ಬ್ಯಾಂಕ್ ಖಾತೆದಾರರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು, ಸದ್ಯದಲ್ಲೇ ಬಂದ್ ಆಗಲಿವೆ ಈ ಬ್ಯಾಂಕ್ ಗಳು.

ಬ್ಯಾಂಕ್ ಗಳ ಬ್ಯಾಂಕ್ ಎಂದು ಆರ್.ಬಿ.ಐ ಅನ್ನು ಕರೆಯಲಾಗುತ್ತದೆ. ಹಾಗಾಗಿ ದೇಶದ ಎಲ್ಲಾ ಬ್ಯಾಂಕುಗಳು ಕೂಡ ಒಂದರ್ಥದಲ್ಲಿ ಆರ್.ಬಿ.ಐ ಒಡೆತನಕ್ಕೆ ಸೇರಿರುತ್ತದೆ ಎಂದು ಹೇಳಬಹುದು. ಇದರಿಂದ ಆಗಾಗ ಬ್ಯಾಂಕುಗಳ ಕುರಿತು ಕೆಲವು ನಿಯಮಗಳು ಮತ್ತು ಬದಲಾವಣೆಗಳನ್ನು ಆರ್.ಬಿ.ಐ ಜಾರಿಗೆ ತರುತ್ತದೆ. ಈಗಾಗಲೇ ಇಂತಹ ಅನೇಕ ಬದಲಾವಣೆಗಳನ್ನು ಹಲವು ಬ್ಯಾಂಕ್ ಗಳು ಅಳವಡಿಸಿಕೊಂಡಿವೆ ಅದು ಕಡ್ಡಾಯ ಕೂಡ. ಈ ಬಾರಿ ಕೂಡ ಅಂಥದ್ದೇ ಒಂದು ನಿಯಮವನ್ನು ಜಾರಿಗೆ ತಂದು ಬ್ಯಾಂಕ್ ಖಾತೆ ಹೊಂದಿರುವವರಿಕೆ ಶಾ’ಕ್ ನೀಡಿದೆ.

WhatsApp Group Join Now
Telegram Group Join Now

ಅದೇನೆಂದರೆ ಆರ್‌ಬಿಐ ಸುಪರ್ದಿಯಲ್ಲಿರುವ ಕರ್ನಾಟಕದ ಒಂದು ಬ್ಯಾಂಕ್ ಸೇರಿದಂತೆ ಇನ್ನೂ ಐದು ಬ್ಯಾಂಕುಗಳಿಗೆ ಇನ್ನು ಆರು ತಿಂಗಳಗಳ ಕಾಲ ಸಾಲ ನೀಡುವುದಿಲ್ಲ ಎಂದು ಆರ್.ಬಿ.ಐ ಘೋಷಣೆ ಮಾಡಿದೆ. ಸಾಮಾನ್ಯವಾಗಿ ಆರ್‌ಬಿಐ ಸುಖಾ ಸುಮ್ಮನೆ ಈ ರೀತಿ ನಿಯಮಗಳನ್ನು ತರುವುದಿಲ್ಲ. ಕೂಲಂಕುಶವಾಗಿ ಬ್ಯಾಂಕಿನ ಆರ್ಥಿಕ ಚಟುವಟಿಕೆಗಳನ್ನೆಲ್ಲ ಗಮನಿಸಿ ನಂತರ ಇಂಥದೊಂದು ದೃಢ ನಿರ್ಧಾರವನ್ನು ಬ್ಯಾಂಕ್ ಮತ್ತು ಗ್ರಾಹಕರ ಹಿತ ರಕ್ಷಣೆ ಈ ಎರಡರ ದೃಷ್ಟಿಯಿಂದ ಮನಗಂಡುಕೊಂಡು ಮಾಡಲೇ ಬೇಕಾಗುತ್ತದೆ.

