ಆಧುನಿಕ ಜೀವನಶೈಲಿಗೆ ತಕ್ಕ ಹಾಗೆ ಎಲ್ಲ ಕ್ಷೇತ್ರದಲ್ಲೂ ಕೂಡ ಬದಲಾವಣೆಯಾಗುತ್ತಿರಬೇಕು ಅಂತೆಯೇ ಈಗ ಕೃಷಿ ಕ್ಷೇತ್ರಕ್ಕೂ ಕೂಡ ತಂತ್ರಜ್ಞಾನದ ಮತ್ತು ಯಂತ್ರೋಪಕರಣದ ಬಳಕೆ ಆಗುತ್ತಿದೆ. ಮುಂದುವರಿದು ಹೈನುಗಾರಿಕೆಯಲ್ಲಿ ಕೊಂಡಿರುವ ರೈತರಿಗೂ ಕೂಡ ಈ ಬಗೆಯಲ್ಲಿ ಹಲವಾರು ರೀತಿಯ ಪ್ರಯೋಗಗಳು ನಡೆದಿದ್ದು.
ಇಂತಹ ಯಂತ್ರೋಪಕರಣಗಳ ಬಳಕೆ ಎಲ್ಲ ವರ್ಗದ ರೈತರಿಗೆ ಲಭ್ಯವಾಗಬೇಕು ಎಂದು ಸರ್ಕಾರವು ಕೂಡ ಯಂತ್ರೋಪಕರಣಗಳ ಖರೀದಿಗೆ ರೈತರಿಗೆ ಕಡಿಮೆ ಬಡ್ಡಿಗೆ ಸಾಲ ಅಥವಾ ಸಬ್ಸಿಡಿ ರೂಪದ ಸಾಲ ನೀಡಿ ನೆರವಾಗುತ್ತಿದೆ. ಈಗ ಮತ್ತೊಮ್ಮೆ ಅಂತಹದ್ದೇ ಯೋಜನೆ ರೂಪಿಸಲಾಗಿದ್ದು ಪಶುಪಾಲನಾ & ಪಶುವೈದ್ಯ ಸೇವಾ ಇಲಾಖೆ ವತಿಯಿಂದ 2023-24 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲು ಅರ್ಹ ಫಲಾನುಭವಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಸುದ್ದಿ ಓದಿ:- ಆಧಾರ್ ಲಿಂಕ್ ಆಗದ ಬೆಳೆ ಹಾನಿ ರೈತರ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಈ ರೀತಿ ಚೆಕ್ ಮಾಡಿ ಲಿಂಕ್ ಮಾಡಿ.!
ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರು ಜಾನುವಾರುಗಳಿಗೆ ಹಾಕುವ ಮೇವನ್ನು ತುಂಡು ಮಾಡಿ ಹಾಕಬೇಕು, ಇದಕ್ಕೆ ಅತಿ ಹೆಚ್ಚಿನ ಶ್ರಮ ಮತ್ತು ಸಮಯ ವ್ಯರ್ಥವಾಗುತ್ತದೆ. ಒಂದು ವೇಳೆ ಹಾಗೆಯೇ ಹಾಕಿದರೆ ಪಶುಗಳು ಸರಿಯಾಗಿ ಮೇವನ್ನು ತೆಗೆದುಕೊಳ್ಳುವುದಿಲ್ಲ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 2000 ಮತ್ತು ಅಕ್ಕಿ ಹಣ ಪಡೆಯಲಾಗದ ಮಹಿಳೆಯರು ಹೀಗೆ ಮಾಡಿ ಸಂಪೂರ್ಣ ಎಲ್ಲಾ ಕಂತಿನ ಹಣ ಬರುತ್ತೆ.!
ಯಂತ್ರ ಖರೀದಿಸಲು ಎಲ್ಲ ರೈತರು ಶಕ್ತರಾಗಿರುವುದಿಲ್ಲ ಹಾಗಾಗಿ ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು ಖರೀದಿಸಲು ಅರ್ಥಿಕವಾಗಿ ಸಹಾಯಧನವನ್ನು ನೀಡುವ ನಿಟ್ಟಿನಲ್ಲಿ ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಪಶುಪಾಲನಾ ಇಲಾಖೆಯ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರಯೋಜನವನ್ನು ಪಡೆಯುವುದು ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳನ್ನು ನೀಡಬೇಕು ವಿವರ ಹೀಗಿದೆ ನೋಡಿ.
