ಹಸುಗಳ ರಬ್ಬರ್ ಮ್ಯಾಟ್ ಸಹಾಯಧನಕ್ಕೆ ಅರ್ಜಿ ಆಹ್ವಾನ.! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ ಮ್ಯಾಟ್ ಪಡೆಯಿರಿ.!

 

WhatsApp Group Join Now
Telegram Group Join Now

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (RKVY) ರೈತರಿಗೆ (Farmers) ಹಲವು ಪ್ರಯೋಜನಗಳನ್ನು ನೀಡಲಾಗುತ್ತಿದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಇತರೆ ಕಸುಬುಗಳಾದ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆ ಇನ್ನು ಮುಂತಾದ ಚಟುವಟಿಕೆಗಳಿಗೆ ಆಧುನಿಕ ತಂತ್ರಜ್ಞಾನ ಹಾಗೂ ಸುಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ಪಡೆಯಲು ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೆರವು ನೀಡಲಾಗುತ್ತಿದೆ.

2023-24ನೇ ಸಾಲಿನ ಕೃಷಿ ವಿಕಾಸ ಯೋಜನೆಯಡಿ ಬರುವ RKVY ಯೋಜನೆಯಿಂದ ರೈತರು ಸಾಕುವ ಮಿಶ್ರ ತಳಿ ಹಸುಗಳಿಗೆ ಸಬ್ಸಿಡಿಯಲ್ಲಿ ರಬ್ಬರ್ ಮ್ಯಾಟ್ (Rubber mat) ವಿತರಣೆ ಮಾಡಲಾಗುತ್ತಿದೆ. ಆಸಕ್ತ ಅರ್ಹ ರೈತರು ಹತ್ತಿರದಲ್ಲಿರುವ ಪಶುಪಾಲನ ಮತ್ತು ಪಶು ಸೇವಾ ವೈದ್ಯ ಇಲಾಖೆಯಲ್ಲಿ ಅಥವಾ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳನ್ನು ಭೇಟಿಯಾಗಿ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನವನ್ನು ಪಡೆಯಬಹುದು.

ಅನ್ನಭಾಗ್ಯ ಯೋಜನೆಯ DBT ಸ್ಟೇಟಸ್ ಚೆಕ್ ಮಾಡುವಾಗ NPCI ಚೆಕ್ ವಿಫಲವಾಗಿದೆ ಎಂದು ಬರುತ್ತಿದೆಯೇ.? ಅದಕ್ಕೆ ಪರಿಹಾರ ಇಲ್ಲಿದೆ ನೋಡಿ.!

ಪಶುಪಾಲನೆಯಲ್ಲಿ (Dairy farming) ತೊಡಗಿಕೊಂಡಿರುವ ರೈತರುಗಳು ತಮ್ಮ ಹಸುವಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಹಸುಗಳಿಗೆ ರಬ್ಬರ್ ಮ್ಯಾಟ್ ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಇವುಗಳ ಹೆಚ್ಚಾಗಿರುವುದರಿಂದ ಖರೀದಿಸುವ ಶಕ್ತಿ ಇರುವುದಿಲ್ಲ, ಮನಸ್ಸು ಮಾಡುವುದಿಲ್ಲ. ಇದನ್ನು ತಪ್ಪಿಸಿ ಎಲ್ಲಾ ರೈತರು ಕೂಡ ಇವುಗಳನ್ನು ಖರೀದಿಸಲು ಅನುಕೂಲ ಜಾರಿಗೆ ತಂದಿದೆ.

ಈ ಯೋಜನೆಗೆ ಅರ್ಹರಾದ ರೈತರುಗಳು ರಿಯಾಯಿತಿ (Subsidy) ದರದಲ್ಲಿ ಈ ನೆಲಹಾಸುಗಳನ್ನು ಪಡೆಯಬಹುದು. 5,598 ರೂ. ಬೆಲೆ ಬಾಳುವ ಈ ಎರಡು ರಬ್ಬರ್ ಮ್ಯಾಟ್ ಗಳನ್ನು ರೈತನು ಸೂಕ್ತ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಅರ್ಧ ದರ 2799ರೂ. ಪಾವತಿ ಮಾಡುವ ಮೂಲಕ ಪಡೆದುಕೊಳ್ಳಬಹುದು.

