ನರೇಂದ್ರ ಮೋದಿಯವರು (PM Narendra Modi) ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ದೇಶದ ನಾಗರಿಕರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲೂ ಪ್ರತಿಯೊಂದು ವರ್ಗವನ್ನು ಕೂಡ ಗುರುತಿಸಿ ಅನುಕೂಲ ಆಗುವಂತಹ ಯೋಜನೆಗಳನ್ನು ಜಾರಿಗೆ ತಂದಿರುವುದು ಸ್ಮರಣೀಯ ಎಂದೇ ಹೇಳಬಹುದು.
ಎಲ್ಲಾ ನಾಗರಿಕರಿಗೂ ಅನ್ವಯವಾಗುವಂತಹ ಸಾಕಷ್ಟು ಯೋಜನೆಗಳ ಜೊತೆಗೆ ರೈತರಿಗಾಗಿ ಪ್ರತ್ಯೇಕವಾದ ಯೋಜನೆಗಳು, ಕಾರ್ಮಿಕರಿಗಾಗಿ, ವಿದ್ಯಾರ್ಥಿಗಳಿಗಾಗಿ ಮಹಿಳೆಯರಿಗಾಗಿ ಹೀಗೆ ಆಯ ವರ್ಗಕ್ಕೆ ಪ್ರತ್ಯೇಕ ಯೋಜನೆಗಳ ಕೊಡುಗೆ ಕೊಟ್ಟಿದ್ದಾರೆ. ಈ ಹಾದಿಯಲ್ಲಿ ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರುವ ಕುಟುಂಬಗಳಿಗೆ ತಮ್ಮ ಕೌಶಲ್ಯ ಅಭಿವೃದ್ಧಿ ಪಡಿಸಿಕೊಂಡು ಅದನ್ನು ಉತ್ತಮವಾಗಿ ಮುಂದುವರಿಸಿಕೊಂಡು ಹೋಗುವುದಕ್ಕೆ ಅನುಕೂಲವಾಗುವಂತಹ ಯೋಜನೆಯನ್ನು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಪರಿಚಯಿಸಿದ್ದಾರೆ.
ದೇಶದಲ್ಲಿ ಮೊದಲಿಗೆ ಬಾರಿಗೆ ಸೆಪ್ಟೆಂಬರ್ 2023ರಲ್ಲಿ ವಿಶ್ವಕರ್ಮ ಜಯಂತಿಯನ್ನು (Vishwakarma Jayanthi) ಬಹಳ ವಿಶೇಷವಾಗಿ ಆಚರಿಸಿದ ಪ್ರಧಾನಿಗಳು ವಿಶ್ವಕರ್ಮ ಯೋಜನೆ (Vishwakarma Yojane) ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದ್ದರು. ಈ ಯೋಜನೆಯ ಮೂಲಕ ಕಮ್ಮಾರ, ನೇಕಾರ, ಕುಂಬಾರ, ಬಡಗಿ ದರ್ಜಿ ಸೇರಿದಂತೆ.
ಈ ಸುದ್ದಿ ಓದಿ:- ಖಾಸಗಿ & ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ.! EPF ಬಡ್ಡಿದರ ಶೇ 8.25 ಏರಿಕೆ.!
18ಕ್ಕೂ ಹೆಚ್ಚು ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರುವವರು ವಿಶ್ವಕರ್ಮ ಯೋಜನೆಯಡಿ ಉಚಿತ ತರಬೇತಿ, ಟೂಲ್ ಕಿಟ್ ಖರೀದಿಗೆ ಸಹಾಯಧನ ಮತ್ತು ಕಡಿಮೆ ಬಡ್ಡಿದಲ್ಲಿ ಗರಿಷ್ಠ 2 ಲಕ್ಷದ ವರೆಗೂ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು. ಕೇಂದ್ರ ಸರ್ಕಾರವು ಬಹಳ ದೊಡ್ಡ ಮೊತ್ತದ ಬಜೆಟ್ ನ್ನು ವಿಶ್ವಕರ್ಮ ಯೋಜನೆಗಾಗಿ ಮೀಸಲಿಟ್ಟಿದೆ ಮತ್ತು ಈಗಾಗಲೇ ವಿಶ್ವಕರ್ಮ ಯೋಜನೆಗೆ ಅರ್ಜಿ ಕೂಡ ಆಹ್ವಾನಿಸಲಾಗುತ್ತಿದೆ.
