ಸಾಮಾನ್ಯವಾಗಿ ಎಲ್ಲರ ಬಳಿಯಲ್ಲಿಯೂ BPL ಪಡಿತರ ಚೀಟಿ ಇರುತ್ತದೆ ಆದ್ದರಿಂದ ಅವರಿಗೆ ಸರ್ಕಾರದಿಂದ ಹಲವಾರು ಸೌಕರ್ಯಗಳು ಸಿಗುತ್ತದೆ ಹಾಗೂ ಸರ್ಕಾರದಿಂದ ಉಚಿತವಾಗಿ ರೇಶನ್ ಕೂಡ ದೊರೆಯುತ್ತದೆ. ಆದರೆ ಕೆಲವೊಮ್ಮೆ ತಪ್ಪು ದಾಖಲಾತಿಗಳನ್ನು ಕೊಡುವು ದರ ಮೂಲಕ ಅಥವಾ ಕೆಲವೊಮ್ಮೆ ನಿಮಗೆ ತಿಳಿಯದ ಹಾಗೆ BPL ಕಾರ್ಡ್ ಬದಲು APL ಕಾರ್ಡ್ ಬರುತ್ತದೆ. ಆದರೆ APL ಕಾರ್ಡ್ ಅನ್ನು ಹೇಗೆ ರದ್ದುಗೊಳಿಸುವುದು ಹಾಗೂ ಇದನ್ನು ರದ್ದುಗೊಳಿಸುವುದ ರಿಂದ ಆಗುವ ಪ್ರಯೋಜನಗಳೇನು.
ಹಾಗೂ APL ಕಾರ್ಡ್ ಹೊಂದಿದ್ದರೆ ಯಾವ ರೀತಿಯ ಸೌಕರ್ಯ ಸಿಗುತ್ತದೆ,ಯಾವ ರೀತಿಯ ಸೌಕರ್ಯ ಸಿಗುವುದಿಲ್ಲ, ಹೀಗೆ APL ಪಡಿತರ ಚೀಟಿಯನ್ನು ರದ್ದುಪಡಿಸುವುದರ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ BPL ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಹಲವಾರು ರೀತಿಯ ಪ್ರಯೋಜನ ಗಳು ಅಂದರೆ ಸೌಕರ್ಯಗಳು ಸಿಗುತ್ತದೆ.
ಉದಾಹರಣೆಗೆ ಅವರಿಗೆ ಏನಾದರೂ ಆರೋಗ್ಯದಲ್ಲಿ ತೊಂದರೆ ಆದರೆ ಕೆಲವೊಮ್ಮೆ ಅದಕ್ಕೆ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಆಪರೇಷನ್ ಮಾಡಿಸಬೇಕು ಎನ್ನುವಂತಹ ಸಮಯದಲ್ಲಿ ಅವರಿಗೆ BPL ಕಾರ್ಡ್ ಇದ್ದರೆ ಸರ್ಕಾರದ ವತಿಯಿಂದ ಇಂತಿಷ್ಟು ಹಣ ಎಂಬಂತೆ ಅವರಿಗೆ ಸಿಗುತ್ತದೆ. ಜೊತೆಗೆ ಕೆಲವೊಮ್ಮೆ ಚಿಕ್ಕ ಪುಟ್ಟ ತೊಂದರೆಯಾಗಿದ್ದರೆ ಅವರಿಂದ ಯಾವುದೇ ರೀತಿಯ ಹಣವನ್ನು ಕೂಡ ಆಸ್ಪತ್ರೆಗಳಲ್ಲಿ ಪಡೆಯುವುದಿಲ್ಲ. ಹಾಗೂ ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಸರ್ಕಾರದಿಂದ BPL ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ರೇಷನ್ ಅನ್ನು ಕೂಡ ಕೊಡುತ್ತಿದ್ದಾರೆ.
ಈ ಒಂದು ಉಪಯೋಗ ಹಲವಾರು ಜನರಿಗೆ ಸಹಾಯವಾಗಿದ್ದು ಇದರಿಂದಲೇ ಎಷ್ಟೋ ಮನೆಯಲ್ಲಿ ಎಲ್ಲರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಬಹುದು.ಇನ್ನು ಮೂರನೆಯದಾಗಿ ರೇಷನ್ ಕಾರ್ಡ್ ಅಂದರೆ BPL ಕಾರ್ಡ್ ಹೊಂದಿರುವವರಿಗೆ ಹಾಗೂ ಅವರೇನಾ ದರೂ ರೈತರಾಗಿದ್ದರೆ ಅವರಿಗೆ ಕೂಡ ಸರ್ಕಾರದಿಂದ ಇಂತಿಷ್ಟು ಎಕರೆಗೆ ಹಣ ಎಂಬಂತೆ ಬರುತ್ತದೆ. ಆದರೆ APL ಕಾರ್ಡ್ ಹೊಂದಿರುವವರಿಗೆ ಯಾವುದೇ ರೀತಿಯ ಸೌಕರ್ಯಗಳು ಸವಲತ್ತು ಗಳು ಬರುವುದಿಲ್ಲ. ಏಕೆಂದರೆ ಅವರಿಗೆ ಯಾವುದೇ ರೀತಿಯಲ್ಲೂ ತೊಂದರೆ ಇಲ್ಲ ಅವರು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ಎನ್ನುವ ಅರ್ಥ APL ಕಾರ್ಡ್ ಹೊಂದಿರುತ್ತದೆ.
ಹಾಗೂ ಒಂದು ಮನೆಯಲ್ಲಿ ಯಾರಾದರೂ ಸರ್ಕಾರಿ ಕೆಲಸದಲ್ಲಿ ಇದ್ದರೆ ಅಂತವರಿಗೆ APL ಕಾರ್ಡ್ ಕೊಡಲಾಗುತ್ತದೆ. ಅಂದರೆ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಕ್ಕೆ BPL ಕಾರ್ಡ್ ಕೊಡಲಾಗುತ್ತದೆ, ಹಾಗೆಯೇ ಬಡತನ ರೇಖೆಗಿಂತ ಮೇಲಿರುವ ಕುಟುಂಬಕ್ಕೆ APL ಕಾರ್ಡ್,ಅತಿಯಾದ ಬಡತನ ರೇಖೆಯಿಂದ ಬಳಲು ತ್ತಿರುವ ಕುಟುಂಬಕ್ಕೆ AAY ರೇಷನ್ ಕಾರ್ಡ್ ಕೊಡುತ್ತಾರೆ. APL ಕಾರ್ಡ್ ರದ್ದುಗೊಳಿಸುವುದು ಕಷ್ಟ ಆದರೆ ಅದಕ್ಕೆ ಸೂಕ್ತವಾದಂತಹ ಕಾರಣ ಹಾಗೂ ಅದರ ಜೊತೆ ಸೂಕ್ತವಾದ ದಾಖಲಾತಿ ಪತ್ರಗಳು ಇದ್ದರೆ ಅದನ್ನು ಸರಿಪಡಿಸಬಹುದು.
ಹಾಗಾದರೆ APL ಕಾರ್ಡ್ ರದ್ದುಗೊಳಿಸಲು ಬೇಕಾಗುವ ದಾಖಲಾತಿಗಳು ಹಾಗೂ ಅರ್ಜಿಯನ್ನು ಹೇಗೆ ಬರೆಯು ವುದು ಎಂದು ನೋಡುವುದಾದರೆ. ಮನೆಯ ಯಜಮಾನನ ಆಧಾರ್ ಕಾರ್ಡ್,ಮೂಲ APL ಪತ್ರ,20 ರೂಪಾಯಿ ಸ್ಟ್ಯಾಂಪ್ ಪೇಪರ್ ತೆಗೆದು ಕೊಂಡು ಘೋಷಣಾ ಪತ್ರ ಬರೆದು ವಕೀಲರಿಂದ ನೋಟರಿ ಮಾಡಿಸಿ ಕೊಳ್ಳುವಂತದ್ದು, ಕೃಷಿ ದೃಢೀಕರಣ ಪತ್ರ, ತಹಸೀಲ್ದಾರರ ಕಚೇರಿಯಲ್ಲಿ ಒಂದು ಬಿಳಿ ಹಾಳೆಯ ಮೇಲೆ ಪತ್ರವನ್ನು ಬರೆಸುವಂತದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.