ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಅ’ಗ’ಲಿ’ದರು ಸಹ ಮಾನಸಿಕವಾಗಿ ಸದಾ ನಮ್ಮ ಜೊತೆಯಲ್ಲಿ ಇರುತ್ತಾರೆ ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವಂತಹ ಸಾಕಷ್ಟು ಸಿನಿಮಾಗಳು ಎಂದೆಂದಿಗೂ ಜೀವಂತ ಎಂದೇ ಹೇಳಬಹುದು ಅದರಲ್ಲಿ ಅಪ್ಪು, ಅಭಿ, ಆಕಾಶ್, ನಮ್ಮ ಬಸವ, ಮೌರ್ಯ, ಅಜಯ್ ಹೀಗೆ ಸಾಕಷ್ಟು ಸಿನಿಮಾಗಳು ಇಂದಿಗೂ ಸಹ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಅಪ್ಪು ಅವರ ಜೊತೆಯಲ್ಲಿ ನಟಿಸಿರುವಂತಹ ಸಹ ಕಲಾವಿದರು ಪುನೀತ್ ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪು ಮಾಡಿಕೊಂಡು ಸ್ಮರಿಸಿದ್ದಾರೆ. ಹಿರಿಯ ನಟ ಅವಿನಾಶ್ ಅವರು ಕೂಡ ಅಪ್ಪು ನಮನ ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದು ಅಪ್ಪು ಕುರಿತಾಗಿ ಅಕ್ಕರೆಯಿಂದ ಮಾತನಾಡಿದ್ದಾರೆ ನಟ ಅವಿನಾಶ್ ಅವರು ಅಪ್ಪು, ನಮ್ಮ ಬಸವ, ಆಕಾಶ್ ಈ ಮೂರು ಸಿನಿಮಾಗಳಲ್ಲಿಯೂ ಸಹ ಪುನೀತ್ ಅವರ ಜೊತೆಯಲ್ಲಿ ತೆರೆಯನ್ನು ಹಂಚಿಕೊಂಡಿದ್ದಾರೆ ಅಪ್ಪು ಒಬ್ಬ ಇಂಟಲಿಜೆಂಟ್ ಸ್ಟಾರ್ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಆಕಾಶ್ ಸಿನಿಮಾದ ಒಂದು ಫೈಟಿಂಗ್ ಸೀನ್ ಇತ್ತು ಅದರಲ್ಲಿ ನಾನು ಮಹಡಿಯ ಮೇಲಿಂದ ಕೆಳಗೆ ಬೆಡ್ ಮೇಲೆ ಬೀಳುವಂತಹ ಸೀನ್ ಇರುತ್ತದೆ ಅಂತಹ ಸಂದರ್ಭದಲ್ಲಿ ಅಪ್ಪು ಅವರು ನನ್ನನ್ನು ಕರೆದು ಈ ಸೀನನ್ನು ನೀವು ಮಾಡಬೇಡಿ ಎಂದು ಹೇಳುತ್ತಾರೆ ಹಾಗೆ ನಾನು ಹೇಳಿ ಈ ಸೀನನ್ನು ಮಾಡುವುದಿಲ್ಲ ಇದನ್ನು ನೋಡಿದರೆ ಅಪ್ಪು ಅವರಿಗೆ ಹಿರಿಯ ನಟರ ಮೇಲಿರುವಂತಹ ಕಾಳಜಿ ಮತ್ತು ಗೌರವ ನನಗೆ ಎಷ್ಟು ಎಂದು ತಿಳಿಯಿತು. ಅಪ್ಪು ಅವರು ಯಾವುದೇ ಒಂದು ಕೆಲಸವನ್ನು ಸಮಯಕ್ಕೆ ತಕ್ಕ ಹಾಗೆ ಸರಿಯಾದ ಸಮಯಕ್ಕೆ ಮಾಡುತ್ತಿದ್ದರು ಶೂಟಿಂಗ್ ಗೆ ಸರಿಯಾದ ಸಮಯಕ್ಕೆ ಬಂದು ಬಿಡುತ್ತಿದ್ದರೂ ಎಷ್ಟೋ ಸಲ ನಮಗಿಂತ ಅವರೇ ಮೊದಲು ಬರುತ್ತಿದ್ದರು ಎಂದು ನಾಚಿಕೆಯಾಗುತ್ತಿತ್ತು ಎಂದು ಅವಿನಾಶ್ ಅವರು ತಿಳಿಸಿದ್ದಾರೆ.
