ಅಪ್ಪು ಸಾ-ಯು-ವ ಮುನ್ನ ಡೈರಿಯಲ್ಲಿ ಬರೆದಿದ್ದ ಕೊನೆ ಆಸೆ ಏನು ಗೊತ್ತ.? ಅಶ್ವಿನಿ ರಿವೀಲ್ ಮಾಡಿದ್ರು ದೊಡ್ಡ ಸಿಕ್ರೇಟ್.

ಕನ್ನಡ ಚಿತ್ರರಂಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ಎಷ್ಟು ನೋವಿನಲ್ಲಿ ಇದೆ ಎಂದು ನಿಮಗೆ ಗೊತ್ತೇ ಇದೆ. ನಮ್ಮ ವೀರ ಕನ್ನಡಿಗ ಪುನೀತ್ ರಾಜ್‌ಕುಮಾರ್ ಅವರು ಕನ್ನಡಿಗರಿಗಾಗಿ ಜೀವ ಕೊಡಲು ಸಹ ಸಿದ್ದರಿದ್ದರು. ಇದೀಗ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಆಸೆಯನ್ನು ಡೈರಿ ಒಂದರಲ್ಲಿ ಬರೆದಿಟ್ಟಿರುವಂತಹ ಮಾಹಿತಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪುನೀತ್ ರಾಜ್‌ಕುಮಾರ್ ಅವರು ಸಮಾಜಸೇವೆ ಮಾಡುವುದರಲ್ಲಿ ಮುಂದಿದ್ದರು ಯಾರು ಏನೇ ಕಷ್ಟ ಎಂದು ಬಂದರೆಲು ಅವರಿಗೆ ಸಹಾಯಾಸ್ತವನ್ನು ನೀಡುತ್ತಿದ್ದರು ಅದೆಷ್ಟೋ ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮಕ್ಕಳ ಶಾಲಾ ಶಿಕ್ಷಣ ಹೀಗೆ ಇನ್ನಿತರ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು.

ಆದರೆ ಇವರು ಮಾಡಿರುವಂತಹ ಸಮಾಜ ಸೇವೆ ಯಾರಿಗೂ ಸಹ ಗೊತ್ತೇ ಇರಲಿಲ್ಲ ಅವರು ನಮ್ಮನ್ನು ಅ’ಗ’ಲಿ’ದ ನಂತರ ಅವರು ಮಾಡಿರುವಂತಹ ದಾನ ಧರ್ಮಗಳು ಹೊರಗೆ ಬರುತ್ತಿದೆ. ಪುನೀತ್ ರಾಜ್‌ಕುಮಾರ್ ಅವರು ಯಾರಿಗೆ ಸಹಾಯವನ್ನು ಮಾಡಿದರೂ ಸಹ ಅದನ್ನು ಯಾರ ಜೊತೆಯಲ್ಲಿ ಹೇಳದ ಹಾಗೆ ಗೌಪ್ಯವಾಗಿ ಇರಿಸುತ್ತಿದ್ದರು, ಈ ಎಲ್ಲಾ ವಿಚಾರಗಳು ಅಪ್ಪು ನಮ್ಮನ್ನು ಬಿಟ್ಟು ಹೋದರು ಸಹ ಅವರನ್ನು ಪ್ರೀತಿಸುವಂತೆ ಮಾಡುತ್ತಿದೆ ಅಪ್ಪು ಅವರು ಸಮಾಜ ಸೇವೆ ಹಾಗೂ ಸಿನಿಮಾ ರಂಗಕ್ಕೆ ನೀಡಿರುವಂತಹ ಅತಿ ದೊಡ್ಡ ಕೊಡುಗೆಯನ್ನು ಗಮನಿಸಿದ ನಮ್ಮ ಕರ್ನಾಟಕದ ರಾಜ್ಯ ಸರ್ಕಾರ ಅವರಿಗೆ ಅತ್ಯುನ್ನತ ಗೌರ ಪುರಸ್ಕಾರವನ್ನು ನೀಡಿ ಸನ್ಮಾನವನ್ನು ಮಾಡಿದೆ ಹೌದು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಪುರಸ್ಕರಿಸುವ ಮೂಲಕ ಮರಣೋತ್ತರವಾಗಿ ಅವರನ್ನು ಗೌರವಿಸಿದೆ.

