ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆ ಹೊಂದುವುದು ಕಡ್ಡಾಯವಾಗಿದೆ. ನಮ್ಮ ದೈನಂದಿಕ ಆರ್ಥಿಕ ಚಟುವಟಿಕೆಗಳಲ್ಲಿ ಪೇಟಿಎಂ, ಫೋನ್ ಪೇ, ಗೂಗಲ್ ಪೇ, ಆನ್ಲೈನ್ ಆರ್ಡರ್ಗಳು ಇವೆಲ್ಲವೂ ಬದುಕಿನ ಭಾಗ ಆಗಿರುವ ಕಾರಣ ಇಂತಹ ಅನುಕೂಲತೆಗಳ ಬಳಕೆಗೆ ಬ್ಯಾಂಕ್ ಖಾತೆ ಹೊಂದಿರುವುದು ಅನಿವಾರ್ಯ. ಇದನ್ನು ಹೊರತು ಪಡಿಸಿ ಸಾಮಾನ್ಯ ಜನರಿಗೆ ಅಥವಾ ಬಡ ಜನರಿಗೆ ಅಥವಾ ಅನಕ್ಷರಸ್ಥರಿಗೆ ಕೂಡ ಒಂದಲ್ಲ ಒಂದು ರೀತಿಯ ಯೋಜನೆಗಳ ಸಾಲ ಸೌಲಭ್ಯ ಪಡೆಯಲು, ಉಳಿತಾಯದ ಯೋಜನೆ ಮಾಡಲು ಇಂತವುಗಳ ಕಾರಣಕ್ಕಾಗಿ ಆದರೂ ಬ್ಯಾಂಕ್ ಖಾತೆಯನ್ನು ಹೊಂದಲೇ ಬೇಕಾಗಿದೆ.
ಇತ್ತೀಚೆಗೆ ಇದು ಕೂಡ ಒಂದು ಪ್ರಮುಖ ದಾಖಲೆ ಆಗಿ ಎಲ್ಲಾ ಕಡೆ ಮಾನ್ಯವಾಗುತ್ತಿದೆ. ಹಾಗಾಗಿ ದೇಶದ ಎಲ್ಲಾ ನಾಗರಿಕರು ಬ್ಯಾಂಕ್ ಖಾತೆಯನ್ನು ಹೊಂದಲೇ ಬೇಕಾಗಿದೆ. ಈ ಉದ್ದೇಶದಿಂದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಕೆಲ ವರ್ಷಗಳ ಹಿಂದೆ ಜೀರೋ ಅಕೌಂಟ್ ಎನ್ನುವ ವ್ಯವಸ್ಥೆ ಮಾಡಿಕೊಟ್ಟಿದ್ದರು. ಅದನ್ನು ಹೊರತು ಪಡಿಸಿ ಇನ್ಯಾವುದೇ ಅಕೌಂಟ್ ಹೊಂದಿದ್ದರೂ ಅಕೌಂಟ್ ಓಪನ್ ಮಾಡಲು ಸ್ವಲ್ಪ ಮೊತ್ತದ ಹಣ ಡೆಪಾಸಿಡ್ ಮಾಡಲೇಬೇಕು ಮತ್ತು ಬ್ಯಾಂಕುಗಳ ನೀತಿ ನಿಯಮಗಳು ಆಗಾಗ ಬದಲಾವಣೆ ಆಗುತ್ತಲೇ ಇರುವ ಕಾರಣ ಅದಕ್ಕೆ ಬದ್ಧವಾಗಿ ಅವುಗಳನ್ನು ಒಪ್ಪಿಕೊಂಡು ಖಾತೆಯನ್ನು ನಿರ್ವಹಿಸಬೇಕು.
ಇಲ್ಲವಾದಲ್ಲಿ ಖಾತೆಯು ರದ್ದಾಗುವ ಅಥವಾ ಗ್ರಾಹಕನಿಗೆ ದಂಡ ಬೀಳುವ ಸಾಧ್ಯತೆಗಳು ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಇದರ ಅರಿವು ಇರುವುದೇ ಇಲ್ಲ, ಹೆಚ್ಚಿನ ಜನರವರೆಗೆ ಬ್ಯಾಂಕುಗಳ ಬದಲಾದ ನಿಯಮಗಳ ಬಗ್ಗೆ ಮಾಹಿತಿ ತಲುಪುವುದೇ ಇಲ್ಲ. ಸದ್ಯಕ್ಕೆ ಬ್ಯಾಂಕ್ ನಿಯಮಗಳ ಬೃಹತ್ ಬದಲಾವಣೆ ಏನು ಎಂದರೆ ಖಾತೆಗಳಲ್ಲಿ ಉಳಿಸಿಕೊಳ್ಳಬೇಕಾದ ಮಿನಿಮಮ್ ಬ್ಯಾಲೆನ್ಸ್ ಮೊತ್ತವನ್ನು ಹೆಚ್ಚು ಮಾಡಿರುವುದು.