ಇನ್ನು ಅಪ್ಪು ಅವರ ಜೊತೆಯಲ್ಲಿ ನಟಿಸಿರುವಂತಹ ವೈಜನಾಥ ಬಿರಾದರ್ ಕೂಡ ಅಪ್ಪು ಅವರ ಬಗ್ಗೆ ಕೆಲವೊಂದು ಮಾಹಿತಿಯನ್ನು ನೀಡಿದ್ದಾರೆ ಅಭಿ ಸಿನಿಮಾದಲ್ಲಿ ಬಿರಾದರ್ ಅವರು ಅಪ್ಪು ಅವರ ಜೊತೆಯಲ್ಲಿ ತೆರೆಯನ್ನು ಹಂಚಿಕೊಂಡಿದ್ದಾರೆ ಯಾವ ನಟ ರನ್ನಾದರೂ ಸಹ ಇವರು ಕೀಳು ಭಾವನೆಯಿಂದ ನೋಡುತ್ತಾ ಇರಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು ದೊಡ್ಡವರು ಚಿಕ್ಕವರು ಎನ್ನುವಂತಹ ಭೇದ ಭಾವ ಇವರಲ್ಲಿ ಇರಲಿಲ್ಲ ಒಬ್ಬ ಲೈಟ್ ಬಾಯ್, ಊಟ ಕೊಡುವವರು ಅಥವಾ ಪೋಷಕ ನಟರೇ ಸಿಗಲಿ ಯಾರಾದರೂ ಸಹ ಪ್ರೀತಿಯಿಂದ ಅಪ್ಪಿಕೊಂಡು ನಮಸ್ಕಾರ ಹೇಗಿದ್ದೀರಾ ಎಂದು ಮಾತನಾಡಿಸುತ್ತಿದ್ದರು. ನಾನು ಅವರನ್ನು ನಮಸ್ಕಾರ ಸರ್ ಎಂದರೆ ಯಜಮಾನರೇ ನೀವು ನನ್ನನ್ನು ಸರ್ ಎನ್ನಬೇಡಿ ಪುನೀತನ್ ಎಂದೇಳೆ ಎಂದು ಪ್ರೀತಿಯಿಂದ ಹೇಳುತ್ತಿದ್ದರು.
ಅಪ್ಪು ಅವರ ಜೊತೆಯಲ್ಲಿ ತೆರೆ ಹಂಚಿಕೊಂಡಿರುವಂತಹ ಇನ್ನೊಬ್ಬ ಹಿರಿಯ ನಟ ಎಂದರೆ ಸುಂದರ ರಾಜ್ ಅಪ್ಪು ಅವರು ನಾಯಕನಾಗಿ ಪರಿಚಯಗೊಳ್ಳುವ ಮೊದಲಿನಿಂದಲೂ ಸಹ ಸುಂದರ ರಾಜ್ ಅವರ ಜೊತೆಯಲ್ಲಿ ಒಡನಾಟ ಇತ್ತು ಸುಂದರ್ ರಾಜ್ ರವರು ಸಹ ಅಪ್ಪು ಸಿನಿಮಾದಲ್ಲಿಯೇ ತೆರೆಯನ್ನು ಹಂಚಿಕೊಂಡಿದ್ದಾರೆ ಅಪ್ಪು ಎಂದರೆ ಅವರು ಜೊತೆಯಲ್ಲಿ ಕಳೆದಂತಹ ಕ್ಷಣಗಳು ಕಣ್ಣ ಮುಂದೆ ಬಂದಂತೆ ಆಗುತ್ತದೆ. ಯಂಗ್ ಲುಕ್ ನಲ್ಲಿ ಮನೆ ತುಂಬಾ ಮಾತಾಡ್ಕೊಂಡು ಇರುತ್ತಿದ್ದ ಅವರನ್ನು ನೋಡಿದರೆ ಖುಷಿಯಾಗುತ್ತಿತ್ತು ಅಪ್ಪು ಸಿನಿಮಾದ ಶೂಟಿಂಗ್ ಹೋಗಿದ್ದಾಗ ಸೆಟ್ ನಲ್ಲಿ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದು ನನ್ನನ್ನು ಕಣ್ಣು ಮುಚ್ಚಿದರು ಯಾರು ಎಂದು ತಿರುಗಿ ನೋಡಿದರೆ ಅಪ್ಪು ಮಾಮ ನಾನು ಎಂದು ಮಾತನಾಡಿಸಿದರು ನನಗೆ ದಿಗ್ಭ್ರಮೆ ಆಯಿತು ಅಪ್ಪು ಬಂದು ನನ್ನ ಅಪ್ಪಿಕೊಂಡು ನನ್ನನ್ನು ಪ್ರೀತಿಯಿಂದ ಮಾತನಾಡಿಸಿದ್ದು ನಾನು ಇಂದಿಗೂ ಸಹ ಮರೆತಿಲ್ಲ ಎಂದು ತಮ್ಮ ಮನದಾಳದ ಅನಿಸಿಕೆಯನ್ನು ಸುಂದರ ರಾಜ್ ಹಂಚಿಕೊಂಡಿದ್ದಾರೆ. ಅಪ್ಪು ಅವರ ಈ ಒಂದು ಸಮಾನತೆಯ ಗುಣಗಳು ನಿಮಗೆ ಏನನಿಸುತ್ತದೆ ಎಂದು ಕಮೆಂಟ್ಸ್ ಮೂಲಕ ತಿಳಿಸಿ.