ಮನೆ ಕಟ್ಟಿಸುತ್ತಿದ್ದೀರಾ.? ಆಗಿದ್ರೆ ಈ ವಿಷ್ಯ ತಿಳ್ಕೋಳಿ ವುಡನ್, UPVC, ಅಲ್ಯೂಮಿನಿಯಂ ಯಾವ ರೀತಿ ಕಿಟಕಿ ಹಾಕಿಸುವುದು ಬೆಸ್ಟ್ ಅಂತ ನೋಡಿ.!

 

WhatsApp Group Join Now
Telegram Group Join Now

ಮನೆ ಕಟ್ಟುವ ವಿಚಾರವಾಗಿ ಸಾಕಷ್ಟು ಗೊಂದಲಗಳಾಗುತ್ತವೆ. ಯಾಕೆಂದರೆ ಮನೆಯನ್ನು ಎಷ್ಟು ಅಳತೆಗೆ ಕಟ್ಟಿಸಿದರೆ ಉತ್ತಮ ಎನ್ನುವುದರಿಂದ ಹಿಡಿದು ಕಬ್ಬಿಣ, ಸಿಮೆಂಟು ಯಾವ ಕಂಪನಿಯದ್ದು ಆರಿಸುವುದು? ಎಲೆಕ್ಟ್ರಿಕಲ್ ಹಾಗೂ ಫಿಟ್ಟಿಂಗ್ ಗಳು ಯಾವ ಬ್ರಾಂಡ್ ಉತ್ತಮ? ಯಾವ ಕಲರ್ ಪೈಂಟ್ ಮಾಡಿಸುವುದು? ಯಾವ ಡಿಸೈನ್ ಇಂಟೀರಿಯರ್ ಮಾಡಿಸುವುದು? ಎನ್ನುವುದರಿಂದ ಹಿಡಿದು ಕಿಟಕಿ ಬಾಗಿಲು ಹೇಗಿರಬೇಕು? ಯಾವುದನ್ನು ಆರಿಸುವುದು ಎನ್ನುವುದರವರೆಗೆ ಬಹಳ ಕನ್ಫ್ಯೂಷನ್ ಕ್ರಿಯೇಟ್ ಆಗುತ್ತದೆ.

ನೀವು ಮನೆ ಕಟ್ಟಿಸುತ್ತಿದ್ದರೆ ಅಥವಾ ಆ ಆಲೋಚನೆಯಲ್ಲಿದ್ದರೆ ವುಡನ್, UPVC ಅಥವಾ ಅಲ್ಯುಮಿನಿಯಂ ಯಾವ ಕಿಟಕಿ ಹಾಕಿಸುವುದು ಎಂಬ ವಿಚಾರವಾಗಿ ನಿಮಗೆ ಕೆಲವು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡಲು ಇಚ್ಛಿಸುತ್ತಿದ್ದೇವೆ. ಮನೆ ಕಟ್ಟುವ ಮೊದಲೇ ಇವುಗಳ ಬಗ್ಗೆ ತಿಳಿದುಕೊಂಡರೆ ನಂತರ ಪ’ಶ್ಚಾ’ತಾ’ಪ ಪಡುವುದು ತಪ್ಪುತ್ತದೆ. ಹಾಗಾಗಿ ಈ ಮಾಹಿತಿಯನ್ನು ಹೆಚ್ಚಿನ ಜನರ ಜೊತೆ ಶೇರ್ ಮಾಡಿ.

ಈ ಸುದ್ದಿ ಓದಿ:- HSRP ಪ್ಲೇಟ್ ಜೊತೆ ಇನ್ಮುಂದೆ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು, ಇಲ್ಲದಿದ್ರೆ ಸ್ಥಳದಲ್ಲೇ ಗಾಡಿ ಸೀಜ್, ಹೊಸ ರೂಲ್ಸ್.!

* ಸಾಮಾನ್ಯವಾಗಿ ಈ ರೀತಿಯ ಗೊಂದಲಗಳು ಬಂದಾಗ ಜನರು ಅವರ ಬಜೆಟ್ ಗೆ ಅನುಕೂಲವಾಗುವಂತಹ ಅಥವಾ ಡಿಸೈನ್ ಅತ್ಯುತ್ತಮವಾಗಿದ್ದು ಒಳ್ಳೆ ಲುಕ್ ಕೊಡುವಂತಹ ಆಯ್ಕೆಗಳನ್ನು ಆರಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಹೇಳುವುದಾದರೆ UPVC ವಿಂಡೋಗಳು ಬಹಳ ರಿಚ್ ಲುಕ್ ಕೊಡುತ್ತವೆ ಹಿಂದೆ UPVC ವಿಂಡೋಗಳು ಅಪಾರ್ಟ್ಮೆಂಟ್ ಗಳಿಗೆ ಮಾತ್ರ, ವೈಟ್ ಕಲರ್ ಮಾತ್ರ ಎನ್ನುವ ಮಾತು ಇತ್ತು.

ಈಗ ಇಂಡುವಿಷುವಲ್ ಆಗಿ ಮನೆ ಕಟ್ಟಿಸುವವರು ಕೂಡ ಇದರತ್ತ ಮನಸ್ಸು ಮಾಡುತ್ತಿದ್ದಾರೆ ರಾಯಲ್ ಆಗಿ ಗ್ರಾಂಡ್ ಲುಕ್ ಬೇಕು ಎಂದು ಇದರಲ್ಲಿ ಕಲೆಕ್ಷನ್ಸ್ ಕೇಳುವವರು UPVC ಚೂಸ್ ಮಾಡಬಹುದು. ವೈಟ್ ಮಾತ್ರವಲ್ಲದೆ ಒಟ್ಟಿಗೆ ನೂರಾರು ಬಗೆಯ ಕಲರ್ ಗಳು ಡಿಸೈನ್ ಗಳು ಸಿಗುತ್ತವೆ.

