ಸರ್ಕಾರದಿಂದ ಅನ್ನಭಾಗ್ಯ ಯೋಜನೆ ಹಣ ಜಮೆ ಆಗಿದೆ. ನಿಮ್ಮ ಖಾತೆಗೆ ಹಣ ಬಂದಿದಿಯೇ ಇಲ್ಲವೇ ಎಂದು ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ…!

 

ಅನ್ನಭಾಗ್ಯ ಯೋಜನೆ ಅಡಿ ನೀಡುವ ಪಡಿತರವನ್ನು 10Kg ಗೆ ಏರಿಸಲಾಗುವುದು ಎಂದು ಚುನಾವಣೆಗೂ ಪೂರ್ವವಾಗಿ ಕಾಂಗ್ರೆಸ್ ಪಕ್ಷ ಹೇಳಿತ್ತು, ಅಂತೆಯೇ ಅಧಿಕಾರಕ್ಕೆ ಬಂದಮೇಲೆ ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದೆ. ಅಕ್ಕಿ ದಾಸ್ತಾನು ಲಭ್ಯವಾಗದ ಕಾರಣ ಎಂದಿನಂತೆ 5Kg ಪಡಿತರ ಹಾಗೂ ಹೆಚ್ಚುವರಿ 5 kg ಅಕ್ಕಿ ಬದಲಾಗಿ 34 ರೂಪಾಯಿಯಂತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿಯೊಬ್ಬ ಫಲಾನುಭವಿಗೂ ಕೂಡ 170 ರೂಗಳನ್ನು ಜಮೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

ಈ ಹಣವು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರಾಗಿರುವ ಬ್ಯಾಂಕ್ ಖಾತೆಗೆ ಬಂದು ಸೇರುತ್ತದೆ. ಜುಲೈ 10ರಂದು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಸಚಿವರು ಅನ್ನ ಭಾಗ್ಯ ಯೋಜನೆಯ ಹಣ ವರ್ಗಾವಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅಂದಿನಿಂದ ಜಿಲ್ಲಾವಾರು ಎಲ್ಲಾ ಫಲಾನುಭವಿಗಳ ಖಾತೆಗೂ ಹಣ ತಲುಪಿದೆ.

ನೀವು ಕೂಡ BPL ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದ್ದರೆ ನಿಮ್ಮ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೋ ಅಷ್ಟು ಲೆಕ್ಕದಲ್ಲಿ ಒಬ್ಬರಿಗೆ 170ರಂತೆ ನಿಮ್ಮ ಖಾತೆಗೆ ಹಣ ಜಮೆ ಆಗಿರುತ್ತದೆ. ಇದಕ್ಕೆ ಯಾವುದೇ ಅರ್ಜಿಯನ್ನು ಸರ್ಕಾರ ಆಹ್ವಾನ ಮಾಡಿರಲಿಲ್ಲ, ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೋ ಆ ಬ್ಯಾಂಕ್ ಗೆ DBT ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ನಿಮಗೆ ನಿಮ್ಮ ಖಾತೆಗೆ ಹಣ ಜಮೆ ಆಗಿದಿಯೋ ಇಲ್ಲವೋ ಎನ್ನುವ ಗೊಂದಲ ಇದ್ದರೆ ಈಗ ನಾವು ಹೇಳುವ ಈ ವಿಧಾನದ ಮೂಲಕ ನಿಮ್ಮ ಆಂಡ್ರಾಯ್ಡ್ ಫೋನ್ ಅಲ್ಲಿಯೇ ಚೆಕ್ ಮಾಡಿ ನೋಡಬಹುದು.

● ಮೊದಲಿಗೆ ನಿಮ್ಮ ಮೊಬೈಲ್ ಫೋನ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ, DBT ಕರ್ನಾಟಕ ಎನ್ನುವ ಕರ್ನಾಟಕ ಸರ್ಕಾರದ ಆಪ್ ಇರುತ್ತದೆ. ಅದನ್ನು ಸರ್ಚ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ.
● ಡೌನ್ಲೋಡ್ ಆದ ಮೇಲೆ ಆಪ್ ಓಪನ್ ಮಾಡಿ ಕೆಲವು ಪರ್ಮಿಷನ್ಗಳನ್ನು ಕೇಳಲಾಗಿರುತ್ತದೆ, ಆ ಎಲ್ಲಾ ಪರ್ಮಿಷನ್ ಗಳಿಗೂ allow ಕೊಡಿ.

● ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಕೇಳಲಾಗುತ್ತದೆ, ಆಧಾರ್ ಸಂಖ್ಯೆ ಫಿಲ್ ಮಾಡಿ ಕೆಳಗೆ ಚೆಕ್ ಬಾಕ್ಸ್ ಅಲ್ಲಿ ಘೋಷಣೆ ಇರುತ್ತದೆ ಅದನ್ನು ಓದಿ ರೈಟ್ ಮಾರ್ಕ್ ಕ್ಲಿಕ್ ಮಾಡಿ OTP ಮೇಲೆ ಕ್ಲಿಕ್ ಮಾಡಿದಾಗ OTP ವೆರಿಫೈ ಆಗುತ್ತದೆ.
● ನಂತರ M.pin ಕೇಳುತ್ತದೆ ಅಂದರೆ ನೀವು ಆಪ್ ಓಪನ್ ಮಾಡುವುದಕ್ಕೆ ಪಾಸ್ವರ್ಡ್ ಸೆಟ್ ಮಾಡಿಕೊಳ್ಳಬೇಕು, ಅದನ್ನು ಕನ್ಫರ್ಮ್ ಮಾಡಿ ಸಬ್ಮಿಟ್ ಕೊಡಿ.

● ನೀವು ಕೊಟ್ಟಿರುವ ಮಾಹಿತಿ ಸರಿ ಇದ್ದರೆ ನಿಮ್ಮ ವಿವರಗಳೆಲ್ಲವೂ ಬರುತ್ತದೆ. ಅದನ್ನು ಮತ್ತೊಮ್ಮೆ ಪರಿಶೀಲಿಸಿ ಮೊಬೈಲ್ ಸಂಖ್ಯೆಯನ್ನು ಕೇಳಲಾಗಿರುತ್ತದೆ, ಅದನ್ನು ಕೂಡ ನಮೂದಿಸಿ. ಈಗ ಸಕ್ಸಸ್ಫುಲ್ ಆಪ್ ಬಳಸುವುದಕ್ಕೆ ಸಾಧ್ಯವಾಗುತ್ತದೆ.
● ಮುಂದಿನ ಹಂತದಲ್ಲಿ ನಿಮಗೆ ನಾಲ್ಕು ಆಪ್ಷನ್ ಗಳು ಕಾಣುತ್ತವೆ. ಪೇಮೆಂಟ್ ಸ್ಟೇಟಸ್, ಆಧಾರ್ ಸೀಡಿಂಗ್, ಪ್ರೊಫೈಲ್ ಮತ್ತು ಕಾಂಟಾಕ್ಟ್.

● ಆಧಾರ್ ಸೀಡಿಂಗ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ಎಂಟ್ರಿ ಮಾಡಿ ಸಬ್ಮಿಟ್ ಕೊಟ್ಟರೆ ನಿಮ್ಮ ಆಧಾರ್ ಕಾರ್ಡ್ ಸೀಡಿಂಗ್ ಆಕ್ಟಿವ್ ಇದೆಯೇ, ಯಾವ ದಿನಾಂಕದಲ್ಲಿ ಸೀಡಿಂಗ್ ಆಗಿದೆ, ಯಾವ ಬ್ಯಾಂಕ್ ಅಕೌಂಟ್ ಗೆ ಆಗಿದೆ ಎನ್ನುವ ವಿವರ ಬರುತ್ತದೆ. ಇದು ಇನ್ ಆಕ್ಟಿವ್ ಇದ್ದರೆ ನಿಮಗೆ ಹಣ ಬರುವುದಿಲ್ಲ.

● ಪೇಮೆಂಟ್ ಸ್ಟೇಟಸ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಸರ್ಕಾರದಿಂದ ಯಾವ ಯೋಜನೆಯಡಿ ಹಣ ವರ್ಗಾವಣೆ ಆಗಿರುತ್ತದೆ. ಅದರ ವಿವರ ತೋರಿಸುತ್ತದೆ. ನೀವು ಅನ್ನಭಾಗ್ಯ ಯೋಜನೆಯ ಹಣ ಚೆಕ್ ಮಾಡುವುದರಿಂದ ಇದು ಹೆಡ್ ಆಫ್ ದ ಫ್ಯಾಮಿಲಿ ಗೆ ಬರುವುದರಿಂದ ಅವರ ಮಾಹಿತಿಯನ್ನು ಹಾಕಿ DBT ಆಪ್ ಮೂಲಕ ಚೆಕ್ ಮಾಡಿ.

Leave a Comment

%d bloggers like this: