ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ, SSLC ಪಾಸ್ ಆಗಿದ್ದರೆ ಸಾಕು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ರಾಜ್ಯದಾದ್ಯಂತ ಇರುವ ಉದ್ಯೋಗಾಕಾಂಕ್ಷಿಗಳಿಗೆ ಒಂದು ಗುಡ್ ನ್ಯೂಸ್ ಇದೆ ಅದರಲ್ಲೂ ಪೊಲೀಸ್ ಇಲಾಖೆಗೆ ಸಂಬಂಧ ಪಟ್ಟ ಉದ್ಯೋಗ ಮಾಡಬೇಕು ಎಂದು ಕನಸು ಕಂಡಿದ್ದು ಕಾರಣಾಂತರಗಳಿಂದ ಈ ರೀತಿ ಆರಕ್ಷಕರಾಗದೆ ವಂಚನೆಗೊಳಗಾಗಿದ್ದವರಿಗೆ ಇದೇ ರೀತಿಯ ಉದ್ಯೋಗ ಮಾಡುವ ಅವಕಾಶ ದೊರೆಯುತ್ತದೆ.

ಅದು ಕೂಡ ನೀವು ವಾಸಿಸುವ ಸ್ಥಳದ ಸುತ್ತಮುತ್ತಲ ವ್ಯಾಪ್ತಿಯಲ್ಲಿಯೇ ಉದ್ಯೋಗವಕಾಶ ದೊರೆಯುತ್ತಿದ್ದು ಈ ಬಗ್ಗೆ ಆಸಕ್ತಿ ಇರುವವರು ಅಥವಾ ನಿರುದ್ಯೋಗಿಗಳು ಅಥವಾ ಗ್ರಾಮೀಣ ಭಾಗದಲ್ಲಿ ವಾಸಿಸುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಈ ಸುದ್ದಿ ಓದಿ:- ಬ್ಯಾಂಕ್ ಅಕೌಂಟ್ ನಲ್ಲಿ ಇನ್ಮೇಲೆ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ತೆರಿಗೆ ಕಟ್ಟಬೇಕು.! ಇಂದಿನಿಂದ ಹೊಸ ರೂಲ್ಸ್ ಜಾರಿ

ಗೃಹರಕ್ಷಕ ದಳವು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗೃಹರಕ್ಷಕ ಹಾಗೂ ಗೃಹರಕ್ಷಕಿ (Home Guards) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಈ ನೇಮಕಾತಿ ಕುರಿತಂತೆ ಕೆಲವು ಪ್ರಮುಖ ಅಂಶಗಳನ್ನು ತಿಳಿಸುತ್ತಿದ್ದೇವೆ, ಆಸಕ್ತಿ ಇದ್ದವರು ಇದರ ಸದುಪಯೋಗ ಪಡೆದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಈ ಸುದ್ದಿ ಓದಿ:- 5 ಸಾವಿರ ಹೂಡಿಕೆ ಮಾಡಿ ಕೋಟ್ಯಾಧಿಪತಿಗಳಾಗುವುದು ಹೇಗೆ ಅಂತ ನೋಡಿ.!

ನೇಮಕಾತಿ ಸಂಸ್ಥೆ:- ಗೃಹರಕ್ಷಕ ದಳ
ಹುದ್ದೆಯ ಹೆಸರು:- ಗೃಹ ರಕ್ಷಕ / ಗೃಹರಕ್ಷಕಿ
ಒಟ್ಟು ಹುದ್ದೆಗಳ ಸಂಖ್ಯೆ:- 327
ಜಿಲ್ಲಾವಾರು ವಿವರ
* ಉತ್ತರ ಕನ್ನಡ ಜಿಲ್ಲೆ – 202
* ಯಾದಗಿರಿ ಜಿಲ್ಲೆ – 126