* UPVC ವಿಂಡೋಗಳು ಕೈಗೆಟುಕುವ ಬೆಲೆಗೆ ಸಿಗುತ್ತವೆ ಆದರೆ ಮೇನ್ ಡೋರ್ ಪಕ್ಕದಲ್ಲಿ ಕಿಟಕಿ ಬಂದಿದೆ ಎಂದರೆ ಅದಕ್ಕೆ UPVC ವಿಂಡೋ ಹಾಕಲು ಆಗುವುದಿಲ್ಲ. ಇನ್ನು ಟೀಕ್ ವುಡ್ ಹಾಕುವುದಕ್ಕೆ ಹೆಚ್ಚು ಬೆಲೆ ಆಗುತ್ತದೆ ಅಂತಹ ಸಂದರ್ಭದಲ್ಲಿ ಎಲ್ಲಾ ವಿಂಡೋಗಳನ್ನು UPVC ಮಾಡಿ ಮೇನ್ ಡೋರ್ ಪಕ್ಕದ ವಿಂಡೋ ಮಾತ್ರ ಹೊನ್ನೆ ಮರದ್ದು ಹಾಕಿಸಿದರೆ ತುಂಬಾ ಗ್ರಾಂಡ್ ಆಗಿ ಕಾಣುತ್ತದೆ ಆದರೆ ಟೀಕ್ ವುಡ್ ಬೆಲೆ ಹೆಚ್ಚಾಗಿರುವುದರಿಂದ ಹಣ ಉಳಿಸಲು ಈ ಟೆಕ್ನಿಕ್ ಬಳಸಬಹುದು.

ಈ ಸುದ್ದಿ ಓದಿ:- ಸಿಂಗಲ್ ಡೋರ್ ಅಥವಾ ಡಬಲ್ ಡೋರ್ ಯಾವ ರೆಫ್ರಿಜರೇಟರ್ ತೆಗೆದುಕೊಳ್ಳುವುದು ಬೆಸ್ಟ್ ನೋಡಿ.!

* ಬಾಳಿಕೆ ವಿಚಾರವಾಗಿ ಹೇಳುವುದಾದರೆ ವುಡ್ ವಿಂಡೋಸ್ ಬಾಳಿಕೆ ಬರುತ್ತದೆ UPVC ಬರುವುದಿಲ್ಲ ಎನ್ನುವ ಯಾವುದೇ ಮಾತು ಇಲ್ಲ. ಬಿಲ್ಡಿಂಗ್ ಇರುವವರೆಗೂ ಕೂಡ UPVC ವಿಂಡೋ ಕೂಡ ಬಾಳಿಕೆ ಬರುತ್ತದೆ. ಆದರೆ ನೀವು ಅದನ್ನು ಮೈನ್ಟೈನ್ ಮಾಡಬೇಕು ಅಷ್ಟೇ, ಇನ್ನು ಸೇಫ್ಟಿ ವಿಚಾರಕ್ಕೆ ಬಂದರೆ ಎರಡಕ್ಕೂ 12MM ರಾಡ್ ಬಳಸಿ ಗ್ರಿಲ್ ಕೊಡಲಾಗುತ್ತದೆ ಹಾಗಾಗಿ ಸೇಫ್ಟಿ ವಿಚಾರದಲ್ಲಿ ಎರಡು ಒಂದೇ. ಆದರೆ UPVC ವಿಂಡೋ ಎತ್ತರ ಹೆಚ್ಚಾಗುತ್ತಾ ಹೋದಂತೆ ಅಲ್ಯೂಮಿನಿಯಂ ಪೈಪ್ ನೀಡಿ ಅಥವಾ ಹೆಚ್ಚಿಗೆ ರಾಡ್ ಹಾಕಿ ಸೇಫ್ಟಿ ಮಾಡಿಕೊಳ್ಳಬೇಕು.

* ವುಡ್ ವಿಂಡೋಗಳು ಬೇಸಿಗೆ, ಮಳೆ, ಚಳಿ ಎಲ್ಲ ಸಮಯದಲ್ಲೂ ಕೂಡ ರಿಯಾಕ್ಟ್ ಮಾಡುತ್ತವೆ ಆದರೆ UPVC ಮತ್ತು ಅಲ್ಯೂಮಿನಿಯಂ ವಿಂಡೋಗಳು, ಪ್ಲಾಸ್ಟಿಕ್ ಐಟಂ ಆಗಿರುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಆದರೆ ಇದನ್ನು ಫಿಕ್ಸ್ ಮಾಡುವಾಗ ಹೆಚ್ಚು ನಿಗಾ ವಹಿಸಿ ಸ್ಕ್ರೂ ಸರಿಯಾಗಿದೆಯೇ ಸಿಲಿಕಾನ್ ಸರಿಯಾಗಿ ಹಾಕಿದ್ದಾರೆಯೇ, ಐರನ್ ಪ್ರೇಮ್ ಬಂದಿದಿಯಾ ಹೀಗೆ ಎಲ್ಲವನ್ನು ಚೆಕ್ ಮಾಡಿಕೊಳ್ಳಬೇಕು. ಈ ವಿಚಾರವಾಗಿ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now