ಮೊದಲ ಬಾರಿಗೆ ಮಗನ ಫೋಟೋ ಹಂಚಿಕೊಂಡ ನಟ ನಿಖಿಲ್ ಕುಮಾರಸ್ವಾಮಿ, ಎಷ್ಟು ಮುದ್ದಾಗಿದೆ ನೋಡಿ ಮಗು

 

ನಿಖಿಲ್ ಕುಮಾರಸ್ವಾಮಿ ಅವರು ಜಾಗ್ವಾರ್ ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರ ಪ್ರವೇಶ ಮಾಡಿದರು. ಇದಾದ ಬಳಿಕ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ, ರೈಡರ್ ಮುಂತಾದ ಸಿನಿಮಾಗಳಲ್ಲೂ ಕೂಡ ನಾಯಕನಟನಾಗಿ ಗೆದ್ದಿದ್ದಾರೆ. ಸಿನಿಮಾದ ಜೊತೆ ರಾಜಕೀಯವಾಗಿ ಕೂಡ ಗುರುತಿಸಿಕೊಂಡಿರುವ ಇವರು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜಕೀಯವಾಗಿ ಮತ್ತು ಸಿನಿಮಾ ಸಲುವಾಗಿ ಸದಾ ಸುದ್ದಿಯಲ್ಲಿರುವ ನಿಖಿಲ್ ಕುಮಾರಸ್ವಾಮಿಯವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ಸೆಲೆಬ್ರಿಟಿ. ಹೆಚ್ಚಾಗಿ ಇವರು ತಮ್ಮ ಕುಟುಂಬದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಸಂದರ್ಭಗಳಲ್ಲಿ ಪೋಸ್ಟ್ ಮಾಡುತ್ತಾರೆ. ಅದೇ ರೀತಿ ನಿನ್ನೆ ಮಕ್ಕಳ ದಿನಾಚರಣೆಯ ಇದ್ದ ಪ್ರಯುಕ್ತ ಇವರೂ ಸಹಾ ತಮ್ಮ ಮುದ್ದು ಮಗನ ಜೊತೆ ಫೋಟೋಶೂಟ್ ಮಾಡಿಸಿಕೊಂಡು ಅದನ್ನು instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರ ಮದುವೆಯು ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ರೇವತಿ ಎನ್ನುವರ ಜೊತೆ ಕೆಲವೇ ಕೆಲವು ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು. ಇದಾದ ಬಳಿಕ ಅದ್ದೂರಿಯಾಗಿ ಆರತಕ್ಷತೆ ಕೂಡ ನಡೆಸಲಾಗಿತ್ತು. ಅಷ್ಟೇ ಬೇಗ ಇಬ್ಬರು ಸಿಹಿ ಸುದ್ದಿಯನ್ನು ಕೂಡ ನೀಡಿದರು. ಕಳೆದ ವರ್ಷ ಗಂಡು ಮಗುವಿಗೆ ನಿಖಿಲ್ ತಂದೆಯಾದರು. ಅಂದಿನ ಆ ಗಳಿಕೆಯಲ್ಲಿ ಅವರ ಕುಟುಂಬದ ನಾಲ್ಕು ತರಮಾರಿಗಳ ಜೊತೆ ತೆಗೆದು ಫೋಟೋ ತೆಗೆಸಿಕೊಂಡು ಅದನ್ನು ಹಂಚಿಕೊಂಡಿದ್ದು ಬಹಳ ವೈರಲ್ ಆಗಿತ್ತು. ಮುದ್ದು ಮಗುವನ್ನು ನಿಖಿಲ್ ಕುಮಾರಸ್ವಾಮಿ ಅವರು ಎತ್ತು ಕೊಂಡಿದ್ದರೆ ಅವರ ಹಿಂದೆ ಅವರ ತಂದೆ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಅವರ ತಂದೆ ಎಚ್ ಡಿ ದೇವೇಗೌಡ ಅವರು ಕೂಡ ಇದ್ದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡಿತ್ತು.

