ಕರ್ನಾಟಕ ರಾಜ್ಯ ಸರ್ಕಾರದ (Government) ಗ್ಯಾರಂಟಿ ಕಾರ್ಡ್ ಯೋಜನೆಗಳ (Gyarantee Scheme) ಪೈಕಿ ಅನ್ನಭಾಗ್ಯ ಯೋಜನೆ (Annabhagya Scheme) ಕೂಡ ಒಂದು. ಅನ್ನ ಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ (Below poverty line families) ಸದಸ್ಯರಿಗೆ ನೀಡುವ ಪಡಿತರವನ್ನು 10KG ಗೆ ಏರಿಸಲಾಗುವುದು ಎಂದು ಭರವಸೆಯನ್ನು ನೀಡಿದ ಕಾಂಗ್ರೆಸ್ ಪಕ್ಷವು ಅಂತೆಯೇ ಸರ್ಕಾರ ಸ್ಥಾಪನೆ ಆದಮೇಲೆ ಪ್ರತಿ ಸದಸ್ಯನಿಗೂ 10KG ಪಡಿತರ ನೀಡುವುದಕ್ಕೆ ಪ್ರಯತ್ನ ಪಟ್ಟಿದೆ.
ಆದರೆ ದಾಸ್ತಾನು ಕೊರತೆ ಕಾರಣದಿಂದಾಗಿ ಪಡಿತರ ನೀಡಲು ಸಾಧ್ಯವಾಗದ ಕಾರಣ ಅಕ್ಕಿ ಲಭ್ಯವಾಗುವವರೆಗೂ ಕೂಡ ಎಂದಿನಂತೆ 5KG ಅಕ್ಕಿ ಹಾಗೂ ಉಳಿದ 5KG ಅಕ್ಕಿ ಬದಲಿಗೆ 34 ರೂಪಾಯಿಯಂತೆ ಒಬ್ಬ ಸದಸ್ಯನಿಗೆ 170 ಕುಟುಂಬದ ಮುಖ್ಯಸ್ಥರ ಖಾತೆಗೆ (head of the family account) ವರ್ಗಾವಣೆ ಮಾಡುತ್ತಿದೆ.
ಗೃಹಲಕ್ಷ್ಮೀ ಯೋಜನೆಯ ಹೊಸ ರೂಲ್ಸ್, ಆಗಸ್ಟ್ 30 ಕ್ಕೆ ಹಣ ಬರಬೇಕು ಎಂದರೆ ಈ ಕೆಲಸ ಕಡ್ಡಾಯ.!
ಈಗಾಗಲೇ ಜುಲೈ ತಿಂಗಳಿನ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣವು ಪಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿದೆ. ಆದರೆ ಅನೇಕರು ಅನ್ನಭಾಗ್ಯ ಯೋಜನೆಗೆ ಅರ್ಹತೆ ಪಡೆದಿದ್ದರು ಕೂಡ ಅವರ ಬ್ಯಾಂಕ್ ಖಾತೆ ಮಾಹಿತಿಗಳಲ್ಲಿ ಹೊಂದಾಣಿಕೆಯಾಗದ ಕಾರಣ ಅಥವಾ ಇನ್ನಿತರ ಸಮಸ್ಯೆಗಳಾಗಿರುವ ಕಾರಣ ಅವರಿಗೆ ಅನ್ನ ಭಾಗ್ಯ ಯೋಜನೆಯ ಹಣ ತಲುಪಿಲ್ಲ.
ಈಗ ಸರ್ಕಾರ ಆಗಸ್ಟ್ ಕಂತಿನ (August month Annabhagya amount) ಅನ್ನಭಾಗ್ಯ ಯೋಜನೆಯ ಹಣವನ್ನು ಸರ್ಕಾರ ಜಮೆ ಮಾಡಿದೆ. ಕಳೆದ ತಿಂಗಳು ವಂಚಿತರಾದವರು ಯಾವ ಕಾರಣದಿಂದ ಹಣ ಬಂದಿಲ್ಲ ಎಂದು ತಿಳಿದುಕೊಂಡು ಆ ಸಮಸ್ಯೆಯನ್ನು ಸರಿಪಡಿಸಿಕೊಂಡಿದ್ದರು. ಹಾಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಕಳೆದ ತಿಂಗಳಿಗಿಂತ ಈ ತಿಂಗಳಲ್ಲಿ ಇನ್ನು ಹೆಚ್ಚಿನ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎನ್ನುವ ಮಾಹಿತಿ ಹಂಚಿಕೊಂಡಿದ್ದರು.
ಆಸ್ತಿ ಖರೀದಿ & ಮಾರಾಟ ಮಾಡುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.!
ಅಂತೆಯೇ ನೀವೀಗ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆದಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆದ ಕೂಡಲೇ ಜಮೆ ಆಗಿರುವ ಕುರಿತು SMS ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ. ಒಂದು ವೇಳೆ ಈ ರೀತಿ ಆಗಿಲ್ಲ ಎಂದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು DBT ಸ್ಟೇಟಸ್ ಪರಿಶೀಲನೆ ಮಾಡಿ ನೋಡಿ.
ಇದರಲ್ಲಿ ಪಾವತಿ ಪ್ರಕ್ರಿಯೆಯಲ್ಲಿದೆ ಎಂದು ಬಂದಿದ್ದರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದು ಅರ್ಥ. ಆದರೆ ಅನೇಕರಿಗೆ ಬ್ಯಾಂಕ್ ಖಾತೆಯಲ್ಲಿ ಆಗಿರುವ ಸಮಸ್ಯೆ ಕುರಿತು ಆಧಾರ್ ಅಥೆಂಟಿಕೇಷನ್ ಸಮಸ್ಯೆ ಆಗಿರುವ ಕುರಿತು ಘೋಷಣೆ ಬಂದಿದೆ. ನೀವು DBT ಸ್ಟೇಟಸ್ ಚೆಕ್ ಮಾಡಿದಾಗ ಅದರಲ್ಲಿ ರೇಷನ್ ಕಾರ್ಡ್ ಡೇಟಾವನ್ನು ಆಧಾರ್ ಧೃಡೀಕರಣ ಪರಿಶೀಲನೆ ಮತ್ತು NPCI ಧೃಡೀಕರಣ ಪರಿಶೀಲನೆಗೆ ಕಳುಹಿಸಲಾಗಿತ್ತು ಆದರೆ ವಿಫಲವಾಗಿದೆ ಎನ್ನುವ ಘೋಷಣೆ ಬಂದಿದ್ದರೆ.
ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!
NPCI ಚೆಕ್ ವಿಫಲವಾಗಿದೆ ಎಂದು ಘೋಷಣೆ ಬಂದಿದ್ದರೆ ಅವರಿಗೆ ಅನ್ನಭಾಗ್ಯ ಯೋಜನೆ ಹೆಚ್ಚುವರಿ ಅಕ್ಕಿ ಹಣ ಈ ತಿಂಗಳೂ ಕೂಡ ಬರುವುದಿಲ್ಲ. ತಪ್ಪದೆ ಅವರು ಬ್ಯಾಂಕ್ ಖಾತೆಗಳಿಗೆ ಹೋಗಿ ಆಧಾರ್ ಲಿಂಕಿಂಗ್ ಮತ್ತು NPCI ಮ್ಯಾಪಿಂಗ್ ಗಾಗಿ ಅರ್ಜಿ ಸಲ್ಲಿಸಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು. ಆಗ ಮಾತ್ರ ಅವರಿಗೆ ಮುಂದಿನ ತಿಂಗಳಾದರೂ ಹಣ ಬರುತ್ತದೆ.