ನೀವು ಬಿಸಿ ನೀರು ಕುಡಿತೀರಾ ಅಥವಾ ಬಿಸಿ ಊಟ ತಿಂತಿರಾ.? ಹಾಗಾದ್ರೆ ಒಮ್ಮೆ ಡಾ.ಅಂಜನಪ್ಪ ಅವರ ಮಾತು ಕೇಳಿ. ಇದು ಎಲ್ಲರೂ ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ವಿಚಾರ.

ಬಿಸಿ ಬಿಸಿ ನೀರು, ಆಹಾರ ಎಷ್ಟು ಸೇಫ್ ? ನಾವು ಎಷ್ಟು ನೀರು ಮತ್ತು ಆಹಾರ ಸೇವಿಸಬೇಕು ? ಪ್ರತಿಯೊಬ್ಬರು ತಿಳಿಯಲೇಬೇಕಾದ ಮಾಹಿತಿ. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಈ ವಿಷಯವಾಗಿ ಹಲವಾರು ಜನರನ್ನು ಗಮನಿಸಿರಬಹುದು. ಅದೇನಂದರೆ ಬಿಸಿ ಬಿಸಿ ಆಹಾರವನ್ನು ಸೇವನೆ ಮಾಡುತ್ತಿರುತ್ತಾರೆ. ಹೌದು ಕೆಲವೊಬ್ಬರು ಯಾವುದೇ ಪದಾರ್ಥವನ್ನು ಕೂಡ ಬಿಸಿ ಬಿಸಿಯಾಗಿ ಸೇವನೆ ಮಾಡುತ್ತಿರುತ್ತಾರೆ.

ಆದರೆ ಅಷ್ಟು ಹೊಗೆ ಬರುವಂತಹ ಬಿಸಿ ಆಹಾರ ವನ್ನಾಗಲಿ, ಟೀ ಕಾಫಿ ಮತ್ತಿತರ ಯಾವುದೇ ಪದಾರ್ಥವನ್ನು ಅಷ್ಟು ಬಿಸಿಯಾಗಿ ಸೇವನೆ ಮಾಡುವುದು ಉತ್ತಮವಲ್ಲ. ಬದಲಿಗೆ ಅದು ನಮಗೆ ಹಲವಾರು ಸಮಸ್ಯೆಗಳನ್ನು ತರುತ್ತದೆ. ಅದೇ ರೀತಿ ಕೆಲವೊಮ್ಮೆ ನಮ್ಮ ಸಾವು ಕೂಡ ಬರಬಹುದು.! ಆದ್ದರಿಂದ ಈ ವಿಷಯವಾಗಿ ಹೆಚ್ಚು ಗಮನವನ್ನು ವಹಿಸಿ ಹೆಚ್ಚಿನ ಬಿಸಿ ಆಹಾರವನ್ನು ಸೇವನೆ ಮಾಡುವು ದನ್ನು ತಪ್ಪಿಸಬೇಕು.

ಹಾಗಾದರೆ ಬಿಸಿ ಆಹಾರವನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ಸಮಸ್ಯೆ ಎದುರಾಗುತ್ತದೆ ಎಂದರೆ ಮೊದಲನೆಯದಾಗಿ ನೀವು ಯಾವುದೇ ಆಹಾರ ಪದಾರ್ಥವನ್ನು ಬಿಸಿಯಾಗಿ ಸೇವನೆ ಮಾಡಿದರೆ ಶ್ವಾಸಕೋಶದ ನಾಳ ಸುಟ್ಟು ಹೋಗುತ್ತದೆ. ಅಂದರೆ ನೀವು ತಕ್ಷಣದಲ್ಲಿ ಬಿಸಿ ಆಹಾರವನ್ನು ಸೇವಿಸಿದ ನಂತರ ನಿಮ್ಮ ಶ್ವಾಸಕೋಶದಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿ ನಿಮ್ಮ ಹೃದಯದಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ.

ಇದರಿಂದ ಹೃದಯ ಬಡಿತ ನಿಂತು ಹೋಗುತ್ತದೆ. ಇದಕ್ಕೆ ನಾವು ಕಾರ್ಡಿಯಾಕ್ ಅರೆಸ್ಟ್ ಎಂದು ಹೇಳಬಹುದು. ಆದರೆ ಹೆಚ್ಚಿನ ಜನ ಈ ವಿಷಯವಾಗಿ ಯಾರೂ ಕೂಡ ಗಮನಹರಿಸುವುದಿಲ್ಲ ಬಿಸಿಬಿಸಿ ಆಹಾರ ತಿಂದರೆ ಮಾತ್ರ ನನಗೆ ಸಮಾಧಾನವಾಗುತ್ತದೆ ಬದಲಿಗೆ ಆರಿದ ಆಹಾರ ತಿಂದರೆ ನನಗೆ ಇಷ್ಟ ಆಗುವುದಿಲ್ಲ ಎಂದು ಹೇಳುತ್ತಿರುತ್ತಾರೆ

