ಸರ್ಕಾರಿ ಹುದ್ದೆ (Government job) ಪಡೆಯಬೇಕು ಎನ್ನುವುದು ಎಲ್ಲಾ ವಿದ್ಯಾವಂತರ ಇಚ್ಛೆ. ಸರ್ಕಾರಿ ಹುದ್ದೆ ಪಡೆಯಲು ಬಹಳ ಓದಿರಬೇಕು ಪದವಿ ಇದ್ದವರಿಗಷ್ಟೇ ಎನ್ನುವುದೆಲ್ಲಾ ಸುಳ್ಳು. ಕನಿಷ್ಠ ವಿದ್ಯಾಭ್ಯಾಸ ಇದ್ದರೂ ಕೂಡ ಕೆಲವು ಸರ್ಕಾರಿ ಹುದ್ದೆಗಳು ಸಿಗುತ್ತವೆ ಇದರಲ್ಲಿ ಸಾರಿಗೆ ಸಂಸ್ಥೆಗಳ (Transport Department) ಕೆಲಸಗಳು ಸೇರಿವೆ. ಈಗ ಅಂತಹದೊಂದು ಅವಕಾಶ ಆಕಾಂಕ್ಷಿಗಳಿಗೆ ಸಂಸ್ಥೆ ವತಿಯಿಂದ ಸಿಗುತ್ತಿದೆ.
ಅದೇನೆಂದರೆ, ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಭಾಗವಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (NWKRTC) ಹೊರಗುತ್ತಿಗೆ ಆಧಾರದ ಮೇಲೆ ಚಾಲಕರಾಗಿ(Ksrtc Bus driver) ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.
ಈ ಸುದ್ದಿ ಓದಿ:- ಕೃಷಿ ಹೊಂಡದಲ್ಲಿ ಮುತ್ತು ಬೆಳೆದು 20 ಲಕ್ಷ ಆದಾಯ ಮಾಡಿದ ರೈತ.!
ಈ ಹುದ್ದೆಗಳಿಗೆ ಸೇರಲು ಆಸಕ್ತಿ ಇರುವ ಅಭ್ಯರ್ಥಿಗಳಿಗಾಗಿ ಲೇಖನದಲ್ಲಿರುವ ಪ್ರಮುಖವಾದ ಸಂಗತಿಗಳನ್ನು ತಿಳಿಸುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಹೆಚ್ಚಿನ ಅಭ್ಯರ್ಥಿಗಳಿಗೆ ಉದ್ಯೋಗವಕಾಶ ದೊರಕುವಂತೆ ಮಾಡಿ.
ಹುದ್ದೆಗಳು ಖಾಲಿ ಇರುವ ವಿಭಾಗಗಳು:-
* ಧಾರವಾಡ ವಿಭಾಗ (Dharawad Division) – 30 ಹುದ್ದೆಗಳು (ಧಾರವಾಡ, ಸೌದತ್ತಿ, ರಾಮದುರ್ಗ, ಹಳಿಯಾಳ ,ದಾಂಡೇಲಿ ಡಿಪೋಗಳಲ್ಲಿ)
* ಚಿಕ್ಕೋಡಿ ವಿಭಾಗ (Chikkodi Division) – 40 ಹುದ್ದೆಗಳು (ಚಿಕ್ಕೋಡಿ, ಸಂಕೇಶ್ವರ, ಗೋಕಾಕ್, ನಿಪ್ಪಾಣಿ , ರಾಯಭಾಗ, ಅಥಣಿ , ಹುಕ್ಕೇರಿ ಡಿಪೋಗಳಲ್ಲಿ)
* ಹಾವೇರಿ ವಿಭಾಗ (Haveri Division) – 50 ಹುದ್ದೆಗಳು (ಹಾವೇರಿ ಹಿರೇಕೆರೂರು ,ರಾಣೆಬೆನ್ನೂರು ,ಹಾನಗಲ್ ,ಬ್ಯಾಡಗಿ, ಸವಣೂರು ಡಿಪೋಗಳಲ್ಲಿ)
* ಸಿರಿಸಿ ವಿಭಾಗ (Sirsi Division) – 60 ಹುದ್ದೆಗಳು (ಸಿರಸಿ ,ಕುಮುಟಾ , ಕಾರವಾರ, ಭಟ್ಕಲ್, ಯಲ್ಲಾಪುರ ,ಅಂಕೋಲ ಡಿಪೋಗಳಲ್ಲಿ)
ಅರ್ಜಿ ಸಲ್ಲಿಸುವ ವಿಧಾನ:-
