ಭಾರತೀಯ ಸೇನೆಯಲ್ಲಿ ಕೆಲಸ ಮಾಡುವುದು ಒಂದು ರೀತಿಯ ಹೆಮ್ಮೆ ಹಾಗೂ ದೇಶ ಸೇವೆ ಮಾಡಿದ ಗರ್ವ, ಈ ಬಗ್ಗೆ ಕನಸು ಕಾಣುವ ಯುವ ಜನತೆಗೆ ಒಂದು ಸದಾವಕಾಶ ಸಿಗುತ್ತಿದೆ. ಅದೇನೆಂದರೆ ಪ್ರತಿವರ್ಷವೂ ಕೂಡ ಭಾರತೀಯ ಸೇನಾ ವಿಭಾಗದ (Indian Army) ಅಡಿಯಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿ (IMA) ಕಡೆಯಿಂದ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ ಆಯ್ದ ಅರ್ಹ ಅಭ್ಯರ್ಥಿಗಳಿಗೆ TGC (Technical Graduate Course) ತರಬೇತಿ ನೀಡಿ ಸೇನೆಯ ಅತ್ಯುತ್ತಮ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಆ ಪ್ರಕಾರವಾಗಿ ಈಗ 140ನೇ TGC ತರಬೇತಿ ಕಾರ್ಯಕ್ರಮವು ಜನವರಿ 2025ಕ್ಕೆ ಆರಂಭವಾಗುತ್ತಿದ್ದು ಇದಕ್ಕೆ ಸಂಬಂಧಪಟ್ಟ ಹಾಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಕಾಂಕ್ಷಿಗಳು ಸೇನೆ ಹೊರಡಿಸಿರುವ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದು. ಎಲ್ಲರಿಗೂ ಅನುಕೂಲತೆ ಆಗಲಿ ಎನ್ನುವ ಉದ್ದೇಶದಿಂದ ಈ ಲೇಖನದಲ್ಲೂ ಕೂಡ ನೇಮಕಾತಿ ಕುರಿತಂತೆ ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:-ಈ ಚಿಕ್ಕ ಮಿಷನ್ ಇದ್ದರೆ ಸಾಕು, LED ಬಲ್ಬ್ ತಯಾರಿಕೆ ಮನೆಯಲ್ಲಿಯೇ ಮಾಡಬಹುದು, ರೂ.15,000 ಬಂಡವಾಳ ಹಾಕಿದರೆ 50,000 ಆದಾಯ.!
ತರಬೇತಿ ಸಂಸ್ಥೆ:- ಇಂಡಿಯನ್ ಮಿಲಿಟರಿ ಅಕಾಡೆಮಿ (IMA)
ಸ್ಥಳ:- ಡೆಹರಾಡೂನ್
ಅರ್ಹತೆಗಳು:-
* ಭಾರತೀಯ ನಾಗರಿಕನಾಗಿರುವ ಅಭ್ಯರ್ಥಿಗೆ ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ
* ಈ ತರಬೇತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸಿವಿಲ್ / ಮೆಕಾನಿಕ್ / ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಿಕಲ್ / ಕಂಪ್ಯೂಟರ್ ಯಾವುದಾದರೂ ವಿಭಾಗದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪೂರೈಸಬೇಕು
* ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು 2025 ಜನವರಿ ಒಳಗೆ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಪೂರೈಸಿ ಪ್ರಮಾಣ ಪತ್ರ ಪಡೆಯುವುದಾದರೆ ಮಾತ್ರ ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸಲು ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಹರಿರುತ್ತಾರೆ
* ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 20 ವರ್ಷದಿಂದ 27 ವರ್ಷ ವಯೋಮಾನದ ಒಳಗಿರಬೇಕು ಅಂದರೆ ಅಭ್ಯರ್ಥಿಯು ಜನವರಿ 2, 1998 ರಿಂದ 1 ಜನವರಿ, 2025 ರ ಒಳಗೆ ಜನಿಸಿದವರಾಗಿರಬೇಕು.
ಈ ಸುದ್ದಿ ಓದಿ:-ಗೃಹಜ್ಯೋತಿಗೆ ಅರ್ಜಿ ಹಾಕಿದ್ರು ಕರೆಂಟ್ ಬಿಲ್ ಬರ್ತಾ ಇದ್ರೆ, ಈ ಟ್ರಿಕ್ ಫಾಲೋ ಮಾಡಿ.! 0 ಬಿಲ್ ಬರುತ್ತೆ.!
ಆಯ್ಕೆ ವಿಧಾನ:-
* ಒಟ್ಟು ವಿವಿಧ ವಿಭಾಗದ 30 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ
* ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆ ಅನುಸಾರವಾಗಿ ಮೆರಿಟ್ ಲಿಸ್ಟ್ ತಯಾರಿಸಿ ಅರ್ಹರನ್ನು SSG ಕಡೆಯಿಂದ ಸಂದರ್ಶನ ಮಾಡಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ದುಕೊಳ್ಳಲಾಗುತ್ತದೆ.
* ಹೀಗೆ ಆಯ್ಕೆ ಆದವರಿಗೆ ಡೆಹರಡೂನ್ ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಮೂರು ತಿಂಗಳ ಅಂದರೆ 12 ವಾರಗಳ ಕಾಲ ತರಬೇತಿ ನೀಡಲಾಗುತ್ತದೆ.
* ತರಬೇತಿ ಸಮಯದಲ್ಲಿ ಅತ್ಯುತ್ತಮವಾಗಿ ತಮ್ಮ ಪ್ರದರ್ಶನವನ್ನು ತೋರ್ಪಡಿಸಿದವರಿಗೆ ಮಾಸಿಕವಾಗಿ ರೂ.56,100 – ರೂ.1,77,000 ಸ್ಟೇಫನ್ ಜೊತೆ ಲೆಫ್ಟಿನೆಂಟ್ ಪದವಿಯಲ್ಲಿ ಉದ್ಯೋಗ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.
ಈ ಸುದ್ದಿ ಓದಿ:-ಅಂಚೆ ಇಲಾಖೆ ನೇಮಕಾತಿ 10th & 12th ತೇರ್ಗಡೆಯಾದವರು ಅರ್ಜಿ ಸಲ್ಲಿಸಿ.!
ಅರ್ಜಿ ಸಲ್ಲಿಸುವ ವಿಧಾನ:-
* https://www.joinindianarmy.nic.in ವೆಬ್ ಸೈಟ್ ಗೆ ಭೇಟಿ ನೀಡಿ
* ಅರ್ಜಿ ಸಲ್ಲಿಸಲು ಸೂಚಿಸಿರುವ ಲಿಂಕ್ ಕ್ಲಿಕ್ ಮಾಡಿ ಕೇಳಿರುವ ವೈಯಕ್ತಿಕ ಮಾಹಿತಿಗಳನ್ನು ಸರಿಯಾಗಿ ಎಚ್ಚರಿಕೆಯಿಂದ ಭರ್ತಿ ಮಾಡಿ
* ಸಂಬಧಪಟ್ಟ ದಾಖಲೆಗಳ ಸಂಖ್ಯೆ ಅಥವಾ ಸ್ಕ್ಯಾನ್ಡ್ ಕಾಪಿ ಕೂಡ ಅಪ್ಲೋಡ್ ಮಾಡಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ, ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ಸೈಟ್ಗೆ ಭೇಟಿಕೊಟ್ಟು ನೋಟಿಫಿಕೇಶನ್ ಓದಿ.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 10 ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 09 ಮೇ, 2024.