ಬ್ಯಾಂಕ್ ಅಥಾವ ಕೈ ಸಾಲ ಕೊಟ್ಟವರು ಕಿರುಕುಳ ನೀಡುತ್ತಿದ್ದಾರ.? ಯೋಚನೆ ಮಾಡಬೇಡಿ ಇನ್ಮುಂದೆ ಯಾರು ನಿಮ್ಮನ್ನ ಸಾಲ ಕಟ್ಟಿ ಅಂತ ಹಿಂಸೆ ನೀಡುವಂತಿಲ್ಲ.! ಇಲ್ಲಿದೆ ನೋಡಿ ಹೊಸ ಕಾನೂನು

 

WhatsApp Group Join Now
Telegram Group Join Now

 

ಮನೆ ಕಟ್ಟುವುದಕ್ಕೆ, ಆಸ್ತಿ ಖರೀದಿಗೆ, ವಾಹನಗಳ ಖರೀದಿಗೆ ಅಥವಾ ಬಂಗಾರ ಖರೀದಿಗೆ ಈ ರೀತಿ ನಾನಾ ಉದ್ದೇಶಗಳಿಂದ ಕೆಲವೊಂದು ಅಗತ್ಯ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬರ ಬಳಿ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಅದು ಕೈ ಸಾಲ ಇರಬಹುದು ಅಥವಾ ಬ್ಯಾಂಕ್ ಗಳಿಂದ ಪಡೆಯುವ ಲೋನ್ ಆಗಿರಬಹುದು ಅಥವಾ ಸೊಸೈಟಿಗಳಿಂದ ಪಡೆದ ಸಾಲವೇ ಆಗಿರಬಹುದು.

ಅವುಗಳ ನಿಯಮಗಳಿಗೆ ಒಪ್ಪಿಕೊಂಡು ನೀವು ಸಾಲ ಪಡೆದಿರುತ್ತೀರಿ. ಆದರೆ ಒಂದು ಕಠಿಣ ಪರಿಸ್ಥಿತಿಯಲ್ಲಿ ಆತ ಸರಿಯಾದ ಸಮಯಕ್ಕೆ ಅದರ ಬಡ್ಡಿಯನ್ನು ಅಥವಾ ಕಂತುಗಳನ್ನು ಅಥವಾ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿರುವುದಿಲ್ಲ ಆ ಸಮಯದಲ್ಲಿ ಬ್ಯಾಂಕ್ ಗಳು ರಿಕವರಿ ಏಜೆಂಟ್ ಗಳನ್ನು ನೇಮಿಸಿಕೊಂಡಿರುತ್ತದೆ. ಅವುಗಳ ಮೂಲಕ ಸಾಲ ಪಡೆದವರಿಂದ ಸಾಲ ವಸೂಲಿ ಮಾಡಲು ಮುಂದಾಗುತ್ತದೆ.

ಈ ರೀತಿ ರಿಕವರಿ ಏಜೆಂಟ್ ಗಳು RBI ಸಾಲ ವಸೂಲಿಗೆ ನೀಡಿರುವ ಗೈಡ್ ಲೈನ್ ಗಳನ್ನು ಓದಿಕೊಂಡು DRA ಅಂದರೆ ಡೆಡ್ ರಿಕವರಿ ಏಜೆಂಟ್ ಪರೀಕ್ಷೆಯನ್ನು ಬರೆದು ಪಾಸ್ ಮಾಡಿರುವ ಸ್ಟಾಫ್ ಆಗಿರಬೇಕು. ಈ ರೀತಿ ನೇಮಕ ಆದವರು RBI ಸಾಲ ವಸೂಲಾತಿಗೆ ಮುಂದಾಗಬೇಕು. ಈಗಿನ ದಿನಗಳಲ್ಲಿ ನೋಡುವುದಾದರೆ ಈ ರೀತಿ ಸಾಲ ರಿಕವರಿ ಮಾಡಲು ಹಣಕಾಸು ಸಂಸ್ಥೆಗಳಿಂದ ಬರುವ ಏಜೆಂಟ್ ಗಳು ಗೂಂಡಾಗಳ ರೀತಿ ವರ್ತನೆ ಮಾಡುತ್ತಿದ್ದಾರೆ.