* ಹುದ್ದೆಗಳನ್ನು ಪಡೆಯಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ಪ್ರಕಟಣೆಯಲ್ಲಿ ತಿಳಿಸಿರುವ ದಾಖಲೆಗಳೊಂದಿಗೆ, ನಿಮ್ಮ ಹತ್ತಿರದ KSRTC ಸಾರಿಗೆ ನಿಗಮದ ಡಿಪೋ ಅನ್ನು ಬೇಟಿ ಮಾಡಿ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
* ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಭೇಟಿಕೊಟ್ಟು ಈ ಬಗ್ಗೆ ಮಾಹಿತಿ ಪಡಿಬಹುದು(Official website).
https://nwkrtc.karnataka.gov.in/
ಅರ್ಜಿ ಸಲ್ಲಿಸಲು ಮಾನದಂಡಗಳು:-
* ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
* ಕನಿಷ್ಠ 18 ವರ್ಷ ಪೂರೈಸಿರಬೇಕು
* ಕನಿಷ್ಠ SSLC ಅಥವ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು
* ಲಘು ಹಾಗೂ ಬಾರಿ ವಾಹನ ಚಾಲನಾ ಪರವಾನಗಿ ಪಡೆದಿರಬೇಕು
* ಅಭ್ಯರ್ಥಿಗೆ ಚಾಲನ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ದಾಖಲೆಗಳ ಪರಿಶೀಲನೆ ಮೂಲಕ ಆರಿಸಲಾಗುತ್ತದೆ.
* ನಿಗದಿ ಪಡಿಸಿರುವ ಉತ್ತಮ ವೇತನವನ್ನು ನೀಡಲಾಗುತ್ತದೆ
* ಶೀಘ್ರವೇ ಅರ್ಜಿ ಸಲ್ಲಿಸುವಿಕೆಗೆ ಕೊನೆ ದಿನಾಂಕ ನಿರ್ಧಾರವಾಗಲಿದೆ ಹಾಗಾಗಿ ಮಾಹಿತಿ ತಿಳಿದ ತಕ್ಷಣವೇ ಕಾಯದೆ ನಿರ್ಧಾರಕ್ಕೆ ಬಂದು ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
* ಆಧಾರ್ ಕಾರ್ಡ್ (Adhar card)
* ಡ್ರೈವಿಂಗ್ ಲೈಸೆನ್ಸ್ (Driving License)
* ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೇಟ್ (Medical fittness certificate)
* ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ (Police verification certificate)
* ಎರಡು ಫೋಟೋಗಳು (Photos)
* ಮಾರ್ಕ್ಸ್ ಕಾರ್ಡ್ (marks card from 7th std and above)
* ವರ್ಗಾವಣೆ ಪ್ರಮಾಣ ಪತ್ರಗಳು(Transfer certificate)
* ಬ್ಯಾಂಕ್ ಡಿಟೇಲ್ಸ್(Bank detials)
ಈ ಸುದ್ದಿ ಓದಿ:- ಕೃಷಿ ಉಪಕರಣ ಖರೀದಿಸಲು ಸರ್ಕಾರದಿಂದ ಶೇಕಡಾ 90% ಸಬ್ಸಿಡಿ.!
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಹುದಾದ ದೂರವಾಣಿ ಸಂಖ್ಯೆಗಳು:-
08213588801
8618943513
7259382467