ಹೌದು ಬದಲಾದ ನೀತಿ ನಿಯಮಗಳ ಪ್ರಕಾರ ಈ ಕೆಳಗಿನ ಬ್ಯಾಂಕುಗಳು ತಮ್ಮ ಉಳಿತಾಯ ಖಾತೆಯಲ್ಲಿ ಗ್ರಾಹಕರು ಮೇಂಟೇನ್ ಮಾಡಬೇಕಾದ ಮಿನಿಮಮ್ ಬ್ಯಾಲೆನ್ಸ್ ಮೊತ್ತವನ್ನು ಹೆಚ್ಚಿಸಲಾಗಿದೆ. ಅದರ ಪ್ರಕಾರ ಮಾಹಿತಿ ಹೀಗಿದೆ ನೋಡಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆಗಳಲ್ಲಿ ಗ್ರಾಹಕರು ಗ್ರಾಮೀಣ ಪ್ರದೇಶಗಳಲ್ಲಿ ಖಾತೆದಾರರು 1000ರೂ, ಅರೆ ನಗರ ಪ್ರದೇಶಗಳ ಖಾತೆದಾರರು 2,000 ರೂ, ಮೆಟ್ರೋ ನಗರದ ಬ್ಯಾಂಕುಗಳ ಖಾತೆದಾರರು 3000 ಅನ್ನು ಹೊಂದಿರಲೇ ಬೇಕು ಎನ್ನುವ ನಿಯಮ ಮಾಡಿದೆ.
ಎಚ್‍ಡಿಎಫ್ಸಿ ಬ್ಯಾಂಕ್ ಅಲ್ಲಿಯೂ ಕೂಡ ಕನಿಷ್ಠ ಬ್ಯಾಲೆನ್ಸ್ ಮಿತಿ ನಿವಾಸದ ಮೇಲೆ ಅವಲಂಬಿತವಾಗಿರುತ್ತದೆ ಅದರಂತೆ ನಗರಗಳಲ್ಲಿ 10000 ಅರೆ ನಗರ ಪ್ರದೇಶಗಳಲ್ಲಿ 5000 ರೂ ಗ್ರಾಮೀಣ ಪ್ರದೇಶದ ಖಾತೆದಾರರಿಗೆ 2500 ಗಳನ್ನು ಕಡ್ಡಾಯಗೊಳಿಸಿದೆ. ಐಸಿಐಸಿಐ ಬ್ಯಾಂಕ್ ಪ್ರದೇಶಕ್ಕೆ ಅನುಗುಣವಾಗಿ ಅನುಗುಣವಾಗಿ ಖಾತೆಯ ಮಿನಿಮಮ್ ಬ್ಯಾಲೆನ್ಸ್ ಅನ್ನು ಈ ಮೇಲೆ ಹೆಚ್ಡಿಎಫ್ಸಿ ಬ್ಯಾಂಕಿನ ಖಾತೆದಾರರಿಗೆ ತಿಳಿಸಿದಷ್ಟೇ ಹೊಂದಿದೆ.
ಇದೆಲ್ಲವೂ ಸದ್ಯಕ್ಕೆ ಈಗಿನ ಪರಿಸ್ಥಿತಿಗೆ ಮಾಡಿರುವ ನಿಯಮ ಆಗಿದೆ ಮುಂದಿನ ದಿನಗಳಲ್ಲಿ ಇದರ ಮಿತಿ ಕಡಿಮೆಗೊಳಿಸುವ ಅಥವಾ ಮಿನಿಮಮ್ ಬ್ಯಾಲೆನ್ಸ್ ಇಡುವ ಅವಶ್ಯಕತೆ ಇರದೇ ಇರುವ ದಿನಗಳು ಬರಬಹುದು. ಹಣಕಾಸು ಸಚಿವರಾಗಿರುವ ಭಾಗವತ್ ಕಿಶನ್ ರಾವ್ ಕರಾಡ್ ಅವರು ಇತ್ತೀಚೆಗೆ ಶ್ರೀನಗರದಲ್ಲಿ ಬ್ಯಾಂಕ್ ಗಳ ಈ ಪ್ರಕ್ರಿಯ ಕುರಿತು ಪ್ರತಿಕ್ರಿಯಿಸಿ ಬ್ಯಾಂಕ್ ಗಳು ಸ್ವತಂತ್ರ ಸಂಸ್ಥೆಗಳು, ಈಗ ವಿಧಿಸಿರುವ ದಂಡಗಳ ಮನ್ನಾ ಮಾಡುವ ಬಗ್ಗೆ ಅವರ ನಿರ್ದೇಶಕರು ನಿರ್ಧಾರ ತೆಗೆದುಕೊಳ್ಳಬಹುದು ಎಂದಿದ್ದಾರೆ.