ಸಾಲ ತೆಗೆದುಕೊಂಡವರಿಗೆ ಮಾನಸಿಕವಾಗಿ ಕಿರುಕುಳ ನೀಡಿ ಅವರು ಆತ್ಮಹತ್ಯೆ ಹಾದಿ ಹಿಡಿವ ರೀತಿ ಮಾಡುತ್ತಿದ್ದಾರೆ. ಒಂದು ವೇಳೆ ನೀವು ಸಹ ಸಾಲ ತೆಗೆದುಕೊಂಡು ಅಥವಾ ನಿಮ್ಮ ಪರಿಚಯಸ್ಥರಲ್ಲಿ ಯಾರಾದರೂ ಸಾಲ ತೆಗೆದುಕೊಂಡು ಈ ರೀತಿ ಕಿರುಕುಳ ಅನುಭವಿಸುತ್ತಿದ್ದರೆ ಅವರು ಕಾನೂನು ಮೂಲಕ ಇದರ ವಿರುದ್ಧ ಹೋರಾಟ ಮಾಡಬಹುದು. ಅವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

● ಒಂದು ವೇಳೆ ನೀವು ಕೈ ಸಾಲ ಪಡೆದಿದ್ದರೆ ಅದನ್ನು ನೈತಿಕತೆಯಿಂದ ತೀರಿಸುವ ಪ್ರಯತ್ನವನ್ನು ಮಾಡಿ. ಕೆಲವೊಂದು ಜೆನ್ಯುನ್ ರೀಸನ್ ಗಳಿಂದ ನೀವು ಹಿಂತಿರುಗಿಸುವುದು ವಿಳಂಬವಾದಾಗ ಸಾಲ ಕೊಟ್ಟವರು ನಿಮ್ಮ ಮೇಲೆ ದುರ್ವರ್ತನೆ ತೋರಿದರೆ ನೀವು ಕಾನೂನಿನ ಮೊರೆ ಹೋಗಬಹುದು. ಕೈಸಾಲ ಕೊಟ್ಟವರು ನಗದು ರೂಪದಲ್ಲಿ ಸಾಲ ಕೊಟ್ಟಿದ್ದರೆ ಅವರು ಸಾಲ ಕೊಟ್ಟಿದ್ದಾಗಿ ರುಜವಾತು ಮಾಡಬೇಕು. ಆದ್ದರಿಂದ ಅಂತಹ ಕಷ್ಟದ ಸಮಯದಲ್ಲಿ ನೀವು ಹೆದರದೆ ಕಾನೂನಿನ ಮೊರೆ ಹೋಗಬಹುದು.

● ಬ್ಯಾಂಕ್ ಗಳು ಸಾಲ ನೀಡುವಾಗ ಎಲ್ಲ ದಾಖಲೆ ಪತ್ರಗಳನ್ನು ಚೆಕ್ ಮಾಡಿ ನಿಮ್ಮಿಂದ ಸಹಿ ತೆಗೆದುಕೊಂಡು ಕಾನೂನಾತ್ಮಕವಾಗಿಯೇ ಸಾಲ ನೀಡಿರುತ್ತವೆ. ಒಂದು ವೇಳೆ ನೀವು ಸಾಲ ಹಿಂತಿರುಗಿಸಲು ಆಗದ ಇದ್ದಾಗ ರಿಕವರಿ ಏಜೆಂಟ್ ಗಳ ಮೂಲಕ ವಸೂಲಿ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಾಲ ನೀಡುವಾಗ ಹೇಗೆ ಕಾನೂನು ಚೌಕಟ್ಟಿನ ಒಳಗೆ ನೀಡಿದ್ದರು ಅದೇ ರೀತಿ ಕಾನೂನಿನ ಚೌಕಟ್ಟಿನ ಒಳಗಡೆಗೆ ಅದನ್ನು ಹಿಂಪಡೆಯಲು ಪ್ರಯತ್ನಿಸಬೇಕು ಎಂದು ಹೇಳಿದೆ.

