ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೇಂದ್ರ ಸರ್ಕಾರದಿಂದ ಮತ್ತೊಂದು ಅಧಿಸೂಚನೆ ಹೊರಬಿದ್ದಿದ್ದು ಈ ಬಾರಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಮತ್ತು ರೈಲ್ವೇ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ (RPSF) ನಲ್ಲಿ ಸಬ್-ಇನ್ಸ್ಪೆಕ್ಟರ್ಗಳು (SI) ಮತ್ತು ಕಾನ್ಸ್ಟೇಬಲ್ಗಳ (Constable) ನೇಮಕಾತಿಗಾಗಿ (recruitment) ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಉಚಿತ ಗ್ಯಾಸ್ ಸಿಲೆಂಡರ್ ಪಡೆಯಲು ಅರ್ಜಿ ಆಹ್ವಾನ.! ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸುವುದು ಹೇಗೆ, ಬೇಕಾಗುವ ದಾಖಲೆಗಳೇನು ನೋಡಿ.!
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳಲು ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ನೇಮಕಾತಿ ಕುರಿತ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ರೈಲ್ವೆ ನೇಮಕಾತಿ ಮಂಡಳಿ
ಒಟ್ಟು ಹುದ್ದೆಗಳ ಸಂಖ್ಯೆ:- 2250
ಹುದ್ದೆಗಳ ವಿವರ:-
* ಕಾನ್ಸ್ಟೇಬಲ್ – 2000 ಹುದ್ದೆಗಳು
* ಸಬ್ ಇನ್ಸ್ಪೆಕ್ಟರ್ – 250 ಹುದ್ದೆಗಳು
* ಶೇ.10ರಷ್ಟು ಹುದ್ದೆಗಳನ್ನು ಮಾಜಿ ಸೈನಿಕರಿಗೆ ಮೀಸಲು
* ಶೇ.15ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಮೀಸಲು
ವೇತನ ಶ್ರೇಣಿ:-
* ಕಾನ್ಸ್ಟೇಬಲ್ನ ವೇತನ ಶ್ರೇಣಿ ರೂ.5,200 ರಿಂದ 20,200
*ಕಾನ್ಸೆಟೇಬಲ್ ಹುದ್ದೆಗಳಿಗೆ ಗ್ರೇಡ್ ಪೇ ರೂ. 2000
* RPF SI ಗೆ ವೇತನಶ್ರೇಣಿ ರೂ. 26,000 ರಿಂದ 32,000
* ಸಾರಿಗೆ ಭತ್ಯೆ, ಗ್ರಾಚ್ಯುಟಿ, ವೈದ್ಯಕೀಯ ಭತ್ಯೆಗಳು, ಓವರ್ಟೈಮ್ ಭತ್ಯೆಗಳು, ಪಡಿತರ ಭತ್ಯೆ, ಶೈಕ್ಷಣಿಕ ನೆರವು, ಭವಿಷ್ಯ ನಿಧಿ,
ಪಾಸ್ ಮತ್ತು ಪ್ರಿವಿಲೇಜ್ ಟಿಕೆಟ್ ಆರ್ಡರ್ ಮುಂತಾದ ಭದ್ರತಾ ವ್ಯವಸ್ಥೆ ಇರುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
* ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಯಾವುದೇ ಶಾಲೆಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
* ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು
ವಯೋಮಿತಿ:-
* ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು, ಗರಿಷ್ಠ ವಯೋಮಿತಿ 25 ವರ್ಷಗಳು
* ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 20 ವರ್ಷಗಳು, ಗರಿಷ್ಠ ವಯೋಮಿತಿ 25 ವರ್ಷಗಳು.
ವಯೋಮಿತಿ ಸಡಿಲಿಕೆ:-
* SC / ST, ಪ್ರವರ್ಗ -1 ಅಭ್ಯರ್ಥಿಗಳಿಗೆ 5 ವರ್ಷಗಳು
* OBC ಅಭ್ಯರ್ಥಿಗಳಿಗೆ 3 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತಿ ಇರುವ ಮತ್ತು ಕೇಳಲಾಗಿರುವ ಅರ್ಹತ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್ ಲೈನ್ https://rpf.indianrailways.gov.in ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
* ಶೀಘ್ರದಲ್ಲಿ ಈ ಕುರಿತಾದ ಪ್ರಕಟಣೆ ಮತ್ತು ಅರ್ಜಿ ಆಹ್ವಾನ ದಿನಾಂಕ ಕೂಡ ಇದೇ ವೆಬ್ಸೈಟ್ನಲ್ಲಿ ಪ್ರಕಟ ಮಾಡಲಾಗುವುದು
ಆಯ್ಕೆ ವಿಧಾನ:-
* ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ (CBT) ನಡೆಸಲಾಗುವುದು ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು 35% ಅಂಕಗಳನ್ನು (SC ಮತ್ತು ST ಅಭ್ಯರ್ಥಿಗಳಿಂದ 30% ಅಂಕಗಳು) ಪಡೆಯುವುದು ಅವಶ್ಯಕ.
* ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ಫಲಿತಾಂಶವನ್ನು ಸಂಬಂಧಪಟ್ಟ ರೈಲ್ವೆ ನೇಮಕಾತಿ ಮಂಡಳಿ (RRB) ಅಂತಿಮಗೊಳಿಸುತ್ತದೆ.
2024ರ ಮತದಾರರ ಪಟ್ಟಿ ಬಿಡುಗಡೆ.! ನಿಮ್ಮ ಹೆಸರಿದಿಯೇ ಎನ್ನುವುದನ್ನು ಈ ರೀತಿಯಾಗಿ ಚೆಕ್ ಮಾಡಿ ವೋಟರ್ ಐಡಿ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.!
* ದೈಹಿಕ ಸಾಮರ್ಥ್ಯ ಮತ್ತು ದೇಹದಾದ್ಯತೆ ಹಾಗೂ ಮೆಡಿಕಲ್ ಟೆಸ್ಟ್ ಗಾಗಿ (PET/PMT) ಗಾಗಿ ಕರೆ ಪತ್ರವನ್ನು RRB ಯಿಂದ RPF ನ ನೋಡಲ್ ಅಧಿಕಾರಿಯೊಂದಿಗೆ ಸಮಾಲೋಚಿಸಿ ನೀಡಲಾಗುತ್ತದೆ
* ಅಂತಿಮವಾಗಿ ಮೆರಿಟ್ ಲಿಸ್ಟ್ ತಯಾರಿಸಿ ಆಯ್ಕೆ ಆಗುವ ಅಭ್ಯರ್ಥಿಗಳ ಹೆಸರನ್ನು ವೆಬ್ಸೈಟ್ನಲ್ಲಿಯೇ ಪ್ರಕಟಪಡಿಸಲಾಗುತ್ತದೆ.