ಕಳೆದ ಕೆಲವು ದಿನಗಳ ಹಿಂದೆ ಕುಟುಂಬಸ್ಥರು, ರಾಜಕೀಯ ಮುಖಂಡರು, ಸಿನಿಮಾ ರಂಗದವರು ಹಾಗೂ ಅಭಿಮಾನಿಗಳು ಎಲ್ಲರನ್ನೂ ಕರೆದು ಮಗುವಿನ ನಾಮಕರಣ ಕಾರ್ಯಕ್ರಮವನ್ನು ಕೂಡ ಏರ್ಪಡಿಸಿದರು. ಅವ್ಯಾನ್ ದೇವ್ ಎಂದು ಮಗುವಿಗೆ ಹೆಸರಿಟ್ಟಿದ್ದರು. ಈಗ ನೆನ್ನೆ ಚಿಲ್ಡ್ರನ್ಸ್ ಡೇ ಸ್ಪೆಷಲ್ ಆಗಿ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ಶೇರ್ ಆಗಿರುವ ಫೋಟೋ ಅಲ್ಲಿ ಅವ್ಯಾನ್ ದೇವ್ ನೀಲಿ ಬಣ್ಣದ ಡೆನಿಮ್ ಹಾಗೂ ಬಿಳಿ ಬಣ್ಣದ ಶರ್ಟ್ ತೊಟ್ಟು ಕಂಗೊಳಿಸುತ್ತಿದ್ದಾರೆ. ಇದರ ಜೊತೆ ನಿಖಿಲ್ ದಂಪತಿ ಕೂಡ ಅದೇ ಮಾದರಿಯ ಉಡುಗೆಯನ್ನು ತೊಟ್ಟಿದ್ದಾರೆ. ಈ ಫೋಟೋ ನೋಡಿದ ಎಲ್ಲರೂ ಕೂಡ ಕಾಮೆಂಟ್ಗಳಲ್ಲಿ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಕೆಲವರು ಮಗು ಮುದ್ದಾಗಿದೆ ಎಂದಿದ್ದರೆ, ಮತ್ತೆ ಕೆಲವರು ಜ್ಯೂ.ನಿಖಿಲ್ ಎಂದಿದ್ದಾರೆ. ಕಮೆಂಟ್ ಅಲ್ಲೇ ಕೆಲವರು ನಿಖಿಲ್ ಕುಮಾರಸ್ವಾಮಿ ಅವರನ್ನು ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ ಅಪ್ಡೇಟ್ಸ್ ಕೊಡಿ ಎಂದು ಕೇಳುತ್ತಿದ್ದಾರೆ.

ಅದರಲ್ಲೂ ಒಬ್ಬ ಅಭಿಮಾನಿ ಮಾಡಿದ ಕಮೆಂಟ್ ನಿಖಿಲ್ ಕುಟುಂಬ ಮಾತ್ರವಲ್ಲ ನೋಡಿದವರ ಮನಸನ್ನು ಮುಟ್ಟುವಂತಿತ್ತು. ಅವರು ಮಾಡಿದ ಕಮೆಂಟ್ ಹೀಗಿತ್ತು ನೀವು ಪೋಸ್ಟ್ ಮಾಡುವ ಪ್ರತಿ ಫೋಟೋ ಕೂಡ ಪ್ರೀತಿಯ ಆತ್ಮೀಯತೆಯ ಭಾಷೆಯಲ್ಲಿ ಮಾತನಾಡುತ್ತದೆ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ಚಿಕ್ಕೆಜಮಾನ್ರು ಎಂದು ಕರೆದಿದ್ದಾರೆ. ಈ ಫೋಟೋ ಜೊತೆ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮಗನೊಂದಿಗೆ ತೆಗೆದುಕೊಂಡಿರುವ ಮತ್ತೊಂದು ಹಳೆ ಫೋಟೋವನ್ನು ಕೂಡ ಶೇರ್ ಮಾಡಿದ್ದಾರೆ. ಈ ಎಲ್ಲಾ ಫೋಟೋಗಳು ಕೂಡ ನೋಡುಗರ ಗಮನ ಸೆಳೆಯುತ್ತಿವೆ.

Leave a Comment

%d bloggers like this: