ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ಸಾಕು ಖಂಡಿತ ಹಣ ಜಮೆ ಆಗುತ್ತೆ. ಸರ್ಕಾರದಿಂದ ಬಿಡುಗಡೆಯಾಯ್ತು ಹೊಸ ಮಾರ್ಗಸೂಚಿ.!

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ (Karnataka government) ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಒಂದಾದ ಅನ್ನಭಾಗ್ಯ (Annabhagya) ಯೋಜನೆಯು ಜುಲೈ ತಿಂಗಳಿನಿಂದ ಜಾರಿಯಾಗಿದೆ. ಅನ್ನಭಾಗ್ಯ ಯೋಜನೆಯಡಿ ಉಚಿತ ಪಡಿತರವನ್ನು ಪ್ರತಿ ಸದಸ್ಯನಿಗೆ 10Kg ನೀಡಲಾಗುವುದು ಎಂದು ಚುನಾವಣೆ ಪ್ರಣಾಳಿಕೆ ವೇಳೆ ಕಾಂಗ್ರೆಸ್ ಪಕ್ಷವು ಹೇಳಿತ್ತು.

ಆದರೆ ದಾಸ್ತಾನು ಲಭ್ಯವಾಗದ ಕರಣ ಎಂದಿನಂತೆ ಪ್ರತಿ ಸದಸ್ಯನಿಗೆ ಕೇಂದ್ರದಿಂದ ಸಿಗುವ 5kg ಅಕ್ಕಿ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲಿಗೆ 170 ರೂಪಾಯಿಯನ್ನು ಕುಟುಂಬದ ಮುಖ್ಯಸ್ಥನ (Head of the family) ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದೆ. ಈ ಪ್ರಕಾರವಾಗಿ ಜುಲೈ ತಿಂಗಳಲ್ಲಿ ರಾಜ್ಯದ 1.28 ಕೋಟಿ ಪಡಿತರ ಚೀಟಿಯ (Ration Card) 4.42. ಕೋಟಿ ಫಲಾನುಭವಿಗಳು ಹಣ ಪಡೆಯಲು ಅರ್ಹರಾಗಿದ್ದರು.

ವಾಹನ ಚಾಲಕ (ಡ್ರೈವರ್) ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ. 7ನೇ ತರಗತಿ ಆಗಿದ್ರೆ ಸಾಕು ವೇತನ ₹42,000/- ಆಸಕ್ತರು ಅರ್ಜಿ ಸಲ್ಲಿಸಿ.!

ಆದರೆ ಇವರಲ್ಲಿ ಈವರೆಗೆ 3.50 ಕೋಟಿ ಫಲಾನುಭವಿಗಳು ಮಾತ್ರ ಹಣ ಪಡೆದಿದ್ದಾರೆ. ನೀವು ಅನ್ನಭಾಗ್ಯ ಯೋಜನೆಗೆ ಅರ್ಹರಾಗಿದ್ದು ಇದುವರೆಗೂ ಕೂಡ ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಆಗಿಲ್ಲ ಎಂದರೆ ಮುಂದಿನ ತಿಂಗಳು ಕೂಡ ನೀವು ಅನ್ನ ಭಾಗ್ಯ ಯೋಜನೆ ಹಣದಿಂದ ವಂಚಿತರಾಗುವ ಸಾಧ್ಯತೆ ಇದೆ. ಹಾಗಾಗಿ ಈ ಕೂಡಲೇ ನಾವು ಹೇಳುವ ವಿಧಾನದ ಪ್ರಕಾರ ನಿಮ್ಮ ಸಮಸ್ಯೆ ಏನಾಗಿದೆ ಎಂಬುದನ್ನ ತಿಳಿದುಕೊಂಡು ಪರಿಹಾರ ಮಾಡಿಕೊಳ್ಳಿ.

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಲು ಈ ಮೂರು ದಾಖಲೆಗಳು ಸರಿ ಇಡಬೇಕು.