ಆದ್ದರಿಂದ ಅಂಥವರಿಗೆ ಈ ಮಾಹಿತಿಯನ್ನು ಹೇಳಿ ನಂತರ ಅವರ ಈ ತಪ್ಪು ಆಹಾರ ಪದ್ಧತಿಯನ್ನು ತಪ್ಪಿಸಿ ಇಲ್ಲವಾದಲ್ಲಿ ಅವರ ಮುಂದಿನ ದಿನ ಹಲವಾರು ತೊಂದರೆಗೆ ಸಿಲುಕಿ ಹಾಕಿಕೊಳ್ಳಬಹುದು. ಇನ್ನು ಎರಡನೆಯದಾಗಿ ನಾವು ಎಷ್ಟು ಆಹಾರವನ್ನು ತಿಂದರೆ ಒಳ್ಳೆಯದು? ಸಾಮಾನ್ಯವಾಗಿ ವಯಸ್ಸಾದ ನಂತರ ಪ್ರತಿಯೊಬ್ಬರೂ ಕೂಡ ತಮ್ಮ ಆಹಾರ ಪದ್ಧತಿಯನ್ನು ಅಂದರೆ ತಾವು ತಿನ್ನುವಂತಹ ಆಹಾರದ ಪ್ರಮಾಣ ವನ್ನು ಕಡಿಮೆ ಮಾಡುತ್ತಾರೆ.

ಹೌದು ಈ ರೀತಿ ತಿನ್ನುವುದು ಅವರ ಆರೋಗ್ಯಕ್ಕೆ ಒಳ್ಳೆಯದು ಎಂದೇ ಹೇಳಬಹುದು. ಬದಲಿಗೆ ಅವರು ತಮ್ಮ 20 30 ವಯಸ್ಸಿನಲ್ಲಿ ತಿನ್ನುತ್ತಿದ್ದಂತಹ ಆಹಾರವನ್ನು ತಿನ್ನಲು ಸಾಧ್ಯವಾಗುವುದಿಲ್ಲ, ಬದಲಿಗೆ ಅವರಿಗೆ ವಯಸ್ಸಾಗುತ್ತ ಅವರ ಜಠರದ ಶಕ್ತಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ ಆದ್ದರಿಂದ ವಯಸ್ಸಾದವರಿಗೆ.

ಊಟ ತಿಂಡಿಯ ವಿಚಾರದಲ್ಲಿ ಅವರಿಗೆ ಹಿಂಸೆ ಮಾಡಿ ಆಹಾರವನ್ನು ಕೊಡಬೇಡಿ ಬದಲಿಗೆ ಅವರಿಗೆ ಎಷ್ಟು ಪ್ರಮಾಣದಲ್ಲಿ ತಿನ್ನುತ್ತಾರೋ ಅಷ್ಟೇ ಆಹಾರವನ್ನು ಬೇಕಾದಲ್ಲಿ ನಾಲ್ಕರಿಂದ ಐದು ಬಾರಿ ಕೊಡಿ, ಆದರೆ ಒಂದೇ ಸಮನೆ ಅಷ್ಟು ಆಹಾರವನ್ನು ಅವರಿಗೆ ಕೊಡುವುದು ಉತ್ತಮ ವಲ್ಲ ಹಾಗೂ ಕಷ್ಟಪಟ್ಟು ನಾವು ಹೆಚ್ಚಿನ ಆಹಾರವನ್ನು ತಿನ್ನಬಾರದು. ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಅವನಿಗೆ ಎಷ್ಟು ಆಹಾರ ತಿಂದರೆ ಸಮಾಧಾನವಾಗುತ್ತದೆ ಎಂದು ತಿಳಿಯುತ್ತದೆ.

ಆದರೆ ಅವನು ಇಷ್ಟವಾದ ಆಹಾರವಾಗಿರುವುದರಿಂದ ಅದನ್ನು ಕಷ್ಟಪಟ್ಟು ಹಿಂಸೆಯಿಂದ ತಿನ್ನುತ್ತಾನೆ. ಈ ರೀತಿ ತಿನ್ನುವುದರಿಂದ ಅವನು ಹಲವಾರು ಸಮಸ್ಯೆಗೆ ಗುರಿಯಾಗುತ್ತಾನೆ ಆದ್ದರಿಂದ ಹಿತಮಿತವಾಗಿ ಆಹಾರವನ್ನು ಸೇವನೆ ಮಾಡುವುದು ಅವನಿಗೆ ಅವನ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: