದು ವರ್ಷಗಳ ಕಾಲ ರಾಜ್ಯದ ಹಲವು ಜಾಗಗಳಲ್ಲಿ ಸುತ್ತಾಡಿ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಈ ಸಿನಿಮಾವನ್ನು ಅಪ್ಪು ಅವರು ಬಹಳ ಇಷ್ಟಪಟ್ಟು ಹಲವಾರು ಕನಸುಗಳನ್ನು ಇಟ್ಟುಕೊಂಡು ಪಿ ಆರ್ ಕೆ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿದ್ದರು. ಇದೀಗ ಅಪ್ಪು ಅವರ ಕನಸನ್ನು ಅಶ್ವಿನಿ ಅವರು ನನಸು ಮಾಡಿದ್ದು ಗಂಧದಗುಡಿ ಸಿನಿಮಾವನ್ನು ಅಭಿಮಾನಿಗಳ ಮುಂದೆ ತಂದಿದ್ದಾರೆ. ಗಂಧದಗುಡಿ ಸಿನಿಮಾ ಅಪ್ಪು ಅವರ ಸಿನಿ ಜೀವನದಲ್ಲಿ ಬಹಳ ವಿಶೇಷವಾದ ಸಿನಿಮಾ ಆಗಿತ್ತು ಈಗಾಗಲೇ ಸಿನಿಮಾ ನೋಡಿರುವ ಅಭಿಮಾನಿಗಳು ವಿಮರ್ಶಕರು ಮತ್ತು ಸಿನಿಮಾ ಪ್ರೇಮಿಗಳು ಅಪ್ಪು ಅವರು ಈ ರೀತಿಯ ಹೊಸ ಪ್ರಯತ್ನವನ್ನು ಮತ್ತು ಅವರಿಗಿದ್ದ ಆಲೋಚನೆಯನ್ನು ಕೊಂಡಾಡಿದ್ದಾರೆ ಹಾಗೂ ಸಿನಿಮಾ ಇಂದ ಹೊರಬರುವ ವೇಳೆ ಅಪ್ಪು ಅವರನ್ನು ಮಿಸ್ ಮಾಡಿಕೊಂಡು ಭಾವುಕರಾಗಿದ್ದಾರೆ.
ಇನ್ನೂ ಪುನೀತ್ ರಾಜ್‌ಕುಮಾರ್ ಅವರ ಗಂಧದಗುಡಿ ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದಿದೆ ನೂರಾರು ಚಿತ್ರಮಂದಿರಗಳಲ್ಲಿ ಈ ಒಂದು ಸಿನಿಮಾ ಬಿಡುಗಡೆಯಾಗಿದ್ದು ಈ ಸಿನಿಮಾಗೆ ಪ್ರೇಕ್ಷಕರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಎಲ್ಲ ಚಿತ್ರಮಂದಿರಗಳಲ್ಲಿಯೂ ತನ್ನ ಅಬ್ಬರವನ್ನು ತೋರಿಸಿತ್ತಿರುವಂತಹ ಗಂಧದಗುಡಿ ಇಂದ ಬಾಕ್ಸ್ ಆಫೀಸ್ ಗೆ ಹಣ ಹರಿದು ಬಂದಿದೆ ಎಂದು ಅಂದಾಜಿಸಲಾಗಿದೆ. ಈ ಚಿತ್ರದ ಬಜೆಟ್ ಅಂದಾಜು ಎರಡು ಕೋಟಿ ಎಂದು ಹೇಳಲಾಗುತ್ತಿದೆ ಇದು ಪುನೀತ್ ಅವರ ಕನಸಾಗಿದ್ದರಿಂದ ಬಜೆಟ್ ಬಗ್ಗೆ ಲೆಕ್ಕ ಹಾಕುವಂತಿಲ್ಲ ಇನ್ನೂ ಬಜೆಟ್ ಕಿಂತ ಅಧಿಕವಾಗಿ ಗಳಿಕೆ ಕಂಡು ಬಂದಿರುವುದನ್ನು ನಾವು ನೋಡಬಹುದಾಗಿದೆ.
ಎಲ್ಲ ಚಿತ್ರಮಂದಿರಗಳಲ್ಲಿಯು ಗಂಧದಗುಡಿ ಸಿನಿಮಾ ಬಿಡುಗಡೆಯಾಗಿ ಶೋಗಳು ಮತ್ತು ಪೇಡ್ ಪ್ರೀಮಿಯರ್ ಸೇರಿದಂತೆ ಸ್ಪೆಷಲ್ ಶೋಗಳು ಸೇರಿದಂತೆ ಈವರೆಗೆ 25 ಕೋಟಿ ರೂ ಬಾಕ್ಸಾಫೀಸ್ ಗೆ ಹಣ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಈ ವಿಷಯದ ಬಗ್ಗೆ ಅಧಿಕೃತವಾಗಿ ಸಿನಿಮಾ ಟೀಮ್ ಅಥವಾ ವಿತಕರಾಗಲಿ ಖಚಿತಪಡಿಸದೆ ಇದ್ದರೂ ಸಿನಿಮಾ ವಿಮರ್ಶಕರು ಈ ಒಂದು ವಿಷಯದ ಬಗ್ಗೆ ತಿಳಿಸಿದ್ದಾರೆ. ಗಂಧದ ಗುಡಿ ಸಿನಿಮಾ ಬಾಕ್ಸಾಫೀಸ್ ಗೆ ಎಷ್ಟೇ ಹಣವನ್ನು ತಂದು ಹಾಕಿದರು ಸಹ ಮತ್ತೆ ನಮಗೆ ಪುನೀತ್ ರಾಜ್‌ಕುಮಾರ್ ಅವರನ್ನು ತಂದುಕೊಡಲು ಸಾಧ್ಯವಿಲ್ಲ, ಆದರೆ ಅವರು ನಮ್ಮ ಮನಸ್ಸಿನಲ್ಲಿ ಸದಾ ಇರುತ್ತಾರೆ ಅವರ ಸಿನಿಮಾಗಳು ನಮ್ಮ ಜೊತೆಯಲ್ಲಿ ನೆನಪಾಗಿ ಉಳಿದುಕೊಳ್ಳುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.