ಜೀವನದಲ್ಲಿ ಇರುವ ಹಲವು ಮಹತ್ವಾಕಾಂಕ್ಷೆಗಳಲ್ಲಿ ಹಲವರಿಗೆ ಮನೆ ಕಟ್ಟಿಸುವುದು ಕೂಡ ಒಂದು. ಆದರೆ ಮನೆ ಕಟ್ಟಿಸುವುದು ಅಷ್ಟು ಸುಲಭದ ಮಾತಲ್ಲ ಇದಕ್ಕೆ 108 ವಿಜ್ಞಗಳು ಬರುತ್ತಲೇ ಇರುತ್ತವೆ. ಹಾಗಾಗಿ ನೀವೇನಾದರೂ ಹೊಸ ಮನೆ ವಿಚಾರ ಕೈಗೆತ್ತಿಕೊಂಡು ನಿರ್ವಿಘ್ನವಾಗಿ ನಿಮ್ಮ ಮನೆ ನಿರ್ಮಾಣ ಪೂರ್ತಿಗೊಳ್ಳಬೇಕು ಎಂದು ಬಯಸುತ್ತಿದ್ದರೆ ಮೈಸೂರಿನ ಬಳಿ ಇರುವ ಈ ದೇವಾಲಯಕ್ಕೆ ಭೇಟಿ ಕೊಟ್ಟು ಭಕ್ತಿಯಿಂದ ಬೇಡಿಕೊಳ್ಳಿ.
ಮೈಸೂರಿನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಕಲ್ಲಹಳ್ಳಿ ಎನ್ನುವ ಗ್ರಾಮದಲ್ಲಿ ಭೂವರಹನಾಥಸ್ವಾಮಿ ದೇವಾಲಯ ಇದೆ. ಸುಮಾರು 2500 ವರ್ಷಗಳಿಗಿಂತಲೂ ಹೆಚ್ಚು ಪುರಾತನವಾದದ್ದಾಗಿದೆ. ಈ ದೇವಾಲಯವನ್ನು ಹೊಯ್ಸಳರ ರಾಜ್ಯ ವೀರಬಳ್ಳಾಲ ಕಟ್ಟಿಸಿದ ಎಂದು ದಂತ ಕಥೆ ಮತ್ತು ಗೌತಮ ಋಷಿಗಳು ಈ ದೇವಾಲಯದಲ್ಲಿ ತಪಸ್ಸು ಮಾಡುತ್ತಿದ್ದರು ಎನ್ನುವ ಮಾತುಗಳು ಸಹ ಇವೆ.
ದೇವಸ್ಥಾನವನ್ನು ದೊಡ್ಡ ದೊಡ್ಡ ಬೂದು ಬಣ್ಣದ ಕಲ್ಲುಗಳಿಂದ ಮಾಡಲಾಗಿದೆ ಸಂಪೂರ್ಣ ದೇವಾಲಯವನ್ನು ಕಲ್ಲಿನಿಂದಲೇ ನಿರ್ಮಿಸಲಾಗಿದ್ದು ಎರಡು ಘಟನೆಗಳಿವೆ. ಒಂದು ಗರ್ಭಗುಡಿ ಮತ್ತೊಂದು ಸಭಾಂಗಣ. ಹತ್ತಿರದಲ್ಲಿ ಹೇಮಾವತಿ ನದಿ ಹರಿಯುತ್ತಿದ್ದು ನದಿ ನೀರು ದೇವಸ್ಥಾನದ ಗೋಡೆಗಳನ್ನು ತಾಕಿ ಹೋಗುತ್ತದೆ. ಪ್ರಕೃತಿ ಸೊಬಗನ್ನು ಸವಿಯುವುದರೊಂದಿಗೆ ದೇವಸ್ಥಾನವನ್ನು ದರ್ಶನ ಮಾಡಿ ಬರುವುದರಿಂದ ಭಕ್ತಾದಿಗಳಿಗೆ ಅನೇಕ ಪ್ರಕಾರದ ಇಷ್ಟಾರ್ಥಗಳು ಸಿದ್ದಿ ಆಗಲಿದೆ ಎನ್ನುವ ನಂಬಿಕೆ ಬಲವಾಗಿದೆ.
ಈ ದೇವಾಲಯವನ್ನು ವರಹಸ್ವಾಮಿಯು ಭೂದೇವಿಯನ್ನು ರಕ್ಷಣೆ ಮಾಡಲು ಬಂದ ಸಮಯದಲ್ಲಿ ಕಟ್ಟಿಸಲಾಗಿದೆ ಎನ್ನುವ ಮಾತುಗಳು ಇವೆ. ವರಹಸ್ವಾಮಿಯ ವಿಗ್ರಹವು ನಾಲ್ಕು ಅಡಿ ಎತ್ತರದಲ್ಲಿದ್ದು ಏಕಶಿಲಾ ವಿಗ್ರಹ ಆಗಿದೆ. ದೇಶದಲ್ಲೇ ಬಲು ಅಪರೂಪವಾದ ವಿಗ್ರಹ ಎನ್ನುವ ಖ್ಯಾತಿಗೂ ಒಳಗಾಗಿದೆ ವರಹಸ್ವಾಮಿಯ ವಿಗ್ರಹದ ಎಡ ತೊಡೆಯ ಮೇಲೆ ಭೂದೇವಿ ಸಹ ಕುಳಿತಿದ್ದಾರೆ. ಭೂದೇವಿಯ ವಿಗ್ರಹವು 3.5 ಅಡಿ ಇದೆ.
ಪ್ರಮುಖವಾಗಿ ಭಾಗವಾನ್ ಹನುಮರ ವಿಗ್ರಹವನ್ನು ಕೂಡ ಕೆಳಗೆ ಕೆತ್ತಿಸಲಾಗಿದೆ ಶಂಕ ಮತ್ತು ಸುದರ್ಶನ ಚಕ್ರ ಹಿಡಿದ ಎರಡು ಕೈಗಳ ಜೊತೆ ಭೂದೇವಿಯನ್ನು ಆವರಿಸಿಕೊಂಡು ಕೈ ಮತ್ತೊಂದು ಕೈಯಲ್ಲಿ ಅಭಿಮಾನ ಮುದ್ದೆಯನ್ನು ತೋರುತ್ತಿದ್ದಾರೆ ವರಹ ಸ್ವಾಮಿ. ಈ ದೇವರಿಗೆ ನಿಗೂಢ ಶಕ್ತಿ ಇದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಅದೇನೆಂದರೆ ಯಾರಾದರೂ ಮನೆ ಕಟ್ಟಲು ಇಚ್ಛೆ ಪಟ್ಟರೆ ಇಲ್ಲಿಗೆ ಬಂದು ಪೂಜೆ ಮಾಡಿಸಿ ಒಂದು ಇಟ್ಟಿಗೆ ತೆಗೆದುಕೊಂಡು ಹೋಗಿ ತಮ್ಮ ಮನೆ ಕಟ್ಟುವ ಕಾರ್ಯವನ್ನು ಆರಂಭಿಸಿದರೆ ಯಾವುದೇ ವಿಜ್ಞ ಇಲ್ಲದೆ ಆ ಕಾರ್ಯಪೂರ್ಣಗೊಳ್ಳುತ್ತದೆ ಎಂದು.
ಈಗಾಗಲೇ ಅನೇಕ ಭಕ್ತಾದಿಗಳು ಇದನ್ನು ಪರೀಕ್ಷೆ ಮಾಡಿ ನೋಡಿ ನಿಜ ಎನ್ನುವುದನ್ನು ಅರಿತುಕೊಂಡಿದ್ದಾರೆ. ಜೊತೆಗೆ ಭೂ ವ್ಯಾಜ್ಯಗಳು ಇದ್ದಾಗ ಭಕ್ತಿಯಿಂದ ಇಲ್ಲಿಗೆ ಬಂದು ಪೂಜೆ ಮಾಡಿಸಿಕೊಂಡು ಹೋದರೆ ಅದು ಸಹ ಪರಿಹಾರವಾಗುತ್ತದೆ ಎನ್ನುವ ನಂಬಿಕೆಯು ಇದೆ. ಜೊತೆಗೆ ಭೂದೇವಿ ಸಹ ಇಲ್ಲಿ ಇರುವುದರಿಂದ ಇಲ್ಲಿಯ ಮಣ್ಣನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿದರೆ, ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತದೆ ಎಂದು ಜನರ ನಂಬಿಕೆ.
ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿತ್ತು ಬೃಹದ್ದಾಗಿ ದೇವಸ್ಥಾನ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. ಹತ್ತಿರದಲ್ಲೇ ಅನ್ನದಾಸೋಹವು ಇದ್ದು ಪ್ರತಿನಿತ್ಯ ಇಲ್ಲಿ ಪೂಜೆ ನಡೆಯುವುದರಿಂದ ಬರುವ ನೂರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಗುತ್ತದೆ. ದೇವಸ್ಥಾನದ ಹತ್ತಿರವೇ ಲಕ್ಷ್ಮಿ ವೆಂಕಟೇಶ್ವರ ದೇವಾಲಯವು ಸಹ ಇದ್ದು, ಹೇಮಾವತಿ ನದಿಯ ನೀರು ಸಹ ಬರುವುದರಿಂದ ಪ್ರೇಕ್ಷಣೀಯ ಸ್ಥಳ ಎನ್ನುವುದರ ಜೊತೆಗೆ ಹೆಚ್ಚು ಪ್ರಭಾವ ಉಳ್ಳ ಧಾರ್ಮಿಕ ಕ್ಷೇತ್ರ ಎಂದು ಕೂಡ ಕರೆಸಿಕೊಂಡಿದೆ.