ಯೋಜನೆಯ ಹೆಸರು:- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೇವು ಯಂತ್ರ ವಿತರಣೆ ಯೋಜನೆ…
ಯೋಜನೆಯಲ್ಲಿ ಸಿಗುವ ಸಹಾಯಧನ :-
* ಯೋಜನೆಗೆ ಅರ್ಹರಾಗುವ ಪ್ರತಿ ಫಲಾನುಭವಿಗೆ 2HP ಸಾಮರ್ಥ್ಯದ ಮೇವು ಕತ್ತರಿಸುವ ಯಂತ್ರಗಳನ್ನು ವಿತರಣೆ ಮಾಡಲಾಗುತ್ತದೆ.
* ಯೋಜನೆಯ ಘಟಕದ ವೆಚ್ಚ ರೂ 33,000 ಇದ್ದು, ಇದರಲ್ಲಿ 50% ಸಹಾಯಧನ ಅಂದರೆ ರೂ.16,500 ಸಬ್ಸಿಡಿ ಇರುತ್ತದೆ.
* ರಾಜ್ಯದ ಪ್ರತಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಇಂತಿಷ್ಟು ಯಂತ್ರಗಳು ಎಂದು ಗುರಿಗಳನ್ನು ನಿಗದಿ ಮಾಡಲಾಗಿದೆ, ಮೊದಲು ಅರ್ಜಿ ಸಲ್ಲಿಸಿದ ರೈತರಿಗೆ ಆದ್ಯತೆ ಇರುತ್ತದೆ ಹಾಗಾಗಿ ಕೂಡಲೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ವಿಧಾನ:-
* ನಿಮ್ಮ ಹತ್ತಿರದ ಪಶುವೈದ್ಯ ಆಸ್ಪತ್ರೆಯಿಂದ ನಿಗದಿತ ಅರ್ಜಿ ನಮೂನೆ ಪಡೆದುಕೊಂಡು ರೈತ ತನ್ನ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು.
* ಸೂಚಿಸಿರುವ ಎಲ್ಲಾ ದಾಖಲೆ ಪ್ರತಿಗಳ ಜೊತೆ ಅರ್ಜಿಯನ್ನು ತಾಲೂಕಿನ ಪಶು ಆಸ್ಪತ್ರೆಯಲ್ಲಿ ಸಲ್ಲಿಸಬೇಕು.
ಈ ಯೋಜನೆ ಪಡೆಯಲು ರೈತರು ನೀಡಬೇಕಾಗಿರುವ ದಾಖಲೆಗಳು:-
* ಆಧಾರ ಕಾರ್ಡ್
* ಸ್ಥಳಿಯ ಪಶುವೈದ್ಯರಿಂದ ಪಡೆದಿರುವ ಜಾನುವಾರು ದೃಡಿಕರಣ ಪತ್ರ
* ಪಡಿತರ ಚೀಟಿ & ಜಾತಿ ಪ್ರಮಾಣ (ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮಾತ್ರ) ಪತ್ರಗಳ ನಕಲು ಪ್ರತಿಗಳೊಂದಿಗೆ ತಾಲೂಕಿನ ಪಶು ಆಸ್ಪತ್ರೆಯಲ್ಲಿ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.
* ಅಂಗವಿಕಲ ಪ್ರಮಾಣ ಪತ್ರ
* ಇತ್ತೀಚಿನ ಭಾವಚಿತ್ರ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ಪಶುಪಾಲನಾ & ಪಶುವೈದ್ಯ ಸೇವಾ ಇಲಾಖೆ ಜಾಲತಾಣದ ವಿಳಾಸ: https://ahvs.karnataka.gov.in/
* ನಿಮ್ಮ ಹತ್ತಿರದ ಪಶು ವೈದ್ಯರನ್ನು ಅಥವಾ ಪಶು ಆಸ್ಪತ್ರೆಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.