ನಮ್ಮ ರಾಜ್ಯದಲ್ಲಿ ಒಟ್ಟಾರೆ ಇರುವ ಕೃಷಿ ಯೋಗ್ಯ ಭೂಮಿಯಲ್ಲಿ ನೀರಾವರಿ ಆಶ್ರಿತ ಭೂಮಿ ಒಟ್ಟಾರೆಯ ಅರ್ಧ ಭಾಗಕ್ಕಿಂತಲೂ ಕಡಿಮೆ ಇದೆ, ಇದನ್ನು 34% ಎಂದು ಅಂದಾಜಿಸಲಾಗಿದೆ. ನೀರಾವರಿ ಭೂಮಿಯಿಂದ ಹೆಚ್ಚು ಆಹಾರ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿ ಹಾಗೂ ರೈತನ ಆದಾಯ ಕೂಡ ಹೆಚ್ಚಾಗುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರವು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿ ಹಲವು ಯೋಜನೆಗಳನ್ನು ಪರಿಚಯಿಸಿದ್ದಾರೆ.
ನೀರಾವರಿ ಕ್ಷೇತ್ರದಲ್ಲಿ ಕೊಳವೆಬಾವಿ ಮೂಲಕ ಮತ್ತು ಬಾವಿ ನೀರಾವರಿ ಮೂಲಕ ಕೃಷಿ ಚಟುವಟಿಕೆ ನಡೆಸಲಾಗುತ್ತದೆ. ಕೃಷಿಗೆ ನೀರೇ ಪ್ರಮುಖ ಆಧಾರ ಆದಕಾರಣ ಈ ನೀರನ್ನು ಸಂರಕ್ಷಿಸಿಕೊಳ್ಳುವುದು ಕೂಡ ನಮ್ಮ ಆದ್ಯತೆ. ಆದ ಕಾರಣಕ್ಕಾಗಿ ನೀರಾವರಿ ಕ್ಷೇತ್ರದಲ್ಲಿ ಆದಷ್ಟು ನೀರಿನ ಸಮರ್ಪಕ ನಿರ್ವಹಣೆ ಮಾಡಿ ಇನ್ನಷ್ಟು ಹೆಚ್ಚಿನ ಲಾಭವನ್ನು ಪಡೆಯುವುದಕ್ಕಾಗಿ ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆಯನ್ನು (PMKSY) ಪರಿಚಯಿಸಲಾಗಿದೆ.
ಈ ಯೋಜನೆ ಮೂಲಕ ಹನಿ ನೀರಾವರಿ ಘಟಕ ಅಥವಾ ಸ್ಪಿಂಕ್ಲರ್ ಖರೀದಿಸುವುದಕ್ಕಾಗಿ ಸರ್ಕಾರ 90%ರಷ್ಟು ಸಹಾಯಧನವನ್ನು ನೀಡುತ್ತಿದೆ. ತೋಟಗಾರಿಕೆ ಬೆಳೆಗಳಾದ ಹೂವು, ತರಕಾರಿ ಮತ್ತು ಕೆಲವು ವಾಣಿಜ್ಯ ಬೆಳೆಗಳಿಗೆ ಕೂಡ ಹನಿ ನೀರಾವರಿ ಹೆಚ್ಚು ಅನುಕೂಲ. ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ.
ಮಣ್ಣಿನ ಸವಕಳಿ ತಡೆಗಟ್ಟಬಹುದು ಮತ್ತು ನೀರಿನ ಹಾಗೂ ಬೆಳೆಗೆ ಹಾಕಿದ ರಸಗೊಬ್ಬರಗಳ ಉಳಿತಾಯವೂ ಆಗುತ್ತದೆ ಮತ್ತು ಇನ್ನಿತರ ಅನುಕೂಲತೆಗಳು ಇರುವುದರಿಂದ ಹೆಚ್ಚಿನ ರೈತರು ಈಗ ಹನಿ ನೀರಾವರಿ ಕಡೆಗೆ ಉತ್ಸಾಹ ತೋರುತ್ತಿದ್ದಾರೆ. ಈ ರೀತಿ ನೀವು ಆಸಕ್ತಿ ಹೊಂದಿದ್ದರೆ ಈಗಸರ್ಕಾರದ ಕೃಷಿ ಸಿಂಚಾಯ್ ಯೋಜನೆ ಮೂಲಕ ಇದಕ್ಕಾಗಿ ಅನುದಾನವನ್ನು ಕೂಡ ಪಡೆಯಬಹುದು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ 2024ನೇ ಸಾಲಿನಲ್ಲಿ ಕೃಷಿ ಸಿಃಚಾಯ್ ಯೋಜನೆಯಡಿ ಹನಿ ನೀರಾವರಿ ಘಟಕ ಸ್ಥಾಪಿಸಲು ಅಥವಾ ಸ್ಪಿಂಕ್ಲರ್ ಸೆಟ್ ಖರೀದಿಸಲು ಆಸಕ್ತಿ ಇರುವ ರೈತರಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಇದಕ್ಕಿರುವ ಕಂಡೀಷನ್ ಗಳು ಮತ್ತು ಬೇಕಾಗುವ ದಾಖಲೆಗಳು ಹಾಗೂ ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವುದರ ವಿವರ ಹೀಗಿದೆ ನೋಡಿ.
ಅರ್ಜಿ ಸಲ್ಲಿಸಲು ಯಾರು ಅರ್ಹರು:-
* ಎಲ್ಲಾ ವರ್ಗದ ರೈತರು ಕೂಡ ಅರ್ಜಿ ಸಲ್ಲಿಸಬಹುದು
* ರೈತನ ತನ್ನ ಜಮೀನಿನಲ್ಲಿ ಕೊಳವೆ ನೀರಾವರಿ ಅಥವಾ ಬಾವಿ ನೀರಾವರಿ ಅಥವಾ ಕೆರೆ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಪಡೆದಿರಬೇಕು.
* ರೈತನ ಹೆಸರಿನಲ್ಲಿ ಜಮೀನು ಇರಬೇಕು, ದಾಖಲೆಗಳು ಹೊಂದಾಣಿಕೆಯಾಗಬೇಕು
* ಕಳೆದ ಏಳು ವರ್ಷಗಳಲ್ಲಿ ಈ ಯೋಜನೆಯ ಫಲಾನುಭವಿಗಳಾಗಿರುವ ಕುಟುಂಬಕ್ಕೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
* 2 ಹೆಕ್ಟೇರ್ ವರೆಗಿನ ನೀರಾವರಿ ಭೂಮಿ ಹೊಂದಿರುವ ರೈತನಿಗೆ ಯೋಜನಾ ಘಟಕದ 90% ಸಹಾಯಧನ ಸಿಗಲಿದೆ, 2 ಹೆಕ್ಟೇರಿಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ರೈತನಿಗೆ ಯೋಜನೆ ಘಟಕದ 45% ಸಹಾಯಧನ ಸಿಗಲಿದೆ.
ಪ್ರಸ್ತುತ ವರ್ಷದಲ್ಲಿ ಯೋಜನೆಗೆ 30 ಪೈಪ್ ಹಾಗೂ 5 ಜೆಟ್ ಖರೀದಿಗೆ ಸಹಾಯಧನ ನೀಡಲಾಗುತ್ತಿದ. ರೈತರು ರೂ.4,139 ಪಾವತಿಸಿದರೆ ಸರ್ಕಾರ ವತಿಯಿಂದ ರೂ.19,429 ಭರಿಸಲಾಗುತ್ತದೆ.
ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್
* ಜಮೀನಿನ ಪಹಣಿ ಪತ್ರ
* ನೀರಾವರಿ ಹೊಂದಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರ ಮತ್ತು ಬೆಳೆ ದೃಢೀಕರಣ ಪತ್ರ
* 20ರೂ. ಚಾಪಾ ಕಾಗದ
* ರೈತನ ಬ್ಯಾಂಕ್ ಪಾಸ್ ಬುಕ್ ವಿವರ
* 2 ಫೋಟೋ
* ಮೊಬೈಲ್ ಸಂಖ್ಯೆ.
ಅರ್ಜಿ ಸಲ್ಲಿಸುವ ವಿಧಾನ:-
* ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಯೋಜನೆಗೆ ಅರ್ಜಿ ಸಲ್ಲಿಸಬೇಕು
* ಅಧಿಕಾರಿಗಳಿಂದ ಅರ್ಜಿ ಪರಿಶೀಲನೆ ನಡೆದು ಅರ್ಹರಾಗುವ ರೈತರ ಮಾಹಿತಿಯನ್ನು ಆನ್ಲೈನಲ್ಲಿ ಅಪ್ಲೋಡ್ ಮಾಡಿ ಪೈಪು ಸರಬರಾಜು ಮಾಡುವ ಕಂಪನಿಗೆ ರೈತನ RTGS ಮಾಡಲು ತಿಳಿಸಲಾಗುತ್ತದೆ
* ಅರ್ಜಿದಾರರು ಬ್ಯಾಂಕ್ ಮೂಲಕ ಪೈಪ್ ಸರಬರಾಜು ಕಂಪನಿಗೆ ವಂತಿಕೆ ಹಣವನ್ನು ವರ್ಗಾಯಿಸಿ ಬ್ಯಾಂಕ್ ನಿಂದ ರಶೀದಿ ಪಡೆದು ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಿ ಪೈಪ್ ಹಾಗೂ ಜೆಟ್ ಪಡೆಯಬಹುದು.