ಲೋಕಸಭಾ ಚುನಾವಣೆ – 2024 (Parliment Election – 2024) ಹತ್ತಿರವಾಗುತ್ತಿದೆ. ಎಲ್ಲರ ಚಿತ್ತವು ಈಗ ದೆಹಲಿಯ ಗದ್ದುಗೆಯತ್ತ ಇದೆ. ಇದರ ನಡುವೆ ಇದುವರೆಗೂ ದೇಶದಲ್ಲಿ ಆಡಳಿತದಲ್ಲಿದ್ದ BJP ಸರ್ಕಾರವು ತನ್ನ ಅಧಿಕಾರವಧಿಯಲ್ಲಿ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಯೊಂದಕ್ಕೆ ಕೊನೆ ಹಂತದಲ್ಲಿ ಮತ್ತೊಮ್ಮೆ ಅರ್ಜಿ ಆಹ್ವಾನ ಮಾಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಈ 10 ವರ್ಷಗಳಲ್ಲಿ ದೇಶದ ಎಲ್ಲಾ ವರ್ಗಗಳಿಗೂ ಅನುಕೂಲವಾಗುವಂತಹ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರು ಇದರಲ್ಲಿ ಮಹಿಳೆಯರಿಗಾಗಿಯೇ ಜಾರಿಗೆ ತಂದ ಹೊಗೆಮುಕ್ತ ಅಡುಗೆ ಮನೆ ವಾತಾವರಣ ನಿರ್ಮಿಸಿ ಮಹಿಳೆಯರಿಗೆ ಆರೋಗ್ಯ ಭಾಗ್ಯ ಕಲ್ಪಿಸಿದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು (Pradhana Mantri Ujwal Yojane) ಕೂಡ ಮುಖ್ಯವಾದದ್ದು.
ಈ ಸುದ್ದಿ ಓದಿ:- ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!
ಈ ಯೋಜನೆ ಮೂಲಕ ಈಗ ದೇಶದ ಕೋಟ್ಯಾಂತರ ಕುಟುಂಬಗಳು ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆದು ಸಬ್ಸಿಡಿ (Subsidy) ಲೆಕ್ಕದಲ್ಲಿ ವರ್ಷಕ್ಕೆ ಮೂರು ಸಿಲಿಂಡರ್ ಹೆಚ್ಚುವರಿಯಾಗಿ ಪಡೆಯುತ್ತಿದೆ. ಈಗ ಪ್ರಧಾನಮಂತ್ರಿ ಉಜ್ವಲ್ ಯೋಜನೆ 2.0 ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು? ಏನೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು? ಎಷ್ಟೆಲ್ಲಾ ನೆರವು ಸಿಗುತ್ತಿದೆ ಇತ್ಯಾದಿ ಎಲ್ಲಾ ಮಾಹಿತಿಯನ್ನು ವಿವರವಾಗಿ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ.
ಈ ಸುದ್ದಿ ಓದಿ:-ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿ.! ಪ್ರತಿ ತಿಂಗಳು ಸರ್ಕಾರದಿಂದ 1200 ಹಣ ಪಡೆಯಿರಿ.!
ಯೋಜನೆ ಹೆಸರು:- ಪ್ರಧಾನಮಂತ್ರಿ ಉಜ್ವಲ್ ಯೋಜನೆ (PMUY)
ಸಿಗುವ ನೆರವು:-
* ಉಚಿತ ಗ್ಯಾಸ್ ಕನೆಕ್ಷನ್
* ಒಂದು ಸಿಲಿಂಡರ್
* ಒಂದು ಗ್ಯಾಸ್ ಸ್ಟವ್
* ಒಂದು ರೆಗ್ಯುಲೇಟರ್
* ಒಂದು ಗ್ಯಾಸ್ ಲೈಟರ್
* ವಾರ್ಷಿಕವಾಗಿ 12 ಸಿಲಿಂಡರ್ ಮಿತಿಯಲ್ಲಿ ಪ್ರತಿ ಗ್ಯಾಸ್ ಬುಕಿಂಗ್ ಮೇಲೆ ರೂ.300 ರೂಪಾಯಿಗಳ ಸಬ್ಸಿಡಿ ಸಿಗುತ್ತದೆ. ಈ ಹಣವನ್ನು ಲೆಕ್ಕ ಹಾಕಿದರೆ ವರ್ಷಕ್ಕೆ 12 ಸಿಲಿಂಡರ್ ಗಳು ಬುಕ್ ಮಾಡಿದರೆ ನೀವು ಕೇವಲ 9 ಸಿಲಿಂಡರ್ ಗಳಿಗೆ ಹಣ ನೀಡಿದ ರೀತಿ ಆಗುತ್ತದೆ. ಮೂರು ಸಿಲಿಂಡರ್ ಫಿಲ್ ಮಾಡಿಸಿದಷ್ಟು ಮೊತ್ತದ ಸಬ್ಸಿಡಿ ಹಣವು DBT ಮೂಲಕ ಪ್ರತಿ ಬಾರಿಯೂ ಫಲಾನುಭವಿ ಖಾತೆಗೆ ಜಮೆ ಆಗುತ್ತಿರುತ್ತದೆ.
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* ಬಡತನಕ್ಕೆ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸೇರಿದ ಮಹಿಳೆಯಾಗಿದ್ದು BPL / AAY ರೇಷನ್ ಕಾರ್ಡ್ ಹೊಂದಿರಬೇಕು
* ಇದುವರೆಗೂ ಕುಟುಂಬವು LPG ಸಂಪರ್ಕ ಹೊಂದಿರಬಾರದು.
* ಭಾರತೀಯ ಪ್ರಜೆಯಾಗಿರಬೇಕು, ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಮಹಿಳೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
* SC/ST, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಅತ್ಯಂತ ಹಿಂದುಳಿದ ವರ್ಗಗಳು, ಅಂತ್ಯೋದಯ ಅನ್ನ ಯೋಜನ, ೆಟೀ ಮತ್ತು ಎಕ್ಸ್-ಟೀ ಗಾರ್ಡನ್, ಬುಡಕಟ್ಟುಗಳು ಅರಣ್ಯವಾಸಿಗಳು ನದಿ ದ್ವೀಪಗಳು ಮತ್ತು ದ್ವೀಪಗಳಲ್ಲಿ ವಾಸಿಸುವ ಕುಟುಂಬಗಳ ಮಹಿಳೆಯರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
ಅವಶ್ಯಕ ದಾಖಲೆಗಳು
* ಪಡಿತರ ಚೀಟಿ
* ಗುರುತಿನ ಮತ್ತು ವಿಳಾಸದ ಪುರಾವೆ
* ಆಧಾರ್ ಕಾರ್ಡ್
* ಜಾತಿ ಪ್ರಮಾಣ ಪತ್ರ
* ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
* ಪುರಸಭೆ ಅಧ್ಯಕ್ಷರು ಅಥವಾ ಪಂಚಾಯತ್ ಅಧ್ಯಕ್ಷರು ನೀಡಿದ BPL ಪ್ರಮಾಣಪತ್ರ,
* ಇತ್ತೀಚನ ಫೋಟೋ
* e-KYC
* ಬ್ಯಾಂಕ್ ಅಕೌಂಟ್ ಡೀಟೇಲ್ಸ್
ಅರ್ಜಿ ಸಲ್ಲಿಸುವ ವಿಧಾನ:-
* ಹತ್ತಿರದಲ್ಲಿರುವ ಯಾವುದೇ ಏಜೆನ್ಸಿಗೆ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ನಲ್ಲಿ PMUY ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.