ಟ್ಯಾಕ್ಸಿ, ಗೂಡ್ಸ್ ಟಾಟಾ ಏಸ್, ಕಾರ್ ಖರೀದಿ ಮಾಡುವವರಿಗೆ ಸರ್ಕಾರದಿಂದ 3 ಲಕ್ಷ ಸಹಾಯಧನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ಸದ್ಯಕ್ಕೆ ಈಗ ಕರ್ನಾಟಕ ರಾಜ್ಯದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಮತ್ತು ಬೆಂಗಳೂರು ಜಿಲ್ಲೆಯ ದೇವನಹಳ್ಳಿ (ShreeRangapatna and Devanahalli) ವ್ಯಾಪ್ತಿಗೆ ಬರುವ ಪಶುಪಾಲನ ರೈತರುಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ಯೋಜನೆಗೆ ಸಂಬಂಧಿಸಿದ ಪ್ರಕಟಣೆಯನ್ನು ದೇವನಹಳ್ಳಿಯ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯ ಅಧಿಕಾರಿಗಳು ತಿಳಿಸಿದ್ದಾರೆ.

ದೇವನಹಳ್ಳಿ ಭಾಗದ ರೈತರುಗಳು ಎಲ್ಲ ಪಶುವೈದ್ಯ ಸೇವಾ ಇಲಾಖೆಯಲ್ಲಿ RKVY ಯೋಜನೆ ಅರ್ಜಿ ಪಡೆದು ವಿವರಗಳನ್ನು ತುಂಬಿಸಿ ಅದರಲ್ಲಿ ಕೇಳಿದರು ಅಗತ್ಯ ದಾಖಲೆಗಳ ಪ್ರತಿಗಳನ್ನು ಕೂಡ ಸಲ್ಲಿಸುವ ಮೂಲಕ ತಮ್ಮ ಎರಡು ಹಸುಗಳಿಗೆ ರಬ್ಬರ್ ಮ್ಯಾಟ್ ಗಳನ್ನು ಪಡೆದುಕೊಳ್ಳಬಹುದು.

ಸೆಪ್ಟೆಂಬರ್ 1 ರಿಂದ 587 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್, ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!

ಇದೇ ರೀತಿಯಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಗೆ ಬರುವ ರೈತರಗಳು ಮಂಡ್ಯ ಜಿಲ್ಲೆಯ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಿ ಯೋಜನೆಯ ಫಲಾನುಭವಿಗಳಾಗಬಹುದು. ಮಹಿಳೆಯರಿಗೆ 33%, ಅಂಗವಿಕಲರಿಗೆ 3% ಮತ್ತು ಅಲ್ಪಸಂಖ್ಯಾತರರಿಗೆ 15% ಮೀಸಲಾತಿ ಕೂಡ ಇದೆ ಶೀಘ್ರವಾಗಿ ಅರ್ಜಿ ಸಲ್ಲಿಸಿ ಯೋಜನೆಯ ಫಲಾನುಭವಿಗಳಾಗಿ.

ಬೇಕಾಗುವ ದಾಖಲೆಗಳು:-

● ಅರ್ಜಿ ಸಲ್ಲಿಸುವ ರೈತನ ಆಧಾರ್ ಕಾರ್ಡ್
● FRUITS ತಂತ್ರಾಂಶದಲ್ಲಿ ನೋಂದಣಿಯಾಗಿ ಪಡೆದ FID ಸಂಖ್ಯೆ
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ವರ್ಗದ ಫಲಾನುಭವಿಗಳು ಜಾತಿ ಪ್ರಮಾಣ ಪತ್ರ
● ಅಂಗವಿಕಲರಾಗಿದ್ದಲ್ಲಿ ಅಂಗವಿಕಲರ ಪ್ರಮಾಣ ಪತ್ರ
●”ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
● ಹಸುಗಳನ್ನು ಸಾಕಿರುವ ಕುರಿತು ದಾಖಲೆ ಪತ್ರ ಅಥವಾ ಪಶು ವೈದ್ಯರಿಂದ ಪಡೆದ ಪ್ರಮಾಣ ಪತ್ರ
● ಅಗತ್ಯವಿದ್ದಲ್ಲಿ ಭಾವಚಿತ್ರ
● ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು:-
9448755076, 9483941819

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now