ಕಾಂಗ್ರೆಸ್ ಪಕ್ಷವು ಚುನಾವಣೆ ವೇಳೆ ಮಾತು ಕೊಟ್ಟಿದ್ದ ರೀತಿ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ 5Kg ಅಕ್ಕಿಯನ್ನು 10Kg ಗೆ ಏರಿಸಲು ಸಾಕಷ್ಟು ಶ್ರಮಿಸಿದೆ. ಅದು ಸಾಧ್ಯವಾಗದ ಬಳಿಕ ಸಚಿವ ಸಪುಟ ಸಭೆಯೊಂದಿಗೆ ಚರ್ಚಿಸಿ ಮಾನ್ಯ ಮುಖ್ಯಮಂತ್ರಿಗಳು ಹೆಚ್ಚುವರಿ 5Kg ಅಕ್ಕಿಯನ್ನು ರಾಜ್ಯದ ಜನತೆಗೆ ವಿತರಣೆ ಮಾಡಲು ನಾವು ಸಾಕಷ್ಟು ಪ್ರಯತ್ನಿಸಿದ್ದೇವೆ ಆದರೆ ಅಕ್ಕಿ ಸಿಗದ ಕಾರಣ ಪ್ರತಿ ಸದಸ್ಯನಿಗೆ ಆ ಹೆಚ್ಚುವರಿ 5Kg ಅಕ್ಕಿ ಬದಲು 170ರೂಗಳನ್ನು ಅಕ್ಕಿ ದೊರೆಯುವ ತನಕ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಕೇಂದ್ರಕ್ಕೆ Kg ಗೆ 34 ರೂಪಾಯಿಗಳಂತೆ ಬೆಲೆ ನೀಡಿ ಅಕ್ಕಿ ತರಲು ನಿರ್ಧಾರ ಮಾಡಿದ ಕಾರಣ ಅದೇ ಮಾನದಂಡದಲ್ಲಿ ಈ ಹಣ ನೀಡಲು ಸರ್ಕಾರ ನಿರ್ಧಾರಕ್ಕೆ ಬಂದಿದೆ. ಈ ಅನ್ನಭಾಗ್ಯ ಯೋಜನೆಯು ಜುಲೈ ತಿಂಗಳಿನಿಂದ ಜಾರಿಗೆ ಬರುತ್ತದೆ ಎಂದು ಹೇಳಿದ ಕಾರಣ ಜುಲೈ ತಿಂಗಳಿಂದ ಒಬ್ಬ ಸದಸ್ಯನಿಗೆ ಎಂದಿನಂತೆ ಕೇಂದ್ರದಿಂದ 5 Kg ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಾಗೂ ಗ್ಯಾರೆಂಟಿ ಕಾರ್ಡ್ ಯೋಜನೆಯಡಿ ಘೋಷಿಸಿದ್ದ ಹೆಚ್ಚುವರಿ 5 Kg ಅಕ್ಕಿ ಬದಲು 170 ರೂಪಾಯಿಗಳನ್ನು ಪಡೆಯಲಿದ್ದಾನೆ.
ಅದೇ ಇಬ್ಬರು ಸದಸ್ಯರಿದ್ದರೆ 10 Kg ಅಕ್ಕಿ ಮತ್ತು 340 ರೂಗಳು ಸಿಗಲಿದೆ. ಈ ಹಣವು ರೇಷನ್ ಕಾರ್ಡ್ ಅಲ್ಲಿ ಮೊದಲ ಪುಟದಲ್ಲಿ ಯಾರ ಹೆಸರು ಇರುತ್ತದೆಯೋ ಅವರನ್ನೇ ಮನೆ ಯಜಮಾನರು ಎಂದು ಭಾವಿಸುವುದರಿಂದ ಅವರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ರೇಷನ್ ಕಾರ್ಡ್ ಅಲ್ಲಿ ಮೊದಲ ಪುಟದಲ್ಲಿ ಯಾರ ಹೆಸರು ಇರುತ್ತದೋ ಅವರಿಗೆ ಈ ಹಣ ಸಿಗಬೇಕು ಎಂದರೆ ಅವರು ಈ ಮೂರು ಕೆಲಸಗಳನ್ನು ಮಾಡಿರಲೇಬೇಕು.
● ಮೊದಲಿಗೆ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಬೇಕು. ರೇಷನ್ ಕಾರ್ಡ್ ಸ್ಟೇಟಸ್ ಅನ್ನು ಚೆಕ್ ಮಾಡಿದರೆ ಅದು ತಿಳಿಯುತ್ತದೆ. ರೇಷನ್ ಕಾರ್ಡ್ ಅಲ್ಲಿರುವ ಸದಸ್ಯರ ಸಂಖ್ಯೆ ಜೊತೆ ಅವರ ಆಧಾರ್ ಸಂಖ್ಯೆ ಇರುತ್ತದೆ ಅದರ ಪಕ್ಕದಲ್ಲಿ ಇ-ಕೆವೈಸಿ ಇರುತ್ತದೆ. ಆಧಾರ್ ಸಂಖ್ಯೆ ಎಂಟ್ರಿ ಆಗಿರಬೇಕು ಇ-ಕೆವೈಸಿ ಆಪ್ಷನ್ ಅಲ್ಲಿ Yes ಎಂದು ಬರಬೇಕು. ಕಡ್ಡಾಯವಾಗಿ ಇದನ್ನು ತಪ್ಪದೆ ಚೆಕ್ ಮಾಡಿಕೊಳ್ಳಲೇಬೇಕು ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿದರೆ ಮಾತ್ರ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಹಣ ಸಿಗಲು ಸಾಧ್ಯ.
● ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಅಕೌಂಟ್ ಜೊತೆ ಸೀಡಿಂಗ್ ಹಾಕಿರಬೇಕು. NPCI ಮ್ಯಾಪಿಂಗ್ ಆಗಿ ಮ್ಯಾಚ್ ಆಗಬೇಕು ಹೀಗಿದ್ದಾಗ ಮಾತ್ರ DBT ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ. ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಜೊತೆಗೆ ಲಿಂಕ್ ಆಗದೆ ಇದ್ದರೆ ಅಂತವರ ಖಾತೆಗೆ ಹಣ ಜಮೆ ಆಗುವುದಿಲ್ಲ.
● ಇದರೊಂದಿಗೆ ನೀವು ಯಾವ ನ್ಯಾಯ ಬೆಲೆ ಅಂಗಡಿಯಲ್ಲಿ ಇದುವರೆಗೆ ರೇಷನ್ ತೆಗೆದುಕೊಳ್ಳುತ್ತಿದ್ದೀರಿ ಇ ಅಂಗಡಿಗಳಿಗೆ ಹೋಗಿ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ರೇಷನ್ ಕಾರ್ಡ್ ಪ್ರತಿ ನೀಡಿ ಬರಬೇಕು. ಇವುಗಳು ಸರಿಯಾಗಿದೆಯೇ ಎಂದು ಇಂದೇ ಚೆಕ್ ಮಾಡಿಕೊಳ್ಳಿ, ಒಂದು ವೇಳೆ ವ್ಯತ್ಯಾಸವಿದ್ದರೆ ಸರಿಪಡಿಸಿಕೊಳ್ಳಿ, ಇಲ್ಲವಾದಲ್ಲಿ ಅಕ್ಕಿ ಹಣ ಕೈ ತಪ್ಪಬಹುದು.