ಅಂಗನವಾಡಿ ಕಾರ್ಯಕರ್ತರ ನೇಮಕಾತಿಗೆ 2023ರಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು.ಪ್ರತಿಯೊಬ್ಬ ಮಹಿಳೆಯರು ಹಾಗೂ ವಿದ್ಯಾರ್ಥಿ ಗಳು ಕೂಡ ಈ ಒಂದು ನೇಮಕಾತಿಗೆ ಅರ್ಜಿಯನ್ನು ಹಾಕಬಹುದಾಗಿದೆ. ಹಾಗಾದರೆ ಈ ದಿನ ಅಂಗನವಾಡಿ ಕಾರ್ಯಕರ್ತರ ಹುದ್ದೆಯಲ್ಲಿ ಯಾವುದೆಲ್ಲ ಹುದ್ದೆ ಖಾಲಿ ಇದೆ ಎಂದು ನೋಡುವುದಾದರೆ ಮೊದಲನೆಯದಾಗಿ ಅಂಗನವಾಡಿ ಕಾರ್ಯಕರ್ತೆ, ಎರಡನೆಯದಾಗಿ ಮಿನಿ ಅಂಗನವಾಡಿ ಕಾರ್ಯಕರ್ತೆ, ಹಾಗೂ ಮೂರನೆಯದಾಗಿ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು.
ಒಟ್ಟಾರೆಯಾಗಿ 5813 ಹುದ್ದೆಗಳಿಗೆ ಇಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ನಿಯಮಗಳನ್ನು ಅನುಸರಿಸಬೇಕು, ಯಾವುದೆಲ್ಲ ದಾಖಲಾತಿಗಳು ಬೇಕು, ಹಾಗು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾರೆಲ್ಲಾ ಅರ್ಹರಿದ್ದಾರೆ ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು? ಹಾಗೂ ಕೊನೆಯ ದಿನಾಂಕ ಯಾವುದು.? ಹೀಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಮೊದಲನೆಯದಾಗಿ ಈ ಒಂದು ಹುದ್ದೆಗೆ ಅರ್ಜಿಯನ್ನು ಹಾಕುವುದಕ್ಕೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆ ಇರುವುದಿಲ್ಲ. ಮೊದಲನೆಯದಾಗಿ ನೇರವಾಗಿ ನೇಮಕಾತಿ ಮಾಡಿಕೊಳ್ಳುತ್ತಾರೆ ಎರಡನೆಯ ಹಂತದಲ್ಲಿ ನಿಮ್ಮ ದಾಖಲಾತಿ ಪತ್ರಗಳನ್ನು ಪರಿಶೀಲನೆ ಮಾಡುವುದರ ಮೂಲಕ ಹಾಗೂ ಮೂರನೆಯದಾಗಿ ನಿಮ್ಮ ಸಂದರ್ಶನವನ್ನು ಮಾಡುವುದರ ಮೂಲಕ. ಈ ಒಂದು ಹುದ್ದೆಗೆ ನಿಮ್ಮನ್ನು ನೇರವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದೇ ಹೇಳಬಹುದು.
ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆ ರೀತಿಯಾದಂತಹ ಅರ್ಜಿ ಶುಲ್ಕ ಇರುವುದಿಲ್ಲ ಉಚಿತವಾಗಿ ನೀವು ಇಲ್ಲಿ ಅರ್ಜಿಯನ್ನು ಹಾಕಬಹುದು. ಒಬಿಸಿ ಅಭ್ಯರ್ಥಿಗಳಿಗೆ ಇಲ್ಲಿ ಮೂರು ವರ್ಷ ಸಡಲಿಕ್ಕೆ ಇದ್ದರೆ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇರುತ್ತದೆ. ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಕನಿಷ್ಠ 18 ವರ್ಷ ವಯಸ್ಸಾಗಿರ ಬೇಕು ಹಾಗೂ ಗರಿಷ್ಠ 42 ವರ್ಷ ವಯಸ್ಸಿನ ಒಳಗಿನವರು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು ಕಡ್ಡಾಯವಾಗಿ ಸೆಕೆಂಡ್ ಪಿಯುಸಿ ಮುಗಿಸಿ ಕೆಲವೊಂದಷ್ಟು ದಾಖಲಾತಿಗಳನ್ನು ಅಂದರೆ ನೀವು ಪಿಯುಸಿ ಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಅಂಕಪಟ್ಟಿಗಳು ಇಲ್ಲಿ ಅಗತ್ಯವಾಗಿರು ತ್ತದೆ. ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ 17/02/2023 ಹಾಗೂ ಕೊನೆಯ ದಿನಾಂಕ 09/03/2023 ಹಾಗಾಗಿ ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸುವುದು ಉತ್ತಮ. ಯಾವ ಸಂಸ್ಥೆಯ ಅಡಿಯಲ್ಲಿ ಈ ಒಂದು ಅಂಗನವಾಡಿ ಹುದ್ದೆಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಎಂದು ನೋಡುವುದಾದರೆ.
ಸಾಮಾಜಿಕ ಭದ್ರತೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಈ ಒಂದು ಅಂಗನವಾಡಿ ಹುದ್ದೆಗೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಹಾಗಾಗಿ ಅರ್ಜಿಯನ್ನು ಹಾಕುವವರು ಮೇಲೆ ಹೇಳಿದ ಒಂದು ವೆಬ್ಸೈಟ್ ಗೆ ಹೋಗಿ ನೀವು ಆನ್ಲೈನ್ ಮೂಲಕ ಅರ್ಜಿ ಯನ್ನು ಸಲ್ಲಿಸಬೇಕಾಗಿರುತ್ತದೆ. ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಬೇಕಾಗುವ ದಾಖಲಾತಿಗಳು ಯಾವುದು ಎಂದರೆ ನಿಮ್ಮ ಆಧಾರ್ ಕಾರ್ಡ್, ವಾಸ ಸ್ಥಳ ದೃಡೀಕರಣ ಪತ್ರ, ಹಾಗೂ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಹೀಗೆ ಅಲ್ಲಿ ಕೇಳುವಂತಹ ಕೆಲವೊಂದ ಷ್ಟು ಅಗತ್ಯ ದಾಖಲಾತಿಗಳೊಂದಿಗೆ ನೀವು ಇಲ್ಲಿ ಅರ್ಜಿಯನ್ನು ಸಲ್ಲಿಸ ಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.