1. ಪಡಿತರ ಚೀಟಿಯಲ್ಲಿ ಇರುವ ಮುಖ್ಯಸ್ಥನ ಹೆಸರಲ್ಲಿ ಬ್ಯಾಂಕ್ ಅಕೌಂಟ್ ಇರಬೇಕು, ಮುಖ್ಯಸ್ಥರ ಸ್ಥಾನದಲ್ಲಿ ಆ ಕುಟುಂಬದ ಮಹಿಳೆ ಇರಬೇಕು.
2. ನಿಮ್ಮ ರೇಷನ್ ಕಾರ್ಡ್ ಗೆ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್  ಲಿಂಕ್ ಆಗಿರಬೇಕು ಮತ್ತು e-kyc update ಆಗಿರಬೇಕು.
3. ನಿಮ್ಮ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿ, NPCI mapping ಆಗಿರಬೇಕು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ಮೊಬೈಲ್ ಮೂಲಕವೇ ನಿಮ್ಮ ಅರ್ಜಿ ಅಪ್ರೂವ್ ಆಗಿದಿಯೇ ಅಥವಾ ರಿಜೆಕ್ಟ್ ಆಗಿದಿಯೋ ಎಂದು ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಈಗ ನೀವು ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ನಾವು ಹೇಳುವ ವಿಧಾನವನ್ನು ಅನುಸರಿಸಿ ನಿಮ್ಮ ಪಡಿತರ ಚೀಟಿಯು ಅನ್ನಭಾಗ್ಯ ಯೋಜನೆಗೆ ಅರ್ಹವಾಗಿದೆಯೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು. ಒಂದು ವೇಳೆ ಹಣ ವರ್ಗಾವಣೆ ಆಗಿದ್ದರೆ ಕುಟುಂಬದ ಮುಖ್ಯಸ್ಥರ ಹೆಸರು, ಅವರ ಕಡೆಯ ನಾಲ್ಕು ಆಧಾರ್ ಸಂಖ್ಯೆ, ಅವರ ಯಾವ ಬ್ಯಾಂಕ್ ಖಾತೆಗೆ ಹಣ ಯಾವ ದಿನಾಂಕದಂದು ವರ್ಗಾವಣೆ ಆಗಿದೆ, ಎಷ್ಟು ಅಕ್ಕಿಗೆ ಕಾರ್ಡ್ ಅರ್ಹವಾಗಿದೆ ಮತ್ತು ಎಷ್ಟು ಹಣ ವರ್ಗಾವಣೆ ಆಗಿದೆ ಎನ್ನುವ ಮಾಹಿತಿ ಬರುತ್ತದೆ.

ಒಂದು ವೇಳೆ ಹಣ ವರ್ಗಾವಣೆಗೆ ಅರ್ಹವಾಗಿದ್ದು ಏನೇ ಸಮಸ್ಯೆಗಳಾಗಿದ್ದರು ಅದಕ್ಕೆ ಸಂಬಂಧಿಸಿದಂತೆ ಘೋಷಣೆ ಕೂಡ ಬಂದಿರುತ್ತದೆ. ಅದನ್ನು ನೋಡಿ ಆ ಸಮಸ್ಯೆ ಪರಿಹಾರ ಮಾಡಿಕೊಂಡರೆ ಮುಂದಿನ ತಿಂಗಳು ಹಣ ಬರುತ್ತದೆ.

ಸ್ವಂತ ಕಾರು ಇದ್ದವರಿಗೆ ಮಾತ್ರವಲ್ಲ, ಇನ್ಮುಂದೆ ಇಂಥವರಿಗೂ ಕೂಡ ರೇಷನ್ ಕಾರ್ಡ್ ಸಿಗುವುದಿಲ್ಲ ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!

ಅನ್ನಭಾಗ್ಯ ಯೋಜನೆಯ ಸ್ಟೇಟಸ್ (Annabhagya Status Check) ಚೆಕ್ ಮಾಡುವ ವಿಧಾನ:-

● ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ (Food and civil supply department) ವೆಬ್ಸೈಟ್ ಆದ
https://ahara.kar.nic.in/Home/Eservices ಭೇಟಿಕೊಡಿ.
● ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ.
● ಅದರಲ್ಲಿ e-services ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ, DBT Status ಮೇಲೆ ಕ್ಲಿಕ್ ಮಾಡಿ.

● ನಿಮ್ಮ ಜಿಲ್ಲೆಯ ಲಿಂಕ್ ಕ್ಲಿಕ್ ಮಾಡಿ.
● ಮತ್ತೊಂದು ಪೇಜ್ ಓಪನ್ ಆಗುತ್ತದೆ ಕೊನೆಯಲ್ಲಿ DBT Status ಆಪ್ಷನ್ ಇರುತ್ತದೆ ಕ್ಲಿಕ್ ಮಾಡಿ.
● ಆಹಾರ ಇಲಾಖೆಯ ಅಫಿಷಿಯಲ್ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ RD Num ನಮೂದಿಸಿ. ನಂತರ Go ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಈ ಮೇಲೆ ತಿಳಿಸಿದಂತೆ ಹಣ ಜಮೆ ಆಗಿರುವ ಕಂಪ್ಲೀಟ್ ಡೀಟೇಲ್ಸ್ ಬರುತ್ತದೆ.

ಸರ್ಕಾರಿ ಜಾಗದಲ್ಲಿ ಮನೆ, ಅಂಗಡಿ ನಿರ್ಮಿಸಿಕೊಂಡಿದ್ದವರಿಗೆ ಹೊಸ ರೂಲ್ಸ್ ಜಾರಿ.!

● ಅನ್ನಭಾಗ್ಯ ಯೋಜನೆಯಡಿಯಲ್ಲಿನ ಹಣವು ನಿಮಗೆ ಜಮಾ ಆಗಿದೆಯೇ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಈ ರೀತಿ ಚೆಕ್ ಮಾಡಬಹುದು. ಹಣ ವರ್ಗಾವಣೆ ಆಗಲು ಸಮಸ್ಯೆ ಇದ್ದಲ್ಲಿ ಆಹಾರ ಇಲಾಖೆಯ ಘೋಷಣೆ ಇರುತ್ತದೆ ಅದರ ಪ್ರಕಾರ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬೇಕು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now