Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಸಾಮಾನ್ಯವಾಗಿ ಕೂದಲು ಬೆಳ್ಳಗಾಗುವುದು ವಯಸ್ಸಾಗಿದೆ ಎನ್ನುವುದನ್ನು ಸೂಚಿಸುತ್ತಿತ್ತು. ಆದರೆ ಈಗಿನ ಕಾಲದಲ್ಲಿ 20-25 ವರ್ಷದವರಿಗೆಲ್ಲಾ ಕೂದಲು ಬೆಳ್ಳಗಾಗುತ್ತಿದೆ ಮತ್ತು ಆಗ ಬೆಳ್ಳಗಾಗಲು ಆರಂಭವಾಗಿ ಎರಡು ಮೂರು ವರ್ಷಗಳಲ್ಲಿ 50% ಪರ್ಸೆಂಟ್ ನಂತರದ ದಿನಗಳಲ್ಲಿ ಪೂರ್ತಿ ಬೆಳ್ಳಗಾಗಿ ಹೋಗುತ್ತಿದೆ.
ಇದಕ್ಕೆ ಆಲ್ಟರ್ನೇಟ್ ಆಗಿ ಡೈಗಳನ್ನು ಬಳಸುವುದು ಅಥವಾ ಕಲರ್ ಹಾಕುವುದು ಇನ್ನಿತರ ಪರಿಹಾರಗಳನ್ನು ಕಂಡುಕೊಂಡರು ಇಂತಹ ಕೆಮಿಕಲ್ ಯುಕ್ತ ಪದಾರ್ಥಗಳ ಬಳಕೆಯಿಂದ ಸೈಡ್ ಎಫೆಕ್ಟ್ ಕೂಡ ಇದ್ದೇ ಇರುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು ಏನು ಮತ್ತು ಯಾವ ಕಾರಣಗಳಿಂದ ಈ ರೀತಿಯಾಗಿ ಕಡಿಮೆ ವಯಸ್ಸಿಗೆ ಕೂದಲು ಬೆಳಗಾಗುತ್ತದೆ ಎನ್ನುವ ವಿಚಾರದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಆಯುರ್ವೇದದಲ್ಲಿ ಇದನ್ನು ಪಾಲಿಥ್ಯ ಎನ್ನುತ್ತಾರೆ. ಇದು ಬರಲು ಕಾರಣ ಏನೆಂದರೆ ಇತ್ತೀಚಿನ ದಿನದಲ್ಲಿ ಸರಿಯಾಗಿ ಡಯಟ್ ಫಾಲೋ ಮಾಡದೇ ಇರುವುದು. ಅಂದರೆ ದೇಹಕ್ಕೆ ಹಲವಾರು ಲವಣಾಂಶಗಳ ಅವಶ್ಯಕತೆ ಇರುತ್ತದೆ. ಮೆಗ್ನೀಷಿಯಂ, ಝಿಂಕ್ ಇನ್ನು ಮುಂತಾದ ಲವಣಾಂಶಗಳ ಕೊರತೆಯು ಈ ರೀತಿ ಬಹಳ ಬೇಗ ಕೂದಲು ಬೆಳಗಾಗುವುದಕ್ಕೆ ಕಾರಣವಾಗುತ್ತದೆ.
ಅತಿಯಾದ ಸ್ಟ್ರೆಸ್ ಕೂಡ ಕೂದಲು ಬೆಳಗಾಗುವುದಕ್ಕೆ ಕಾರಣವಾಗುತ್ತದೆ. ಆಯುರ್ವೇದದಲ್ಲಿ ಪಿತ್ತ ದೋಷದಿಂದ ಕೂದಲು ಬೆಳಗಾಗುತ್ತದೆ ಎಂದು ಹೇಳುತ್ತಾರೆ. ಇದೇ ಪಿತ್ತ ವಿಕಾರದಿಂದ ಕೋಪ ಕೂಡ ಹೆಚ್ಚಾಗುತ್ತದೆ ಹಾಗಾಗಿ ಸದಾ ಕೋಪದಲ್ಲಿರುವವರಿಗೆ ಕೂದಲು ಬೇಗ ಬೆಳಗಾಗುತ್ತದೆ ಎಂದು ಹೇಳಬಹುದು, ಇದರೊಂದಿಗೆ ವ್ಯಾಯಾಮದ ಕೊರತೆ ಮತ್ತು ಅನುವಂಶಿಯತೆ ಕೂಡ ಕೂದಲು ಬೆಳ್ಳಗಾಗುವುದಕ್ಕೆ ಕಾರಣವಾಗುತ್ತದೆ. ಸದಾ ದುಃಖದಲ್ಲಿ ಇರುವವರಿಗೆ ಬಹಳ ಬೇಗ ಕೂದಲು ಬೆಳ್ಳಗಾಗುತ್ತದೆ.
ಪರಿಹಾರಗಳು:-
* ಇಷ್ಟೆಲ್ಲ ಕಾರಣ ತಿಳಿದ ಮೇಲೆ ಪರಿಹಾರ ಕೂಡ ಇದರಲ್ಲಿ ಇದೆ ಎನ್ನುವುದು ಗೊತ್ತಾಗುತ್ತದೆ. ಏಕೆಂದರೆ ನಾವು ನಮ್ಮ ಆಹಾರ ಕ್ರಮದಲ್ಲಿ ಸರಿಯಾದ ಡಯಟ್ ಫಾಲೋ ಮಾಡಬೇಕು, ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುವ ಆಹಾರ ಪದಾರ್ಥಗಳನ್ನು ಸೇವಿಸಬೇಕು.
* ಹಸಿರು ಸೊಪ್ಪುಗಳು, ಹಸಿರು ತರಕಾರಿಗಳು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು
* ನೆಲ್ಲಿಕಾಯಿ ಸೇವನೆಯೂ ಕೂಡ ಆರೋಗ್ಯಕ್ಕೆ ಒಳ್ಳೆಯದು ನೆಲ್ಲಿಕಾಯಿ ಪುಡಿ ಬಿಸಿ ನೀರಿನಲ್ಲಿ ಹಾಕಿ ಸೇವಿಸಬಹುದು ಅಥವಾ ದಿನಕ್ಕೆ ಅರ್ಧ ಚಮಚ ತ್ರಿಫಲ ಚೂರ್ಣ ಸೇವಿಸಿದರು ಉತ್ತಮ
* ವಿಟಮಿನ್ ಸಿ ಹೇರಳವಾಗಿರುವ ನಿಂಬೆಹಣ್ಣು, ಕಿತ್ತಾಳೆ ಹಣ್ಣು, ಮೂಸಂಬೆ ಹಣ್ಣು, ಆಪಲ್, ಪೈನಾಪಲ್ ಇವುಗಳ ಸೇವನೆ ಕೂಡ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು
* ಮೊಟ್ಟೆಯನ್ನು ಸೇವಿಸುವವರು ಎಗ್ ವೈಟ್ ಭಾಗ ಸೇವಿಸಿದರೆ ಒಳ್ಳೆಯದು ಸೇವಿಸದೆ ಇರುವವರು ಅದನ್ನು ಕೂದಲಿಗೆ ಲೇಪನ ಮಾಡಬಹುದು
* ಹಾಲು ಮತ್ತು ತುಪ್ಪದ ಸೇವನೆ ಕೂಡ ಕೂದಲು ವಯಸ್ಸಾಗುವ ಮುಂಚೆ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ.
* ಕೂದಲು ಬೆಳ್ಳಗಾದರೆ ಕೆಲವರು ಅದನ್ನು ಕೀಳುತ್ತಾರೆ, ಈ ರೀತಿ ಮಾಡುವುದು ತಪ್ಪು. ಯಾಕೆಂದರೆ ಕೀಳುವುದರಿಂದ ಮತ್ತೆ ಆ ಜಾಗದಲ್ಲಿ ಕೂದಲು ಹುಟ್ಟಿದರೆ ಅದು ಕೂಡ ಬಿಳಿಯಾಗಿರುತ್ತದೆ. ಆದ್ದರಿಂದ ಒಂದು ಎರಡು ಕೂದಲು ಇದ್ದರೆ ಅದನ್ನು ಸಿಝರ್ ನಿಂದ ಕಟ್ ಮಾಡಿ ಈ ರೀತಿ ಕೂದಲು ಕೀಳುತ್ತಾ ಹೋದರೆ ಆ ಜಾಗದಲ್ಲಿ ಪ್ಯಾಚಸ್ ಆಗಬಹುದು
* ಆಯುರ್ವೇದ ಇದಕ್ಕೆ ಚಿಕಿತ್ಸೆ ಇದೆ. ಪಂಚಕರ್ಮದಲ್ಲಿ ವಿಲೇಚನ ಚಿಕಿತ್ಸೆ, ನಶ್ಯೆ ಚಿಕಿತ್ಸೆ ಇವುಗಳು ಕೂದಲು ಬೆಳ್ಳಗಾಗುವುದನ್ನು ತಡೆಯುತ್ತವೆ.
* ಪ್ರತಿ ದಿನ ರಾತ್ರಿ ಮಲಗುವ ಸಮಯದಲ್ಲಿ ಎರಡು ಮೂಗಿನ ಹೊಳ್ಳೆಗೂ ಎಳ್ಳೆಣ್ಣೆಯನ್ನು ಬಿಸಿ ಮಾಡಿ ಅಥವಾ ಹರಳೆಣ್ಣೆಯನ್ನು ಬಿಸಿ ಮಾಡಿ ಎರಡು ಹನಿ ಹಾಕಿಕೊಂಡು ಮಲಗುವುದರಿಂದ ಬೆಳ್ಳಗಿರುವ ಕೂದಲನ್ನು ಕೂಡ ಕಪ್ಪು ಮಾಡಬಹುದು.
ಕೂದಲು ಬೆಳ್ಳಗಾಗಿರುವ ಸಮಸ್ಯೆ ಇರುವವರು ಮಾತ್ರವಲ್ಲದೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಯಸುವ ಎಲ್ಲರೂ ಕೂಡ ಇವುಗಳನ್ನು ಪಾಲಿಸಬಹುದು.