● ಬ್ಯಾಂಕುಗಳು ಸಾಲ ವಸೂಲಿ ಮಾಡಲು ರಿಕವರಿ ಏಜೆಂಟ್ ಗಳನ್ನು ನೇಮಿಸಿಕೊಂಡಿರುತ್ತದೆ. ಈ ಮೇಲೆ ತಿಳಿಸಿದಂತೆ ಅವರು DRA ಟೆಸ್ಟ್ ಪಾಸ್ ಆಗಿರಬೇಕು. ಅವರ ಜೊತೆ ಕಾಂಟಾಕ್ಟ್ ಮಾಡಿಕೊಂಡು ಅವರಿಗೆ ಸಾಲ ವಸೂಲಿ ಮಾಡುವ ಜವಾಬ್ದಾರಿಯನ್ನು ಬ್ಯಾಂಕಗಳು ಕೊಟ್ಟಿರುತ್ತವೆ. ಒಂದು ವೇಳೆ ನಿಮಗೆ ಯಾವುದೇ DRA ಸ್ಟಾಫ್ ಅಥವಾ ಕಚೇರಿಯಿಂದ ಕರೆ ಬಂದಾಗ ಅವರು ಅಧಿಕೃತ ವ್ಯಕ್ತಿ ಆಗಿರಬೇಕು, DRA ಟೆಸ್ಟ್ ಪಾಸ್ ಮಾಡಿದ ವ್ಯಕ್ತಿಯೇ ನಿಮ್ಮೊಂದಿಗೆ ಸಂವಹನ ಮಾಡಬೇಕು. ಅವರು RBI ಗೈಡ್ಲೈನ್ಸ್ ಒಳಗಡೆ ವರ್ತಿಸಬೇಕು.

● ಅವರು ವೈಯುಕ್ತಿಕ ನಂಬರ್ಗಳಿಂದ ಕರೆ ಅಥವಾ ಸಂದೇಶ ಮಾಡುವಂತಿಲ್ಲ. ಬ್ಯಾಂಕ್ ಗಳು ನೀಡಿರುವ ಅಧಿಕೃತ ಸಿಮ್ ಇಂದಲೇ ಮಾತನಾಡಬೇಕು. ಒಂದು ವೇಳೆ ಅವರ ವರ್ತನೆ ಮಿತಿ ಮೀರಿದರೆ ನೀವು ಅದನ್ನು ರೆಕಾರ್ಡ್ ಮಾಡಿಕೊಂಡು ದೂರು ದಾಖಲಿಸಲು ದಾಖಲೆಯಾಗಿಟ್ಟುಕೊಳ್ಳಬಹುದು.

● DRA ಸ್ಟಾಫ್ ಗಳು ಯಾವಾಗ ಬೇಕಾದರೂ ಕರೆ ಮಾಡುವಂತಿಲ್ಲ. ಬೆಳಗ್ಗೆ 7 ರಿಂದ ಸಂಜೆ 7 ರ ಒಳಗೆ ಮಾತ್ರ ನಿಮಗೆ ಕರೆ ಮಾಡಿ ಸಾಲದ ಬಗ್ಗೆ ಮಾತನಾಡಬೇಕು. ಪದೇ ಪದೇ ಕರೆ ಮಾಡುವಂತಿಲ್ಲ ಮತ್ತು ನಿಮ್ಮ ಅನುಮತಿ ಪಡೆದೇ ಅವರು ಮಾತನಾಡಬೇಕು. ಇದೇ ರೀತಿಯ ಸಾಕಷ್ಟು ಕಾನೂನುಗಳು ಸಾಲ ಪಡೆದ ಗ್ರಾಹಕನ ಪರವಾಗಿ ಇದೆ ಅವುಗಳ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now