ಅಪ್ಪು ನಮ್ಮ ಕನ್ನಡದವರು ಎಂದು ಹೇಳಿಕೊಳ್ಳಲು ನಮಗೆ ಇಷ್ಟೇ ಸಾಕು ಹೆಮ್ಮೆ ಮತ್ತು ಗರ್ವದಿಂದ ಪುನೀತ್ ರಾಜ್‌ಕುಮಾರ್ ಅವರನ್ನು ಕನ್ನಡಿಗ ಎಂದು ಹೇಳಬಹುದು. ಅಪ್ಪು ಅವರು ತಮ್ಮ ಗುರಿ ಅಥವಾ ಮುಂದೆ ಯಾವುದೇ ಕೆಲಸವನ್ನು ಮಾಡಬೇಕಾದರೂ ಅದನ್ನು ತಮ್ಮ ಡೈರಿಯಲ್ಲಿ ಬರೆದು ಇಟ್ಟುಕೊಳ್ಳುವಂತಹ ಅಭ್ಯಾಸವನ್ನು ಇಟ್ಟುಕೊಂಡಿದ್ದರು ಅದೇ ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದಂತಹ ಸಂದರ್ಭದಲ್ಲಿ ಅವರ ಡೈರಿಯಲ್ಲಿ ಈ ಒಂದು ಆಸೆಯನ್ನು ಬರೆದಿಟ್ಟಿದ್ದಾರೆ. ಅವರ ಆಸೆ ಕನಸುಗಳಲ್ಲಿ ಗಂಧದಗುಡಿ ಸಿನಿಮಾವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಸಹಾ ತಲುಪುವಂತೆ ಮಾಡಬೇಕು ಎನ್ನುವುದು ಸಹ ಒಂದಾಗಿದ್ದು ಇದಕ್ಕಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಗಂಧದಗುಡಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಮೂಲಕ ಪುನೀತ್ ರಾಜ್‌ಕುಮಾರ್ ಅವರ ಆಸೆಯನ್ನು ಈಡೇರಿಸಿದ್ದಾರೆ ಇನ್ನು ಆ ಡೈರಿಯಲ್ಲಿ ಇನ್ನೊಂದು ಆಸೆಯನ್ನು ಕೂಡ ಪೂರೈಸಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮುಂದಾಗಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರು ಜೀವನ ಸಾಗಿಸಿರುವ ಗಾಜನೂರಿನ ಮನೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಅತ್ಯಂತ ಪ್ರಿಯವಾದಂತಹ ಮನೆ ಆ ಮನೆ ಈಗ ಶಿಥಿಲಾವಸ್ತೆಯಲ್ಲಿದ್ದು ಅದನ್ನು ಮತ್ತೆ ರಿಪೇರಿ ಮಾಡಬೇಕು ಹಾಗೆಯೇ ಅದನ್ನು ಮೂಸಿಯಂ ಮಾಡಬೇಕು ಎಂಬ ಆಸೆಯನ್ನು ನಮ್ಮ ಪುನೀತ್ ರಾಜ್‌ಕುಮಾರ್ ಅವರು ಹೊಂದಿದ್ದರು. ಅದನ್ನು ಪೂರೈಸುವ ಮುನ್ನವೇ ಅಪ್ಪು ನಮ್ಮನ್ನೆಲ್ಲ ಅ’ಗ’ಲಿ’ದ್ದಾರೆ ಈ ಆಸೆಯನ್ನು ಡೈರಿಯಲ್ಲಿ ನೋಡಿದಂತಹ ಅಶ್ವಿನಿ ಅವರು ಹಾಗೆ ಕುಟುಂಬಸ್ಥರು ಈಗ ಅಪ್ಪು ಅವರ ಕೊನೆಯ ಆಸೆಯನ್ನು ಪೂರೈಸಬೇಕು ಎನ್ನುವಂತಹ ದಿಕ್ಕಿನಲ್ಲಿ ಸಾಕಷ್ಟು ಕಾರ್ಯಾಚರಣೆಯನ್ನು ಮಾಡುತ್ತಿದ್ದಾರೆ. ಅಪ್ಪು ಅವರ ಈ ಕೊನೆಯ ಆಸೆಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

%d bloggers like this: