ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಮೊದಲನೇ ಗ್ಯಾರಂಟಿ ಕಾರ್ಡ್ ಯೋಜನೆ ಗೃಹಜ್ಯೋತಿ ಯೋಜನೆ. ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಧ್ಯೇಯದಿಂದ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದ ಸರ್ಕಾರವು ಜುಲೈ ತಿಂಗಳಿಂದ ಇದನ್ನು ಅನುಷ್ಠಾನಕ್ಕೆ ತರುತ್ತಿದೆ.
ಅಂದರೆ ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಜುಲೈ ತಿಂಗಳಿನಲ್ಲಿ ಆ ಕುಟುಂಬ ಬಳಸುವ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಲ್ಲಿ ಪಾವತಿ ಮಾಡುತ್ತಿದ್ದ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ, ಸರ್ಕಾರವೇ ಅದನ್ನು ಭರಿಸುವುದಾಗಿ ಒಪ್ಪಿಕೊಂಡಿದೆ. ಇದಕ್ಕಾಗಿ ಜೂನ್ 17ನೇ ತಾರೀಖಿನಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ, ವಿದ್ಯುತ್ ಇಲಾಖೆಗಳಲ್ಲಿ ಆಫ್ ಲೈನ್ನಲ್ಲಿ ಕೂಡ ಅರ್ಜಿ ಸಲ್ಲಿಸಲು ಸರ್ಕಾರ ಸೂಚಿಸಿದೆ.
ಕರ್ನಾಟಕದಲ್ಲಿ ಒಂದು ಕೋಟಿಗೂ ಹೆಚ್ಚು ಅರ್ಜಿಗಳು ಗೃಹಜೋತಿ ಯೋಜನೆಗೆ ಸಲ್ಲಿಕೆ ಆಗಿವೆ. ಆರಂಭದ ದಿನಗಳಲ್ಲಿ ಸಾಕಷ್ಟು ತಾಂತ್ರಿಕ ದೋಷ ಉಂಟಾಗಿದ್ದ ಕಾರಣ ಈ ಅರ್ಜಿಗಳಲ್ಲಿ ಹಲವು ಅರ್ಜಿಗಳು ಯೋಜನೆಗೆ ಲಿಂಕ್ ಆಗಿಲ್ಲ ಎನ್ನುವ ಮಾಹಿತಿ ತಿಳಿದು ಬಂದಿದೆ. ಗೃಹಜೋತಿ ಯೋಜನೆಗೆ ಆರಂಭದ ದಿನಗಳಲ್ಲಿ ಸರ್ವ ಡೌನ್ ಇತ್ತು ಹಾಗಾಗಿ ತಾಂತ್ರಿಕ ಸಮಸ್ಯೆ ಆಗಿದೆ ಎನ್ನುವ ಮಾತು ಇಲಾಖೆಯಿಂದ ಕೇಳಿ ಬರುತ್ತಿದೆ.
ಯೋಜನೆಗೆ ಅರ್ಜಿ ಆಹ್ವಾನ ಮಾಡಿದ ಆರಂಭದ ಮೂರ್ನಾಲ್ಕು ದಿನಗಳಲ್ಲಿ ಸಾಕಷ್ಟು ಅರ್ಜಿಗಳು ಒಮ್ಮೆಲೇ ಅಪ್ಲೈ ಆಗಿದ್ದವು. ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಗ್ರಾಮ ಒನ್ ಕೇಂದ್ರಗಳ ಮೂಲಕ CSC ಸೆಂಟರ್ ಗಳ ಮೂಲಕ ಮತ್ತು ಹೆಚ್ಚಿನವರು ಮೊಬೈಲ್ ಹಾಗೂ ಪರ್ಸನಲ್ ಕಂಪ್ಯೂಟರ್ ಮೂಲಕ ಕೂಡ ಅರ್ಜಿ ಸಲ್ಲಿಸಿದ್ದರು. ಒಮ್ಮೆಲೇ ಸರ್ವರ್ ಮೇಲೆ ಒ’ತ್ತ’ಡ ಬಿದ್ದ ಕಾರಣದಿಂದಾಗಿ ಆರಂಭದಲ್ಲಿ ಹಲವಾರು ಬಾರಿ ಸರ್ವರ್ ಸಮಸ್ಯೆ ಆಗಿತ್ತು.
ಹಾಗಾಗಿ ಹಲವು ಫಲಾನುಭವಿಗಳ ಅರ್ಜಿಗಳು ತಿರಸ್ಕೃತಗೊಂಡಿದೆ ಎನ್ನುವ ಮಾಹಿತಿ ಇದೆ. ನಿಮ್ಮ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಶಸ್ವಿಯಾಗಿಲ್ಲ ಎಂದರೆ ಅಂತವರಿಗೆ ಜುಲೈ ತಿಂಗಳ ಫಲಾನುಭವಿಗಳು ಆಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿದವರೆಲ್ಲಾ ಶಾ’ಕ್ ಗೆ ಒಳಗಾಗಿದ್ದಾರೆ.
ಜುಲೈ 25ರವರೆಗೂ ಅರ್ಜಿ ಸಲ್ಲಿಸಲು ಅನುಮತಿ ನೀಡಿರುವುದರಿಂದ ಆಗಸ್ಟ್ ತಿಂಗಳಿನಲ್ಲಿ ನೀವು ವಿದ್ಯುತ್ ಬಿಲ್ ಕಟ್ಟಬಾರದು ಎಂದರೆ ಈಗ ಮತ್ತೊಮ್ಮೆ ನೀವು ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಬೇಕು. ಒಂದು ವೇಳೆ ಅರ್ಜಿ ಸಲ್ಲಿಸುವ ವೇಳೆ ಈಗಾಗಲೇ ನಿಮ್ಮ ಸಲಿಕೆ ಆಗಿದೆ ಎನ್ನುವ ಘೋಷಣೆ ವಿದ್ಯುತ್ ಇಲಾಖೆಯಿಂದ ಬಂದರೆ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿ ಪೂರ್ತಿ ಆಗಿದೆ ಎಂದರ್ಥ. ಅರ್ಜಿ ಸಲ್ಲಿಕೆ ಆಗಿಲ್ಲ ಎಂದರೆ ಮುಂದಿನ ಹಂತಕ್ಕೆ ಹೋಗಿ ಪೂರ್ತಿಗೊಳಿಸಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯಿರಿ.
ಈಗಾಗಲೇ ನೀವು ಸ್ವೀಕೃತಿ ಪತ್ರವನ್ನು ಪಡೆದಿದ್ದರೆ ಮತ್ತೊಮ್ಮೆ ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಿ, ಯೋಜನೆಯ ಸ್ಟೇಟಸ್ ಚೆಕ್ ಮಾಡುವ ಆಯ್ಕೆಯಲ್ಲಿ ನಿಮ್ಮ ರೆಫರೆನ್ಸ್ ನಂಬರ್ ಹಾಕಿ ನಿಮ್ಮ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವ ಸ್ಥಿತಿಯಲ್ಲಿ ಇದೆ ಎಂದು ಪರೀಕ್ಷಿಸಿಕೊಳ್ಳಿ. ಒಂದು ವೇಳೆ ಅರ್ಜಿ ಸಲ್ಲಿಕೆ ಆಗಿಲ್ಲ ಎನ್ನುವುದು ತಿಳಿದು ಬಂದರೆ ತಪ್ಪದೇ ತಕ್ಷಣವೇ ಅರ್ಜಿ ಸಲ್ಲಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.