ಈ ಬಾರಿ ಕೂಡ ಅಂತಹದ್ದೇ ಒಂದು ಗಟ್ಟಿ ನಿರ್ಧಾರವನ್ನು ಮತ್ತು ಕಠಿಣ ನಿಯಮವನ್ನು ಕೆಲವು ಬ್ಯಾಂಕ್ಗಳಿಗೆ ಆರ್‌ಬಿಐ ಹೊರಡಿಸಿದೆ. ಇದರಲ್ಲಿ ಕರ್ನಾಟಕದ ಶಿಂಷ ಸಹಕಾರಿ ಬ್ಯಾಂಕ್ ಕೂಡ ಸೇರಿದೆ. ಕರ್ನಾಟಕದಲ್ಲಿರುವ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶಿಂಷ ಸಹಕಾರಿ ಬ್ಯಾಂಕ್ ಮೇಲೆ ಆರ್ ಬಿ ಇಂತಹ ಒಂದು ನಿರ್ಬಂಧವನ್ನು ವಿಧಿಸಿದೆ. ಇದರೊಂದಿಗೆ ದೇಶದ ಇನ್ನಿತರ ನಗರಗಳಲ್ಲಿರುವ ಐದು ಬ್ಯಾಂಕುಗಳಿಗೂ ಕೂಡ ಇದೇ ರೀತಿಯ ನಿರ್ಬಂಧವನ್ನು ಹೇರಿದೆ.

ಉತ್ತರ ಪ್ರದೇಶದ ಲಕ್ನೋದಲ್ಲಿರುವ HCBL ಸಹಕಾರಿ ಬ್ಯಾಂಕ್, ಮಹಾರಾಷ್ಟ್ರದ ಔರಂಗಬಾದ್ ಅಲ್ಲಿ ಇರುವ ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಉರವಕೊಂಡ ಕೋ ಆಪರೇಟಿವ್ ಟೌನ್ ಬ್ಯಾಂಕ್, ಮಹಾರಾಷ್ಟ್ರದ ಅಕ್ಲುಜ್ ನಲ್ಲಿರುವ ಶಂಕರ್ ರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್ ಗಳ ಮೇಲೆ ಆರ್.ಬಿ.ಐ ಈ ರೀತಿ ನಿಯಮ ಜಾರಿಗೆ ತಂದಿದೆ.

ಬ್ಯಾಂಕುಗಳ ಆರ್ಥಿಕ ಸ್ಥಿತಿ ಹದಕ್ಕೆಟ್ಟಿರುವ ಹಿನ್ನೆಲೆಯಲ್ಲಿ ಅದನ್ನು ಹಲವು ಸಮಯದಿಂದ ಗಮನಿಸಿರುವ ಆರ್.ಬಿ.ಐ ಈ ಹೊಸ ಆದೇಶವನ್ನು ಹೊರಡಿಸಿದೆ. ಆರ್.ಬಿ.ಐ ಈಗಾಗಲೇ ಹೊರಡಿಸಿರುವ ಹೊಸ ಆದೇಶ ಪ್ರತಿಯಲ್ಲಿ ನೀಡಿರುವ ಮಾಹಿತಿಯಂತೆ ಈ ನಿರ್ಬಂಧ ಸದ್ಯಕ್ಕೆ ಆರು ತಿಂಗಳವರೆಗೆ ಜಾರಿಯಲ್ಲಿ ಇರುತ್ತದೆ.

ಆರ್.ಬಿ.ಐ ಈ ರೀತಿಯ ನಿರ್ಬಂಧ ವಹಿಸಿರುವುದರಿಂದ ಈ ಮೇಲೆ ಹೆಸರಿಸಲಾದ ಆರು ಬ್ಯಾಂಕುಗಳು ಆರ್.ಬಿ.ಐ ನ ಪೂರ್ವ ಅನುಮತಿ ಇಲ್ಲದೆ ಸಾಲಗಳನ್ನು ನೀಡಲು ಯಾವುದೇ ಹೂಡಿಕೆ ಮಾಡಲು ಇದು ಯಾವುದೇ ಜವಾಬ್ದಾರಿಯನ್ನು ಹೊಂದಲು ಹಾಗೂ ಅದರ ಯಾವುದೇ ಆಸ್ತಿಯನ್ನು ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ಎಲ್ಲಾ ಸಹಕಾರಿ ಬ್ಯಾಂಕುಗಳ ಅರ್ಹ ಠೇವಣಿದಾರರುಗಳು ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪರೇಷನ್ ಇಂದ ತಮ್ಮ ತಮ್ಮ ಠೇವಣಿ ವಿಮೆ ದಲ್ಲಿ 5 ಲಕ್ಷದವರೆಗೆ ವನ್ನು ಪಡೆದುಕೊಳ್ಳಬಹುದು ಎಂದು ಆರ್.ಬಿ.ಐ ತಿಳಿಸಿದೆ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now