ರಾಜ್ಯದ ನಿರುದ್ಯೋಗಿ ಯುವ ಜನತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (BMTC) ಒಂದು ಕೌಶಲ್ಯಾಭಿವೃದ್ಧಿ ತರಬೇತಿ ಸಿಗುತ್ತಿದೆ. ಈ ಹಿಂದೆಯೂ ಕೂಡ ಅನೇಕರು ಇದೇ ಮಾದರಿಯ ತರಬೇತಿಯನ್ನು ಸಂಸ್ಥೆಗಳ ವತಿಯಿಂದ, KSRTC ವತಿಯಿಂದ ಪಡೆದು ಜೀವನ ಕಟ್ಟಿಕೊಂಡಿದ್ದಾರೆ.
ಅದೇ ರೀತಿ 2024ರ ಹೊಸ ವರ್ಷದ ಆರಂಭದಲ್ಲಿ BMTC ಯುವ ಜನತೆಗೆ ಈ ಸಿಹಿ ಸುದ್ದಿ ನೀಡಿದೆ. ಈ ಬಾರಿ ಪರಿಶಿಷ್ಟ ಜಾತಿ ಉಪ ಯೋಜನೆ, ಗಿರಿಜನ ಉಪ ಜಾತಿ ಯೋಜನೆ ಅಡಿಯಲ್ಲಿ ರಾಜ್ಯದ SC / STಅಭ್ಯರ್ಥಿಗಳು ಈ ಪ್ರಯೋಜನವನ್ನು ಪಡೆಯಬಹುದಾಗಿದೆ.
ಅಷ್ಟಕ್ಕೂ BMTC ಹಮ್ಮಿಕೊಂಡಿರುವ ಕಾರ್ಯಕ್ರಮವೇನೆಂದರೆ ಉಚಿತವಾಗಿ ರಾಜ್ಯದ ಯುವ ಜನತೆಗೆ 30 ದಿನಗಳ ವಸತಿ ಊಟ ವ್ಯವಸ್ಥೆ ಸಮೇತ ಲಘು ಮತ್ತು ಭಾರಿ ವಾಹನ ಚಾಲನ ತರಬೇತಿ ನೀಡಿ (Free Driving Class), ಪ್ರಾದೇಶಿಕ ಸಾರಿಗೆ ಕಚೇರಿಯಿಂದಲೇ ಚಾಲನ ಅನುಜ್ಞಾಪತ್ರ ಅಥವಾ ಬ್ಯಾಡ್ಜ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ನಿರುದ್ಯೋಗಿಗಳು ಮಾತ್ರವಲ್ಲದೆ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಇಚ್ಛಿಸುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದು. ಲಘು ವಾಹನ ಚಾಲನ ತರಬೇತಿ (ಕಾರ್ ಮತ್ತು ಜೀಪ್) ಭಾರಿ ವಾಹನ ಚಾಲನ ತರಬೇತಿ (ಬಸ್ ಇತ್ಯಾದಿ) ಎರಡು ವಿಧವಾದ ತರಬೇತಿಯನ್ನು ನೀಡಲಾಗುತ್ತದೆ.
ಈ ತರಬೇತಿಯನ್ನು ಪಡೆಯಲು ಬಯಸುವವರಿಗೆ ಅರ್ಹತಾ ಮಾನದಂಡವನ್ನು ಕೂಡ ನಿಗದಿಪಡಿಸಲಾಗಿದೆ. ಅದನ್ನು ಪೂರೈಸುವವರು ಅರ್ಜಿ ಸಲ್ಲಿಸಿ, ನೋಂದಣಿ ಆಗಬೇಕು. ಇದರ ಕುರಿತ ಪ್ರಮುಖ ವಿವರ ಹೀಗಿದೆ ನೋಡಿ.
ಲಘು ವಾಹನ ಚಾಲನಾ ತರಬೇತಿ ಪಡೆಯಲು ಅರ್ಹತೆಗಳು:-
* ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು
* ಅರ್ಜಿ ಸಲ್ಲಿಸುವವರು ಕನಿಷ್ಠ 18 ವರ್ಷ ವಯಸ್ಸು ತುಂಬಿರಬೇಕು, ಗರಿಷ್ಟ 45 ವರ್ಷ ಮೀರಿರಬಾರದು.
* ಕನಿಷ್ಠ 10ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿರಬೇಕು
* ಅರ್ಜಿ ಸಲ್ಲಿಸುವ ಸಮಯದಲ್ಲಿ ಕೇಳಲಾಗುವ ಎಲ್ಲ ದಾಖಲೆ ಪ್ರತಿಗಳನ್ನು ಕೂಡ ಸಲ್ಲಿಸಬೇಕು
* ಭಾರಿ ವಾಹನ ಚಾಲನೆ ತರಬೇತಿ ಪಡೆಯಲು ಇಚ್ಚಿಸುವವರು ಲಘು ವಾಹನ ಚಾಲನಾ ಅನುಜ್ಞಾ ಪತ್ರ ಪಡೆದು ಒಂದು ವರ್ಷ ಪೂರೈಸಿರಬೇಕು.
ಅರ್ಜಿ ಜೊತೆ ಸಲ್ಲಿಸಬೇಕಾದ ದಾಖಲೆಗಳು:-
* ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣ ಪತ್ರ / ಎಸ್ಎಸ್ಎಲ್ಸಿ ಅಂಕಪಟ್ಟಿ / ಶಾಲಾ ವರ್ಗಾವಣಾ ಪ್ರಮಾಣ ಪತ್ರ / ನೋಟರಿಯಿಂದ ಪ್ರಮಾಣ ಪತ್ರ ಪಡೆದಿರಬೇಕು.
* ಆಧಾರ್ ಕಾರ್ಡ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಪಾಸ್ಪೋರ್ಟ್ ಅಳತೆಯ ಭಾವಚಿತ್ರ
* ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ:-
* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಗದಿಪಡಿಸಿರುವ ಈ ಅರ್ಹತೆಗಳನ್ನು ಹೊಂದಿರುವವರು ತಮ್ಮ ಮೂಲ ದಾಖಲೆಗಳ 2 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಭೇಟಿಯಾಗಿ
ನೋಂದಣಿ ಮಾಡಿಕೊಳ್ಳಬೇಕು
* ಮೊದಲು ನೋಂದಣಿ ಮಾಡಿಕೊಂಡವರಿಗೆ ಹೆಚ್ಚಿನ ಆದ್ಯತೆ *
ವಿಳಾಸ:-
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ,
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ,
ತರಬೇತಿ ಕೊಠಡಿ, 2ನೇ ಮಹಡಿ,
ಶಾಂತಿನಗರ ಬಸ್ ನಿಲ್ದಾಣ,
ಬೆಂಗಳೂರು – 560027
* ಹೆಸರು ನೋಂದಾವಣೆ ಮಾಡಲು 31 ಜನವರಿ, 2024 ಕೊನೆಯ ದಿನಾಂಕ.
ಹೆಚ್ಚಿನ ಮಾಹಿತಿಗಾಗಿ:-
* ಈ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧಿಕೃತ ವೆಬ್ಸೈಟ್ www.mybmtc.com ಗೆ ಭೇಟಿ ನೀಡಿ ವಿವರ ಪಡೆಯಬಹುದು.
* ಸಹಾಯವಾಣಿ – 080-22537481, 7892529634, 7760576556.