ಈ ಯೋಜನೆಗೆ ಅರ್ಹರಾಗಿರುವ ದೇಶದ ಲಕ್ಷಾಂತರ ಜನರು ಹೇಗೆ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆಗಳನ್ನು ಕೊಡಬೇಕು? ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಯೋಜನೆಯ ಹೆಸರು:- ವಿಶ್ವಕರ್ಮ ಯೋಜನೆ
ಸಿಗುವ ಸೌಲಭ್ಯ:-
* ಈ ಯೋಜನೆಯಡಿ ಕೌಶಲ್ಯ ತರಭೇತಿಗೆ 5 ದಿನಗಳ ತರಬೇತಿ ನೀಡಿ ಪ್ರತಿದಿನ 500 ರೂ. ತರಬೇತಿ ಭತ್ಯೆ ನೀಡಲಾಗುತ್ತದೆ.
* ತರಬೇತಿ ಮುಗಿದ ನಂತರ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಿದವರಿಗೆ ಆಧುನಿಕ ಉಪಕರಣಗಳನ್ನು ಖರೀದಿಸಲು ರೂ.15,000 ಪ್ರೋತ್ಸಾಹ ಧನ ನೀಡಲಾಗುತ್ತದೆ.
* ಪ್ರಧಾನಿ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ಅರ್ಜಿ ಸಲ್ಲಿಸಿ ಅರ್ಹರು ಮೊದಲನೇ ಕಂತಿನಲ್ಲಿ 5% ಬಡ್ಡಿಯಲ್ಲಿ ರೂ. 1 ಲಕ್ಷ ಸಾಲ ಪಡೆದುಕೊಳ್ಳಬಹುದು.
* ಎರಡನೇ ಕಂತಿನಲ್ಲಿ 2 ಲಕ್ಷ ರೂ. ಸಾಲವನ್ನು 5% ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುತ್ತದೆ.
ಅರ್ಹತೆಗಳು:-
* ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಕುಶಲಕರ್ಮಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.
* ಯೋಜನೆ ಅರ್ಜಿ ಸಲ್ಲಿಸುವವರ ವಯಸ್ಸು 18 ವರ್ಷ ದಾಟಿರಬೇಕು.
* ಯೋಜನೆಗೆ ಗುರುತಿಸಲಾಗಿರುವ 18 ಬಗೆಯ ವ್ಯಕ್ತಿಗಳಲ್ಲಿ ಯಾವುದಾದರು ಒಂದರಲ್ಲಿ ತೊಡಗಿಕೊಂಡಿರಬೇಕು.
* ಮುಖ್ಯವಾಗಿ ಅರ್ಜಿ ಸಲ್ಲಿಸುವವರು ವ್ಯಾಪಾರದ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಯೋಜನೆಗಳ ಅಡಿಯಲ್ಲಿ ಸಾಲಾವನ್ನು ಪಡೆದಿರಬಾರದು.
ಅರ್ಜಿ ಸಲ್ಲಿಸುವ ವಿಧಾನ:-
* www.pmvishwakarma.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಹರು ವಿಶ್ವಕರ್ಮ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.
* ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಯಾವುದೇ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು
ಬೇಕಾಗುವ ದಾಖಲೆಗಳು:-
* ರೇಷನ್ ಕಾರ್ಡ್
* ಆಧಾರ್ ಕಾರ್ಡ್
* ಆದಾಯ ಪ್ರಮಾಣಪತ್ರ
* ಬ್ಯಾಂಕ್ ಪಾಸ್ ಬುಕ್ ವಿವರ
* ವೃತ್ತಿಪರ ಎಂದು ಧೃಡಿಕರಿಸಲ್ಪಟ್ಟ ಪ್ರಮಾಣ ಪತ್ರಗಳು
* ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು.