ಇತ್ತೀಚಿನ ದಿನದಲ್ಲಿ ಕಂಪ್ಯೂಟರ್ ಶಿಕ್ಷಣ (free Computer Education) ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿ ಬೇಕಾಗಿರುವ ಒಂದು ಕಲಿಕೆಯಾಗಿದೆ. ಈಗ ವಿದ್ಯಾಭ್ಯಾಸದಲ್ಲಿ ತೊಡಗಿರುವಂತಹ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿನಲ್ಲಿ ಕಡ್ಡಾಯವಾಗಿ ಈ ವಿಷಯದ ಬಗ್ಗೆ ಚಟುವಟಿಕೆ ಇದ್ದು ಅವರು ಕಲಿತಿರುತ್ತಾರೆ.
ಆದರೆ ಕಳೆದ ಐದು ವರ್ಷಕ್ಕಿಂತ ಹಿಂದಿನ ಪರಿಸ್ಥಿತಿಯು ಹೀಗಿರಲಿಲ್ಲ ಪ್ರಸ್ತುತವಾಗಿ ಉದ್ಯೋಗ ಹರಿಸುವ ಹುಡುಕುತ್ತಿರುವ ಅಭ್ಯರ್ಥಿಗಳಲ್ಲಿ ಅನೇಕರು ಈ ಕಂಪ್ಯೂಟರ್ ಶಿಕ್ಷಣದಿಂದ ಕಲಿಕೆ ಸಮಯದಲ್ಲಿ ವಂಚಿತರಾಗಿದ್ದಾರೆ. ಈಗ ಎಲ್ಲಾ ಕ್ಷೇತ್ರವು ಗಣಕೀಕೃತವಾಗಿ ಕಂಪ್ಯೂಟರ್ ಆಧಾರಿತ ಉದ್ಯೋಗಾವಕಾಶಗಳಲೇ ಹೆಚ್ಚಾಗಿರುವುದರಿಂದ ಇವರಿಗೆ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ಕೊಡುವುದಕ್ಕಾಗಿ ಕೆಲ ಸಂಸ್ಥೆಗಳು ನಿರ್ಧರಿಸಿವೆ.
ಈ ವಿಚಾರದಲ್ಲಿ ICICI, SKDRDP ಮುಂತಾದ ಸಂಸ್ಥೆಯು ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಕರ್ನಾಟಕದಾದ್ಯಂತ ಹೆಸರುವಾಸಿಯಾಗಿದ್ದವು. ನಂತರ ಇದೇ ಹಾದಿಯಲ್ಲಿ ಕೆನರಾ ಬ್ಯಾಂಕ್ (Canara Bank) ಕೂಡ ಈಗ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದು ಕೆನರಾ ಬ್ಯಾಂಕ್ ವತಿಯಿಂದ ಉಚಿತವಾಗಿ ಮೂರು ತಿಂಗಳ ಕಂಪ್ಯೂಟರ್ ಶಿಕ್ಷಣವನ್ನು ನೀಡುವುದಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ.
ನಿರುದ್ಯೋಗಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ಆದರೆ ಇದಕ್ಕೆ ಕೆಲವು ಕಂಡಿಷನ್ ಗಳಿದ್ದು ಆ ಕಂಡೀಶನ್ ಗಳನ್ನು ಪೂರೈಸುವಂತಹ ಅಭ್ಯರ್ಥಿಗಳು ಕೆನರಾ ಬ್ಯಾಂಕ್ ನಿಂದ ಈ ಅನುಕೂಲತೆ ಪಡೆಯಬಹುದು ಇದರ ಕುರಿತು ಹೆಚ್ಚಿನ ಮಾಹಿತಿ ಹೀಗಿದೆ ನೋಡಿ.
ಕೆನರಾ ಬ್ಯಾಂಕ್ ಸಂಸ್ಥೆಯು ಏರ್ಪಡಿಸಿರುವ ಉಚಿತ ಕಂಪ್ಯೂಟರ್ ಶಿಕ್ಷಣದ ಕಾರ್ಯಕ್ರಮದಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತದೆ. ಈ ತರಬೇತಿಯಲ್ಲಿ ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್ ಹಾಗೂ ಹಾರ್ಡ್ವೇರ್ ಮತ್ತು ನೆಟ್ವರ್ಕ್ ಅಡ್ಮಿನಿಸ್ಟ್ರೇಷನ್ ನ್ನು ಹೆಚ್ಚಿನ ಮಟ್ಟದಲ್ಲಿ ಕಲಿಸಲಾಗುತ್ತದೆ.
ಈ ತರಬೇತಿಯಲ್ಲಿ ಬೇಸಿಕ್ ಕಂಪ್ಯೂಟರ್ ಶಿಕ್ಷಣ ಪಡೆದವರು ಸಹ ಒಂದು ಸ್ವಂತ ಸೈಬರ್ ಕೇಂದ್ರ ತೆರೆದು, ಸ್ವಯಂ ಉದ್ಯೋಗ ಕಂಡುಕೊಳ್ಳಬಹುದು. ಈಗಿನ ಕಾಲದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಹೊಸ ಟೆಕ್ನಾಲಜಿಗಳು ಅಭಿವೃದ್ಧಿಗೊಳಿತ್ತಿರುವುದರಿಂದ ಟೆಕ್ನಾಲಜಿಗೆ ತಕ್ಕಂತೆ ಹೊಂದಿಕೊಂಡಷ್ಟು ಉದ್ಯೋಗಾವಕಾಶಗಳು ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಈ ತರಬೇತಿಗೆ ಭಾಗವಹಿಸುವುದು ಉತ್ತಮ ಎನ್ನುವುದು ಸಂಸ್ಥೆ ಅಭಿಪ್ರಾಯವಾಗಿದೆ.
ಕೆನರಾ ಬ್ಯಾಂಕ್ ವತಿಯಿಂದ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ ಪಡೆಯಲು ವಿಧಿಸಿರುವ ಕಂಡಿಷನ್ ಗಳು:-
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ SSLC ಉತ್ತೀರ್ಣರಾಗಿರಬೇಕು.
* ಪಿಯುಸಿ, ಪದವಿ, ಡಿಪ್ಲೊಮ ಪಾಸ್ ಮಾಡಿದವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ರಿಂದ 27 ವರ್ಷದೊಳಗಿರಬೇಕು.
* ಪರಿಶಿಷ್ಟ ಜಾತಿ / ವರ್ಗದವರಿಗೆ ಗರಿಷ್ಠ ವಯಸ್ಸು 30 ವರ್ಷದವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
* 1 ಜನವರಿ, 2024 ರಿಂದ ಈ ತರಬೇತಿ ಆರಂಭಗೊಳ್ಳುತ್ತಿದೆ. ಈ ಮೇಲಿನ ಕಂಡೀಶನ್ ಗಳನ್ನು ಪೂರೈಸುವಂತಹ ಆಸಕ್ತ ಆಭ್ಯರ್ಥಿಗಳು ಪ್ರತಿದಿನ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸುವ ಸ್ಥಳದಲ್ಲಿಯೇ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ ಭಾಗವಹಿಸಬೇಕು.
* ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಅಂಕಪಟ್ಟಿಯ ಪ್ರತಿಗಳು ಮತ್ತು ವಿಳಾಸಪುರಾವೆಗಾಗಿ ಮತ್ತು ಗುರುತಿನ ಚೀಟಿ ಗಾಗಿ ಆಧಾರ್ ಕಾರ್ಡ್ ಜೆರಾಕ್ಸ್ ಇತ್ಯಾದಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗುವುದು.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆ ಕೋಟಾ ದಡಿ ಅರ್ಜಿ ಸಲ್ಲಿಸಿದರೆ ಜಾತಿ ಪ್ರಮಾಣ ಪತ್ರ ಪ್ರತಿ ತೆಗೆದುಕೊಂಡು ಹೋಗುವುದು.
ಇತರೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:-
ನಿರ್ದೇಶಕರು,
ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ,
ಚಿತ್ರಾಪುರ ಭವನ,
ಮಲ್ಲೇಶ್ವರ,
ಬೆಂಗಳೂರು.
ದೂರವಾಣಿ ಸಂಖ್ಯೆ – 23440036 / 23463580 / 9448538107