ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ ಇರುತ್ತಾರೆ ತಮ್ಮ ಸಿನಿಮಾಗಳು ಹಾಗೆಯೇ ನಟನೆ ಡಾನ್ಸ್ ಈ ರೀತಿಯಾದಂತಹ ಕೆಲವೊಂದು ಅಪ್ಡೇಟ್ಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಟ ನಟಿಯರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೆ ಸಾಕಷ್ಟು ನಟಿಯರು ರೀಲ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಇರುತ್ತಾರೆ. ಆದರೆ ನಟಿ ಅಮೂಲ್ಯ ಅವರು ಈ ಒಂದು ರೀಲ್ಸ್ ವಿಚಾರಕ್ಕೆ ಬಂದರೆ ಸ್ವಲ್ಪ ದೂರವೇ ಇದ್ದರು ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಕ್ವೀನ್ ಎಂದೇ ಕರೆಸಿಕೊಳ್ಳುವ ನಟಿ ಅಮೂಲ್ಯ ಅವರು ಮದುವೆಯ ನಂತರ ಚಿತ್ರರಂಗದಿಂದ ಹಿಂದುಳಿದಿದ್ದರು.
ಮದುವೆಯಾಗಿ ಮಕ್ಕಳಾದ ಮೇಲೆ ಯಾವುದೇ ರೀತಿಯಾದಂತಹ ಸಿನಿಮಾಗಳಲ್ಲಿ ನಟಿಸಿಲ್ಲ ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೊಂದು ಇವರು ಆಕ್ಟಿವ್ ಇರಲಿಲ್ಲ. ಆದರೆ ಇದೀಗ ಅವಳಿ ಮಕ್ಕಳಾದ ನಂತರ ಮೊದಲ ಬಾರಿಗೆ ರೀಲ್ಸ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ಕೊಟ್ಟಿದ್ದಾರೆ. ಹೌದು, ಲಂಗ ದಾವಣಿ ತೊಟ್ಟು ಅಮೂಲ್ಯ ಅವರು ಗುರು ಶಿಷ್ಯರು ಸಿನಿಮಾದ “ಹಾಣೆ ಮಾಡಿ ಹೇಳುತ್ತೀನಿ” ಈ ಒಂದು ಹಾಡಿಗೆ ಮೊದಲ ಬಾರಿಗೆ ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಅಪ್ಡೇಟ್ ಮಾಡಿದ್ದಾರೆ. ಈ ಒಂದು ರೀಲ್ಸ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಗಿದ್ದು ಸೂಪರ್ ಎಂದು ಕಮೆಂಟ್ಸ್ ಗಳು ಸಹ ಮಾಡುತ್ತಿದ್ದಾರೆ.
ಲಂಗ ದಾವಣಿಯನ್ನು ಧರಿಸಿ ಅವರು ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದು ಡ್ಯಾನ್ಸ್ ಮಾಡಿದ್ದಾರೆ ಮೊದಲ ರೀಲ್ಸ್ ಇದಾಗಿದ್ದು ಇದು ನನ್ನ ಫೇವರೆಟ್ ಹಾಡು ಎಂದು ನಿರ್ಮಾಪಕ ತರುಣ್ ಸುಧೀರ್ ಹಾಗೂ ಇಡೀ ಗುರು ಶಿಷ್ಯರು ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ಅಮೂಲ್ಯ ಅವರು ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಕಿಚ್ಚ ಸುದೀಪ್ ಅವರ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೂ ಸಹ ಅಮೂಲ್ಯ ಸಕ್ಕತ್ ಸ್ಟೆಪ್ ಹಾಕಿ ಮಿಂಚಿದ್ದಾರೆ ನಟಿ ಅಮೂಲ್ಯ ಮಕ್ಕಳಾದ ಸ್ವಲ್ಪ ದಿನಗಳ ನಂತರ ಚಿತ್ರರಂಗಕ್ಕೆ ಹಿಂದಿರುಗುವ ಮುನ್ಸೂಚನೆಯನ್ನು ನೀಡಿದ್ದಾರೆ. ಏಕೆಂದರೆ ಇದೀಗ ಕೆಲವೊಂದು ರಿಲ್ಸ್ ಗಳನ್ನು ಮಾಡುವುದರ ಮೂಲಕ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಈ ರಿಲ್ಸ್ ಗಳು ಅಭಿಮಾನಿಗಳಲ್ಲಿ ಅಮೂಲ್ಯ ಅವರು ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಾರೆ ಎನ್ನುವಂತಹ ಭರವಸೆಯನ್ನು ನೀಡುತ್ತಿವೆ.
ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ಅಮೂಲ್ಯ ಅವರು ಭರ್ಜರಿಯಾಗಿ ಸ್ಟೇಪ್ ಹಾಕಿದ್ದು ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಒಂದು ವಿಡಿಯೋಗಳಲ್ಲಿ ಅಮೂಲ್ಯ ಅವರು ತುಂಬಾ ತೆಳ್ಳಗಾಗಿದ್ದಾರೆ ಎಂದು ಸಾಕಷ್ಟು ಜನರು ಕಮೆಂಟ್ಸ್ ಗಳನ್ನು ಸಹ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಮಕ್ಕಳಾದ ಬಳಿಕ ತಾಯಂದಿರು ದಪ್ಪ ಆಗುತ್ತಾರೆ ಆದರೆ ಅಮೂಲ್ಯ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು ಸಹ ಇದೀಗ ತುಂಬಾ ತೆಳ್ಳಗಾಗಿದ್ದಾರೆ ಚಿತ್ರರಂಗಕ್ಕೆ ಬಂದಂತಹ ಸಮಯದಲ್ಲಿ ಅಮೂಲ್ಯ ಅವರು ಇದ್ದ ರೀತಿಯಲ್ಲಿಯೇ ಈಗ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಅಮೂಲ್ಯ ಅವರು ಇನ್ನೂ ಸಾಕಷ್ಟು ಹೊಸ ಸಿನಿಮಾಗಳಲ್ಲಿ ನಟಿಸಿ ಎಲ್ಲರಿಗೂ ಮನರಂಜನೆ ನೀಡಬೇಕು ಎಂದು ನಿಮಗೂ ಸಹ ಅನಿಸಿದರೆ ತಪ್ಪದೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.