ಉದ್ಯೋಗ ಸ್ಥಳ:-
* ಉತ್ತರ ಕನ್ನಡ ಜಿಲ್ಲೆ:-
ಕಾರವಾರ, ಚೆಂಡಿಯ, ಮಲ್ಲಾಪುರ, ಅಂಕೋಲಾ, ಕುಮಟ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಶಿರಸಿ, ಎಲ್ಲಾಪುರ, ಹಳಿಯಾಳ, ದಾಂಡೇಲಿ, ಜೋಹಿಡಾ ಘಟಕಗಳು ಮತ್ತು ಇವುಗಳ ಉಪಘಟಕಗಳು
* ಯಾದಗಿರಿ ಜಿಲ್ಲೆ:-
ಯಾದಗಿರಿ, ಶಹಾಪುರ, ಸುರಪುರ, ಕೆಂಭಾವಿ, ಹುಣಸಗಿ, ಗುರುಮಠಕಲ್, ಸೈದಾಪುರ, ಘಟಕಗಳು ಮತ್ತು ಉಪಘಟಕಗಳು

ಶೈಕ್ಷಣಿಕ ವಿದ್ಯಾರ್ಹತೆ:-

* 10ನೇ ತರಗತಿ ಉತ್ತೀರ್ಣರಾಗಿರುವಂತಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
* ಅರ್ಜಿ ಸಲ್ಲಿಸುವ ಅಭ್ಯರ್ಥಿಯು 19 ವರ್ಷ ಮೇಲ್ಪಟ್ಟು 50 ವರ್ಷದ ಒಳಗಿನವರಾಗಿರಬೇಕು
* ದೈಹಿಕವಾಗಿ ಆರೋಗ್ಯವಾಗಿರಬೇಕು, ವೈದ್ಯಕೀಯ ಪರೀಕ್ಷೆ ನಡೆಸಿ ಅರ್ಹರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ
* ಅರ್ಜಿದಾರನ ಮೇಲೆ ಯಾವುದೇ ಅಪರಾಧಿ ಪ್ರಕರಣಗಳು ಇರಬಾರದು
* ಅರ್ಜಿದಾರನ್ನು ಉದ್ಯೋಗ ಸ್ಥಳದ ಸುತ್ತಮುತ್ತಲಿನ ಸ್ಥಳದಲ್ಲಿ ವಾಸಿಸುತ್ತಿರಬೇಕು
* ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕರ್ತನಾಗಿರಬಾರದು.

ಅರ್ಜಿ ಸಲ್ಲಿಸುವ ವಿಧಾನ:-

* ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
* ಸಂಬಂಧಪಟ್ಟ ಗೃಹರಕ್ಷಕ ದಳದ ಕಚೇರಿಗೆ ಭೇಟಿ ನೀಡಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು ಮತ್ತು ಕೇಳಿರುವ ಪೂರಕ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.

ಬೇಕಾಗುವ ದಾಖಲೆಗಳು:

* 10ನೇ ತರಗತಿ ಅಂಕಪಟ್ಟಿ
* ಸರ್ಕಾರಿ ವೈದ್ಯರಿಂದ ಪಡೆದ ದೈಹಿಕ ಸದೃಢತೆ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಇತ್ಯಾದಿ ಪ್ರಮುಖ ದಾಖಲೆಗಳು.

ಈ ಸುದ್ದಿ ಓದಿ:- ರಾಜ್ಯ ಸರ್ಕಾರದಿಂದ ಮತ್ತೊಂದು ಸೇವೆ.! ಇನ್ಮುಂದೆ ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ನೀಡಲು ಮನೆ ಬಾಗಿಲಿಗೆ ಬರಲಿದ್ದಾರೆ ವೈದ್ಯರು.!

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 28 ಫೆಬ್ರವರಿ, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 27 ಫೆಬ್ರವರಿ, 2024.

ಹೆಚ್ಚಿನ ವಿವರಕ್ಕಾಗಿ:-

* ಈ ಹುದ್ದೆಗಳಿಗೆ ಸಂಬಂಧಪಟ್ಟ ಯಾವುದೇ ಗೊಂದಲಗಳು ಇದ್ದರು ಸಂಬಂಧ ಪಟ್ಟ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
* ಯಾದಗಿರಿ ಜಿಲ್ಲೆ ಗೃಹರಕ್ಷಕ ದಳ ಕಛೇರಿ:-
8970428778, 8971512785
* ಉತ್ತರ ಕನ್ನಡ ಜಿಲ್ಲೆ ಗೃಹರಕ್ಷಕ ದಳ ಕಚೇರಿ:-
08382200137, 2263618

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now